ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದ್ದು ರಾಜ್ಯ ಸರ್ಕಾರವು ಘೋಷಣೆ ಮಾಡಿದಂತಹ ಐದು ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆ ಪ್ರಮುಖವಾಗಿದೆ. ಈ ಯೋಜನೆಯ ಉದ್ದೇಶವು ಬಡವರು ವಿದ್ಯುತ್ ಬಿಲ್ಲನ್ನು ಕಟ್ಟಲು ತೊಂದರೆ ಆಗಬಾರದು ಎನ್ನುವಂತಹ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ವಾಣಿಜ್ಯ ಬಳಕೆ ಹೊರತುಪಡಿಸಿ ಪ್ರತಿ ಮನೆಗೆ 200 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು ಗೃಹ ಜ್ಯೋತಿ ಯೋಜನೆಯ ಉದ್ದೇಶವಾಗಿದೆ.
ಆದರೆ ರಾಜ್ಯದ ಬಹುತೇಕ ಮನೆಗಳಲ್ಲಿ 200 ಯೂನಿಟ್ ವಿದ್ಯುತ್ ಬಳಸವುದೇ ಇಲ್ಲ ಹಾಗಂತ ವಿದ್ಯುತ್ ಬಳಕೆಯನ್ನು ಹೆಚ್ಚಾಗಿ ಮಾಡುವ ಹಾಗೆ ಇಲ್ಲ ಏಕೆಂದರೆ ಪ್ರತಿ ತಿಂಗಳು ಪ್ರತಿ ಕುಟುಂಬಗಳು ಬಳಸುವ ವಿದ್ಯುತ್ ಯೂನಿಟ್ ಮೇಲೆ ಹೆಚ್ಚುವರಿ ಶೇಕಡ 10% ನಷ್ಟು ವಿದ್ಯುತ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ ಅದಕ್ಕಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡುವಂತಿಲ್ಲ. ಅಷ್ಟೇ ಅಲ್ಲದೆ 200 ಯೂನಿಟ್ ಗಳಿಗಿಂತ ಹೆಚ್ಚು ಬಳಸಿದರೆ ಪೂರ್ತಿ ಬಿಲ್ ಮೊತ್ತ ಪಾವತಿ ಮಾಡಬೇಕಾಗುತ್ತದೆ ಎಂದು ಇಂಧನ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಮೊದಲು ಗೃಹ ಜ್ಯೋತಿ ಯೋಜನೆಯ ಕುರಿತಂತೆ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು ಜೂನ್ 2ರಂದು ನಡೆದಂತಹ ಸಚಿವ ಸಂಪುಟದ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನ ಗೊಳಿಸುವ ವಿಚಾರವಾದ ಕುರಿತು ಮಾಹಿತಿ ನೀಡಲಾಗಿತ್ತು.
ಇದೀಗ ಉಚಿತ ವಿದ್ಯುತ್ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಈಗಾಗಲೇ ಬಳಕೆ ಮಾಡಿರುವಂತಹ ಹಳೆ ಬಾಕಿಯನ್ನು ಪಾವತಿ ಮಾಡದೆ ಇದ್ದರೆ ಸರ್ಕಾರವು ಅದಕ್ಕೆ ಹೊಣೆಯಾಗುವುದಿಲ್ಲ, ಜುಲೈ 1 ರವರೆಗೆ ಬಳಕೆ ಮಾಡಿದ ವಿದ್ಯುತ್ ನ ಯಾವುದೇ ಹಣ ಬಾಕಿ ಇಟ್ಟುಕೊಳ್ಳುವಂತಿಲ್ಲ ಎಂದು ಖುದ್ದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಜುಲೈ ತಿಂಗಳಿನಿಂದ ಈ ಯೋಜನೆ ಆರಂಭವಾಗಲಿದೆ ಆಗಸ್ಟ್ ತಿಂಗಳಿನಿಂದ ವಿದ್ಯುತ್ ಬಿಲ್ ಅನ್ನು ಸರಕಾರವೇ ಭರಿಸುತ್ತದೆ.
ಉಚಿತ ವಿದ್ಯುತ್ ಪಡೆಯಲು ಅನುಸರಿಸಬೇಕಾದಂತಹ ಮಾರ್ಗಸೂಚಿಗಳು ಈ ಕೆಳಕಡಂತಿದೆ.
* ಮೊದಲನೆಯದು ಮನೆಯ ಅಗ್ರಿಮೆಂಟ್ ಇದ್ದರೆ ಉಚಿತ ವಿದ್ಯುತ್ ಬಳಕೆ ಮಾಡಬಹುದು.
* ಆರ್ ಆರ್ ನಂಬರ್ ಗೆ ವೋಟರ್ ಐಡಿ ಲಿಂಕ್ ಮಾಡುವುದು ಕಡ್ಡಾಯ ಈ ಎರಡು ಮಾರ್ಗಸೂಚಿಗಳನ್ನು ಅನುಸರಿಸಿ ನೀವು ಉಚಿತ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್:-
ನೀವೇನಾದರೂ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದರೆ ಈ ಯೋಜನೆಯ ಫಲವನ್ನು ನೀವು ಪಡೆದುಕೊಳ್ಳಬಹುದು ಹಾಗೆಯೇ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಹವರು ಸಹ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಆಗಸ್ಟ್ 1 ರಿಂದ ಗೃಹ ಜ್ಯೋತಿ ಯೋಜನೆ ಚಾಲನೆಗೆ ಚಿಂತನೆ ನಡೆಸಲಾಗಿದೆ. ಮನೆಯ ವಿದ್ಯುತ್ ಸಂಪರ್ಕದ ಕಸ್ಟಮರ್ ಐಡಿ ಮತ್ತು ಅಕೌಂಟ್ ಐಡಿ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಲೇಬೇಕು ಎಂದು ಸರ್ಕಾರ ತಿಳಿಸಿದೆ.
ಉಚಿತವಾಗಿ ವಿದ್ಯುತ್ ಬಳಕೆ ಮಾಡಬಹುದು ಎಂದು ಅನವಶ್ಯಕವಾಗಿ ಇರುವಂತಹ ಕಡೆಗಳಲ್ಲಿ ವಿದ್ಯುತ್ ಬಳಕೆ ಮಾಡಿದರೆ ಸರ್ಕಾರವು ಅದರ ಮೇಲೆ ಹೆಚ್ಚುವರಿ ಹಣವನ್ನು ವಿಧಿಸಲಾಗುತ್ತದೆ ಹಾಗೆಯೇ 200 ಯೂನಿಟ್ ಗಳಿಗಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಪೂರ್ತಿ ಪ್ರಮಾಣದ ವಿದ್ಯುತ್ ಬಿಲ್ಲನ್ನು ನೀವು ಪಾವತಿ ಮಾಡಬೇಕಾಗುತ್ತದೆ ಆದ್ದರಿಂದ ಸರ್ಕಾರದ ಈ ನಿಯಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಮಾಹಿತಿ ಇಷ್ಟಾದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.