ರವಿಚಂದ್ರನ್ (Actor Ravichandran) ಅವರಿಗೆ ಸಿನಿಮಾದ ಬಗ್ಗೆ ಇರುವ ಕ್ರೇಝ್ ಇಂಡಸ್ಟ್ರಿ ಅವರನ್ನು ಕ್ರೇಜಿಸ್ಟಾರ್ (Crazy star) ಎಂದು ಕರೆಯುವಂತೆ ಮಾಡಿದೆ. ಸಿನಿಮಾಗಳ ಬಗ್ಗೆ ಕನಸು ಕಾಣುತ್ತಾ ಸಿನಿಮಾವನ್ನು ಉಸಿರಾಗಿಸಿಕೊಂಡಿರುವ ಸದಾ ಸಿನಿಮಾಗಳಗಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಇವರನ್ನು ಅಭಿಮಾನಿಗಳು ಕನಸುಗಾರ ಎಂದು ಕೂಡ ಕರೆಯುತ್ತಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ, ಸಂಗೀತ ನಿರ್ದೇಶಕನಾಗಿ, ಹಾಡು ಬರಹಗಾರನಾಗಿ ಸ್ಕ್ರಿಪ್ಟ್ ರೈಟರ್ ಆಗಿ ಸಿನಿಮಾರಂಗಕ್ಕೆ ತನ್ನ ಜೀವಮಾನವನ್ನೆಲ್ಲ ಮುಡಿಪಾಗಿಟ್ಟಿದ್ದಾರೆ ರವಿಚಂದ್ರನ್.
ಪ್ರೇಮಲೋಕ (Premaloka movie) ಎನ್ನುವ ಸಿನಿಮಾ ರವಿಚಂದ್ರನ್ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು, ಅದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ರವಿಚಂದ್ರನ್ ಅವರು ಅಭಿನಯಿಸಿದ್ದರೂ ತಮ್ಮದೇ ಈಶ್ವರಿ ಪ್ರೊಡಕ್ಷನ್ (Eshwari productions) ಮೂಲಕ ಹೀರೋ ಕಮ್ ನಿರ್ದೇಶಕ ಆಗಿದ್ದು ಪ್ರೇಮಲೋಕ ಸಿನಿಮಾ ಮೂಲಕ. ಆ ಸಿನಿಮಾದ ಅವರ ಕಥೆ ನಿರ್ದೇಶನ ಮತ್ತು ಅದಕ್ಕೆ ತಕ್ಕ ಹಾಗೆ ಹಂಸಲೇಖ ಅವರು ಕೊಟ್ಟ ಟ್ಯೂನ್ ಗಳು, ಹಾಡುಗಳು ಇಂದು ಸಹ ರವಿಚಂದ್ರನ್ ಎಂದರೆ ಪ್ರೇಮಲೋಕ ಪ್ರೇಮಲೋಕ ಎಂದರೆ ರವಿಚಂದ್ರನ್ ಎಂದು ಕರೆಯುವಂತೆ ಮಾಡಿದೆ.
ಇದರ ಹಿಂದೆಯೇ ಬಂದ ಯುಗಪುರುಷ, ಯುದ್ಧಕಾಂಡ, ರಣಧೀರ, ಕಿಂದರಿಜೋಗಿ, ರಸಿಕ, ಅಣ್ಣಯ್ಯ, ಹಳ್ಳಿ ಮೇಷ್ಟ್ರು, ಪುಟ್ನಂಜ ಇನ್ನು ಮುಂತಾದ ಅನೇಕ ಸಿನಿಮಾಗಳು ಅವರಿಗೆ ಕನ್ನಡದಲ್ಲಿ ಸ್ಟಾರ್ ನಟನ ಪಟ್ಟ ತಂದುಕೊಟ್ಟಿದೆ. ರವಿಚಂದ್ರನ್ ಅವರು ಹಲವು ದಶಕಗಳವರೆಗೆ ಕನ್ನಡ ಚಿತ್ರರಂಗವನ್ನು ಆಳಿದ ಯಶಸ್ವಿ ನಟ ಮತ್ತು ನಿರ್ದೇಶಕ ಹಾಗೂ ನಿರ್ಮಾಪಕ. ಅವರ ಸಿನಿಮಾಗಳಲ್ಲಿ ಎಲ್ಲರೂ ಗಮನಿಸಿರುವಂತೆ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಜೊತೆಗೆ ನಟಿಮಣಿಯರ ಸೌಂದರ್ಯಕ ಕೂಡ ಆದ್ಯತೆ.
ಪರಭಾಷೆ ನಟಿಯರನ್ನು ಕನ್ನಡಕ್ಕೆ ಅತಿ ಹೆಚ್ಚು ಪರಿಚಯಿಸಿದ್ದೇ ರವಿಚಂದ್ರನ್ ಅವರು ಜೂಹಿ ಚಾವ್ಲಾ, ಖುಷ್ಬು, ಮಧು ಬಾಲ, ಬಿಂದಿಯಾ ಶಿಲ್ಪಾ ಶೆಟ್ಟಿ, ರಂಭಾ ಇನ್ನು ಮುಂತಾದ ಅನೇಕ ನಟಿಮಣಿಯನ್ನು ಕನ್ನಡದಲ್ಲಿ ನಟಿಸುವಂತೆ ಮಾಡಿದವರು ರವಿಚಂದ್ರನ್ ಅವರು. ಇವರ ಎಲ್ಲಾ ಸಿನಿಮಾಗಳು ಕೂಡ ಪ್ರೀತಿ ಪ್ರೇಮದ (love story oriented) ಕುರಿತ ಕಥೆಯುಳ್ಳದ್ದಾಗಿತ್ತವೆ. ರವಿಚಂದ್ರನ್ ಅವರ ಎಲ್ಲಾ ಸಿನಿಮಾಗಳು ಕೂಡ ಇದಕ್ಕೆ ಮೀಸಲಾಗಿದೆ ಎಂದರೆ ಅದು ತಪ್ಪಲ್ಲ ಅವರ ಡೈರೆಕ್ಷನ್ನ ಎಲ್ಲಾ ಸಿನಿಮಾಗಳು ಕೂಡ ಲವ್ ಸ್ಟೋರಿಗಳೇ ಆಗಿದೆ ಅದನ್ನು ರವಿಚಂದ್ರನ್ ಅವರು ಸಹ ಒಪ್ಪಿಕೊಳ್ಳುತ್ತಾರೆ. ನನಗೆ ಪ್ರೀತಿ ಬಿಟ್ಟು ಬೇರೆ ಏನೂ ಗೊತ್ತಿಲ್ಲ.
ಹೆಣ್ಣು, ಪ್ರೀತಿ, ಹೂವು ಮತ್ತು ಸಿನಿಮಾ ಇದಿಷ್ಟೇ ನನಗೆ ಗೊತ್ತಿರುವುದು. ಅದನ್ನೇ ಇಟ್ಟುಕೊಂಡು ನನಗೆ ಗೊತ್ತಿರುವುದನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದೆ ಅಷ್ಟೇ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಕೆಲ ವರ್ಷಗಳಿಂದ ಅವರ ಯಾವ ಸಿನಿಮಾ ಕೂಡ ಅವರ ನಿರೀಕ್ಷೆ ಮಟ್ಟದಲ್ಲಿ ಹಿಟ್ ನೀಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಅವರೇ ಬೇಸರಪಟ್ಟುಕೊಂಡು ಹೇಳಿಕೊಂಡಿದ್ದಾರೆ. ಹಿರಿತೆರೆಯಲ್ಲಿ ಸಕ್ಸಸ್ ಕಡಿಮೆ ಆಗುತ್ತಿದ್ದಂತೆ ಕಿರುತೆರೆ ಕಡೆಗೆ ಮುಖ ಮಾಡಿರುವ ಇವರು ಅನೇಕ ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಮತ್ತು ತೀರ್ಪುಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ರೀತಿ ರಿಯಾಲಿಟಿ ಶೋಗಳಲ್ಲಿ ಕೆಲವೊಂದು ವಿಷಯದ ಬಗ್ಗೆ ಮಾತನಾಡುವ ಸಮಯ ಬಂದಾಗ ತಮ್ಮ ವೈಯಕ್ತಿಕ ಜೀವನದ ಕುರಿತು ಕೂಡ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಒಂದು ಕಾರ್ಯಕ್ರಮದಲ್ಲಿ ಅವರನ್ನು ಅವರ ಪ್ರೀತಿ ಬಗ್ಗೆ ಕೇಳಲಾಗಿದೆ. ಅದಕ್ಕೆ ರವಿಚಂದ್ರನ್ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಈ ರೀತಿ ಹೇಳಿದ್ದಾರೆ. ನಾನು ಅನೇಕ ಬಾರಿ ಹೇಳಿಕೊಂಡಿದ್ದೇನೆ, ನನಗೂ ಒಂದು ಹುಡುಗಿ ಮೇಲೆ ಪ್ರೀತಿ ಆಗಿತ್ತು ಎಂದು. ಅದು ಎಲ್ಲರ ಜೀವನದಲ್ಲೂ ಸಹ ಆಗುತ್ತದೆ. ನಾನು ಆ ಪ್ರೀತಿಯನ್ನು ಅವರಿಗೆ ಹೇಳಿಕೊಡುವುದಕ್ಕೆ ಒಂದು ವರ್ಷ ಸಮಯ ತೆಗೆದುಕೊಂಡೆ, ಆದರೆ ನನ್ನ ತಂದೆ ಆ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ನನಗೆ ಅರಿವಾದ ನಂತರ ಅದರಿಂದ ನಾನು ಹಿಂದೆ ಬಂದೆ.
ಆದರೆ ಆ ಹುಡುಗಿಯನ್ನು ಒಂದು ಕೂಡ ನಾನು ಮುಟ್ಟಲಿಲ್ಲ, ಅವರ ಕೈ ಕುಲುಕಿದ ನೆನಪಷ್ಟೇ ಇದೆ ಎಂದು ಹೇಳಿಕೊಂಡಿದ್ದಾರೆ. ನನ್ನ ಎಲ್ಲಾ ಸಿನಿಮಾಗಳಿಗೂ ಕೂಡ ಅವರೇ ಸ್ಪೂರ್ತಿ (inspiration for movies), ಅವರಿಂದಲೇ ನನಗೆ ಪ್ರೀತಿ ಪ್ರೇಮ ಈ ರೀತಿಯ ಕಥೆಗಳು ತಲೆಯಲ್ಲಿ ಓಡುವುದು ಎನ್ನುವುದನ್ನು ಹೇಳಿ ಇಷ್ಟು ದಿನದ ಸಕ್ಸಸ್ ಗೆ ಮೋಟಿವೇಶನ್ ಏನಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಈಗ ಅವರು ಎಲ್ಲೋ ಇದ್ದಾರೆ ಸಂತೋಷವಾಗಿದ್ದಾರೆ ಅಷ್ಟೇ ಸಾಕು ನನಗೆ, ಎಲ್ಲೂ ಕೂಡ ಅವರ ಹೆಸರನ್ನು ನಾನು ಹೇಳುವುದಿಲ್ಲ ಎಂದು ಅದನ್ನು ಅಷ್ಟಕ್ಕೆ ನಿಲ್ಲಿಸಿದ್ದಾರೆ.