ಕ್ರೇಜಿಸ್ಟಾರ್ ರವಿಚಂದ್ರನ್ ಟೈಟಲ್ ಗೆ ತಕ್ಕಹಾಗೆ ಸಿನಿಮಾ ಬಗ್ಗೆ ವಿಪರೀತವಾದ ಕ್ರೇಜ್ ಇಟ್ಟುಕೊಂಡಿರುವ ನಟ. ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಅದೆಷ್ಟೋ ದಾಖಲೆಯ ಸೂಪರ್ ಹಿಟ್ ಹಾಡುಗಳು ಇವೆ ಎಂದರೆ ಅದು ಇವರ ಚಿತ್ರದ ಹಾಡುಗಳೇ ಆಗಿರುತ್ತವೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹಾಡುಗಳ ಮೂಲಕ ಸಂಗೀತದ ಮೂಲಕ ಮತ್ತು ಪ್ರಾಪರ್ಟಿಗಳ ಮೂಲಕ ಶ್ರೀಮಂತಿಕೆ ತುಂಬಿಸಿದ ಕನಸುಗಾರ. 80 ಮತ್ತು 90ರ ದಶಕದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಆಗುವಂಥ ಅದೃಷ್ಟ ಪಡೆದುಕೊಂಡಿದ್ದ ಚಿಕ್ಕಜೆಮಾನ.
ಅದ್ಯಾಕೋ ಇತ್ತೀಚೆಗೆ ಒಂದೇ ಒಂದು ಸಕ್ಸಸ್ ಆಗಿ ಬಹಳ ಪರದಾಡುವಂತೆ ಆಗಿದೆ, ಒಂದು ಕಾಲದಲ್ಲಿ ಇವರ ಚಿತ್ರ ರಿಲೀಸ್ ಆಗುತ್ತದೆ ಎಂದರೆ ವಾರಗಟ್ಟಲೆ ಟಿಕೆಟ್ ಪಡೆದುಕೊಳ್ಳುವುದಕ್ಕೆ ಕಾಯಬೇಕಾಗಿದ್ದ ಪರಿಸ್ಥಿತಿ ತಂದಿದ್ದ ನಟ ಇತ್ತೀಚೆಗೆ ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿದ್ದಾರೆ. ಕನ್ನಡ ಸಿನಿಮಾಗಳಿಗೆ ಹೊಸ ರೀತಿಯ ಟಚ್ ಕೊಟ್ಟು, ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪರಭಾಷೆಗಳಿಂದ ನಾಯಕಿಯರನ್ನು ಕರೆತಂದು ಆಕ್ಟಿಂಗ್ ಮಾಡಿಸಿದ ನಿರ್ದೇಶಕ ಮತ್ತು ನಿರ್ಮಾಪಕರಾದ ರವಿಚಂದ್ರನ್ ಅವರು ಮತ್ತೊಮ್ಮೆ ತನ್ನ ಗತ ವೈಭವಕ್ಕೆ ಹಿಂತಿರುಗುವ ಸಾಹಸ ಮಾಡುತ್ತಿದ್ದಾರೆ.
ಅದಕ್ಕಾಗಿ ಒಳ್ಳೆ ಸ್ಕ್ರಿಪ್ ಮಾಡಿಕೊಂಡು ತೆರೆ ಹಿಂದಿನ ತಯಾರಿ ಚೆನ್ನಾಗಿ ನಡೆಸುತ್ತಿದ್ದಾರೆ. ಕೆಲ ಮೂಲಗಳ ಪ್ರಕಾರ ಶಿಲ್ಪಶೆಟ್ಟಿ ಅವರ ಜೊತೆ ಮತ್ತೊಮ್ಮೆ ಈ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಮೊದಲ ಸಿನಿಮಾವಾದ ಪ್ರೀತ್ಸೋದ್ ತಪ್ಪಾ ಸಿನಿಮಾ ನವಿರಾದ ಪ್ರೇಮ ಕಥೆಯೊಂದಿಗೆ ಹಿಟ್ ಹಾಡುಗಳನ್ನು ಕೊಟ್ಟು ಮ್ಯೂಸಿಕಲ್ ಹಿಟ್ ಚಿತ್ರ ಆಗಿತ್ತು. ತೆರೆ ಮೇಲೆ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಅವರ ಕೆಮಿಸ್ಟ್ರಿ ನೋಡಿದ್ದ ಜನರು ಇವರಿಬ್ಬರ ಜೋಡಿಗೆ ಫಿದಾ ಆಗಿ ಹೋಗಿದ್ದರು.
ಈಗ ಕನ್ನಡಿಗರಿಗೆ ಮತ್ತೊಮ್ಮೆ ಇವರನ್ನು ತೆರೆ ಮೇಲೆ ಕಾಣುವ ಸೌಭಾಗ್ಯ ಸಿಗುತ್ತಿದೆ. ಪ್ರೀತ್ಸೋದ್ ತಪ್ಪಾ ಸಿನಿಮಾ ಆದಮೇಲೆ ಒಂದಾಗೋಣ ಬಾ ಎನ್ನುವ ಸಿನಿಮಾ ಮೂಲಕ ಕೂಡ ಇವರಿಬ್ಬರು ಜೋಡಿ ಆಗಿದ್ದರು. ಒಂದಾಗೋಣ ಬಾ ಸಿನಿಮಾ ಕೂಡ ಹಾಡುಗಳಿಂದ ಹಿಟ್ ಆಗಿದ್ದು ಮಾತ್ರವಲ್ಲದೆ ತುಂಬು ಸಂಸಾರದ ಕಥೆ ಆಗಿದ್ದರಿಂದ ಫ್ಯಾಮಿಲಿ ಆಡಿಯನ್ಸ್ ಗಳನ್ನು ಕೂಡ ತನ್ನತ್ತ ಸೆಳೆದಿತ್ತು. ಈಗ ಮೂರನೇ ಬಾರಿಗೆ ಬಾಲಿವುಡ್ ಬೆಡಗಿ ಕನಸುಗಾರನ ಜೊತೆ ತೆರೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಜೊತೆಗೆ ರವಿಚಂದ್ರನ್ ಅವರಿಗೆ ಗೆಲ್ಲುವ ಹಠ ಜೋರಾಗಿದ್ದು, ಈ ಬಾರಿ ಸಕ್ಸಸ್ ಪಡೆಯುವ ಹಸಿವು ತೀವ್ರವಾಗಿರುವುದರಿಂದ ಆ ಚಿತ್ರ ನೋಡಿ ಕಣ್ತುಂಬಿಕೊಳ್ಳಲು ಹಲವಾರು ಕಾರಣಗಳಿಂದ ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರು ಕನ್ನಡದ ಮಂಗಳೂರು ಮೂಲದವರು, ಆದರೆ ಬಾಲಿವುಡ್ ಅಂಗಳದಲ್ಲಿ ಬೆಳೆದು ಇಂದು ಬಿ ಟೌನ್ ಬೆಡಗಿ ಎಂದು ಕರೆಸಿಕೊಂಡಿದ್ದಾರೆ. ಅಲ್ಲದೆ ಅಲ್ಲಿಯೇ ರಾಜ್ ಕುಂದ್ರಾ ಅವರನ್ನು ವಿವಾಹವಾಗುವ ಮೂಲಕ ಸೆಟಲ್ ಕೂಡ ಆಗಿದ್ದಾರೆ.
ಆಗಾಗ ದಕ್ಷಿಣ ಸಿನಿಮಾಗಳತ್ತ ಮುಖ ಮಾಡುವ ಇವರು ರವಿಚಂದ್ರನ್ ಅವರನ್ನು ಬಿಟ್ಟರೆ ಉಪೇಂದ್ರ ಅವರ ಜೊತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಆಟೋ ಶಂಕರ್ ಎನ್ನುವ ಸಿನಿಮಾದಲ್ಲಿ ಮತ್ತೊಮ್ಮೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ಈಕೆ ಕೆಲವು ವರ್ಷಗಳ ಹಿಂದೆ ಡ್ಯಾನ್ಸಿಂಗ್ ರಿಯಾಲಿಟಿ ಶೋಗಾಗಿ ಕನ್ನಡಕ್ಕೆ ಬಂದಿದ್ದರು. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರು ಹಿಂದಿ ಸಿನಿಮಾಗಳಲ್ಲೂ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.
ಬದಲಾಗಿ ಹಿಂದಿ ರಿಯಾಲಿಟಿ ಶೋಗಳು ಮತ್ತು ವೆಬ್ ಸೀರೀಸ್ ಗಳಲ್ಲಿ ಹೆಸರು ಮಾಡುತ್ತಿರುವ ಇವರು ಮತ್ತೊಮ್ಮೆ ಸಿನಿಮಾ ಗಾಗಿ ಬಣ್ಣ ಹಚ್ಚುತ್ತಿರುವುದು ರವಿಚಂದ್ರನ್ ಅವರ ಜೊತೆಯಲ್ಲಿ ಎನ್ನುವುದು ಕೇಳುವುದಕ್ಕೆ ಬಹಳ ಸಂತೋಷವಾದ ವಿಷಯ ಆಗಿದೆ. ಆದಷ್ಟು ಬೇಗ ಈ ಬಗ್ಗೆ ಅಧಿಕೃತವಾದ ಮಾಹಿತಿ ಚಿತ್ರತಂಡದಿಂದ ಹೊರಬಂದು ಚಿತ್ರ ರಸಿಕರಿಗೆ ಸಂತೋಷ ನೀಡಲಿ ಎನ್ನುವುದು ಕನ್ನಡ ಕಲಾಪ್ರೇಮಿಗಳ ಆಶಯ.