ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನನ್ನ ವಸತಿ ಯೋಜನೆ ಒಂದಾಗಿದ್ದು ಗ್ರಾಮೀಣ ಹಾಗೂ ನಗರದ ವಸತಿ ರಹಿತ ಹಾಗೂ ನಿವೇಶನ ರಹಿತ ಬಡ ಜನತೆಗೆ ಕೈಗೆಟಕುವ ಬೆಲೆಯಲ್ಲಿ ಚಿಕ್ಕದಾದಂತಹ ಸುಂದರ ವಾದಂತಹ ಸೂರು ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವಂತಹ ಕಾರ್ಮಿಕರು, ಬಿಡಿ ಕಾರ್ಮಿಕರು, ಆಟೋ ಚಾಲಕರು ಹಾಗೂ ಚಲನಚಿತ್ರರಂಗದ ಕಾರ್ಮಿಕರು, ಸಣ್ಣ ಗುತ್ತಿಗೆದಾರರು ಹೀಗೆ ಬೆಂಗಳೂರು ನಗರ ಜಿಲ್ಲೆಯ ನಿವಾಸಿಗಳಿಗೆ ವಾರ್ಷಿಕ ಆದಾಯ 3 ಲಕ್ಷದ ಒಳಗೆ ಇರುವಂತಹ ಬಡ ಕುಟುಂಬಸ್ಥರಿಗೆ ಶಾಶ್ವತ ನೆಲೆ ಒದಗಿಸಲು ಮೊಟ್ಟಮೊದಲ ಬಾರಿಗೆ ರಸ್ತೆ, ನೀರು, ಚರಂಡಿ, ವಿದ್ಯುತ್ ಮುಂತಾದ ಅಗತ್ಯ ಮೂಲ ಸೌಕರ್ಯಗಳಿಂದ ವಿನೂತನವಾದಂತಹ ನನ್ನ ಮನೆ ಭಾಗ್ಯ ವಸತಿ ಯೋಜನೆಯ ಅಡಿಯಲ್ಲಿ ವಸತಿಯನ್ನು ಕಲ್ಪಿಸಲಿದೆ. ನನ್ನ ಮನೆ ವಸತಿ ಯೋಜನೆ ಇದರ ಅಡಿಯಲ್ಲಿ 2023-24ನೇ ಸಾಲಿನಲ್ಲಿ ಮನೆ ಇಲ್ಲದವರಿಗೆ ಮನೆ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೂಲಕ ಮನೆಯನ್ನು ಪಡೆದುಕೊಳ್ಳಬಹುದಾಗಿದೆ.
ನನ್ನ ಮನೆ ವಸತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಇದು ಸದಾವಕಾಶ ಯಾರೆಲ್ಲ ಸ್ವಂತ ಮನೆಯನ್ನು ಹೊಂದಿಲ್ಲ ಅಂತಹವರಿಗೆ ಸಿಹಿ ಸುದ್ದಿ ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಿ ನೀವು ಮನೆಯನ್ನು ಪಡೆಯಬಹುದು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವೆಬ್ಸೈಟ್ನ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಈ ಒಂದು ವೆಬ್ಸೈಟ್ ಅನ್ನು ಓಪನ್ ಮಾಡಿದ ನಂತರ ನಿಮಗೆ ಆನ್ಲೈನ್ ಅರ್ಜಿ ನನ್ನ ಮನೆ ವಸತಿ ಯೋಜನೆ ಎಂದು ಬರುತ್ತದೆ ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಪ್ಲಿಕೇಶನ್ ಹಾಕಲು ಕೆಲವೊಂದು ಮಾಹಿತಿಗಳು ದೊರೆಯುತ್ತದೆ.
ಅರ್ಜಿ ಸಲ್ಲಿಕೆ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ನಗರ ಪ್ರದೇಶದವರು ಅಥವಾ ಹಳ್ಳಿಯಲ್ಲಿ ವಾಸಿಸುತ್ತಿದ್ದೀರಾ ಎಂದು ಸೆಲೆಕ್ಟ್ ಮಾಡಿಕೊಳ್ಳಿ, ನಿಮ್ಮ ಹಳ್ಳಿಯನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ವಾರ್ಡ್, ಅಡ್ರೆಸ್ ಹಾಕಿ ಪಿನ್ ಕೋಡ್ ಅನ್ನು ಸಲ್ಲಿಸಿ ಮುಂದುವರಿಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಸೇರಿಸಬೇಕಾಗುತ್ತದೆ ಆಧಾರ್ ಕಾರ್ಡ್ ನಂಬರ್ ಹಾಗೂ ಅದರಲ್ಲಿ ನಿಮ್ಮ ಹೆಸರು ಯಾವ ರೀತಿಯಲ್ಲಿ ಇರುತ್ತದೆ ಅದನ್ನು ಹಾಕಿ. ಈ ರೀತಿಯಾಗಿ ನೀವು ಅಲ್ಲಿ ಕೇಳಿದಂತಹ ಎಲ್ಲಾ ಮಾಹಿತಿಯನ್ನು ನೀಡಿ ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ನನ್ನ ಮನೆ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅರ್ಹತೆ ಮತ್ತು ದಾಖಲಾತಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.
* ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು ಜೊತೆಗೆ ಬೆಂಗಳೂರು ನಗರ ಗ್ರಾಮಾಂತರ ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಗಳಿಂದ ವಾಸವಾಗಿರಬೇಕು.
* ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಹೊಂದಿರಬೇಕು
* ಚುನಾವಣಾ ಆಯೋಗದಿಂದ ನೀಡಲಾದ ಗುರುತಿನ ಚೀಟಿ ಹೊಂದಿರಬೇಕು.
* ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ವಸತಿ ರಹಿತರಾಗಿರಬೇಕು ಹಾಗೆ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಮನೆಗಳನ್ನು ಹೊಂದಿರಬಾರದು.
* ವಾರ್ಷಿಕ ತಲಾ ಆದಾಯ 2 ಲಕ್ಷದಿಂದ 3 ಲಕ್ಷದ ಒಳಗೆ ಇರಬೇಕು.
* ಜಾತಿ ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
* ಒಂದು ಕುಟುಂಬದಲ್ಲಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದು ಹಾಗೆಯೇ ವಿಕಲಚೇತನರು ಆಗಿದ್ದರೆ ವಿಕಲಚೇತನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಮೇಲೆ ತಿಳಿಸಿದಂತಹ ಎಲ್ಲ ದಾಖಲಾತಿ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ನಿವೇಶನವನ್ನು ಪಡೆದುಕೊಳ್ಳಬಹುದು. ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.