ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಸಿನಿಮಾ ಇಂಡಸ್ಟ್ರಿಗೆ ಮಾತ್ರ ಪವರ್ ಆಗಿರದೆ ಜನಸಾಮಾನ್ಯರ ಬದುಕಿನ್ನೂ ಬೆಳಕಿನಂತೆ ಬೆಳಗುತ್ತಿದ್ದ ಸಮಾಜಮುಖಿ ವ್ಯಕ್ತಿ. ಅಪ್ಪು ಅಗಲಿಕೆ ಸಿನಿಮಾ ರಂಗಕ್ಕೆ, ಕುಟುಂಬಕ್ಕೆ ಹಾಗೂ ಇಡೀ ಕರ್ನಾಟಕಕ್ಕೆ ಅಪಾರ ನ’ಷ್ಟವಾಗಿದೆ.
ನೋಡನೋಡುತ್ತಿದ್ದಂತೆ ಅಪ್ಪು ಆಗಲಿ ಎರಡು ವರ್ಷ ಕಳೆದೇ ಹೋಯಿತು, ಸದ್ಯಕ್ಕಿಗ ಅಪ್ಪು ಜವಾಬ್ದಾರಿಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Aswini Puneeth) ಹಾಗೂ ಸಹೋದರರಾದ ಶಿವಣ್ಣ ಮತ್ತು ರಾಘಣ್ಣ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ.
ಅಪ್ಪು ಅವರು ಬಲಗೈ ಕೊಟ್ಟಿದ್ದು ಎಡಗೈ ಗೂ ತಿಳಿಯದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ತೊಡಗಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಗು ಕೂಡ ಶಕ್ತಿಯಾಗಿದ್ದರು. ಇದೇ ಕಾರಣಕ್ಕೆ ಗಾಂಧಿನಗರಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ನೆರವಾಗಲು PRK ಪ್ರೊಡಕ್ಷನ್ ಆರಂಭಿಸಿದ್ದರು.
ಪತಿ ಹಾದಿಯಲ್ಲಿ ಸಾಗುತ್ತಿರುವ ಅಶ್ವಿನಿ ಪುನೀತ್ ರವರು ಈಗ ನಿರ್ಮಾಪಕಿಯಾಗಿ PRK ಪ್ರೊಡಕ್ಷನ್ ಜವಾಬ್ದಾರಿ ಹೊತ್ತುಕೊಂಡು ತಮ್ಮ ಪ್ರೊಡಕ್ಷನ್ ನಿಂದ ಹೊಸ ಪ್ರತಿಭೆಗಳನ್ನು ಕರ್ನಾಟಕಕ್ಕೆ ಪರಿಚಯಿಸುತ್ತಿದ್ದಾರೆ. ಹಾಗೆಯೇ ಅಪ್ಪು ಹೇಗೆ ಯಾವೊಬ್ಬ ಅಭಿಮಾನಿ ಆತ್ಮೀಯವಾಗಿ ಬಂದು ಆಹ್ವಾನಿಸಿದವರೆ ಅವರ ಕುಟುಂಬದ ಕಾರ್ಯಕ್ರಮಗಳಿಗೆ ಹೋಗಿ ಹರಸುತ್ತಿದ್ದರು ಅದೇ ರೀತಿ ಅಶ್ವಿನಿ ಯವರು ಕೂಡ ಅಭಿಮಾನಿಗಳ ಬದುಕಿನ ಭಾಗವಾಗಿ ಅಪ್ಪುವಿನಂತೆ ಹೊಂದಿಕೊಳ್ಳುತ್ತಿದ್ದಾರೆ.
ಇನ್ನು ರಾಘಣ್ಣ (Raghavendra Rajkumar) ಕೂಡ ಅಪ್ಪನಂತೆ ಅಪ್ಪು ಕೂಡ ಸ್ಪೂರ್ತಿ, ತಮ್ಮನಾಗಿ ಬಂದು ದೇವರಾಗುವುದು ಹೇಗೆ ಎಂದು ಕಲಿಸಿ ಹೋದ ಎಂದು ಹೇಳುತ್ತಿರುತ್ತಾರೆ. ಅದೇ ರೀತಿ ತಮ್ಮನಿಂದ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಇದರ ನಡುವೆ ಸಿನಿಮಾ ಒಂದರಲ್ಲಿ ಅಪ್ಪು ಸ್ಥಾನ ತುಂಬಲು ಅವಕಾಶ ಕೂಡ ರಾಘಣ್ಣನಿಗೆ ದೊರಕಿದೆ.
ನಟ ರಂಗಾಯಣ ರಘು (Rangayana Raghu) ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ರಂಗಸಮುದ್ರ (Rangasamudra Movie) ಸದ್ಯ ಚಿತ್ರೀಕರಣ ಮುಗಿಸಿದೆ. ಈ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ನಟ ರಾಘವೇಂದ್ರ ರಾಜ್‌ಕುಮಾರ್ ಅವರೇ ಟ್ರೇಲರ್ ಕೂಡ ರಿಲೀಸ್ (trailer release Event) ಮಾಡಿ, ರಂಗಸಮುದ್ರ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ವಿಶೇಷವೆಂದರೆ, ರಾಘಣ್ಣ ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಿದ್ದಾರೆ. ಅಂದಹಾಗೆ, ಆ ಪಾತ್ರವನ್ನು ಪುನೀತ್ ರಾಜ್‌ಕುಮಾರ್ (Raghanna plays Puneeth Role) ಅವರೇ ಮಾಡಬೇಕಿತ್ತು ಆದರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಆದರೀಗ ಅವರ ಸ್ಥಾನವನ್ನು ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರು ತುಂಬಿದ್ದಾರೆ.
ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಕೂಡ ಮಾತನಾಡಿದ ರಾಘಣ್ಣ ಈ ರೀತಿಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ನನ್ನ ಮೊದಲ ಸೆಲ್ಯೂಟ್ ಹೇಳುತ್ತೇನೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರ ಅಭಿನಯ ನಿಜಕ್ಕೂ ಅತ್ಯದ್ಭುತವಾಗಿದೆ. ಇಂಥದ್ದೊಂದು ಸಿನಿಮಾದಲ್ಲಿ ನಾನು ನಟಿಸಿದ್ದು ನನ್ನ ಭಾಗ್ಯ ಅಂತಲೇ ಹೇಳಬೇಕು. ನಾನು ಸದಾ ಈ ತಂಡದ ಜೊತೆಗೆ ಇರುತ್ತೇನೆ ಎಂದಿದ್ದಾರೆ.
ರಾಮ್, ಹುಡುಗರು, ರಾಜಕುಮಾರ ಇತ್ಯಾದಿ ಸಿನಿಮಾಗಳಾದಿಯಾಗಿ ರಂಗಾಯಣ ರಘು ಹಾಗೂ ಪುನೀತ್ ರಾಜಕುಮಾರ್ ಅವರ ಕಾಂಬಿನೇಷನ್ ಎಷ್ಟು ಚೆನ್ನಾಗಿ ವರ್ಕ್ ಆಗಿತ್ತು ಎನ್ನುವುದನ್ನು ನಾವು ನೋಡಿದ್ದೇವೆ. ಇವರಿಬ್ಬರ ನಡುವೆ ಅಷ್ಟೇ ಆತ್ಮೀಯವಾದ ಸಂಬಂಧವಿತ್ತು, ಪದಗಳಲ್ಲಿ ವಿವರಿಸಲಾಗದ ಅನುಬಂಧ ಇಬ್ಬರ ನಡುವೆ ಕೂಡಿಕೊಂಡಿತ್ತು.
ಇಂದು ಅಪ್ಪು ಇದ್ದಿದ್ದರೆ ರಂಗಾಯಣ ರಘು ಅವರ ಈ ಹೊಸ ಪ್ರಯತ್ನಕ್ಕೆ ಬಹಳ ಸಂತೋಷಪಟ್ಟು ಈ ಕಾರ್ಯಕ್ರಮದ ಜವಾಬ್ದಾರಿ ಹೆಗಲಿಕ್ಕೆ ಹೊತ್ತುಕೊಳ್ಳುತ್ತಿದ್ದರು ಎನ್ನುವುದು ಕೂಡ ನಿಜ. ಅಪ್ಪು ಎಲ್ಲಿದ್ದರೂ ಸಂತೋಷಪಟ್ಟು ಹರಸುತ್ತಾರೆ ಎಂದು ಸಮಾಧಾನಪಟ್ಟುಕೊಳ್ಳೋಣ.