ನಟಿ ರಾಧಿಕಾ ಕುಮಾರಸ್ವಾಮಿ 20ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟ ಹಿಡಿದವರು. ಮಣಿ, ಪ್ರೇಮ ಖೈದಿ, ನಿನಗಾಗಿ, ಈ ರೀತಿ ಸಾಲು ಸಾಲು ಲವ್ ಸ್ಟೋರಿ ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಕೌಟುಂಬಿಕ ಸಿನಿಮಾಗಳಿಗೆ ತನ್ನನ್ನು ಒಪ್ಪಿಸಿಕೊಂಡ ಅಭಿನಯ ಚತುರೆ. ಕನ್ನಡದಲ್ಲಿ ಶ್ರುತಿ ಅವರನ್ನು ಬಿಟ್ಟರೆ ಈ ರೀತಿ ಹೆಣ್ಣು ಮಕ್ಕಳ ಕಣ್ಣೀರ ಕಥೆಗಳನ್ನು ಕಣ್ಣಿಗೆ ಕಟ್ಟಿದಂತೆ ಅಭಿನಯಿಸಿ ತೋರಿಸುವ ಸಾಂಸಾರಿಕ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವ ಏಕ ಮಾತ್ರ ನಟಿ ರಾಧಿಕಾ ಕುಮಾರಸ್ವಾಮಿ.
ತವರಿಗೆ ಬಾ ತಂಗಿ, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ಅಣ್ಣ ತಂಗಿ ಇಂತಹ ಸಿನಿಮಾಗಳು ಇದಕ್ಕೆ ಸಾಕ್ಷಿ. ಈ ರೀತಿ ಮಾಡರ್ನ್ ಲುಕ್ ಹಾಗು ಟ್ರಡಿಷನಲ್ ಲುಕ್ ಎರಡಕ್ಕೂ ಸಹ ಒಪ್ಪುವಂತಹ ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮದುವೆ ಆದ ಬಳಿಕ ಆ ವಿವಾದದಿಂದ ಸಾಕಷ್ಟು ಸಮಸ್ಯೆ ಎದುರಿಸಿದ ಇವರು ನಂತರ ಈಗ ನಿರ್ಮಾಪಕಿಯಾಗಿ ಕೂಡ ತಮ್ಮ ಸೆಕೆಂಡ್ ಇನ್ನಿಂಗ್ಸ್ ಸಿನಿಮಾ ಇಂಡಸ್ಟ್ರಿಯಲ್ಲಿ ಶುರು ಮಾಡಿದ್ದಾರೆ.
ಲಕ್ಕಿ ಮತ್ತು ಸ್ವೀಟಿ ಸಿನಿಮಾಗಳ ನಿರ್ಮಾಪಕ ಆಗಿದ್ದಾರೆ. ಕನ್ನಡ ಮಾತ್ರ ಅಲ್ಲದೆ ಪರಭಾಷೆಗಳಲ್ಲೂ ಕೂಡ ಬೇಡಿಕೆಯಲ್ಲಿ ಇದ್ದ ನಟಿ ಇತ್ತೀಚೆಗೆ ಸಿನಿಮಾ ಬಿಟ್ಟು ರಿಯಾಲಿಟಿ ಶೋಗಳ ಕಡೆ ಮುಖ ಮಾಡಿದ್ದಾರೆ. ಆಗಾಗ ಕನ್ನಡ ಕಿರುತೆರೆಯ ಡ್ಯಾನ್ಸಿಂಗ್ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಕರಾವಳಿ ಭಾಗದವರಾದ ರಾಧಿಕಾ ಕುಮಾರಸ್ವಾಮಿ ಅವರು ಚಿತ್ತರಂಗದಲ್ಲಿ ಬೆಳೆದು ಇಂದು ಈ ಪರಿ ಖ್ಯಾತಿ ಗಿಟ್ಟಿಸಿರುವುದೇ ಒಂದು ರೋಚಕ ಕಥೆ.
ಇದರ ನಡುವೆ ಅವರು ಸಿನಿಮಾ ರಂಗದಲ್ಲಿ ಮಾಡಿದ ಆ ಒಂದು ತಪ್ಪಿಗಾಗಿ ಈಗಲೂ ಕಣ್ಣೀರು ಇಡುತ್ತಿದ್ದೇನೆ ಎಂದು ಶಾ’ಕಿಂ’ಗ್ ಹೇಳಿಕೆ ಒಂದನ್ನು ಇಂಟರ್ವ್ಯೂ ಅಲ್ಲಿ ಕೊಟ್ಟಿದ್ದಾರೆ. ರಾಧಿಕ ಕುಮಾರಸ್ವಾಮಿ ಅವರು ಮಾಡಿದಂತಹ ಆ ತಪ್ಪು ಏನೆಂದರೆ ರಾಧಿಕಾ ಕುಮಾರಸ್ವಾಮಿ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಮಿಲನ ಸಿನಿಮಾದಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಆ ಸಮಯದಲ್ಲಿ ಇವರು ದರ್ಶನ್ ಅವರ ಅನಾಥರು ಸಿನಿಮಾದಲ್ಲಿ ಬಿಝಿ ಇದ್ದ ಕಾರಣ ಮಿಲನ ಸಿನಿಮಾದ ಆಫರ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.
ನಂತರ ಪಾರ್ವತಿ ಮೆನನ್ ಅವರು ಆಯ್ಕೆಯಾಗಿ ಮಿಲನ ಸೂಪರ್ ಹಿಟ್ ಸಿನಿಮಾ ಆಯಿತು. ಆ ಸಿನಿಮಾದ ಖ್ಯಾತಿ ಇಂದಿಗೂ ಕೂಡ ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಅಪ್ಪು ಅವರ ಅನೇಕ ಚಿತ್ರಗಳನ್ನು ಕನ್ನಡಿಗರು ಬಹಳ ಪ್ರೀತಿಸುತ್ತಾರೆ. ಎಂದಿಗೂ ಕೂಡ ಆ ಸಿನಿಮಾಗಳನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದರೂ ಕೂಡ ಚಾನೆಲ್ ಚೇಂಜ್ ಮಾಡದೆ ನೋಡುತ್ತಾರೆ. ಅಂತಹದೇ ಒಂದು ಮಿಲನ ಸಿನಿಮಾ ಅತ್ಯುತ್ತಮವಾದ ಪ್ರೀತಿಯ ಕಥೆ ಮತ್ತು ಸಂಬಂಧಗಳ ಮೌಲ್ಯವನ್ನು ಮದುವೆ ಅರ್ಥವನ್ನು ತಿಳಿಸುವ ಚಿತ್ರ ಆಗಿತ್ತು.
ಹೊಸತನದ ಕಥೆಯೊಂದಿಗೆ ಬಂದಿದ್ದ ಈ ಚಿತ್ರ ಸಂಗೀತದಿಂದ ಹಾಗೂ ಉತ್ತಮ ಸ್ಕ್ರೀನ್ ಪ್ಲೇ ಇಂದ ಆ ವರ್ಷದ ಸೂಪರ್ ಹಿಟ್ ಚಿತ್ರ ಆಯ್ತು. ಆ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಇಂದಿಗೂ ಸಹ ನಟಿ ಕುಮಾರಸ್ವಾಮಿ ಅವರು ಬಹಳ ಬೇಸರಪಟ್ಟು ಕೊಳ್ಳುತ್ತಿದ್ದಾರೆ. ಸ್ವತಃ ಅವರೇ ಇದನ್ನು ಇಂಟರ್ವ್ಯೂ ಒಂದರಲ್ಲೂ ಹೇಳಿಕೊಂಡಿದ್ದಾರೆ. ಮುಂದೆ ಎಂದಾದರೂ ಅಪ್ಪು ಜೊತೆ ಸಿನಿಮಾ ಮಾಡುತ್ತೇನೆ ಎಂದು ಅವರು ಆಸೆ ಇಟ್ಟುಕೊಂಡಿದ್ದರು.
ಆದರೆ ಈಗ ಆಸೆಗೂ ಕೂಡ ತಣ್ಣೀರು ಎರಚಿದಂತಾಗಿದೆ. ಶಿವಣ್ಣನ ಜೊತೆ ತಂಗಿಯಾಗಿ ತೆರೆ ಮೇಲೆ ಅಣ್ಣ ತಂಗಿಯರ ಬಂಧದ ಸಾರವನ್ನು ಸಾರಿದ್ದ ಇವರು ಅಪ್ಪು ಜೊತೆ ಮಿಲನ ಸಿನಿಮಾ ನಾಯಕಿ ಆಗಿದ್ದರೇ ಸಿನಿ ಕೆರಿಯರ್ ಅಲ್ಲಿ ಅವರ ಮತ್ತೊಂದು ಹಿಟ್ ಚಿತ್ರವಾಗಿರುತ್ತಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.