ಚಾಲೆಂಜಿಂಗ್ ಸ್ಟಾರ್ (Challenging star Darshan) ದರ್ಶನ್ ಈ ಹೆಸರು ಹೇಳಿದರೆ ಯುವಕರ ಮನಸ್ಸಲ್ಲಿ ಅದೆಂತಹದೋ ಒಂದು ಉತ್ಸಾಹ. ಚಾಲೆಂಜ್ ಹಾಕಿಕೊಂಡೆ ಸ್ಟಾರ್ ಆಗಲು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಇವರು ಇಂದು ಮಾಧ್ಯಮಗಳನ್ನು ಎದುರು ಹಾಕಿಕೊಂಡು ಪ್ರಚಾರವಿಲ್ಲದೆ ಸಿನಿಮಾ ಗೆಲ್ಲುತ್ತಿದ್ದಾರೆ. ತಾವು ಮಾಡಿಕೊಂಡ ಕೆಲವು ವಿವಾದಗಳ ವಿಷಯದಿಂದ ಮಾಧ್ಯಮದವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ದರ್ಶನ್ ಅವರು ಅಭಿಮಾನಿಗಳ ಸಹಕಾರದಿಂದ ಕ್ರಾಂತಿ ಸಿನಿಮಾವನ್ನು ನೂರು ಕೋಟಿ ಕ್ಲಬ್ಸ್ ಸೇರಿಸಿದ್ದಾರೆ.
ಇದರ ಬೆನ್ನೆಲ್ಲೇ ಅವರ ಮುಂದಿನ ಸಿನಿಮಾದ ಕುರಿತು ಇನ್ನಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ. ಒಂದು ಸಿನಿಮಾದಲ್ಲಿ ನಿರತವಾಗಿದ್ದಾಗಲೇ ಅವರ ಅಭಿಮಾನಿಗಳಿಗೆ ಮುಂದಿನ ಸಿನಿಮಾಗಳ ಬಗ್ಗೆ ಅಪ್ಡೇಟ್ ಕೊಟ್ಟುಬಿಡುತ್ತಾರೆ .ಆದರೆ ಆ ಸಿನಿಮಾದ ಬಗ್ಗೆ ಹೆಚ್ಚು ಪ್ರಚಾರ ಮಾಡುವುದಿಲ್ಲ. ಹಾಗೆ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿದ್ದಾಗಲೇ ಅವರ ಮುಂದಿನ ಚಿತ್ರವಾದ ಡಿ 56 (D56) ಎಂದು ಇನ್ನು ಹೆಸರಿಡದ ಚಿತ್ರದ ಮುಹೂರ್ತ ಕಾರ್ಯವನ್ನು ಮಾಡಿ ಮುಗಿಸಿದ್ದರು.
2022ರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಕನಕಪುರ ರಸ್ತೆಯಲ್ಲಿ ಇರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಬಹಳ ಅಚ್ಚುಕಟ್ಟಾಗಿ ಮುಹೂರ್ತ ಕಾರ್ಯ ನೆರವೇರಿತ್ತು ಮತ್ತು ಈ ಸಿನಿಮಾದ ನಿರ್ಮಾಣದ ಹೊಣೆ ರಾಕ್ ಲೈನ್ ವೆಂಕಟೇಶ್ ಅವರದು, ಜೊತೆಗೆ ರಾಬರ್ಟ್ ಸಿನಿಮಾದಲ್ಲಿ ಕೆಲಸ ಮಾಡಿದ ತಂಡವರೇ (with Robert team) ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಮತ್ತೊಮ್ಮೆ ತರುಣ್ ಸುಧೀರ್ ಅವರು ಡಿ.ಬಾಸ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದೆಲ್ಲವೂ ಅವತ್ತೇ ಬಹಿರಂಗವಾಗಿತ್ತು.
ಸಿನಿಮಾಗಳ ಮತ್ತೊಂದು ಆಕರ್ಷಣೆ ಎಂದರೆ ನಾಯಕನಟಿ ಹಾಗಾಗಿ ಈ ಸಿನಿಮಾದ ಹೀರೋಯಿನ್ ಬಗ್ಗೆ ದರ್ಶನ್ ಅಭಿಮಾನಿಗಳು ಸೇರಿದಂತೆ ಕರ್ನಾಟಕದ ಸಿನಿರಸಿಕರೆಲ್ಲರಿಗೂ ಕುತೂಹಲ ಇತ್ತು. ಕನಸಿನ ರಾಣಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು (Malashree and koti Ramu daughter) ಅವರ ಪುತ್ರಿಯದ ರಾಧನ ರಾಮ್ (Heroine Radhana Ram) ಅವರು ದರ್ಶನ್ ಅವರ ಈ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಲಾಂಚ್ (launch) ಆಗುತ್ತಿದ್ದಾರೆ.
ಮೊಟ್ಟ ಮೊದಲ ಸಿನಿಮಾದಲ್ಲಿ ಸ್ಟಾರ್ ನಟನೊಬ್ಬನಿಗೆ ನಾಯಕಿಯಾಗುವ ಅದೃಷ್ಟವನ್ನು ಪಡೆದುಕೊಂಡಿದ್ದಾರೆ ಇವರು. ದರ್ಶನ್ ಅವರು ಮೊದಲಿನಿಂದಲೂ ಹೀಗೆ ತನ್ನ ಸಿನಿಮಾ ವಿಚಾರದಲ್ಲಿ ಅವರಿಗಿರುವ ಒಂದೇ ಡಿಮ್ಯಾಂಡ್ ಎಂದರೆ ಅದು ನಾಯಕಿ ಆಯ್ಕೆ. ಯಾರಾದರೂ ಪರವಾಗಿಲ್ಲ ಆದರೆ ಅವರು ಕನ್ನಡದ ನಟಿ ಆಗಿರಬೇಕು, ಪರಭಾಷಿಕರನ್ನು ತಂದು ಹಣ ಸುರಿಯುವುದು ಬೇಡ ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಅವಕಾಶ ಕೊಡೋಣ ಎನ್ನುವುದು ಅವರ ನಿಲುವು.
ಹಾಗಾಗಿಯೇ ಈ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದ ಬಗ್ಗೆ ಎಲ್ಲೇ ಹೋದರು ಪ್ರಶ್ನೆ ಕೇಳುತ್ತಲೇ ಇದ್ದರೂ ದರ್ಶನವರು ಈ ಸಿನಿಮಾದಿಂದ ಕಾಂತಿ ಸಿನಿಮಾಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಚಿತ್ರದ ಬಗ್ಗೆ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಮತ್ತು ಕ್ರಾಂತಿ ಸಿನಿಮಾ ರಿಲೀಸ್ ಆಗುವವರೆಗೂ ಈ ಚಿತ್ರದ ಅಪ್ಡೇಟ್ಗಾಗಿ ಕಾಯಿರಿ ಎಂದು ಹೇಳುತ್ತಿದ್ದರು.
ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ (Darshan birthday) ಇದ್ದ ಪ್ರಯುಕ್ತ ದರ್ಶನ್ ಸೆಲೆಬ್ರಿಟಿ ಗಳಿಗಾಗಿ ಚಿತ್ರತಂಡ ಟೈಟಲ್ ಅನ್ನು ರಿಲೀಸ್ (D56 title ralease ) ಮಾಡಿದ್ದಾರೆ. ಟೈಟಲ್ ಜೊತೆಗೆ ಅದರ ಪೋಸ್ಟರ್ ಝಲಕ್ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ದರ್ಶನ್ ಅವರ ಈ ಚಿತ್ರಕ್ಕೆ ಕಾಟೇರ (Khatera) ಎನ್ನುವ ಹೆಸರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಇದು ಜೀವನಾದರಿತ ಸತ್ಯಕಥೆಯ ಎಳೆಯನ್ನು ಕೊಂದಿದೆ ಎನ್ನುವ ಸುಳಿವು ಸಿಕ್ಕಿದೆ.
ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್ ಅವರ ಬೇಡಿಕೆ ಇಂಡಸ್ಟ್ರಿಯಲ್ಲಿ ಎಷ್ಟಿದೆ ಎನ್ನುವುದೇ ಎಲ್ಲರಿಗೂ ಗೊತ್ತೇ ಇದೆ, ಹಾಗಾಗಿ ಅವರ ಸಂಭಾವನೆ ವಿಚಾರವೂ ಕೂಡ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಆದರೆ ಸೆಲೆಬ್ರಿಟಿಗಳಿಂದ ಗಳಿಸಿದ್ದನ್ನು ಅವರಿಗೆ ಹಂಚುವ ಕೆಲಸವನ್ನು ತೆರೆ ಹಿಂದೆ ಪ್ರಚಾರವಿಲ್ಲದೆ ಮಾಡುತ್ತಿದ್ದಾರೆ ಈ ಯಜಮಾನ. ತಾನು ಗಳಿಸಿದ ಕೋಟಿ ಕೋಟಿ ಸಂಭಾವನೆಯಲ್ಲಿ ಬಡವರಿಗೆ ಹಾಗೂ ಅಸಹಾಯಕರಿಗೆ ಪಾಲು ಎತ್ತಿಡುತ್ತಾರೆ ಇವರು.
ಈಗ ಈ ಸಿನಿಮಾಗಾಗಿ ನಾಯಕ ನಟಿಯಾದ ರಾಧನರಾಮ್ ಅವರು ಪಡೆದಿರುವ ಸಂಭಾವನೆ ಎಷ್ಟು ಎನ್ನುವ ವಿಚಾರ ಬಹಳ ಚರ್ಚೆ ಆಗುತ್ತಿದೆ. ಯಾಕೆಂದರೆ ರಾಧನ ರಾಮ್ ಅವರಿಗೆ ಇದು ಮೊದಲ ಚಿತ್ರ. ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿ ಅಲ್ಲಿರುವ ಕಾಂಪಿಟೇಶನ್ ಗಳ ನಡುವೆ ಸಿನಿಮಾಗೆ ಆಯ್ಕೆ ಆಗುವುದೇ ಹೆಚ್ಚು, ಅದರಲ್ಲೂ ಮೊಟ್ಟಮೊದಲಕ್ಕೆ ಸ್ಟಾರ್ ನಟನ ಜೊತೆ ನಟಿಸಲು ಅವಕಾಶ ಸಿಗುತ್ತದೆ ಎಂದರೆ ಎಷ್ಟೋ ನಟಿಮಣಿಯರ ಸಂಭಾವನೆ ಇಲ್ಲದೆ ನಟಿಸಲು ರೆಡಿ ಆಗಿರುತ್ತಾರೆ. ಅಂತವರದ ಮಧ್ಯೆ ಮೊದಲ ಚಿತ್ರಕ್ಕೆ 40 ಲಕ್ಷ (40 lakhs Remuneration) ಸಂಭಾವನೆಯನ್ನು ಪಡೆಯುವ ಮೂಲಕ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ ಮಾಲಾಶ್ರೀ ಪುತ್ರಿ ರಾಧನರಾಮ್.