ಪುನೀತ್ ರಾಜಕುಮಾರ್ ಅವರು ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅವರು ಚಿತ್ರ ರಂಗಕ್ಕೆ ಮಾತ್ರ ಸೀಮಿತ ಅಲ್ಲದೆ ಇಡೀ ಕರುನಾಡಿಗೆ ಆಸ್ತಿಯಾಗಿ ಇದ್ದವರು. ನಮ್ಮ ಸಾಂಸ್ಕೃತಿಕ ರಾಯಭಾರಿ ಕೂಡ ಆಗಿದ್ದ ಅವರ ಬದುಕು, ಎಲ್ಲ ರೀತಿಯಲ್ಲೂ ಆದರ್ಶಮಯ. ಪ್ರೋಫೆಶನ್ ಅಲ್ಲಿ ಪರ್ಫೆಕ್ಟ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಹುಟ್ಟುತ್ತಲೇ ಕಲಾವಿದನಾಗಿ ಹುಟ್ಟಿದಾತ ಈತ ಎನ್ನಬಹುದು.
ಅಷ್ಟು ಚಿಕ್ಕ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಇವರು ಬೆಳೆಯುತ್ತಾ ಇತ್ತೀಚಿನ ದಿನಗಳಲ್ಲಿ ಆರಿಸಿಕೊಳ್ಳುತ್ತಿದ್ದ ಪಾತ್ರಗಳು ಹಾಗೂ ಮಾಡುತ್ತಿದ್ದ ಸಿನಿಮಾಗಳು ಸಮಾಜಮುಖಿಯಾಗಿತ್ತು. ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಇವರು ಇತ್ತೀಚಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಕಾರಣದಿಂದಾಗಿ ಪಿಆರ್‌ಕೆ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಶುರು ಮಾಡಿದ್ದರು. ಪುನೀತ್ ರಾಜಕುಮಾರ್ ಅವರು ನಟನೆ ಸಿಂಗಿಂಗ್ ಡ್ಯಾನ್ಸಿಂಗ್ ಸ್ಟಂಟ್ಸ್ ಫೈಟ್ ಎಲ್ಲದರಲ್ಲೂ ಕೂಡ ಎತ್ತಿದ ಕೈ ಯಾವುದೇ ಡೂಪ್ ಬಳಸದೆ ತುಂಬಾ ನ್ಯಾಚುರಲ್ ಆಗಿ ಇದನ್ನೆಲ್ಲಾ ಮಾಡುತ್ತಿದ್ದವರು ಇವರು.
ಇಷ್ಟು ಗಟ್ಟಿ ಮುಟ್ಟಾಗಿ ಇದ್ದ ದೇಹವನ್ನು ದಂಡಿಸುತ್ತಿದ್ದ ಪುನೀತ್ ರಾಜಕುಮಾರ್ ಅವರನ್ನು ಇಷ್ಟು ಬೇಗ ನಾವು ಹೃ.ದ.ಯ.ಘಾ.ತ.ದ ಕಾರಣದಿಂದಾಗಿ ಕಳೆದುಕೊಳ್ಳುತ್ತೇವೆ ಎಂದು ಊಹಿಸಿಯೇ ಇರಲಿಲ್ಲ. ಇಂಥಹ ಮಹಾತ್ಮನನ್ನು ಕಳೆದುಕೊಂಡು ಕರ್ನಾಟಕದ ಇಂದು ಬಡವಾಗಿದೆ. ಪುನೀತ್ ರಾಜಕುಮಾರ್ ಅವರು ಸಮಾಜ ಸೇವೆಯಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದರು ಆದರೆ ಇದರ ಬಗ್ಗೆ ಕಿಂಚಿತ್ತು ಕೂಡ ಪ್ರಚಾರ ಬಯಸಿದವರಲ್ಲ. ಅವರ ಸಾ.ವಿ.ನ ಬಳಿಕ ಅಷ್ಟೇ ಅವರದು ಎಂತಹ ವಿಶಾಲ ಹೃದಯ ಎನ್ನುವುದು ಹೊರ ಬಿದ್ದಿದೆ.
ದೊಡ್ಮನೆಯ ವಜ್ರೇಶ್ವರಿ ಕಂಬೈನ್ಸ್ ಇಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಕೊಡುಗೆಯಾಗಿ ಸಿಕ್ಕಿವೆ. ಅಲ್ಲದೆ ಇಲ್ಲಿನ ಅನೇಕ ಕಲಾವಿದರುಗಳಿಗೆ ಅನ್ನ ಹಾಕಿದ್ದೆ ಆ ಮನೆ ಎಂದರೆ ಅದು ಸುಳ್ಳಾಗಲಾರದು. ಹೀಗಾಗಿ ಹುಟ್ಟುತ್ತಲೇ ಅಗರ್ಭ ಶ್ರೀಮಂತನಾಗಿ ಹುಟ್ಟಿದ ಪುನೀತ್ ರಾಜಕುಮಾರ್ ಅವರು ಅನೇಕ ಉದ್ಯಮಗಳು ಹಾಗೂ ಸಿನಿಮೋಧ್ಯಮದಿಂದ ಕೂಡ ಬಹಳಷ್ಟು ಹಣಗಳಿಸುತ್ತಿದ್ದರು ಜೊತೆಗೆ ತಾವು ನಟನಾಗಿ ಅಭಿನಯ ಮಾಡುತ್ತಿದ್ದ ಸಿನಿಮಾ ಗಳಿಗೂ ಕೂಡ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಾ ಇದ್ದರು.
ಇದೆಲ್ಲದರ ಜೊತೆಗೆ ಅವರು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಇಡಿ ಬಲ್ಬ್, ನಂದಿನಿ ಹಾಲು ಮತ್ತು ಇನ್ನೂ ಅನೇಕ ಜಾಹೀರಾತುಗಳಲ್ಲಿ ಸುದೀಪ್ ಅವರು ಅಭಿನಯಿಸಿದ್ದಾರೆ. ಅದರಲ್ಲಿ ನಂದಿನ ಹಾಲಿನ ಉತ್ಪನ್ನಗಳಿಗೆ ಜಾಹೀರಾತುನಲ್ಲಿ ಭಾಗವಹಿಸಿ ಎಂದು ಕೇಳಲು ಬಂದಾಗ ಅವರು ಯಾವುದೇ ಸಂಭಾವನೆಯನ್ನು ಬಯಸದೆ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಕರ್ನಾಟಕದ ರೈತರುಗಳಿಗೆ ಇದು ಅನುಕೂಲವಾಗಬೇಕು ಇದು ಪ್ರಚಾರವಾಗಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಮಾಡಿಕೊಟ್ಟಿದ್ದಾರೆ.
ಇದರಿಂದ ಆತನಿಗೆ ಕರ್ನಾಟಕದ ಮೇಲೆ ಹಾಗೂ ರೈತರ ಮೇಲೆ ಎಷ್ಟು ಗೌರವ ಇತ್ತು ಎನ್ನುವುದನ್ನು ತಿಳಿಯುತ್ತದೆ. ಅದನ್ನು ಹೊರತು ಪಡಿಸಿ ಬೇರೆ ಜಾಹೀರಾತುಗಳಿಗಾಗಿ ಅವರು ನಾಲ್ಕು ಕೋಟಿಗಳಷ್ಟು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರಂತೆ. ಆದರೆ ಸಿನಿಮಾ ಹೊರತಾಗಿ ಅವರು ಯಾವುದೇ ಜಾಹಿರಾತಿನಲ್ಲಿ ಭಾಗವಹಿಸಿದ ಹಣವೇ ಆಗಿದ್ದರೂ ಅಥವಾ ಇನ್ಯಾವುದೇ ಇತರ ಸಿನಿಮಾಗಳಿಗೆ ಹಾಡಿದ ಹಾಡುಗಳಿಗೆ ಪಡೆದಿದ್ದ ಸಂಭಾವನೆ ಆಗಿರಬಹುದು ಇವೆಲ್ಲವನ್ನು ಒಂದು ರೂಪಾಯಿ ಕೂಡ ಸ್ವಂತ ಖರ್ಚಿಗೆ ಬಳಸದೆ ಎಲ್ಲವನ್ನು ಸಂಪೂರ್ಣವಾಗಿ ಸಮಾಜ ಸೇವೆಗಾಗಿಯೇ ಎತ್ತಿಡುತ್ತಿದ್ದರು ಎನ್ನುವ ಮಾಹಿತಿ ಹತ್ತಿರದವರಿಂದ ತಿಳಿದು ಬಂದಿದೆ.
ಮೈಸೂರಿನ ಶಕ್ತಿ ಧಾಮ ಒಂದರಲ್ಲಿಯೇ ಸುಮಾರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆ ಎಲ್ಲಾ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹಾಗೂ ಊಟ ವಸತಿ ವ್ಯವಸ್ಥೆ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರೇ ಹೊತ್ತುಕೊಂಡಿದ್ದರು. ಜೊತೆಗೆ ಅನೇಕ ಅನಾಥಾಶ್ರಮಗಳು, ವೃದ್ದಾಶ್ರಮಗಳು, ಗೋಶಾಲೆಗಳು ಹೀಗೆ ಇವುಗಳ ಜೊತೆಗೆ ಮನೆಗೆ ಸಹಾಯ ಅರಸಿ ಬರುತ್ತಿದ್ದ ಜನಸಾಮಾನ್ಯರು ಎಲ್ಲರಿಗೂ ಕೂಡ ಕೈ ತುಂಬಾ ದೇಣಿಗೆ ನೀಡಿ ಕಳುಹಿಸುತ್ತಿದ್ದರು. ಅವರು ಇಲ್ಲದಿದ್ದರೂ ಇದಕ್ಕೆಲ್ಲ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈಗಾಗಲೇ ಸಾಕಷ್ಟು ಹಣವನ್ನು ಅದಕ್ಕಾಗಿ ಠೇವಣಿ ಸಹ ಇಟ್ಟಿದ್ದಾರಂತೆ.
ಇಂತಹ ಪುಣ್ಯಾತ್ಮನನ್ನು ಕಳೆದುಕೊಂಡ ನಾವೇ ದುರದೃಷ್ಟವಂತರು ಎನ್ನಬಹುದು. ಪುನೀತ್ ಅವರು ಇನ್ನಷ್ಟು ಕಾಲ ಬದುಕಿದ್ದರೆ ಅವರಿಂದ ಕರ್ನಾಟಕದ ಜನತೆಗೆ ಸಾಕಷ್ಟು ಉಪಯೋಗ ಆಗುತ್ತಿತ್ತು. ಎಲ್ಲೇ ಹೋದರು ಕೂಡ ಪುನೀತ್ ಅವರು ತಪ್ಪದೆ ಚೆಕ್ ಬುಕ್ ಅನ್ನು ಸಹ ತೆಗೆದುಕೊಂಡು ಹೋಗುತ್ತಿದ್ದರಂತೆ ಯಾಕೆಂದರೆ ಯಾವ ಗಳಿಗೆಯಲ್ಲಿ ಯಾರಾದರೂ ಸಹಾಯ ಅರಿಸಿ ಬರಬಹುದು ಅವರ್ಯಾರಿಗೂ ಇಲ್ಲ ಎಂದು ಕಳುಹಿಸಬಾರದು ಎಂದು ಮತ್ತು ಪುನೀತ್ ಅವರು ಬರೆದಿದ್ದ ಯಾವುದೇ ಚೆಕ್ಕಾದರು 50,000ಗಳಿಗಿಂತ ಮೇಲೆ ಇರುತ್ತಿತ್ತು ಎನ್ನುವ ಮಾಹಿತಿಗಳು ಕೂಡ ಇತ್ತೀಚೆಗೆ ಹೊರ ಬರುತ್ತಿವೆ. ಇಂತಹ ಪುಣ್ಯಾತ್ಮನ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ನಾವೆಲ್ಲ ಮತ್ತೊಮ್ಮೆ ಪ್ರಾರ್ಥಿಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.