ಸದ್ಯಕ್ಕೆ ಈಗಿನ ಕಾಲದಲ್ಲಿ ನಮಗೆ ಸೆಲೆಬ್ರಿಟಿಗಳೇ ರೋಲ್ ಮಾಡೆಲ್ ಗಳಾಗಿದ್ದಾರೆ. ಅದರಲ್ಲೂ ಸಿನಿಮಾ ಸ್ಟಾರ್ ಗಳು ಹಾಗೂ ಕ್ರಿಕೆಟರ್ಗಳು ಎಂದರೆ ನಮಗೆ ಇನ್ನೆಲಿಲ್ಲದ ಅಭಿಮಾನ. 4ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೂ ಮುಂದೆ ಏನಾಗ ಬಯಸುತ್ತೀಯಾ ಎಂದರೆ ಅವರ ಬಾಯಿಯಿಂದ ಸಿನಿಮಾ ತಾರೆಗಳ ಹೆಸರು ಅಥವಾ ಕ್ರಿಕೆಟರ್ ಗಳ ಹೆಸರು ಬರುತ್ತದೆ.
ಇದರಿಂದಲೇ ಇವರು ನಮ್ಮ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇವರು ಸ್ಕ್ರೀನ್ ಮೇಲೆ ಬರುತ್ತಾರೆ, ಡೈಲಾಗ್ ಹೊಡೆಯುತ್ತಾರೆ ಅಥವಾ ಭಾರತ ಪದವಾಗಿ ಪಂದ್ಯ ಒಂದರಲ್ಲಿ ಹೋರಾಟ ಮಾಡುತ್ತಾರೆ ಎನ್ನುವುದು ಮಾತ್ರವಲ್ಲದೆ ಇವರನ್ನು ಇಷ್ಟು ಹಚ್ಚಿಕೊಳ್ಳಲು ಹಾಗೂ ಆದರ್ಶವಾಗಿ ತೆಗೆದುಕೊಳ್ಳಲು ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಪ್ರಭಾವ ಬೀರಿರುತ್ತದೆ ಎನ್ನುವುದು ಸುಳ್ಳಲ್ಲ.
ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!
ಇಂದು ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ಗಳಾಗಿರುವವರು ಮತ್ತು ಕ್ರಿಕೆಟ್ ಆಟದಲ್ಲಿ ಅಗ್ರಗಣ್ಯರು ಎನಿಸಿರುವವರು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಪರಿಯೂ ಇದಕ್ಕೆ ಕಾರಣವಾಗಿದೆ. ಪ್ರಚಾರಕ್ಕಾಗಿ ಕೆಲಸ ಮಾಡುವವರ ಬಣ್ಣ ಹೆಚ್ಚು ದಿನ ಉಳಿಯುವುದಿಲ್ಲ ಆದರೆ ಸ್ವಭಾವವೇ ಹೀಗಿದ್ದಾಗ ಅವರ ಔರಾ ಸೂರ್ಯನಂತೆ ಪ್ರಕಾಶಿಸುತ್ತದೆ ಅದನ್ನು ಹೆಚ್ಚು ದಿನ ಮುಚ್ಚಿಡಲಾಗದು.
ಇದಕ್ಕೆ ಉದಾಹರಣೆ ಆಗುವಂತಹ ಒಂದು ಘಟನೆಯೊಂದಿಗೆ ನಮ್ಮ ರಾಜ್ಯದ ಕ್ರೀಡಾಪಟು ಒಬ್ಬರ ಹೃದಯ ವೈಶಾಲತೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಕೆ.ಎಲ್ ರಾಹುಲ್ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಚಿರ ಶಾಶ್ವತವಾದ ಹೆಸರು ಇನ್ನು 31ರ ಹರೆಯದವರಾಗಿರುವ ಕೆ.ಎಲ್ ರಾಹುಲ್ ರವರು ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ.
ಆದರೆ ಅವರ ವೈಯಕ್ತಿಕ ಬದುಕಿನಲ್ಲಿ ಅವರು ಬದುಕುತ್ತಿರುವ ರೀತಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಾರದು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂದು ಬಯಸುವ ಇವರು ಈಗಾಗಲೇ ಅದೆಷ್ಟೋ ಜನರ ಬದುಕಿಗೆ ನೆರವಾಗಿದ್ದಾರೆ ಅದರಲ್ಲೂ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ನೆರವಾಗಿ ಕನಸಿಗೆ ರಾಯಭಾರಿ ಆಗಿದ್ದಾರೆ.
ಈ ವಿಷಯವು ಎಷ್ಟು ಗೌಪ್ಯವಾಗಿತ್ತು ಎಂದರೆ ಶಿಕ್ಷಣ ಸಂಸ್ಥೆಯ ಖಾತೆಗೆ ರಾಹುಲ್ ಅವರ ಹೆಸರಿನಲ್ಲಿ ಹಣ ಬರುವವರೆಗೂ ಕೂಡ ಈ ವಿಷಯ ಹೊರಗೆ ಗೊತ್ತಿರಲಿಲ್ಲ. ಇದೀಗ ಶಿಕ್ಷಣ ಸಂಸ್ಥೆ ಹಂಚಿಕೊಂಡ ಮಾಹಿತಿಯಿಂದ ಈ ವಿಷಯ ಸುದ್ದಿಯಾಗಿದೆ. ಧಾರವಾಡದ ಕಡು ಬಡತನದ ಕುಟುಂಬದ ಹನುಮಂತಪ್ಪ ಕುಲಾಬಿ ಕಿರಾಣಿ ಮತ್ತು ಸುಮಿತ್ರಾ ದಂಪತಿ ಪುತ್ರಿ ಸೃಷ್ಟಿ ಗೆ ಗ್ಲೋಬಲ್ ಎಕ್ಸಲೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಪಡೆಯಲು ಕೆ.ಎಲ್ ರಾಹುಲ್ ಕಾರಣವಾಗಿದ್ದಾರೆ.
ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು ಎನ್ನುವ ಆಸೆ ಆಕೆಗೆ, ಓದಿನಲ್ಲೂ ಮುಂದು. ವೈದ್ಯೆಯಾಗಬೇಕು ಎನ್ನುವ ಗುರಿ ಆಕೆಯದ್ದು ಆದರೆ ಪೋಷಕರಿಗೆ ಮೂರು ಜನ ಮಕ್ಕಳು ಸುಡುಗಾಡು ಸಿದ್ದಿ ಸಮಾಜಕ್ಕೆ ಸೇರಿದ ಇವರಿಗೆ ಇದು ದುಬಾರಿಯಾಗಿತ್ತು. ಬಡತನದ ಶಾ’ಪದಿಂದ ವಿದ್ಯಾಭ್ಯಾಸದಿಂದ ವಂಚಿತವಾಗುತ್ತಾಳೆ ಎನ್ನುವ ನೋ’ವು ಕುಟುಂಬಸ್ಥರನ್ನು ಕಾಡುತ್ತಿತ್ತುಹ ಆದರೆ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಎನ್ನುವವರು ಕೆ.ಎಲ್ ರಾಹುಲ್ ಅವರನ್ನು ಸಂಪರ್ಕಿಸಿ ವಿಷಯವನ್ನು ವಿವರಿಸಿದ್ದಾರೆ.
ಈಗ ಆಕೆಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಇವರು ವಹಿಸಿಕೊಂಡಿದ್ದಾರೆ ಈ ಹಿಂದೆಯೂ ಕೂಡ ಮಂಜುನಾಥ್ ಅವರು ಹುಬ್ಬಳ್ಳಿಯ ವಿದ್ಯಾರ್ಥಿನಿ ಒಬ್ಬಳಿಗೆ BVB ಕಾಲೇಜಿನಲ್ಲಿ ಪ್ರವೇಶಾತಿ ಪಡೆದುಕೊಳ್ಳಲು ರಾಹುಲ್ ಅವರಿಂದ ನೆರವು ಕೊಡಿಸಿದ್ದರು. ಪ್ರಚಾರವಿಲ್ಲದೆ ಸಹಾಯ ಮಾಡುವ ರಾಹುಲ್ ಗುಣವಂತಿಕೆಯನ್ನು ಹುಬ್ಬಳ್ಳಿ ಧಾರವಾಡದ ಮಂದಿ ಈಗ ಗುಣಗಾನ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ ಎಂದು ನಾವು ಬಯಸೋಣ.