ಆಟದಿಂದ ನಲ್ಮೆಯ ದೀ ಯನ್ನೇ ಹೊರಗೆಟ್ಟ ಪ್ರತಾಪ್, ಗೆಲುವಿಗಾಗಿ ಕಂಟೆಸ್ಟೆಂಟ್ ಗಳು ಏನು ಬೇಕಾದರೂ ಮಾಡುತ್ತಾರೆ, ಎನ್ನುವುದು ಮತ್ತೊಮ್ಮೆ ಪ್ರೂವ್… ಬಿಗ್ ಬಾಸ್ ಸೀಸನ್ 10 (Bigboss S10) ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿದೆ. ಅಂತಿಮ ಹಂತದ ಹಣಾಹಣಿಯಲ್ಲಿ ಎಲ್ಲಾ ಪ್ರಬಲ ಕಂಟೆಸ್ಟೆಂಟ್ ಗಳು ಟಾಪ್ ಫೈನಲ್ ತಮ್ಮ ಪಟ್ಟ ಉಳಿಸಿಕೊಳ್ಳುವುದಕ್ಕಾಗಿ ಅಖಾಡಕ್ಕೆ ಇಳಿದಿದ್ದಾರೆ.
ಗೆಲುವಿನ ಪಟ್ಟ ಹತ್ತಿ ಕೂರಲು ಇನ್ನೂ ಒಂದೇ ವಾರ ಬಾಕಿ ಉಳಿದಿದ್ದು ಈ ವಾರ ಡೈರೆಕ್ಟ್ ಫಿನಾಲೆಗೆ ಟಿಕೆಟ್ ನೀಡಲು ಕೊಟ್ಟ ಟಾಸ್ಕ್ (finale ticket task) ಇಡೀ ಮನೆ ವಾತಾವರಣವನ್ನು ಅದಲು ಬದಲು ಮಾಡಿ ಬಿಟ್ಟಿದೆ. ಈ ಫಿನಾಲೆ ಟಿಕೆಟ್ ಟಾಸ್ಕ್ ಕಂಟೆಸ್ಟೆಂಟ್ ಕಂಟೆಸ್ಟೆಂಟ್ಗಳ ನಡುವೆ ಇದ್ ಕಂಫರ್ಟ್ ಝೋನ್ ಒಡೆದು ಸ್ನೇಹ ಸಂಬಂಧ ಆತ್ಮೀಯತೆ ಎಲ್ಲಾ ಗೋಡೆಗಳನ್ನು ನುಚ್ಚುನೂರು ಮಾಡಿ ಕೊನೆಗೂ ಎಲ್ಲರೂ ಸಿಂಗಲ್ ಆಗಿ ಹಾಡುವಂತೆ ಕೊನೆ ಹಂತದಲ್ಲಿ ಮಾಡಿಬಿಟ್ಟಿದೆ.
ಇದಕ್ಕೆ ವಾರದ ಮೊದಲಿನಿಂದಲೂ ಕೂಡ ನಾವು ಅನೇಕ ನಿರ್ದೇಶನಗಳನ್ನು ಕಂಡಿದ್ದೇವೆ. ಸ್ನೇಹದ ವಿಚಾರದಲ್ಲಿ ಉದಾಹರಣೆಯಾಗಿದ್ದ ಸಂತು-ಪತು ಮಧ್ಯೆ ಟಾಸ್ಕ್ ಭಿ’ನ್ನಾ’ಭಿ’ಪ್ರಾ’ಯ ಮೂಡಿಸಿತ್ತು, ನಂಬಿಕೆಗೆ ಮತ್ತೊಂದು ಹೆಸರಾಗಿದ್ದ ವಿನಯ್ ಮತ್ತು ನಮ್ರತ ನಡುವೆ ನಂಬುಗೆಯ ಕೊಂಡಿ ಕಳಚಿ ಬೀಳುವಂತೆ ಮಾಡಿದ್ದು ಕೂಡ ಇದೇ ಟಾಸ್ಕ್.
ಮುಂದುವರೆದು ಇಂದು ಪ್ರತಾಪ್ ಹಾಗೂ ಸಂಗೀತರ (Prathap V/S Sangeetha) ನಡುವೆ ಇಂತಹದೇ ವಿ’ಷ ಘಳಿಗೆ ಸೃಷ್ಟಿಯಾಗಿದೆ. ಸಂಗೀತ ಮತ್ತು ಪ್ರತಾಪ್ ನಡುವೆ ಈ ಸೀಸನ್ ಆರಂಭದಿಂದಲೂ ಒಂದೊಳ್ಳೆ ಬಾಂಧವ್ಯ ಇತ್ತು, ಸಂಗೀತಾರ ಅನೇಕ ಕ’ಣ್ಣೀ’ರಿ’ನ ಸಂದರ್ಭದಲ್ಲಿ ಜೊತೆಗಿದ್ದು ಸ್ವಂತ ತಮ್ಮನಂತೆ ಸಂತೈಸಿದ್ದರು ಪ್ರತಾಪ್, ಪ್ರತಿಯಾಗಿ ಪ್ರತಾಪ್ ಅವರ ಮೇಲೆ ಇಡಿ ಮನೆ ತಿರುಗಿ ಬೀಳುತ್ತಿದ್ದಾಗ ಅಕ್ಕರೆಯ ಅಕ್ಕನಿಗಿಂತ ಹೆಚ್ಚಾಗಿ ಪ್ರತಾಪ್ ಪರವಾಗಿ ಫೈಟ್ ಕೊಟ್ಟು ರಕ್ಷಿಸುತ್ತಿದ್ದರು ಸಂಗೀತ.
ಆದರೆ ಇಂದು ಸಂಗೀತ ದಿ ಅನ್ನೇ ಫಿನಾಲೆ ಟಿಕೆಟ್ ಆಟದಿಂದ ಪ್ರತಾಪ್ ಹೊರಗಿಡುತ್ತಿದ್ದಾರೆ. ಈ ಸಮಯದಲ್ಲಿ ಸಂಯೋಜಿತವಾಗಿ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳದಿದ್ದರೆ ಇನ್ನು ಎಂದೂ ಕೂಡ ಇಂತಹ ಅವಕಾಶ ಬರುವುದಿಲ್ಲ ಎನ್ನುವ ಉತ್ತರವನ್ನು ಕೂಡ ನೀಡಿದ್ದಾರೆ.
ಈ ಪ್ರೊಮೋ ಈಗ ಕಲರ್ಸ್ ಕನ್ನಡ ಪೇಜ್ ಗಳಲ್ಲಿ ಹರಿದಾಡುತ್ತಿದ್ದು ಆಟದಿಂದ ಹೊರಗೆ ಕಳುಹಿಸಿದ ಮೇಲೆ ಪ್ರತಾಪ್ ಸಂಗೀತಾರ ಹಿಂದೆ ಹೋಗಿ ಸಮಜಾಯಿಸಿಕೊಡುವ ಪ್ರಯತ್ನ ಮಾಡಲು ಮುಂದಾಗಿರುವುದನ್ನು ಕಾಣಬಹುದು. ಆದರೆ ಅದಕ್ಕೆ
ಕೇರ್ ಮಾಡದ ಸಂಗೀತ ಪ್ರತಾಪ್ ಗೆ ಸ್ಪಂದಿಸದೆ ಹೋಗುತ್ತಿದ್ದಾರೆ.
ಜೊತೆಗೆ ನಮ್ರತ ಅವರ ಜೊತೆಗೆ ಕೂತು ಬೇಸರದಿಂದ ಪ್ರತಾಪ್ ನಿರ್ಧಾರದ ಬಗ್ಗೆ ಸಂಗೀತ ಮಾತನಾಡುತ್ತಿದ್ದಾರೆ. ನಾನು ಇನ್ನು ಮುಂದೆ ಕೂಡ ಪ್ರತಾಪ್ ಗೆ ಹೀಗೆ ಸಪೋರ್ಟ್ ಮಾಡುತ್ತೇನೆ ಎನ್ನುವುದು ನನಗೆ ಡೌಟ್ ಆಗಿದೆ, ಇವತ್ತಿನಿಂದ ಅವನಿಗೆ ನನ್ನ ಸಪೋರ್ಟ್ ಮುಗಿಯುತ್ತದೆ ಎಂದು ಬಹಳ ನೊಂ’ದುಕೊಂಡು ನಮ್ರತ ಅವರೊಂದಿಗೆ ಹೇಳುತ್ತಿದ್ದಾರೆ ಸಂಗೀತ.
ಈಗಾಗಲೇ ಸಂಗೀತ ಆಡಿರುವ ಆಟಗಳಿಂದ ಇನ್ನೂ ಅವರಿಗೆ ಗೆಲ್ಲುವ ಅವಕಾಶ ಇದ್ದು, ಪ್ರತಾಪ್ ಏನಾದರೂ ಆಟದಲ್ಲಿ ಸೋತರೆ ಮಾತ್ರ ನಾನು ಲೀಡ್ ಗೆ ಬರುತ್ತೇನೆ ಎನ್ನುವ ಲೆಕ್ಕಾಚಾರವನ್ನು ಕೂಡ ನಮ್ರತಾ ಜೊತೆಗೆ ಕೂತು ಲೆಕ್ಕ ಹಾಕುತ್ತಿದ್ದಾರೆ ಸಂಗೀತ. ಕೊನೆ ವಾರದ ಈ ತಿರುವು ಅಭಿಮಾನಿಗಳ ಓಟಿಂಗ್ ಮೇಲೂ ಕೂಡ ಪ್ರಭಾವ ಬಿದ್ದರೂ ಬೀಳಬಹುದು.
ಫಿನಾಲೆ ಟಿಕೆಟ್ ಟಾಸ್ಕ್ ನಲ್ಲಿ ವಂಚಿತರಾದವರೂ ಜನಗಳ ಅಭಿಪ್ರಾಯದಿಂದ ಟ್ರೋಫಿ ಗೆಲ್ಲಲು ಬಹುದು. ಇಂದು ಈ ಟಾಸ್ಕ್ ನ ಕೊನೆ ದಿನವಾಗಿದ್ದು. ನಿರ್ಣಾಯಕ ಟಾಸ್ಕ್ ಗೆದ್ದು ಫಿನಾಲೆ ಪ್ರವೇಶ ಮಾಡುತ್ತಿರುವ ಆ ಮೊದಲ ಅದೃಷ್ಟ ವ್ಯಕ್ತಿ ಯಾರು ಎನ್ನುವುದನ್ನು ನೋಡಲು ಇಡಿ ಕರುನಾಡು ಕಾಯುತ್ತಿದೆ. ನಿಮ್ಮ ಪ್ರಕಾರ ಯಾರು ಟಾಪ್ ಫೈವ್ ನಲ್ಲಿ ಇರುತ್ತಾರೆ ಮತ್ತು ನಿಮ್ಮ ಪ್ರಕಾರ ಯಾರು ಗೆಲ್ಲಬೇಕು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.