ಇತ್ತೀಚಿನ ದಿನಗಳಲ್ಲಿ ನಾವು ಟರ್ಮ್ ಇನ್ಶುರೆನ್ಸ್ ಎನ್ನುವ ವಿಷಯದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ನಮ್ಮ ಭಾರತದಲ್ಲಿ ಹಲವಾರು ಕಂಪನಿಗಳ ಟರ್ಮ್ ಇನ್ಸೂರೆನ್ಸ್ ಇದೆ. ಲೈಫ್ ಇನ್ಶೂರೆನ್ಸ್ ರೀತಿಯೇ ಟರ್ಮ್ ಇನ್ಸೂರೆನ್ಸ್ ಕೂಡ ಕುಟುಂಬಕ್ಕೆ ಆಧಾರವಾಗಿರುತ್ತದೆ. ಜೀವ ವಿಮೆಗಿಂತಲೂ ಕೂಡ ಟರ್ಮ್ ಇನ್ಸೂರೆನ್ಸ್ ನಲ್ಲಿ ಇನ್ನು ಹೆಚ್ಚು ಅನುಕೂಲಕರ ಎಂದು ಸಹಾ ಹೇಳಲಾಗುತ್ತದೆ.
ಕುಟುಂಬದ ಕಾಳಜಿ ಮಾಡುವವರು ಅಥವಾ ಕುಟುಂಬಕ್ಕೆ ತಾವೇ ಆಧಾರವಾಗಿ ಜವಾಬ್ದಾರಿ ಹೊತ್ತಿರುವವರು ತಪ್ಪದೇ ಟರ್ಮ್ ಇನ್ಸೂರೆನ್ಸ್ ಖರೀದಿಸಲೇಬೇಕು ಎನ್ನುವುದು ಹಣಕಾಸು ತಜ್ಞರ ಮಾತು. ಯಾಕೆಂದರೆ, ಪ್ರತಿ ಗಂಟೆಗೂ ಕೂಡ ನಮ್ಮ ದೇಶದಲ್ಲಿ ಸಾ’ಯುತ್ತಿರುವವರ ಸಂಖ್ಯೆ 1000 ಗಡಿ ದಾಟಿದೆ. ಇದರಲ್ಲಿ ಅ’ಪ’ಘಾ’ತ ಹಾಗೂ ಅನಾರೋಗ್ಯದಿಂದ ಸಾ’ಯುವವರ ಸಂಖ್ಯೆಯು ಸಹ ಹೆಚ್ಚಿನ ಪಾಲಿನಲ್ಲಿಯೇ ಇದೆ ಅಂತಹ ಅನಿರೀಕ್ಷಿತ ಸಾ’ವುಗಳಾದಾಗ ಕುಟುಂಬಕ್ಕೆ ಆಸರೆಯಾಗಿ ಟರ್ಮ್ ಇನ್ಶುರೆನ್ಸ್ ಗಳು ಪಾತ್ರವಹಿಸುತ್ತವೆ.
ಅಂಚೆ ಕಚೇರಿಯಲ್ಲಿ ಕೂಡ ಅ’ಪ’ಘಾ’ತ ವಿಮೆ ಮಾಡಿಸಬಹುದು. ಹಲವಾರು ಕಂಪನಿಗಳಿಗೆ ಅಂಚೆ ಕಚೇರಿ ವೇದಿಕೆಯಾಗಿದೆ. ಇದೇ ರೀತಿ ಅಂಚೆ ಕಚೇರಿಯಲ್ಲಿ ವಿಮೆ ಮಾಡಿಸಿ ಅ’ಪ’ಘಾ’ತದಲ್ಲಿ ಮೃ’ತಪಟ್ಟ ರೈತನ ಕುಟುಂಬಕ್ಕೆ ಟಾಟಾ ಇನ್ಸೂರೆನ್ಸ್ ಕಂಪನಿ 10 ಲಕ್ಷ ಹಣ ನೀಡಿದೆ. ಟರ್ಮ್ ಇನ್ಶೂರೆನ್ಸ್ ಬಗ್ಗೆ ಅನುಮಾನ ಹಾಗೂ ಗೊಂದಲ ವ್ಯಕ್ತಪಡಿಸುತ್ತಿದ್ದವರಿಗೆ ಇದು ಸಾಕ್ಷಿ ಆಗಬಹುದು.
ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ನಮ್ಮದೇ ರಾಜ್ಯದ ಮಂಡ್ಯ ಭಾಗದ ರೈತ ಮಹಿಳೆ ಪುಟ್ಟಮ್ಮ ತಮ್ಮ ಪತಿ ಅ’ಪ’ಘಾ’ತದಲ್ಲಿ ಮೃ.ತ ಪಟ್ಟಿದ್ದಕ್ಕಾಗಿ ಪತಿಯ ಇನ್ಶುರೆನ್ಸ್ ಕ್ಲೈಮ್ ಮಾಡಿ ಹಣ ಪಡೆದಿದ್ದಾರೆ. ಸ್ವತಃ ಕಂಪನಿಯು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಘಟನೆ ವಿವರ ಇಲ್ಲಿದೆ ನೋಡಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಚೇನಹಳ್ಳಿ ಗ್ರಾಮದ ಬಸವರಾಜು 2022 ಅಕ್ಟೋಬರ್ನಲ್ಲಿ ಅಂಚೆ ಇಲಾಖೆಯಲ್ಲಿ ಟಾಟಾ ಕಂಪನಿಯ ಅ’ಪ’ಘಾ’ತ ವಿಮೆ ಪಾಲಿಸಿ ಪಡೆದುಕೊಂಡಿದ್ದರು. ಆದರೆ ದುರಾದೃಷ್ಟವಶಾತ್ 2023 ಮಾರ್ಚ್ನಲ್ಲಿ ಅ’ಪ’ಘಾ’ತದಿಂದ ಮೃ’ತರಾಗಿದ್ದರು. ಬಸವರಾಜುರವರು ವಿಮೆ ಮಾಡಿಸಿರುವ ಬಗ್ಗೆ ಕುಟುಂಬದಲ್ಲಿ ಹೇಳಿಕೊಂಡೆ ಇರಲಿಲ್ಲ ಗ್ರಾಮದ ಅಂಚೆ ಕಚೇರಿ ಸಿಬ್ಬಂದಿಯೇ ಈ ಬಗ್ಗೆ ವಿವರ ನೀಡಿದ್ದರು.
ಇದಾದ ಬಳಿಕ ಕುಟುಂಬಸ್ಥರು ಮಂಡ್ಯ ಕಚೇರಿಗೆ ಹೋಗಿ ವಿಮೆ ಬಗ್ಗೆ ಮಾಹಿತಿ ನೀಡಿದ್ದರು. ಸಂಬಂಧಿಸಿದ ದಾಖಲೆ ಸಲ್ಲಿಸಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು ಅರ್ಜಿ ಸ್ಪೀಕರಿಸಿದ ಕಂಪನಿಯು ಶೀಘ್ರವಾಗಿ ಇದರ ವಿಲೇವಾರಿ ಮಾಡಿ ಅದರಂತೆ 10 ಲಕ್ಷ ರೂ ಪರಿಹಾರದ ಮೊತ್ತವನ್ನು ಈ ವಿಮೆಗೆ ನಾಮಿನಿ ಆಗಿದ್ದ ಬಸವರಾಜು ಅವರ ಪತ್ನಿ ಪುಟ್ಟಮ್ಮರವರಿಗೆ ನೀಡಿದೆ.
ಕಳೆದ ಗುರುವಾರ ನಗರದ ಕಚೇರಿಯಲ್ಲಿ ಅಂಚೆ ಅಧೀಕ್ಷಕ ಎಂ.ಲೋಕನಾಥ್, ಬಸವರಾಜು ಕುಟುಂಬದವರಿಗೆ ಈ ಚೆಕ್ ಹಸ್ತಾಂತರ ಮಾಡಿದ್ದಾರೆ. ಉಪ ಅಂಚೆ ಅಧೀಕ್ಷಕ ಗಜೇಂದ್ರ, ಅಂಚೆ ನಿರೀಕ್ಷಕ ಷಣ್ಮುಗಂ, ಬ್ರಾೃಂಚ್ ಮ್ಯಾನೇಜರ್ ದೀಪಕ್, ವಿಭಾಗೀಯ ಮ್ಯಾನೇಜರ್ ಗಿರೀಶ್ ಇತರರು ಸ್ಥಳದಲ್ಲಿ ಹಾಜರಿದ್ದರು.
ಅಂಚೆ ಕಚೇರಿಯಲ್ಲಿ ವಾರ್ಷಿಕವಾಗಿ 399 ರೂ. ಪಾವತಿ ಮಾಡುವಂತಹ ವಿಮೆಯನ್ನು ಬಸವರಾಜ್ ರವರು ಖರೀದಿಸಿದ್ದರು. ಅ’ಪ’ಘಾ’ತ ವಿಮೆ ಮಾತ್ರವಲ್ಲದೆ ಮೃ’ತ ಪಟ್ಟವರ ಇಬ್ಬರು ಮಕ್ಕಳಿಗೆ ಒಂದು ಲಕ್ಷದವರೆಗೆ ಶಿಕ್ಷಣ ವೆಚ್ಚವನ್ನು ನೀಡಲಾಗುತ್ತದೆ, ಆಸ್ಪತ್ರೆ ಖರ್ಚಿಗೆ ಟ್ರಾನ್ಸ್ಪರೆಂಟ್ ಖರ್ಚಾಗಿ ಕುಟುಂಬಕ್ಕೆ 25 ಸಾವಿರ ಹಾಗೂ ಹತ್ತು ದಿನಗಳವರೆಗೆ ದಿನಕ್ಕೆ 1000ರೂ. ನಂತೆ ಚಿಕಿತ್ಸೆಗೆ ಕಂಪನಿ ಹಣ ನೀಡುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಅಂಚೆ ಕಚೇರಿ ಸಂಪರ್ಕಿಸಿ.