ಸಾಕಷ್ಟು ಜನರಿಗೆ ಆಗಸ್ಟ್ ತಿಂಗಳಿನಲ್ಲಿ ಬಂದಂತಹ ಜೀರೋ ವಿದ್ಯುತ್ ಬಿಲ್ ನಿಂದ ಸಂತಸ ಮನೆ ಮಾಡಿದೆ ಈಗಾಗಲೇ ಸಾಕಷ್ಟು ಜನರಿಗೆ ಬೆಸ್ಕಾಂ ಸಿಬ್ಬಂದಿಯವರು ಮನೆ ಬಾಗಿಲಿಗೆ ಬಂದು ವಿದ್ಯುತ್ ಬಿಲ್ಲನ್ನು ನೀಡಿದ್ದಾರೆ ವಿದ್ಯುತ್ ಶುಲ್ಕ 0 ಎಂದು ನಮೂದಿಸಿರುವುದನ್ನು ಕಂಡು ಫಲಾನುಭವಿಗಳು ಖುಷಿಪಟ್ಟಿದ್ದಾರೆ
ಲಕ್ಷಾಂತರ ಗ್ರಹಕರು ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಎಲ್ಲ ದಾಖಲೆಗಳನ್ನು ಸರಿಯಾಗಿ ನೀಡಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್ 1 ರಿಂದಲೇ ಶೂನ್ಯ ವಿದ್ಯುತ್ ಬಿಲ್ಅನ್ನು ತಲುಪಿಸುವ ಕಾರ್ಯವನ್ನು ಇದೀಗ ಮಾಡಲಾಗಿದೆ ಒಂದು ವರ್ಷದಲ್ಲಿ ತಿಂಗಳ ವಿದ್ಯುತ್ ಬಳಕೆ 200 ಯೂನಿಟ್ ಮೀರದೆ ಇರುವಂತಹ ಗ್ರಾಹಕರು ಈ ಯೋಜನೆಯ ಅಡಿಯಲ್ಲಿ ಸವಲತ್ತನ್ನು ಪಡೆದುಕೊಳ್ಳುತ್ತಿದ್ದಾರೆ.
ಅಂದರೆ 2022 ಏಪ್ರಿಲ್ 1ರಿಂದ 2023 ಮಾರ್ಚ್ 31 ರವರೆಗೆ ನೀವು ಪಾವತಿಸಿರುವಂತಹ ವಿದ್ಯುತ್ ಬಿಲ್ ನಲ್ಲಿ 200 ಯುನಿಟ್ ಗಿಂತ ಕಟಿಮೆ ಬಳಕೆ ಮಾಡಿ ಕೊಂಡಿದ್ದರೆ ನಿಮಗೆ ಈ ಯೋಜನೆಯ ಲಾಭ ಪಡೆಯಬಹುದು. ಜುಲೈ ತಿಂಗಳಿನಲ್ಲಿ ಇನ್ನು ಹಲವರಿಗೆ ಬಿಲ್ ಬಂದಿಲ್ಲ ಎರಡು ತಿಂಗಳಲ್ಲಿ ಬಳಕೆಯಾದ ಶುಲ್ಕವನ್ನು ಸೇರಿಸಿದರೆ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಸಿಗುತ್ತದೆ
ಯೋಜನೆಯ ಲಾಭ ಸಿಗುತ್ತದೋ ಇಲ್ಲವೋ ಎಂಬ ಆತಂಕ ಸಾಕಷ್ಟು ಜನರಲ್ಲಿ ಮನೆ ಮಾಡಿದೆ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಹೇಳುವ ಪ್ರಕಾರ ವಿದ್ಯುತ್ ಬಿಲ್ ತಡವಾಗಿ ಬಂದರೆ ಯೋಚಿಸುವಂತಹ ಅವಶ್ಯಕತೆ ಇಲ್ಲ ವಿದ್ಯುತ್ ಬಳಕೆ ಹೆಚ್ಚಾಗಿ ಗೃಹಜೋತಿ ಯೋಜನೆಯ ಪ್ರಯೋಜನ ಪಡೆಯುವ ಅವಕಾಶ ಕೈತಪ್ಪುತದೆ ಎಂಬ ಆತಂಕ ಬೇಡ ಎಂದು ಹೇಳಿದ್ದಾರೆ.
30 ದಿನಗಳಲ್ಲಿ ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎಂಬುವಂತಹ ಮಾಹಿತಿಯನ್ನು ಮಾತ್ರ ಪರಿಗಣಿಸಿ ಈ ಯೋಜನೆಯ ಸವಲತ್ತಿಗೆ ಅರ್ಹತೆ ಹೊಂದಿದ್ದಾರೋ ಇಲ್ಲವೋ ಎಂದು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಸೂಚನೆಯನ್ನು ತಿಳಿಸಿದ್ದಾರೆ.
ವಿದ್ಯುತ್ ಬಿಲ್ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡುವಂತಹ ವಿಧಾನ
ಸಿಬ್ಬಂದಿಗಳು ಇನ್ನೂ ಸಹ ವಿದ್ಯುತ್ ಬಿಲ್ಅನ್ನು ನಿಮ್ಮ ಮನೆಗೆ ತಂದು ತಲುಪಿಸಿಲ್ಲ ಎಂದರೆ ಈ ಕೆಳಗಿನ ವಿಧಾನವನ್ನು ಅನುಸರಿಸುವ ಮೂಲಕ ಜುಲೈ ತಿಂಗಳು ಅಂದರೆ ಗೃಹಜ್ಯೋತಿ ಫಲಾನುಭವಿ ಆದ ನಂತರದ ಬಿಲ್ ಮೊತ್ತವನ್ನು ಚೆಕ್ ಮಾಡಬಹುದು ಅಲ್ಲದೆ ಹಿಂದಿನ ಎಲ್ಲಾ ತಿಂಗಳ ಬಿಲ್ ಮೊತ್ತವನ್ನು ಸಹ ಇದರಲ್ಲಿ ತಿಳಿಯಬಹುದಾಗಿದೆ.
* ಮೊದಲಿಗೆ ಮಾಹಿತಿ ಕಣಜ ಎಂಬ ವೆಬ್ಸೈಟ್ ಅನ್ನು ಓಪನ್ ಮಾಡಿ.
* ನಂತರ ಅಲ್ಲಿ ನಿಮಗೆ ಗ್ರಾಹಕರ ವಿವರಗಳು ಎಂಬ ಪುಟ ತೆರೆಯುತ್ತದೆ
* ನಂತರ ನಿಮ್ಮದು ಯಾವ ವಿದ್ಯುತ್ ವಲಯ ಎಂಬುದನ್ನು ಮಾಹಿತಿ ಕಣಜದಲ್ಲಿ ಹುಡುಕಿ ಕೆಳಗಿನ ವಿಧಾನದ ಮೂಲಕ ನಿಮ್ಮ ವಿದ್ಯುತ್ ಮೊತ್ತವನ್ನು ಪರಿಶೀಲನೆ ಮಾಡಬಹುದು.
* ಗ್ರಾಹಕರ ವಿವರಗಳು ಪುಟದಲ್ಲಿ ನಿಮ್ಮ ವಿದ್ಯುತ್ ಖಾತೆ ಅಥವಾ ಸಂಪರ್ಕ ಐಡಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸು ಮೇಲೆ ಹೊತ್ತಿ
* ನಂತರ ರಶೀದಿ ವಿವರಗಳು ಮತ್ತು ಬಿಲ್ ಬಳಕೆಯ ವಿವರಗಳು ಲಭ್ಯವಾಗುತ್ತದೆ ನಿಮಗೆ ಹಿಂದಿನ ತಿಂಗಳು ಪಾವತಿಸಿದ ಅಥವಾ ಪಾವತಿ ಮಾಡದೇ ಇರುವ ಬಿಲ್ ಮಾಹಿತಿ ತಿಳಿಯಬೇಕೆಂದರೆ ಕೊನೆಯಲ್ಲಿ ಇರುವ ಬಿಲ್ಲಿಂಗ್ ಇತಿಹಾಸದ ಮೇಲೆ ಕ್ಲಿಕ್ ಮಾಡಿದರೆ ಹಿಂದಿನ ಎಲ್ಲಾ ತಿಂಗಳ ಬಿಲ್ ನ ವಿವರಗಳು ನಿಮಗೆ ಕಾಣಿಸುತ್ತದೆ.
ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಹೇಶ್ ಶೆಟ್ಟಿ ಚಾದ್ರಿ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.