ರಾಜ್ಯದಲ್ಲಿ ಅಕ್ಕಿಯ ಭಾವ ಇದ್ದ ಕಾರಣದಿಂದಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತಿತ್ತು ಆದರೆ ಇದೇ ಸೆಪ್ಟೆಂಬರ್ ತಿಂಗಳಿನಿಂದ ಅಕ್ಕಿಯ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
BPL ಕಾರ್ಡ್ ದಾರರಿಗೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿತ್ತು ಆದರೆ ಅಕ್ಕಿಯ ಅಭಾವ ಇರುವ ಕಾರಣದಿಂದಾಗಿ 5 ಕೆ.ಜಿ ಅಕ್ಕಿಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರವನ್ನು ಕೋರಿತ್ತು ಆದರೆ ಕೇಂದ್ರ ಸರ್ಕಾರದಿಂದ ಸಕಾಲಕ್ಕೆ ಆಹಾರ ಸಿಗದ ಕಾರಣಕ್ಕೆ 10 ಕೆಜಿ ಅಕ್ಕಿ ವ್ಯವಸ್ಥೆ ಆಗುವವರಿಗೆ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡಲಾರಂಭಿಸಿತು.
ಇದಾಗಲೇ ಒಂದು ತಿಂಗಳ ಅಕ್ಕಿಯ ಹಣ ಸಾಕಷ್ಟು BPL ಕಾರ್ಡ್ ದಾರರ ಖಾತೆಗೆ ಬಂದು ಸೇರಿದೆ ಜುಲೈ 10 ರಿಂದ ಪ್ರತೀ ಕೆಜಿಗೆ 35ರಂತೆ 5 ಕೆಜಿ ಅಕ್ಕಿ 170 ಹಣವನ್ನು ಕುಟುಂಬದ ಹಿರಿಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಆರಂಭಿಸಿದೆ ಹಾಗೆಯೇ ಜುಲೈ ತಿಂಗಳ ಹಣವನ್ನು ಡಬಿಟಿ ಮೂಲಕ ಪಾವತಿಸಲಾಗಿದ್ದು ಆಗಸ್ಟ್ ತಿಂಗಳ ಹಣ ಪಾವತಿ ಪ್ರಕ್ರಿಯೆ ಶುರುವಾಗಿದೆ
ಆದರೆ ಸೆಪ್ಟೆಂಬರ್ ಹೊತ್ತಿಗೆ ಅಕ್ಕಿಯ ಬದಲು ನೀಡುವಂತಹ ಹಣವನ್ನು ಬಂದ್ ಮಾಡಲಾಗುತ್ತದೆ ಎಂದು ಇದೀಗ ಮಾಹಿತಿ ಹೊರ ಬಂದಿದೆ. ಆಗಸ್ಟ 3 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಅವರಿಗೆ ಮೈಸೂರು ಪೇಟ ತೊಡಿಸಿ ವಿಶೇಷವಾದಂತಹ ಸ್ಮರಣಿಕೆಯನ್ನು ಉಡುಗೊರೆಯನ್ನಾಗಿ ನೀಡಿ ಮಾತುಕತೆಯನ್ನು ನಡೆಸಿದರು
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಮಾಡಿದ್ದಾರೆ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ಅವರು ಕೂಡ ಅನ್ನಭಾಗ್ಯ ಫಲಾನುಭವಿಗಳಿಗೆ ಪೂರ್ತಿ 10 ಕೆಜಿ ಅಕ್ಕಿ ವಿತರಣೆ ಸಾಕಾಗುವಷ್ಟು ಅಕ್ಕಿ ಸಿಗಲಿದ್ದು, ಈಗ ಅಕ್ಕಿ ಬದಲು ಕೊಡುತ್ತಿರುವಂತಹ ಹಣವನ್ನು ನಿಲ್ಲಿಸಲಾಗುತ್ತದೆ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ
ಈ ಕುರಿತಾಗಿ ಸೆಪ್ಟೆಂಬರ್ 5 ರಿಂದ ಅನ್ನ ಭಾಗ್ಯ ಯೋಜನೆಯ ಹಣದ ಬದಲು 10 ಕೆಜಿ ಅಕ್ಕಿಯನ್ನು ವಿತರಿಸುವ ಸಾಧ್ಯತೆ ಇದೆ ಆರಂಭದಲ್ಲಿ ಹಣ ಕೊಡುವ ಪ್ರಕ್ರಿಯೆ ಹೆಚ್ಚು ದಿನ ಇರುವುದಿಲ್ಲ ಎಂದು ಹೇಳಲಾಗಿತ್ತು ಅದರಂತೆ ಸರ್ಕಾರ ಈಗ 10 ಕೆಜಿ ಅಕ್ಕಿಯನ್ನೇ ನೀಡುವ ಯೋಜನೆಯನ್ನು ಮಾಡುತ್ತಿದೆ.
ಮೂಲಗಳು ಹೇಳುವಂತೆ ಕೇಂದ್ರ ಸರ್ಕಾರದ ಹೊರತಾಗಿಯೂ ಹಕ್ಕಿಗಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೊತೆಯಲ್ಲಿ ಮಾತುಕತೆ ನಡೆಸಲಾಗಿದೆ ಅವರು ಅಕ್ಕಿ ಕೊಡಲು ಒಪ್ಪಿಗೆ ನೀಡಿದ್ದಾರೆ ಕೇಂದ್ರ ಆಹಾರ ನಿಗಮದಿಂದ ಖರೀದಿ ಮಾಡುವ ಬೆಲೆ ಒಂದು ಕೆಜಿಗೆ 34 ರೂಪಾಯಿ ಹಾಗೆಯೇ ಈ ರಾಜ್ಯ ಗಳಲ್ಲು ಇದೇ ಬೆಲೆಗೆ ಖರೀದಿ ಮಾಡಲು ಸರ್ಕಾರ ಯೋಜನೆ ನಡೆಸಿದೆ.
ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ದಾರಿಗೆ ಒದಗಿಸುವಂತಹ ಅಕ್ಕಿಯನ್ನು ಈಗಾಗಲೇ ಕಲೆ ಹಾಕಲಾಗಿದೆ ಆದ್ದರಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿಯ ಹಣ ಯಾರಾ ಕಥೆಗೂ ಸಹ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.