ನಮಸ್ಕಾರ ಸ್ನೇಹಿತರೆ ಇಂದು ವಿಶೇಷ ಮಾಹಿತಿ ಒಂದನ್ನು ಹೇಳ ಹೊರಟಿದ್ದೇವೆ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಹೊಸ ವಿದ್ಯಾರ್ಥಿ ವೇತನಕ್ಕೆ ನೀವು ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಾಲಕಾಲಕ್ಕೆ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಾ ಇರುತ್ತದೆ ಅದೇ ರೀತಿಯಲ್ಲಿ ಇದೀಗ ಪೋಸ್ಟ್ ಆಫೀಸ್ ಯೋಜನೆಯೊಂದನ್ನು ಆರಂಭಿಸಿದ್ದು ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು 6,000 ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದಾಗಿದೆ.
ಭಾರತೀಯ ಅಂಚೆ ಇಲಾಖೆಯ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಅರ್ಹ ಇರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಉಚಿತ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಅಂಚೆ ಚೀಟಿಗಳ ಕ್ಲಬ್ ಅನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಅಂದರೆ ಅಂಚೆ ಸ್ಟ್ಯಾಂಪ್ ಮತ್ತು ಅಂಚೆ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಮತ್ತು ವಿದ್ಯಾರ್ಥಿಯು ಸದಸ್ಯನಾಗಿರಬೇಕು ಇದಲ್ಲದೆ ಒಬ್ಬ ವಿದ್ಯಾರ್ಥಿ ಅಂಚೆ ಚೀಟಿ ಸಂಗ್ರಹಣೆ ಕ್ಲಬ್ ಹೊಂದಿಲ್ಲದಿದ್ದರೆ ಆ ವಿದ್ಯಾರ್ಥಿಗೆ ತನ್ನದೇ ಆದ ಅಂಚೆ ಚೀಟಿಗಳ ಖಾತೆ ಹೊಂದಿರುವ ಶಾಲೆಯಲ್ಲಿ ಅವಕಾಶ ನೀಡಲಾಗುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಇರಬೇಕಾದಂತಹ ಅರ್ಹತೆಗಳನ್ನು ನೋಡುವುದಾದರೆ
* ವಿದ್ಯಾರ್ಥಿಯು ದೇಶದ ಯಾವುದೇ ಮಾನ್ಯತೆ ಪಡೆದಂತಹ ಶಾಲೆಯಲ್ಲಿ ಓದುತ್ತಿರಬೇಕು.
* ಯಾವ ಶಾಲೆಯು ಅಂಚೆಚೀಟಿಗಳ ಸಂಗ್ರಹ ಕ್ಲಬ್ ಅನ್ನು ಹೊಂದಿದ್ದರು ಮತ್ತು ವಿದ್ಯಾರ್ಥಿಯು ಕ್ಲಬ್ ನ ಸದಸ್ಯನಾಗಿದ್ದರೆ ಅವರು ಮಾತ್ರ ಈ ವಿದ್ಯಾರ್ಥಿ ವೇತನದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
* ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಯು ಉತ್ತಮವಾಗಿದ್ದರೆ ಮಾತ್ರ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
* ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕವನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
* ದೀನ ದಯಾಳ್ ಸ್ಪರ್ಶ ಯೋಜನೆಗೆ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಂತಹ ಮೀಸಲಾತಿ ವರ್ಗದ ವಿದ್ಯಾರ್ಥಿಗಳು 5% ರಿಯಾಯಿತಿಯನ್ನು ಪಡೆಯುತ್ತಾರೆ.
* ಆಯ್ಕೆ ಆದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಮೇಲೆ ತೀರಿಸಿದಂತಹ ಎಲ್ಲ ಅರ್ಹತೆಗಳನ್ನು ವಿದ್ಯಾರ್ಥಿಗಳು ಒಳಗೊಂಡಿರಬೇಕು
ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವಂತಹ ಅಗತ್ಯವಿರುವ ದಾಖಲಾತಿಗಳು ಈ ಕೆಳಕಂಡಂತಿದೆ
* ಶಾಶ್ವತ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಪಾಸ್ಪೋರ್ಟ್ ಸೈಜ್ ಫೋಟೋ
* ಮೊಬೈಲ್ ನಂಬರ್
* ಶೈಕ್ಷಣಿಕ ಅರ್ಹತೆಯ ದಾಖಲಾತಿಗಳು
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತಹ ಸಂಪೂರ್ಣ ವಿವರ
*ಪೋಸ್ಟ್ ಆಫೀಸ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ www.indiaost.gov.in ಈ ವೆಬ್ ಸೈಟನ್ನು ಓಪನ್ ಮಾಡಿ
ಮುಖಪುಟದಲ್ಲಿ ನೀವು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತಹ ಹಲವಾರು ಮಾಹಿತಿಯನ್ನು ಓದಿದ ನಂತರ ನೀವು ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು
* ವಿದ್ಯಾರ್ಥಿ ವೇತನದ ಸಂಪೂರ್ಣ ವಿವರದ ಬಗ್ಗೆ ಅರ್ಜಿದಾರರು ಅಧಿಕೃತ ಅಧಿಸೂಚನೆಯನ್ನು ಸಹ ಡೌನ್ಲೋಡ್ ಮಾಡಿ ತಿಳಿದುಕೊಳ್ಳಬಹುದು.
* ಆನ್ಲೈನ್ ನಲ್ಲಿ ಅನ್ವಯಿಸುವ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಪೋಸ್ಟ್ ಆಫೀಸ್ ವಿದ್ಯಾರ್ಥಿವೇತನ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
* ಅಗತ್ಯವಿರುವಂತಹ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ನೀವು ದಾಖಲಿಸಿರುವಂತಹ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ನೀವು ಆಫ್ ಲೈನ್ನಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದು ನಿಮ್ಮ ಹತ್ತಿರದ ಅಂಚೆ ಇಲಾಖೆ ಹೋಗಿ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅದರ ಮೂಲಕ ಪೋಸ್ಟ್ ಆಫೀಸ್ನಲ್ಲಿ ಸಲ್ಲಿಸುವ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 6000 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.