ಕನ್ನಡ ಕಿರುತೆರೆ ಜನರಿಗೆ ರಾಗಿಣಿ ಅಲಿಯಾಸ್ ರಾಘು ಎಂದೆ ಪರಿಚಯವಾಗಿರುವ ರಾಘವೇಂದ್ರ ಅವರು ಕಳೆದ ಹಲವು ವರ್ಷಗಳಿಂದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಜಾ ಭಾರತ, ಕಾಮಿಡಿ ಟಾಕೀಸ್ ಇನ್ನು ಮುಂತಾದ ಕಿರುತೆರೆ ಕಾರ್ಯಕ್ರಮಗಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಮಿಂಚುವ ರಾಘವೇಂದ್ರ ಅವರು ರಾಘು ಆಗಿ ಮಿಂಚಿದ್ದಕ್ಕಿಂತ ರಾಗಿಣಿ ಆಗಿ ಕಾಣಿಸಿಕೊಂಡಿದ್ದೆ ಹೆಚ್ಚು. ಮಹಿಳೆಯ ಪಾತ್ರಕ್ಕೆ ಹೇಳಿ ಮಾಡಿಸಿದ ರೀತಿ ಇರುವ ಆ ಗೆಟಪ್ ಗೆ ತಕ್ಕ ವಾಯ್ಸ್ ಮಾಡಲೇಶನ್ ಕೂಡ ಮಾಡಿಕೊಳ್ಳುವ ಇವರನ್ನು ಹೆಮ್ಮೆ ಎಂದು ಭಾವಿಸುವಂತಹ ಜಾದು ಮಾಡಿದ್ದಾರೆ.
ಮಜಾ ಭಾರತ ಕಾರ್ಯಕ್ರಮದಲ್ಲಿ ಒಮ್ಮೆ ಹೆಣ್ಣು ಮಕ್ಕಳ ಕೊರತೆಯಿಂದ ಒಂದು ಸ್ಕಿಟ್ ಗಾಗಿ ಹೆಣ್ಣು ಹುಡುಗಿಯ ಡ್ರೆಸ್ ಹಾಕಿದ ಇವರು ಅದಕ್ಕೆ ಸಿಕ್ಕ ರೆಸ್ಪಾನ್ಸ್ ಇಂದ ಈ ರೀತಿ ಹುಡುಗಿ ಪಾತ್ರಕ್ಕೆ ಫಿಕ್ಸ್ ಆಗಿ ಹೋದರು. ರಾಘವೇಂದ್ರ ಅವರು ರಂಗಭೂಮಿ ಕಲಾವಿದ ಹಾಗಾಗಿ ಯಾವುದೇ ಪಾತ್ರ ಕೊಟ್ಟರು ಕೂಡ ನೀರು ಕುಡಿದಂತೆ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ರಂಗಭೂಮಿ ಕಲಾವಿದರಗಳು ನಾಟಕಗಳಲ್ಲಿ ಬಣ್ಣ ಹಚ್ಚಿ ಪಾತ್ರಕ್ಕೆ ಪರಕಾಯ ಪ್ರವೇಶ ಆಗಿ, ಅಚ್ಚುಕಟ್ಟಾಗಿ ಅಭಿನಯಿಸಿ ಜನರನ್ನು ಮನರಂಜಿಸುವ ಪ್ರಯತ್ನ ಪಡುವುದರ ಜೊತೆ ಒಳಗಿಂದ ಆ ಪಾತ್ರವನ್ನು ಅಷ್ಟೇ ಜೀವಂತವಾಗಿ ಜೀವಿಸುತ್ತಾರೆ ಎಂದು ಹೇಳಬಹುದು.
ಅದಕ್ಕಾಗಿ ಎಷ್ಟೇ ವರ್ಷಗಳಾದರೂ ಕೂಡ ಕೆಲವರು ಮಾಡಿರುವ ಕೆಲ ಪಾತ್ರಗಳನ್ನು ಅವರ ಬಿಟ್ಟು ಅವರ ಜಾಗದಲ್ಲಿ ಮತ್ತೊಬ್ಬರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ರಾಘವೇಂದ್ರ ಅವರು ಕೂಡ ಇದು ಒಳ್ಳೆ ಉದಾಹರಣೆ ಆಗುತ್ತಾರೆ. ಮೊದಲು ಹೊಟ್ಟೆಪಾಡಿಗಾಗಿ ಹೆಣ್ಣಿನ ವೇಷ ಇವರು ನಂತರ ಇದರ ಬಗ್ಗೆ ಅವರು ಹೆಮ್ಮೆ ಕೂಡ ಪಟ್ಟಿದ್ದಾರಂತೆ. ನಿಜಕ್ಕೂ ಅದೃಷ್ಟ ಇರುವವರಿಗೆ ಮಾತ್ರ ಇಂತಹ ಅವಕಾಶಗಳು ಸಿಗುತ್ತದೆ ದೊಡ್ಡ ದೊಡ್ಡವರು ನನ್ನನ್ನು ಗುರುತಿಸಿ, ಚಪ್ಪಾಳೆ ಹೊಡೆದಾಗ ಬೆನ್ನು ತಟ್ಟಿದಾಗ ಸಂತೋಷವಾಗುತ್ತದೆ ಅದೇ ಸಾಕು ಎಂದು ಹೇಳಿಕೊಳ್ಳುವ ಇವರಿಗೆ ಹಿಂದೊಮ್ಮೆ ಇವರನ್ನು ಲೇಡಿ ಗೆಟಪ್ ಹಾಕಿದ್ದಕ್ಕಾಗಿ ನೆಗೆಟಿವ್ ಆಗಿ ಮಾತುಗಳಿಂದ ನೋವು ಮತ್ತು ಅವಮಾನವು ಆಗಿತ್ತಂತೆ.
ಅದರಿಂದ ಬೇಸತ್ತು ಅಭಿನಯಿಸುವುದನ್ನು ಬಿಟ್ಟು ಬಿಡುವ ಹಂತಕ್ಕೂ ಹೋಗಿದ್ದರಂತೆ, ಆದರೆ ಬರಹಗಾರರೊಬ್ಬರು ಹೇಳಿದ ಮಾತಿನ ಮೋಟಿವೇಷನ್ ಇಂದ ಸ್ಪೂರ್ತಿ ಪಡೆದು ಅದನ್ನೆಲ್ಲ ಎದುರಿಸಿ ಜನರಿಗೆ ಮನರಂಜನೆ ಕೊಡುತ್ತೇನೆ ಎನ್ನುವ ನಿರ್ಧಾರವನ್ನು ಮಾಡಿದರಂತೆ. ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇದ್ದಾರೆ ಸದಾ ತಮ್ಮ ಶೂಟಿಂಗ್ ಸ್ಪಾಟ್ಗಳಲ್ಲಿ ಇತರೆ ಕಲಾವಿದರ ಜೊತೆ ರೀಲ್ಸ್ ಮಾಡುತ್ತಾ instagram ಅಲ್ಲಿ ಹಂಚಿಕೊಳ್ಳುತ್ತಾರೆ.
ರಾಘವೇಂದ್ರ ಅವರು ಇಷ್ಟೊಂದು ಟ್ಯಾಲೆಂಟೆಡ್ ಆಗಿದ್ದರೂ ಕೂಡ ಅದ್ಯಾಕೋ ಅವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳು ಸಿಗುತ್ತಲೇ ಇಲ್ಲ. ಆದರೆ ಕಿರುತೆರೆ ಪ್ರಪಂಚವನ್ನು ರಾಗಿಣಿ ಆಗಿ ಆಳುತ್ತಿರುವ ರಾಘವೇಂದ್ರ ಅವರು ಅದರ ಬಗ್ಗೆ ಬೇಸರಪಟ್ಟಿಕೊಳ್ಳುವುದಿಲ್ಲ. ಆಸೆಯಂತು ಖಂಡಿತ ಇದೆ, ಅವಕಾಶ ಸಿಗುತ್ತಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಒಂದು ವೇಳೆ ಇವರು ಸಿನಿಮಾ ಇಂಡಸ್ಟ್ರಿಗೆ ಮಹಿಳಾ ಗೆಟಪ್ ಹಾಕಿ ಎಂಟ್ರಿ ಕೊಟ್ಟರೆ ಅದೊಂದು ದಾಖಲೆಯೇ ಆಗುತ್ತದೆ, ಜೊತೆಗೆ ಇದರಿಂದ ಹೀಗಿರುವ ಮಹಿಳಾ ಹಾಸ್ಯ ಕಲಾವಿದರಿಗೆ ನಂತರ ಬೇಡಿಕೆ ಕಡಿಮೆಯಾದರೂ ಆಗಿಬಿಡಬಹುದು.
ಅಷ್ಟರ ಮಟ್ಟಿಗೆ ಒಬ್ಬ ಪುರುಷ ಆಗಿ ಮಹಿಳಾ ಗೆಟಪ್ ತೊಟ್ಟು ಅದಕ್ಕೆ ನ್ಯಾಯದಕ್ಕಿಸಿಕೊಡುತ್ತಾರೆ ರಾಘವೇಂದ್ರ ರಾಘವೇಂದ್ರ ಅವರು ಇತ್ತೀಚೆಗೆ ಬಹಳ ಬ್ಯುಸಿ ಇರ್ತಾರೆ ಒಂದಲ್ಲ ಒಂದು ಟಿವಿ ಶೋ ಅಥವಾ ರಂಗಭೂಮಿಗೆ ಸಂಬಂಧಪಟ್ಟ ನಾಟಕಗಳು ಅಥವಾ ಇನ್ನಿತರ ಸ್ಟೇಜ್ ಷೋಗಳು ಎಲ್ಲಾ ಕಡೆ ಭಾಗವಹಿಸುತ್ತಾ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಜೊತೆಗೆ ಸಮಾಜಮುಖಿಯಾಗಿ ಕೂಡ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಪರಿಸರ ರಕ್ಷಣೆ ಬಗ್ಗೆ ಮತ್ತು ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದಾರೆ.
ತಮ್ಮ ಕೈಲಾದಷ್ಟು ಅದಕ್ಕೆ ಅಳಿಲು ಸೇವೆ ಸಹ ಮಾಡುತ್ತಿರುವ ಇವರು ದುಡಿದಿದ್ದಲ್ಲಿ ಸ್ವಲ್ಪ ಭಾಗವನ್ನು ಅದಕ್ಕಾಗಿ ಎತ್ತಿಡುತ್ತಾರೆ. ಇಷ್ಟಲ್ಲರದ ನಡುವೆ ರಾಘವೇಂದ್ರ ಅವರು ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇದೆ. ರಾಘವೇಂದ್ರ ಅವರು ಯಾವುದೇ ಕಾರ್ಯಕ್ರಮ ಹೋದರು ಸಹ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಇವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಲೇಡಿ ಗೆಟಪ್ ರಾಗಿಣಿ ಮಾತ್ರ ಅಲ್ಲದೆ ರಾಘು ಆಗಿ ಕೂಡ ಹಲವು ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸೋಣ.