ಕಿರಿಕ್ ಕೀರ್ತಿ ಬಹುಮುಖ ಪ್ರತಿಭೆ. ರೇಡಿಯೋ ಜಾಕಿ ಆಗಿ, ನ್ಯೂಸ್ ಆಂಕರ್ ಆಗಿ, ರಿಪೋರ್ಟರ್ ಆಗಿ, ಕಿರುತೆರೆ ಕಾರ್ಯಕ್ರಮಗಳ ಸ್ಪರ್ಧಿಯಾಗಿ, ನಿರೂಪಕನಾಗಿ, ಸಿನಿಮಾ ಕಲಾವಿದನಾಗಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಹೆಸರು ಪಡೆದಿದ್ದ ಸೆಲೆಬ್ರಿಟಿ. ಕಿರಿಕ್ ಕೀರ್ತಿಯಲ್ಲಿ ಒಂದು ಎನರ್ಜಿ ಇದೆ, ಅವರಲ್ಲೇನು ಹೊಸ ರೀತಿಯ ಹುರಪು ಇದೆ, ಅವರು ಏನೋ ಕ್ರಾಂತಿ ಮಾಡುತ್ತಾರೆ ಎಂದು ಅದೆಷ್ಟೋ ಸಂಖ್ಯೆಯ ಜನ ಇವರಿಗೆ ಅಭಿಮಾನಿಗಳಾಗಿದ್ದರು. ಇವರ ಫಾಲೋವರ್ಸ್ ಕೂಡ ಆಗಿದ್ದರು.
ಕಿರಿಕ್ ಕೀರ್ತಿ ಎಂದರೆ ಯುವಜನತೆಗೆ ಒಂದು ಕ್ರೇಜ್ ಆಗಿತ್ತು, ಅವರು ಮಾತನಾಡುವ ವಿಷಯವನ್ನು ರೀತಿ ಜೊತೆಗೆ ಹೆಸರಿಗೆ ತಕ್ಕಂತೆ ಕೆಲ ವಿಷಯಗಳಿಗೆ ಅವರು ಕಿರಿಕ್ ಮಾಡುವುದು ಯಂಗ್ ಜನರೇಶನ್ ಗೆ ಇಷ್ಟಾವಾಗುತ್ತಿತ್ತು. ಇವರ ಈ ವ್ಯಕ್ತಿತ್ವಕ್ಕೆ ಎಲ್ಲರಂತೆ ಅರ್ಪಿತ ಅವರೂ ಮನಸೋತಿದ್ದರು. ಮನೆ ಅವರ ಒಪ್ಪಿಗೆ ಇಲ್ಲದಿದ್ದರೂ ಕಾಡಿ, ಬೇಡಿ ಹಠ ಮಾಡಿ ಕಿರಿಕ್ ಕೀರ್ತಿ ಅವರ ಕೈ ಹಿಡಿದಿದ್ದರು. ಸಾಮಾಜಿಕವಾಗಿ ಅದೆಷ್ಟೋ ಸಮಸ್ಯೆಗಳು ಇವರನ್ನು ಕಾಡಿದರೂ ಕುಟುಂಬ ಮಾತ್ರ ಸಂತೋಷದಿಂದ ಇದೆ ಎಂದೇ ಎಲ್ಲರೂ ನಂಬಿದ್ದರು.
ಇವರಿಬ್ಬರ ಮದುವೆಗೆ ಸಾಕ್ಷಿಯಾಗಿ ಮುದ್ದು ಗಂಡು ಮಗ ಕೂಡ ಇದ್ದಾನ. ಕೆಲ ತಿಂಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲೂ ಕೂಡ ದಂಪತಿಗಳು ಭಾಗವಹಿಸಿದ್ದರು. ಇದಲ್ಲದೆ ಅದೆಷ್ಟೋ ವೇದಿಕೆಗಳಲ್ಲಿ ತಮ್ಮಿಬ್ಬರ ಪ್ರೀತಿ ಕಥೆ ಬಗ್ಗೆ ಹೇಳಿಕೊಂಡು ವಾರೆವ್ಹಾ ಪ್ರೀತಿ ಮಾಡಿದರೆ ಇವರ ರೀತಿ ಇರಬೇಕು, ಹಠ ಮಾಡಿ ಮದುವೆ ಆಗಿದ್ದಕ್ಕೂ ಸಾರ್ಥಕ, ಇವರಿಬ್ಬರು ಒಬ್ಬರಿಗೊಬ್ಬರು ಬೆಂಬಲವಾಗಿ ಬದುಕುತ್ತಿದ್ದಾರೆ ಎಂದು ಅದೆಷ್ಟೋ ಯುವ ಪ್ರೇಮಿಗಳಿಗೆ ಮತ್ತು ಯುವ ಜೋಡಿಗಳಿಗೆ ಸ್ಪೂರ್ತಿ ಎನಿಸಿದ್ದರು.
ಆದರೆ ತಿಂಗಳಿಂದ ಇವರಿಬ್ಬರು ಹಾಕಿಕೊಳ್ಳುತ್ತಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಂದ ಎಲ್ಲವೂ ಇವರ ನಡುವೆ ಸರಿ ಇಲ್ಲ ಎಂದು ತಿಳಿದು ಬರುತ್ತಿದೆ. ಜೊತೆಗೆ ಪರಸ್ಪರ ಇಬ್ಬರು ಪೋಸ್ಟ್ ಹಾಕುವ ಮೂಲಕ ಸಾಲು ಸಾಲು ಬರಹಗಳನ್ನು ಬರೆಯುವ ಮೂಲಕ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಆಗಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿದ್ದಾರೆ. ಕಿರಿಕ್ ಕೀರ್ತಿ ಅವರಂತೂ ಬದುಕು ನಿಲ್ಲಿಸುವ ಹಂತಕ್ಕೆ ಹೋಗಿದ್ದೆ, ಸದ್ಯ ಗುರುಗಳ ಆಶೀರ್ವಾದದಿಂದ ದೇವರ ಆಶೀರ್ವಾದದಿಂದ ಮತ್ತೆ ನಾನು ನಾನಾಗುತ್ತಿದ್ದೇನೆ.
ಆಗಿದ್ದೆಲ್ಲಾ ಆಗಿ ಹೋಯಿತು ಇನ್ಮೇಲೆ ಒಳ್ಳೆಯದಾಗಲಿದೆ. ಮಗನ ಹುಟ್ಟು ಹಬ್ಬದ ದಿನವೂ ಜೊತೆಯಲ್ಲಿ ಇಲ್ಲ ಎಂದು ಬೇಸರವಾಗುತ್ತಿದೆ ಕಾರಣ ಕಳ್ಳಿ ಹೂ ಪೂಜೆಗಲ್ಲ ಕಾಳಿಂಗ ಸಾಕಲಲ್ಲ ಎಂದು ರೀಲ್ಸ್ ಮಾಡುವ ಮೂಲಕ ನೇರವಾಗಿ ಎಲ್ಲಕ್ಕೂ ಕಾರಣ ಅರ್ಪಿತ ಎಂದು ಪತ್ನಿಯನ್ನು ಕುಟುಕಿದ್ದರು. ಇತ್ತ ಅರ್ಪಿತ ಕೂಡ ಅದಕ್ಕೆ ತಿರುಗೇಟು ಕೊಡುವ ಪ್ರಯತ್ನ ಮಾಡಿದ್ದು.
ಪದೇಪದೇ ನಮ್ಮ ಮೇಲೆ ಆಗುವ ದೌರ್ಜನ್ಯವನ್ನೆಲ್ಲ ತಡೆದುಕೊಳ್ಳುವ ಅಗತ್ಯ ಇಲ್ಲ ಅವರು ಎಷ್ಟೇ ಹತ್ತಿರದವರು ಆಗಿದ್ದರು ಸರಿ, ಈ ಮುಂಚೆ ಎಷ್ಟೇ ಪ್ರೀತಿ ಮಾಡಿದ್ದರು ಸರಿ ಎಂದು ಹೇಳುತ್ತಾ ತಡೆಯಲಾರದ ಈ ಪ್ರಹಾರ, ಸೂತ್ರಧಾರನ ಜೊತೆಗೆ ಸಮರ ಎಂದು ಅವರು ಸಹ ಹಾಡೊಂದನ್ನು ಹಾಕಿಕೊಂಡಿದ್ದಾರೆ. ಜೊತೆಗೆ ಯಾರು ಪ್ರಶ್ನೆ ಮಾಡಬಾರದು ಎಂದು ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿರುವುದಲ್ಲದೇ ಈ ನಡುವೆ ಇಬ್ಬರು ಒಟ್ಟೊಟ್ಟಿಗೆ ತೆಗೆಸಿಕೊಂಡು ಹಾಕಿಕೊಂಡಿದ್ದ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ.
ಅರ್ಪಿತ ಅವರಂತೂ ತಮ್ಮ ಜೊತೆಗಿದ್ದ ಕೀರ್ತಿ ಎನ್ನುವ ಹೆಸರನ್ನು ಎಲ್ಲಾ ಸಾಮಾಜಿಕ ಜಾಲತಾಣಗಳ ಐಡಿ ಇಂದ ತೆಗೆದಿದ್ದಾರೆ. ಇವರಿಬ್ಬರು ದೂರ ಆಗಿ ಏಳು ತಿಂಗಳಿಗಿಂತ ಹೆಚ್ಚಿಗೆ ದಿನ ಆಗಿದೆ ಎಂದು ಆಪ್ತ ವಲಯವು ಕೂಡ ಹೇಳುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಏಳು ತಿಂಗಳಿಂದ ಇವರಿಬ್ಬರು ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಪ್ರೀತಿಯಲ್ಲಿ ಒಮ್ಮೊಮ್ಮೆ ಹೀಗಾಗುವುದು ಸಹಜ ಆದರೆ ದುಡಿಕಿ ಅದನ್ನು ಮುರಿದುಕೊಳ್ಳುವ ಮಟ್ಟಕ್ಕೆ ಇಬ್ಬರು ಹೋಗದಿರಲಿ, ಮತ್ತೆ ಈ ಜೋಡಿ ಒಂದಾಗಲಿಂದಷ್ಟೇ ಅವರೆಲ್ಲ ಅಭಿಮಾನಿಗಳ ಆಶಯ ಮುಂದೆನಾಗುತ್ತದೆಯೋ ನೋಡೋಣ.