ಸ್ಯಾಂಡಲ್ ವುಡ್ ನಲ್ಲಿ ಕಾಮಿಡಿಯಲ್ಲಿ ಕಮಾಲ್ ಮಾಡಿದ ಸಾಕಷ್ಟು ಕಲಾವಿದರು ಇದ್ದಾರೆ. ಅಂದಿನ ನರಸಿಂಹ ರಾಜು ಇಂದ ಹಿಡಿದು ಜಗ್ಗೇಶ್, ಕೋಮಲ್, ಸಾಧುಕೋಕಿಲ, ಇಂದಿನ ಶರಣ್ ಮತ್ತು ಚಿಕ್ಕಣ್ಣ ವರೆಗೂ ಕೂಡ ಜನ ಹೀರೋ ಅನ್ನು ಎಷ್ಟು ಇಷ್ಟ ಪಡುತ್ತಾರೆ ಕಾಮಿಡಿ ಆಕ್ಟರ್ಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ. ಒಂದು ಸಿನಿಮಾಗೆ ಹೀರೋ ಎಷ್ಟು ಮುಖ್ಯ ಅದಕ್ಕೆ ಹಾಸ್ಯ ಹಾಗೂ ಹಾಸ್ಯ ಕಲಾವಿದರು ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ ಸಿನಿಮಾ ಬೋರಿಂಗ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಕಾಮಿಡಿ ಸೆನ್ಸ್ ಮತ್ತು ಟ್ಯಾಲೆಂಟ್ ಇದ್ದವರು ಮಾತ್ರ ಇಲ್ಲಿ ಶಾಶ್ವತವಾಗಿ ನೆಲೆಯೂರುತ್ತಾರೆ. ಅಂತಹ ಹೆಸರುಗಳಲ್ಲಿ ಕಳೆದ ದಶಕದಿಂದ ಹೆಸರು ಮಾಡಿರುವ ಒಬ್ಬ ಹಾಸ್ಯ ಕಲಾವಿದ ಎಂದರೆ ಅದು ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಚಿಕ್ಕಣ್ಣ ಅವರು ಇಂಡಸ್ಟ್ರಿಗೆ ಬರುವ ಮೊದಲು ಗಾರೆ ಕೆಲಸ ಮಾಡುತ್ತಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಅವರು ಇಂದು ಸಿನಿಮಾ ಒಂದರಲ್ಲಿ ಹೀರೋ ಆಗುವ ಮಷ್ಟಕ್ಕೆ ಬೆಳೆದು ನಿಂತಿದ್ದಾರೆ.
ಸದ್ಯದಲ್ಲೇ ಅವರ ನಟನೆಯ ಉಪಾಧ್ಯಕ್ಷ ಚಿತ್ರ ರಿಲೀಸ್ ಕೂಡ ಆಗಲಿದೆ. ಇದಕ್ಕೆ ಸಂಬಂಧಪಟ್ಟ ಕನ್ನಡ ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಭಾಗಿಯಾದ ಚಿಕ್ಕಣ್ಣ ಅವರು ತಾವು ಮಾಡುತ್ತಿದ್ದ ಕೆಲಸದ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಅವರಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿಲ್ಲವಂತೆ. ಅಲ್ಲದೆ ಅವರ ಕುಟುಂಬದಲ್ಲಿ ಯಾರು ಸಹ ಶಾಲೆಯ ಮುಖವನ್ನು ನೋಡಿಲ್ಲವಂತೆ, ಕಾಲೇಜ್ ಮೆಟ್ಟಿಲು ಹತ್ತಿದ ಒಬ್ಬನೇ ಒಬ್ಬ ಎಂದರೆ ಅದು ಚಿಕ್ಕಣ್ಣ ಮಾತ್ರ.
ಹಾಗಾಗಿ ಅವರ ಸಹೋದರಿಯರೆಲ್ಲರೂ ಎಷ್ಟೇ ಕಷ್ಟ ಇದ್ದರೂ ನಾವು ಓದಿಸುತ್ತೇವೆ, ನೀನು ಓದಬೇಕು ಎನ್ನುತ್ತಿದ್ದಂತೆ. ಆದರೆ ಮೊದಲ ಪಿಯುಸಿಯನ್ನು ಮೂರೇ ತಿಂಗಳು ಹೋಗಿ ಅಲ್ಲಿಗೆ ನಿಲ್ಲಿಸಿದ ಚಿಕ್ಕಣ್ಣ ಮನೆಯಲ್ಲಿ ಹೆಣ್ಣು ಮಕ್ಕಳ ದುಡಿಯುವುದು ಬೇಡ ನಾನು ದುಡಿತ್ತೇನೆ ಎಂದು ಕುಟುಂಬದಲ್ಲಿ ಎಲ್ಲರೂ ಮಾಡುತ್ತಿದ್ದ ಗಾರೆ ಕೆಲಸಕ್ಕೆ ತಾವು ಸಹ ಇಳಿದರು. ಅದಕ್ಕೂ ಮೊದಲೇ ಹೈಸ್ಕೂಲ್ ದಿನಗಳಲ್ಲೂ ಪೋಷಕರ ಜೊತೆ ಗಾರೆ ಕೆಲಸಕ್ಕೆ ಸಹಾಯ ಮಾಡುವುದಕ್ಕೆ ಹೋಗುತ್ತಿದ್ದರಂತೆ.
ಅವರು ಬೆಂಗಳೂರಿನ ಚಂದ್ರ ಲೇಔಟ್, ಆರ್ ಆರ್ ನಗರ ಮುಂತಾದ ಕಡೆ ಕೂಡ ಸಾಕಷ್ಟು ಮನೆಗಳಲ್ಲಿ ಕಟ್ಟಲು ಬಂದಿದ್ದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಗಾರೆ ಕೆಲಸ ಚೆನ್ನಾಗಿ ಗೊತ್ತಿದ್ದ ಕಾರಣ ಯಾವುದೋ ಒಂದು ಕೆಲಸವನ್ನು ನಂಬಿಕೊಂಡು ಗಾರೆ ಕೆಲಸವನ್ನು ಬಿಡಲು ಇಷ್ಟವಿರಲಿಲ್ಲವಂತೆ. ಆಕ್ಟಿಂಗ್ ಅಲ್ಲಿ ತೊಡಗಿಸಿಕೊಂಡ ಮೇಲು ಕೂಡ ಕಿರಾತಕ ಸಿನಿಮಾ ಶೂಟಿಂಗ್ ಟೈಮಲ್ಲೂ ಗಾರೆ ಕೆಲಸ ಮಾಡಿದ್ದಾರಂತೆ.
ಇಲ್ಲಿ ಕೆಲಸ ಇದ್ದಾಗ ಗಾರೆ ಕೆಲಸಕ್ಕೆ ರಜೆ ಹಾಕಿ ಬರುತ್ತಿದ್ದೆ ಇದನ್ನು ನಂಬಕೊಂಡು ಅದನ್ನು ಕಳೆದುಕೊಂಡರೆ ಏನು ಮಾಡುವುದು ಎನ್ನುವುದು ನನ್ನ ಭಯ ಆಗಿತ್ತು. ಉದಯ ಕಾಮಿಡಿ ಚಾನೆಲ್ ಅಲ್ಲಿ ನಿರೂಪಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ಇಲ್ಲಿ ಅನ್ನ ತಿನ್ನಬಹುದು ಅಂತ ಗ್ಯಾರಂಟಿ ಆಯ್ತು. ಅದಕ್ಕೆ ಆ ಕೆಲಸ ಬಿಟ್ಟೆ ಆದರೂ ಐ ಲವ್ ಗಾರೆ ಕೆಲಸ, ಆ ಕೆಲಸ ಮಾಡುವುದರಲ್ಲಿ ಏನೋ ಖುಷಿ ಇರುತ್ತಿತ್ತು ಎಂದಿದ್ದಾರೆ.
ಈಗ ಸಹ ಲಾಕ್ಡೌನ್ ಟೈಮಲ್ಲಿ ನಮ್ಮ ಫಾರ್ಮ್ ಹೌಸ್ ಅಲ್ಲಿ ಕೆಲಸ ಮಾಡಿದೆ, ಮರೆತಿದ್ದೇನೆ ಅಂದುಕೊಂಡಿದ್ದೆ ಆದರೆ ಮರೆತಿಲ್ಲ ಚೆನ್ನಾಗಿ ಮಾಡಿದ್ದೇನೆ. ಅಕಸ್ಮಾತ್ ನಾನು ಇಂಡಸ್ಟ್ರಿಗೆ ಬರಲಿಲ್ಲ ಎಂದಿದ್ದರೆ ಅದೇ ಕೆಲಸ ಮುಂದುವರಿಸುತ್ತಿದೆ ಕಂಟ್ರಾಕ್ಟರ್ ಆಗುವುದೇ ನನ್ನ ಉದ್ದೇಶ ಆಗಿತ್ತು. ಯಾಕೆಂದರೆ ಅದರಲ್ಲಿ ಕೊನೆಯಲ್ಲಿ ಇರುವುದೇ ಅದೇ. ಮೊದಲಿಗೆ ಹೆಲ್ಪರ್, ನಂತರ ಕರಾಣಿ ಕೆಲಸ, ಆಮೇಲೆ ಕಂಟ್ರಾಕ್ಟರ್ ಆಗುವುದು ನಾನು ಕಂಟ್ರಾಕ್ಟರ್ ಆಗಿಯೇ ತಿರುತ್ತಿದ್ದೆ ಎಂದು ತಮ್ಮ ಗಾರೆ ಕೆಲಸದ ದಿನಗಳನ್ನು ನೆನೆದು ಸಂತೋಷದಲ್ಲಿ ಮಾತನಾಡಿದ್ದಾರೆ.