ನಟ ಧ್ರುವ ಸರ್ಜಾ ರವರು (Hero Druva Sarja) ಇಂಡಸ್ಟ್ರಿಗೆ ಕಾಲಿಟ್ಟು 10 ವರ್ಷಗಳಾಗಿದ್ದರೂ ಇದುವರೆಗೆ ಬಿಡುಗಡೆಯಾಗಿರುವುದು ನಾಲ್ಕು ಸಿನಿಮಾ ಮಾತ್ರ. ಮಾಡಿರುವುದು ನಾಲ್ಕೇ ಸಿನಿಮಾ ಆಗಿದ್ದರೂ ಕೂಡ ಸ್ಟಾರ್ (Star Hero) ಪಟ್ಟಿಗೆ ಸೇರಿರುವ ಧ್ರುವ ಸರ್ಜಾ ಅವರಿಗೆ ಕರ್ನಾಟಕದಲ್ಲಿ ಅಭಿಮಾನಿ ಬಳಗವಿದೆ.
ಸಿನಿಮಾದಿಂದ ಸಿನಿಮಾಗೆ ಬಹಳ ದೊಡ್ಡ ಗ್ಯಾಪ್ ತೆಗೆದುಕೊಳ್ಳುವ ಇವರ ಪೊಗರು ಸಿನಿಮಾ (Pogaru Cinema) ರಿಲೀಸ್ ಆಗಿ ನಾಲ್ಕು ವರ್ಷ ಕಳೆದ ಮೇಲೂ ಮತ್ಯಾವ ಸಿನಿಮಾ ಕೊಡ ತೆರೆಕಂಡಿಲ್ಲ. ಆದರೆ, ಮಾರ್ಟಿನ್ (Martin) ಮತ್ತು KD ಸಿನಿಮಾ ಕೈಯಲ್ಲಿದ್ದು ಈ ಬಗ್ಗೆ ಬಹಳ ನಿರೀಕ್ಷೆ ಇದೆ.
ಇದರಲ್ಲಿ KD ಸಿನಿಮಾ ಕುರಿತಾದ ಅಪ್ಡೇಟ್ ಗಳನ್ನು ಆಗಾಗ ಸಿನಿರಸಿಕರು ಕೇಳುತ್ತಿರುತ್ತಾರೆ. ನಿರ್ದೇಶಕ ಪ್ರೇಮ್ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ KD ಸಿನಿಮಾ ಸುದ್ದಿಯಾದ ಮೇಲೆ ಇದಕ್ಕೂ ಮುನ್ನವೇ ಸೆಟ್ಟರಿದ್ದ 5ನೇ ಸಿನಿಮಾ ದ ಬಗ್ಗೆ ಬಹುತೇಕರು ಮರೆತೇ ಬಿಟ್ಟಿದ್ದಾರೆ.
ಆದ್ರೆ ಸದ್ದಿಲ್ಲದೆ ಮಾರ್ಟಿನ್ ಕನ್ನಡದ ಮತ್ತೊಂದು ಬ್ಲಾಕ್ ಬ್ಲಾಸ್ಟರ್ ಸಿನಿಮಾವಾಗಲು ತಯಾರಾಗುತ್ತಿದೆ. ಪಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿರುವ ಮಾರ್ಟಿನ್ ಸಿನಿಮಾ ಈಗಾಗಲೇ ವಿಚಾರವೊಂದರಲ್ಲಿ ಕನ್ನಡದ ಎಲ್ಲಾ ಸಿನಿಮಾಗಳ ದಾಖಲೆಗಳಿಗೆ ಬ್ರೇಕ್ ಹಾಕಿದೆ.
ಅದ್ದೂರಿ ಸಿನಿಮಾದ ಸಕ್ಸಸ್ ಕಾಂಬಿನೇಷನ್ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ನಟ ಧ್ರುವ ಸರ್ಜಾ ಎರಡನೇ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಪ್ರಾಜೆಕ್ಟ್ ಮಾರ್ಟಿನ್ ಸಿನಿಮಾ ಆಡಿಯೋ ಹಕ್ಕು ಬಹಳ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಮೂಲಕ ಕನ್ನಡದಲ್ಲಿ ಇಷ್ಟೊಂದು ರೇಟ್ ಗೆ ಸೇಲ್ ಆದ ಮೊದಲ ಸಿನಿಮಾ ಎನಿಸಿಕೊಂಡಿದೆ.
ಈ ಕುರಿತಾದ ಮಾಹಿತಿಯನ್ನು ಸ್ವತಃ ಮಾರ್ಟಿನ್ ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಹಂಚಿಕೊಂಡಿದ್ದಾರೆ. ಸರಿಗೆಮಾ (Saregama) ಎನ್ನುವ ಜನಪ್ರಿಯ ಆಡಿಯೋ ಸಂಸ್ಥೆ ದುಬಾರಿ ಬೆಲೆ ತೆತ್ತು ಮಾರ್ಟಿನ್ ಆಡಿಯೋ ರೈಟ್ಸ್ (Martin Audio rite) ಕೊಂಡುಕೊಂಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕರು ನನಗೆ ತಿಳಿದ ಹಾಗೆ ಇಷ್ಟು ದೊಡ್ಡ ಮೊತ್ತಕ್ಕೆ ಯಾವುದೇ ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿಲ್ಲ. ನಮ್ಮ ಚಿತ್ರದ ಆಡಿಯೋ ರೈಟ್ಸ್ ಈ ಬಾರಿ ಮೊತ್ತಕ್ಕೆ ಮಾರಾಟವಾಗಿರುವುದು ತುಂಬಾ ಖುಷಿಯಾಗಿದೆ ಮಣಿಶರ್ಮ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ ಎಂದು ತಿಳಿಸಿದ್ದಾರೆ. ಮಾರ್ಟಿನ್ ಮಾಸ್ ಸಿನಿಮಾ ವಾಗಿದ್ದು ವಾಸವಿ ಪ್ರೊಡಕ್ಷನ್ ಲಾಂಛನದಿಂದ ನಿರ್ಮಾಣವಾಗುತ್ತಿದೆ.
ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಬಾಲಿವುಡ್ ಬೆಡಗಿ ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಸಾಧುಕೋಕಿಲ ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಮುಂತಾದವರ ತಾರಾಗಣವಿದೆ.
ಈ ಸಿನಿಮಾ ಟೀಸರ್ ನೋಡಿಯೇ ಪರಭಾಷಿಕರು ಮನಸೋತಿದ್ದಾರೆ. ಸಿನಿಮಾಗೆ ಕಥೆ ಬರೆದಿರುವುದು ಅರ್ಜುನ್ ಸರ್ಜಾ ಎನ್ನುವವರು ಇದರ ಮತ್ತೊಂದು ವಿಶೇಷವಾಗಿದೆ. ಈ ಸಂಗತಿ ತಿಳಿದ ಮೇಲೆ ಕೆಜಿಎಫ್ ದಾಖಲೆ ಕೂಡ ಮುರಿದಿದೆಯಾ ಮಾರ್ಟಿನ್ ಎಂದು ಜನ ಲೆಕ್ಕಾಚಾರ ಹಾಕುತ್ತಿದ್ದಾರೆ ಆದರೆ ಇದೇ ಮೊದಲು ಬರೋಬ್ಬರಿ 9 ಕೋಟಿಗೆ ಧ್ರುವ ಸರ್ಜಾ ಅವರ ಸಿನಿಮಾದ ಆಡಿಯೋ ರೈಟ್ಸ್ ಬಿಕರಿಯಾಗಿದೆ.
ನೀವು ಕೂಡ ಧ್ರುವ ಸರ್ಜಾ ಅವರ ನಟನೆಯನ್ನು ಮೆಚ್ಚುವವರಾಗಿದ್ದರೆ ಅವರ ಯಾವ ಸಿನಿಮಾ ಇಷ್ಟ ಅಥವಾ ಅವರ ಯಾವ ಸಿನಿಮಾ ಮೊದಲು ರಿಲೀಸ್ ಆಗಬೇಕು ಎಂದು ಕಾಯುತ್ತಿದ್ದೀರ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.