ಬಿಗ್ ಬಾಸ್ ಕಂಟೆಸ್ಟೆಂಟ್ ವರ್ತೂರು ಸಂತೋಷ್ ರವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಕಾರಣ ಬಿಗ್ ಬಾಸ್ ಮನೆಯಿಂದಲೇ ವನ್ಯಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಅರೆಸ್ಟ್ ಆದ ವಿಚಾರ ಕಳೆದ ಒಂದು ವಾರದಿಂದ ಮಾಧ್ಯಮ ಹಾಗೂ ಸಾಮಾಜಿಕ ಚಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದೆ. ಇವರು ಅರೆಸ್ಟ್ ಆದ ಬೆನ್ನಲ್ಲೇ ಜನಸಾಮಾನ್ಯರಿಂದ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಏಕಾಏಕಿ ವರ್ತೂರ್ ಸಂತೋಷ ಅವರನ್ನು ನೋಟಿಸ್ ಕೊಡತ್ತೆ ಬಂಧಿಸಿದ್ದು ಮತ್ತು ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ಟಾರ್ ಗಳು ಕೂಡ ಈ ಪೆಂಟೆಂಟ್ ಧರಿಸಿದ್ದರೂ ಮತ್ತು ಅದಕ್ಕೆ ಸಾಕ್ಷಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದರು ಸಂತೋಷ್ ಬಂದಿಸಿದಂತೆ ಕ್ರಮ ಕೈಗೊಳ್ಳದೆ ಇರುವುದು ನೆಟ್ಟಿಗರ ಕೋ’ಪಕ್ಕೆ ಕಾರಣವಾಗಿದೆ.
ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಹೇಳುವುದಾದರೂ ನಮ್ಮಲ್ಲಿ ಹಳ್ಳಿ ಭಾಗಗಳಲ್ಲಿ ಕುಟುಂಬದ ವಾಡಿಕೆಯಂತೆ ಈ ರೀತಿ ಪೆಂಡೆಂಟ್ ಅನ್ನು ತಲತಲಾಂತರದಿಂದ ವರ್ಗಾಯಿಸಿಕೊಂಡು ಬಂದು ಧರಿಸುವವರು ಕೂಡ ಇದ್ದಾರೆ. ಜನಸಾಮಾನ್ಯರಿಗೆ ಅರಣ್ಯ ನೀತಿ ಅಥವಾ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಇದು ಅಪರಾಧ ಎನ್ನುವುದೇ ಅನೇಕರಿಗೆ ತಿಳಿದಿಲ್ಲ ಜೊತೆಗೆ ಒಬ್ಬರನ್ನು ನೋಡಿ ಮತ್ತಷ್ಟು ಜನರು ಅನುಸರಿಸುತ್ತಾರೆ.
ಹಾಗಾಗಿ ಇದಕ್ಕೆ ಅರಿವು ಮೂಡಿಸುವ ಅಗತ್ಯ ಇದೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಸಹ ಇದರ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರಗಳು ಬೆಳಕಿಗೆ ಬರುತ್ತಿದ್ದಂತೆ ಜನಸಾಮಾನ್ಯರಿಗೆ ಈ ಕಾಯ್ದೆಯ ಕುರಿತು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತಿದೆ ಅದಕ್ಕಾಗಿ ಈ ಅಂಕಣದಲ್ಲಿ ಕೂಡ ಕೆಲ ಪ್ರಮುಖ ವಿಚಾರಗಳನ್ನು ತಿಳಿಸುತ್ತಿದ್ದೇವೆ.
ದೇಶ ಸ್ವತಂತ್ರ ಪಡೆದ ನಂತರ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಯಿತು. ಈ ಕಾಯ್ದೆಯ ಪ್ರಕಾರ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ನಿಷೇಧಿಸಿಲಾಗಿದೆ. ಬಳಿಕ 2006, 2012 ಹಾಗೂ 2022ರ ಈ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಯಿತು.
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಮತ್ತು ಅವುಗಳ ಅವಶೇಷಗಳನ್ನು ಮಾರಾಟ ಮಾಡುವಂತಿಲ್ಲ ಮತ್ತು ಅವುಗಳನ್ನು ಬಳಕೆ ಕೂಡ ಮಾಡುವುದಿಲ್ಲ, ಯಾವುದೇ ವನ್ಯ ಜೀವಿಯನ್ನು ಜೀವಂತವಾಗಿ ಅಥವಾ ಮೃ’ತಪಟ್ಟ ಬಳಿಕವೂ ಮಾರಾಟ ಮಾಡುವಂತಿಲ್ಲ.
ವನ್ಯಜೀವಿಗಳನ್ನು ಬೇಟೆಯಾಡುವುದು ಮತ್ತು ಅವುಗಳ ಮಾಂಸವನ್ನು ಮಾರಾಟ ಮಾಡುವುದು ಅಥವಾ ಸೇವಿಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ, ಕಾಡು ಪ್ರಾಣಿಗಳ ಚರ್ಮವನ್ನು ಉಪಯೋಗಿಸಿ ತಯಾರಿಸಿರುವ ಅಲಂಕಾರಿಕ ವಸ್ತುಗಳನ್ನು ಮನೆಗಳಲ್ಲಿ ಹಾಕುವಂತಿಲ್ಲ, ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ, ನವಿಲು ಗರಿಗಳನ್ನೂ ಇಟ್ಟುಕೊಳ್ಳುವಂತಿಲ್ಲ.
ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದಾಗಲಿ, ಸಾಗಿಸುವುದಾಗಲಿ, ಮಾರಾಟ ಮಾಡುವುದಾಗಲಿ ಹಾಗೂ ಬಳಕೆ ಮಾಡುವುದಾಗಲಿ ಕಂಡು ಬಂದರೆ ದಂಡ ಸಮೇತ ಕನಿಷ್ಠ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇದರಲ್ಲಿ ನವಿಲುಗರಿಯನ್ನು ಕೂಡ ಸೇರಿಸುವುದು ಅನೇಕರಿಗೆ ಆಶ್ಚರ್ಯ ತಂದಿದೆ. ಯಾಕೆಂದರೆ ಪ್ರತಿ ಮನೆಗಳಲ್ಲೂ ನವಿಲುಗರಿ ಇರುತ್ತದೆ. ಕೆಲವರು ಪ್ರದರ್ಶನಕ್ಕೆ ಇಟ್ಟಿದ್ದರೆ ವಿದ್ಯಾರ್ಥಿಗಳು ನಂಬಿಕೆಗಳಿಂದ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಇದು ಕೂಡ ಕಾನೂನಿನಲ್ಲಿ ಸೇರಿದೆ. ವನ್ಯಜೀವಿಯಾದ ನವಿಲು ಸಾಕುವುದು ಕೂಡ ಅಪರಾಧ ಎಂದು ಕಾನೂನು ಹೇಳುತ್ತದೆ. ಕಾಡಿನ ಗಡಿಯಲ್ಲಿರುವ ಮನೆಯಂಗಳಕೆ ಸ್ವ ಇಚ್ಛೆಯಿಂದ ಬಂದರೆ ನವಿಲು ಬಂದರೆ ಅಡ್ಡಿಯಿಲ್ಲ ಆದರೆ ಅದನ್ನು ಹಿಡಿದು ಸಾಕುವಂತಿಲ್ಲ .