ಟಿಕ್ ಟಾಕ್ ಬೆಡಗಿ ಮತ್ತು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ಸೋನು ಗೌಡ (Sonu gowda) ಅವರು ಇತ್ತೀಚಿನ ಸಂದರ್ಶನದಲ್ಲಿ ಕಾಂತರಾ (Kanthara) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಿಂದೊಮ್ಮೆ ಕಾಂತರಾ ಸಿನಿಮಾ ನೋಡಿಲ್ಲ ಎಂದು ಹೇಳಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದ ಈಕೆ ಈಗ ಕಾಂತಾರ ಚಿತ್ರ ನೋಡಿ ಅದರ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ನೋಡಿದ ಕಾರಣ ನಾನು ಎರಡು ವಾರ ಆಸ್ಪತ್ರೆ ಅಲ್ಲಿ ಅಡ್ಮಿಟ್ ಆಗಬೇಕಾಯಿತು ಎಂದು ಸಹ ದೂರು ಹೇಳಿದ್ದಾರೆ ಕಾಂತರಾ.
ಸಿನಿಮಾ ಚೆನ್ನಾಗಿದೆ, ಸೂಪರ್ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದರು ಮೊದಲೇ ನೋಡಬೇಕಾಗಿತ್ತು ಆದರೆ ಬಿಗ್ ಬಾಸ್ ಇಂದ ಬಂದ ಮೇಲೆ ನನಗೆ ರೆಸ್ಟ್ ಬೇಕಿತ್ತು. ಎಲ್ಲೂ ಹೊರಗಡೆ ಹೋಗಲು ಇಷ್ಟ ಆಗುತ್ತಿರಲಿಲ್ಲ. ಹಾಗಾಗಿ ರಿಲೀಸ್ ಆದ ತಕ್ಷಣ ಕಾಂತರಾ ಸಿನಿಮಾ ನೋಡಲು ಆಗಲಿಲ್ಲ. ನನ್ನ ಸ್ನೇಹಿತರು ಕುಟುಂಬದವರು ಎಲ್ಲರೂ ಸಹ ಕಾಂತರಾ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಹ ಕಾಂತರಾ ಸಿನಿಮಾ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿತ್ತು.
ಹಾಗಾಗಿ ನೋಡೇ ಬಿಡೋಣ ಎಂದು ಕುತೂಹಲದಿಂದ ಒಂದು ದಿನ ಅಕ್ಕನನ್ನು ಕರೆದುಕೊಂಡು ಹೋದೆ ನೈಟ್ ಶೋ ಗೆ ಹೋದೆ. ಮೊದ ಮೊದಲಿಗೆ ಸಿನಿಮಾ ಮಂಗಳೂರು ಭಾಷೆಯಲ್ಲಿ ಇದ್ದ ಕಾರಣ ನನಗೆ ಏನು ಅರ್ಥ ಆಗುತ್ತಿರಲಿಲ್ಲ ಸುಮ್ಮನೆ ಕೂತಿಕೊಂಡು ನೋಡುತ್ತಿದ್ದೆ, ಹಾಡುಗಳಷ್ಟೇ ಎಂಜಾಯ್ ಮಾಡುತಿದ್ದೆ. ಆದರೆ ಕೊನೆಯ 20 ನಿಮಿಷ ನನಗೆ ಬೆರಗು ಮಾಡಿತ್ತು ನಾನು ಅಂದುಕೊಂಡೆ ಹೇಗೆ ಈ ರೀತಿ ಆಕ್ಟ್ ಮಾಡಲು ಸಾಧ್ಯ ಎಂದು ಬೇರೆ ಸಿನಿಮಾದಲ್ಲೆಲ್ಲ ಗ್ರಾಫಿಕ್ಸ್ ಬಳಸಿ ಮಾಡುತ್ತಾರೆ.
ಆದರೆ ಇದರಲ್ಲಿ ನಿಜವಾಗಿಯೂ ಅದೇ ರೀತಿ ನೈಜವಾಗಿ ಸಹಜವಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇಂಥವರ ಜೊತೆ ನಾವು ಒಂದು ಹೆಜ್ಜೆ ಇಡುತ್ತಿದ್ದೇವೆ ಎಂದರೆ ಖುಷಿಯಾಗುತ್ತದೆ. ಕ್ಲೈಮಾಕ್ಸ್ ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿಬಿಟ್ಟೆ. ಆದರೆ ಅಷ್ಟೇ ಭಯಪಟ್ಟೆ ಹಾಗಾಗಿ ಸಿನಿಮಾ ನೋಡಿಕೊಂಡು ಬಂದಮೇಲೆ ಚಳಿ ಜ್ವರ ಬಂದು ಬಿಟ್ಟಿತು. ಎರಡು ವಾರ ಆಸ್ಪತ್ರೆಯಲ್ಲಿ ಇರಬೇಕಾಯಿತು. ಮೊದಲು ಒಂದು ವಾರ ಬೆಂಗಳೂರಿನಲ್ಲಿ ಹಾಗೂ ಒಂದು ವಾರ ಮಂಡ್ಯದಲ್ಲಿ ಚಿಕಿತ್ಸೆ ತೆಗೆದುಕೊಂಡು ಹುಷಾರಾದೆ.
ಈಗ ಒಟಿಟಿಯಲ್ಲಿ ಕಾಂತಾರ ರಿಲೀಸ್ ಆಗಿದೆ, ನನ್ನ ಅಕ್ಕ ಹೇಳುತ್ತಾಳೆ ಮತ್ತು ಸಿನಿಮಾ ನೋಡುವಾಗ ಹುಷಾರು ಮತ್ತೆ ಚಳಿಜ್ವರ ಬರೆಸಿಕೊಳ್ಳಬೇಡ ಎಂದು ನನಗೆ ಕಾಲೆಳೆಯುತ್ತಾಳೆ. ಎಂದು ಸಿನಿಮಾ ಬಗ್ಗೆ ಸೋನು ಗೌಡ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಾಂತರಾ ಸಿನಿಮಾ ಬರೆದ ದಾಖಲೆಯ ಲೆವೆಲ್ ಬೇರೆ ಕನ್ನಡದಲ್ಲಿ ತಯಾರಾದ ಸಣ್ಣ ಬಜೆಟಿನ ಸಿನಿಮಾ ಒಂದು ಅಭಿಮಾನಿಗಳ ಅಪೇಕ್ಷೆ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ದಾಖಲೆ ಮೊತ್ತದ ಹಣ ಗಳಿಕೆ ಮಾಡಿದ್ದು ಕರ್ನಾಟಕ ಚರಿತ್ರೆಯಲ್ಲಿ ಮೊದಲು.
ಇಂತಹ ಒಂದು ಅದ್ಭುತವಾದ ಸಿನಿಮಾ ಕೊಟ್ಟ ಕಾರಣ ಡಿವೈನ್ ಸ್ಟಾರ್ ಎನ್ನುವ ಪಟ್ಟ ರಿಷಭ್ ಶೆಟ್ಟಿ ಅವರಿಗೆ ದಕ್ಕಿದೆ. ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತವನ್ನು ಸಿನಿಮಾ ಹಾಕಲಾಗಿತ್ತು. ಅಲ್ಲೂ ಕೂಡ ಟಿ ಆರ್ ಪಿ ಯಲ್ಲಿ ಇದುವರೆಗೆ ಇದ್ದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಈ ಹಿಂದೆ ಅಂಬಿ ನಿನಗೆ ವಯಸ್ಸಾಯ್ತು ಸಿನಿಮಾ ಪ್ರಸಾರವಾಗಿದ್ದಾಗ 10+ ಟಿ ವಿ ಆರ್ ಪಡೆದುಕೊಂಡಿದ್ದು ಆದರೆ ಈಗ ಕಾಂತರಾ ಸಿನಿಮಾ SD ಮತ್ತು HD ಎಡರಿಂದಲೂ 15 + ಟಿ ವಿ ಆರ್ ದೋಚುವ ಮೂಲಕ ಸುವರ್ಣ ಟಿವಿಯ ಹಳೆ ದಾಖಲೆಯನ್ನು ಮುರಿದಿದೆ.