ಭಾರತದ ಮಾರುಕಟ್ಟೆಗೆ ಹೊಸ ಕಾರುಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಪಾಪುಲರ್ ಹಾಕಿರುವ ಕಂಪನಿಗಳು ಕೂಡ ಹೊಸ ವಿನ್ಯಾಸದಲ್ಲಿ ಕಾರುಗಳ ಬಿಡುಗಡೆ ಮಾಡಿ ತಕ್ಕನಾದ ಪೈಪೋಟಿ ನೀಡುತ್ತವೆ. ಗ್ರಾಹಕರ ಆಸಕ್ತಿ ಹಾಗೂ ಅನುಕೂಲತೆಗೆ ತಕ್ಕ ಹಾಗೆ ಈ ರೀತಿ ಆಗಾಗ ಅಪ್ಡೇಟ್ ಆಗುವ ಅವಶ್ಯಕತೆ ಕೂಡ ಇರುತ್ತದೆ.
ಅಂತೆಯೇ ಈಗ ಟೊಯೋಟಾ MPV ವಿಭಾಗದಲ್ಲಿ ರೂಮಿಯಾನ್ S CNG (Toyota Rumion S CNG) ಮಾದರಿಯನ್ನು ಪರಿಚಯಿಸಿದೆ. ಇದು ಅತ್ಯುತ್ತಮವಾದ MPV ಎನಿಸಿದ್ದು, 1462cc 4 ಸಿಲಿಂಡರ್ ಎಂಜಿನ್ ಒಳಗೊಂಡಿದೆ. 5 ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಕಾರ್ಯಕ್ಷಮತೆ ಹೊಂದಿರುವ ಇದು ಇಂತಹದೇ 10 ಹಲವು ವೈಶಿಷ್ಟಗಳಿಂದ ಬಹಳ ವಿಶೇಷ ಎನಿಸಿದೆ ಇದರ ವಿವರ ಇಂತಿದೆ.
ಈ ಹೊಸ ರೂಮಿಯಾನ್ ಕಾರ್ ಟೆಕ್ನಿಕಲ್ ಎರ್ಟಿಗಾ ಆಧರಿಸಿ ತಯಾರಿಸಿದ್ದಾಗಿದ್ದಾದರೂ ಟೊಯೊಟಾ ಬ್ರಾಂಡ್ ಹೊಸ ವಿನ್ಯಾಸವು ಅತ್ಯಾಕರ್ಷಕವಾಗಿದೆ. ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್, ಕ್ರೋಮ್ ಸರೌಂಡ್ ಏರ್ ಡ್ಯಾಮ್, ಮಷಿನ್ ಫಿನಿಶ್ಡ್ ಹೊಂದಿರುವ ಅಲಾಯ್ ವ್ಹೀಲ್ ಮುಂತಾದ ಹೊರ ರಚನೆಯು ಇನೋವಾ ಕಾರಿನಂತಹ ಲುಕ್ ಹೊಂದಿದ್ದು ಕಾರಿನ ಒಳ ಭಾಗವೂ ಇಂತಹದೇ ಆಕರ್ಷಕ ಫೀಚರ್ಸ್ ಗಳನ್ನು ಹೊಂದಿದೆ.
7 ಆಸನಗಳ ಸಾಮರ್ಥ್ಯವುಳ್ಳ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಗ್ಲಾಸ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಅನಲಾಗ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಮಲ್ಟಿ ಇನ್ಫಾರ್ಮೆಷನ್ ಡಿಸ್ಲೇ, ಬ್ಲ್ಯಾಕ್ ಔಟ್ ಡ್ಯಾಶ್ ಬೋರ್ಡ್, ಫ್ಲಕ್ಸ್ ವುಡ್ ಇನ್ಸರ್ಟ್ ಹೊಂದಿದೆ.
ಟೊಯೋಟಾ ರೂಮಿಯನ್ S CNG ಮಾಡೆಲ್ ಈ ಕಾರು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ Kg CNG ಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣವು ವೈಯುಕ್ತಿಕ ಬಳಕೆಗೆ ಬಳಸುವ ಗ್ರಾಹಕರಿಂದ ಹಿಡಿದು ವಾಣಿಜ್ಯ ಉದ್ದೇಶಗಳಿಗಾಗಿ ಕಾರ್ ಖರೀದಿಸುವವರೂ ಕೂಡ ಈ ಕಾರ್ ನತ್ತ ನೋಡುವುದಕ್ಕೆ ಪ್ರಮುಖ ಪಾಯಿಂಟ್ ಆಗಿದೆ.
ನೂತನ ಮಾದರಿಯ ಟೊಯೋಟಾ ರೂಮಿಯಾನ್ S CNG ಕಾರಿನ ಸುರಕ್ಷತೆ ವಿಚಾರೋಲ್ಲೂ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಪಡೆದುಕೊಂಡಿದೆ. ನಾಲ್ಕು ಏರ್ ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಚೈಲ್ಡ್ ಲಾಕ್, ಓವರ್ ಸ್ಪೀಡ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಆ್ಯಂಟಿ ಥೆಫ್ಟ್ ಇಮ್ ಮೊಬಿಲೈಜರ್, ಹಿಂಬದಿಯ ಆಸನದಲ್ಲಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯ ಒಳಗೊಂಡಿದ್ದು.
ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಭಾರತ್ ಕ್ರ್ಯಾಶ್ ಟೆಸ್ಟಿಂಗ್ ಮಾನದಂಡಗಳನ್ನು ಪೂರೈಸಲು ಸಹಕಾರಿಯಾಗಿದೆ. ಇತ್ಯಾದಿ ಕಾರಣಗಳಿಂದ ಇದು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ ಎನ್ನುವ ಭರವಸೆಯನ್ನು ಹೊಂದಬಹುದಾಗಿದೆ ಬೆಲೆ ವಿಚಾರಕ್ಕೆ ಬರುವುದಾದರೆ ಟಯೋಟಾ ರೂಮಿಯಾನ್ S CNG ಶೋರೂಮ್ ಬೆಲೆ ರೂ.11,24,000ಮತ್ತು ಆನ್ ರೋಡ್ ಬೆಲೆ ರೂ.13,01,761. ಈ ಕಾರ್ ಖರೀದಿಸಲು ಬ್ಯಾಂಕ್ ಲೋನ್ ಪಡೆದುಕೊಳ್ಳಲು.
ಬಯಸುವವರಿಗೂ ಕೂಡ ಅನುಕೂಲವಾಗುವಂತೆ ಒಂದು ಲಕ್ಷ ಮುಂಗಡಪಾವತಿ ಮೂಲಕ ಬುಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಕಾರ್ ಖರೀದಿಸಲು 9.8% ಬಡ್ಡಿದರದಲ್ಲಿ ರೂ.12,01,761 ಸಾಲ ಸೌಲಭ್ಯ ಸಿಗುತ್ತದೆ. ಈ ಸಾಲಕ್ಕೆ 5 ವರ್ಷಗಳವರೆಗೆ ಪ್ರತಿ ತಿಂಗಳು ರೂ. 25,416 EMI ಪಾವತಿಸಬೇಕು.