ಕರ್ನಾಟಕದ ರಾಜಕೀಯದಲ್ಲಿ ಫೈಯರ್ ಮ್ಯಾನ್ ಎಂದು ಖ್ಯಾತಿಯಾಗಿರುವ BJP ಶಾಸಕ ಬಸವನಗೌಡ ಯತ್ನಾಳ್ (Basavana Gowda Yathnal) ಅವರು ಮತ್ತೆ ತಮ್ಮ ಮಿಂಚಿನಂತಹ ಮಾತುಗಳಿಂದ ಸಂಚಲನ ಮೂಡಿಸಿದ್ದಾರೆ. ರಾಜಕೀಯ ವೇದಿಕೆಯೇ ಇರಲಿ ಅಥವಾ ವಿಧಾನಸಭೆಯ ಕಲಾಪವೇ ಇರಲಿ ತಮ್ಮ ನೇರಾನೇರ ಮಾತುಗಳಿಂದ ಎಲ್ಲರ ಗಮನ ಸೆಳೆಯುವ ಯತ್ನಾಳ್ ಅವರು ಈಗ ಮತ್ತೊಮ್ಮೆ ಸಾಂಸ್ಕೃತಿಕ ವೇದಿಕೆಯಲ್ಲಿ ಅಂತಹದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಉತ್ತರ ಪ್ರದೇಶದಂತಹ (Uththara Pradesha) JCB ಆಡಳಿತ ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ಬರುತ್ತೇನೆ, ಎರಡು ತಿಂಗಳು ಗೃಹ ಸಚಿವ ಮಾಡಿ ನೋಡಿ ಸಾಕು ಕರ್ನಾಟಕದ ಚಿತ್ರಣವನ್ನು ಬದಲಾಯಿಸಿ ಬಿಡುತ್ತೇನೆ ಎಂದು ಹೇಳಿಕೆ ಕೊಡುವ ಮೂಲಕ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಹಾವೇರಿ (Haveri) ಜಿಲ್ಲೆಯಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಗುವ ಹಾವೇರಿ ಕ ರಾಜ ಗಣಪತಿ ಗಣೇಶೋತ್ಸವದಲ್ಲಿ ಭಾಗಿಯಾದ ಯತ್ನಾಳ್ ದೇಶ ಧರ್ಮ ಇತ್ಯಾದಿ ವಿಚಾರಗಳನ್ನು ಮಾತನಾಡುವ ವೇಳೆ ಈ ಮಾತನ್ನು ಸಹ ನುಡಿದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ (Loksabha Election-2024) ನಾವೆಲ್ಲರೂ ಪ್ರಧಾನಮಂತ್ರಿ ಮೋದಿ ಅವರನ್ನೇ ಬೆಂಬಲಿಸಬೇಕು ಆಗ ಮಾತ್ರ ಮುಂದಿನ 25 ವರ್ಷ ದೇಶ ನಮ್ಮ ಕೈಲಿ ಇರುತ್ತದೆ.
ಭಾರತ ಎಂದು ಕರೆಯುವುದಕ್ಕೆ ಯಾಕೆ ಎಷ್ಟು ಕ’ಷ್ಟ ಪಡಬೇಕು ಭಾರತ ಆಳಿದ ದೇಶ ಇದು ಭಾರತ, ಇಂಡಿಯಾ ಎನ್ನುವುದು ನಾವು ಇಟ್ಟುಕೊಂಡಿದ್ದಾ.? ಬ್ರಿಟಿಷರು ಕೊಟ್ಟು ಹೋಗಿದ್ದು? ನಾವು ಅವರು ಇಟ್ಟಿದ್ದನ್ನೇಕೆ ಪಾಲಿಸಬೇಕು ಹಾಗೆ ಕರೆಯಲು ನೋ’ವು ಪಡುವವರು ಇಲ್ಲಿ ಹುಟ್ಟಿದ್ದೀರ ಅಥವಾ ಇಂಗ್ಲೀಷ್ ನವರಿಗೆ ಹುಟ್ಟಿದ್ದೀರಾ ಎಂದು ಸ್ವಲ್ಪ ಖಾರವಾಗಿ ಪ್ರಶ್ನಿಸಿದರು. ಜೊತೆಗೆ ಸನಾತನ ಧರ್ಮವನ್ನು ಉಳಿಸುವ ಕೆಲಸ ಸ್ವಾಮೀಜಿಗಳಿಂದ ಆಗಬೇಕು ಆದರೆ ಅವರು ಮಂತ್ರಿಗಿರಿ ಪಡೆಯುವ ಲಾ’ಭಿ ಮಾಡುತ್ತಿದ್ದಾರೆ, ಇದು ದೊಡ್ಡ ದುರಂತ ಎಂದಿದ್ದಾರೆ.
ಗಣೇಶ ಉತ್ಸವ ಮಾಡೋಕೆ ಪರವಾನಿಗೆ ಪಡೆಯುವ ಪರಿಸ್ಥಿತಿ ಇದೆ. ಡಿಜೆ ಹಚ್ಚುವಾಗ ಶಬ್ಧಕ್ಕೆ ಇಂತಿಷ್ಟೇ ಮಿತಿ ಇರಬೇಕು, ಸಮಯ ಇಂತಿಷ್ಟೇ ಇರಬೇಕು ಹೀಗೆ ಮಿತಿ ಹಾಕಲು ಇದು ಪಾಕಿಸ್ತಾನನಾ? ಇಲ್ಲ ನಮ್ಮ ಭಾರತಾನಾ? ಅವರು ದಿನಕ್ಕೆ 6 ಬಾರಿ ಕಿರುಚುತ್ತಾರೆ, ಅವರಿಗೆ ಏನು ಎನ್ನುವುದಿಲ್ಲ, ನಾವು ವರ್ಷಕ್ಕೊಮ್ಮೆ ಹಬ್ಬ ಮಾಡ್ತೀವಿ, ನಮಗೆ ಮಾತ್ರ ಈ ರೀತಿಯ ರೂಲ್ಸ್ ಹಾಕ್ತೀರಾ? ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದೆ.
ಯಾಕೆಂದರೆ ನಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕೆಂದರೆ ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹೀಗಾಗಿ ನಮ್ಮಲ್ಲೂ ಕೆಲವು ಸಲ ಟಿಕೆಟ್ ಕೊಡಲ್ಲ. ಆದರೆ ನನಗೆ ಎರಡೇ ತಿಂಗಳು ಗೃಹ ಸಚಿವನಾಗಿ ಮಾಡಿ ನೋಡಲಿ, ಉತ್ತರ ಪ್ರದೇಶದ ಬಗ್ಗೆ ಗೊತ್ತಲ್ಲ, ಆ ರೀತಿ ಕರ್ನಾಟಕ ಮಾಡುತ್ತೇನೆ. ಈಗ ಹೇಗೆ ಅಂದರೆ ಪೊಲೀಸರ ಕೈಯಲ್ಲಿ ಗನ್ ಕೊಡ್ತಾರೆ, ಆದರೆ ಅದನ್ನು ಬಳಸಬಾರದಂತೆ. ಹಾಗಾದರೆ ಪೊಲೀಸರ ಕೈಗೆ ಗನ್ ಕೊಡೋದು ಏಕೆ ಹೇಳಿ ಎಂದು ಗುಡುಗಿದರು.
ಈ ಸಮಯದಲ್ಲಿ ಚಂದ್ರಯಾನ-3 (Chandrayana-3) ಯಶಸ್ವಿಯಾಗಿದ್ದನ್ನು ನೆನೆಯಲು ಅವರು ಮರೆತಿಲ್ಲ. ನಮ್ಮ ದೇಶದ ಒಂದು ಟವರ್ ಮೇಲೆ ಅಥವಾ ಒಂದು ದೊಡ್ಡ ಧ್ವಜ ಆರಿಸಿದ್ದಕ್ಕೆ ನೀವೇನು ದೊಡ್ಡವರಾಗಿ ಬಿಟ್ರಾ? ನಿಮಗೆ ತಾಕತ್ತಿದ್ದರೆ ನಾವು ಚಂದ್ರನ ಮೇಲೆ ಧ್ವಜ ಹಾರಿಸಿದ್ದೇವೆ ನೀವು ಕೂಡ ಹಾರಿಸಿ ಬನ್ನಿ ಎಂದು ಪಾಕಿಸ್ತಾನಕ್ಕೆ (Pakistan) ಸವಾಲ್ ಎಸೆದರು. ಇಲ್ಲಿ ಅನ್ನ ತಿಂದು ನೀರು ಕುಡಿದು ಇಲ್ಲೇ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಪಾಕಿಸ್ತಾನವನ್ನು ಬೆಂಬಲಿಸುವವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.