ಡ್ರೋನ್ (Drone) ಕಂಡುಹಿಡಿದಿದ್ದು ನಾನೇ ಎಂದು ಹೇಳಿ ಕರ್ನಾಟಕದ ಮನೆ ಮನೆ ಮಾತಾಗಿದ್ದ ಡ್ರೋನ್ ಪ್ರತಾಪ್ (Drone Prathap) ಅವರು ಜನಸಾಮಾನ್ಯರು ಮಾತ್ರವಲ್ಲದೆ ಮಾಧ್ಯಮದವರು ಹಾಗೂ ಸೆಲೆಬ್ರಿಟಿ ಗಳಿಗೂ ಕೂಡ ಸರಿಯಾಗಿ ಟೋಪಿ ಹಾಕಿದ್ದರು. ಇವರು ಹೇಳಿದ ಅಷ್ಟು ಸುಳ್ಳುಗಳನ್ನು ನಂಬಿ ಇವರು ಪಡೆದುಕೊಂಡೆ ಎಂದು ಹೇಳಿದ ಪದಕಗಳೆಲ್ಲ ಪ್ರಾಮಾಣಿಕವಾದದ್ದು ಎಂದುಕೊಂಡು ಪ್ರತಿ ಮನೆಗಳಲ್ಲೂ ಕೂಡ ಹೆತ್ತವರು ಮಕ್ಕಳಿಗೆ ಪ್ರತಾಪ್ ತೋರಿಸಿ ಬುದ್ಧಿವಾದ ಹೇಳುತ್ತಿದ್ದರು.
ಅದೆಷ್ಟೋ ವೇದಿಕೆಗಳಲ್ಲಿ ಇವರು ಗೆಸ್ಟ್ ಆಗಿ ಪಾಲ್ಗೊಂಡಿದ್ದರು. ಕರ್ನಾಟಕದ ದೊಡ್ಡ ದೊಡ್ಡ ಮಂದಿ ಜೊತೆ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದರು. ಈ ರೀತಿ ಪ್ರತಾಪ್ ಪ್ರತಾಪವನ್ನು ಮೆಚ್ಚಿಕೊಂಡಾಡಿದವರ ಪಟ್ಟಿಯಲ್ಲಿ ನವರಸ ನಾಯಕ ಜಗ್ಗೇಶ್ (Jaggesh) ಅವರು ಕೂಡ ಸೇರಿದ್ದರು. ಈ ಹುಡುಗ ಬಹಳ ಕಷ್ಟ ಪಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಹಕರಿಸಿ ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದರು.
ಯಾವಾಗ ಡ್ರೋನ್ ಪ್ರತಾಪ್ ಅವರು ತಮ್ಮ ಇಮೇಜ್ ಕಳೆದುಕೊಂಡು ಕಾಗೆ ಪ್ರತಾಪ್ ಆದರೂ ಅವರು ಮಾಡಿದ ಅಷ್ಟು ಕೂಡ ಡೋಂಗಿ ಎನ್ನುವುದು ಗೊತ್ತಾಯಿತು ಇವರ ಮೇಲೆ ಎಲ್ಲರ ಸಹನೆ ಕಳೆಯಿತು. ಕರ್ನಾಟಕವೇ ಹೋಲ್ ಸೇಲ್ ಆಗಿ ಕಾಗೆ ಹಾರಿಸಿಕೊಂಡ ತಪ್ಪಿಗೆ ಈತನ ಮೇಲೆ ಮುನಿಸಿಕೊಂಡಿದ್ದರು ಈಗ ಪ್ರತಾಪ್ ಬಿಗ್ ಬಾಸ್ (Bigboss) ಮನೆಯಲ್ಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಸಮಾನ ವೇದಿಕೆ ಆಗಿರುತ್ತದೆ. ಸುದೀಪ್ (Sudeep) ಅವರು ಈ ಹಿಂದೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಂದು ಹೇಳಿಕೆ ಕೊಟ್ಟಿದ್ದರು. ಸಮಾಜದಿಂದ ಬೇರೆಯಾದ ಅಥವಾ ತಿರಸ್ಕರಿತವಾದ ವ್ಯಕ್ತಿಗೆ ಎರಡನೇ ಅವಕಾಶ ಬಿಗ್ ಬಾಸ್ ವೇದಿಕೆಯಾಗಲಿ, ನೀವು ಮೊದಲಿಗೆ ಯಾರ ಮುಖ ನೋಡಿ ಸಿಟ್ಟಿಗೇಳುತ್ತೀರೋ ನಿಧಾನವಾಗಿ ಮನೆ ಒಳಗಿನ ಅವರ ವರ್ತನೆ ನೋಡಿ ನೀವೇ ಅವರನ್ನು ವೋಟ್ ಮಾಡಿ ಉಳಿಸಿರುತ್ತೀರಿ ಎಂದು.
ಈಗ ಅದೇ ಮಾತು ಅಕ್ಷರಶಃ ಸತ್ಯವಾಗಿದೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಪ್ರತಾಪ್ ಅವರು ಮೊದಲ ವಾರದಲ್ಲಿಯೇ ತಮ್ಮ ಮುಗ್ಧತೆ ಹಾಗೂ ಮಾತಿನಿಂದ ಜನರ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಅವರಿಗಾದ ಅವಮಾನ ಅವರ ತಾಳ್ಮೆಯ ಶಕ್ತಿಯನ್ನು ತೋರಿಸಿದೆ ಪ್ರತಾಪ್ ಸ್ಥಿತಿಯನ್ನು ಕಂಡು ಕರುನಾಡಿನ ಜನ ಕರಗಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತ’ಪ್ಪು ಮಾಡುತ್ತಾನೆ ತಿದ್ದಿಕೊಳ್ಳಲು ಅವಕಾಶ ಬೇಕು, ಆತ ಯಾರ ಮನೆಯನ್ನು ಕೊ’ಳ್ಳೆ ಹೊಡೆದಿಲ್ಲ, ಬದಲಿಗೆ ಸುಳ್ಳು ಹೇಳಿದ್ದರೂ ಒಂದಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾನೆ, ರೈತನಿಗೂ ಸಹ ಈತನಿಂದ ಸಹಾಯವಾಗಿದೆ ಎಂದು ಹೇಳುತ್ತಾ ಈ ಸೀಸನ್ ವಿನ್ನರ್ ಪ್ರತಾಪ್ ಆಗಬೇಕು ಎಂದು ಹೇಳುತ್ತಿದ್ದಾರೆ.
ಮೊದಲ ವಾರದಲ್ಲಿ ಪ್ರತಾಪ್ ಮೇಲೆ ನೆಟ್ಟಿಗರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಕ್ಕೆ ನವರಸ ನಾಯಕ ಜಗ್ಗೇಶ್ ಅವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾಕೆಂದರೆ ಅವರೇ ಪರಿಚಯಿಸಿದ್ದ ಈತ ಮಾಡಿದ್ದು ಫ್ರಾಡ್ ಎಂದು ಗೊತ್ತಾದ ಮೇಲೆ ಜೀವನದಲ್ಲಿ ಇನ್ನೆಂದು ಯಾವ ವ್ಯಕ್ತಿಯ ಬಗ್ಗೆ ಕೂಡ ಹಿಂದೆ ಮುಂದೆ ಗೊತ್ತಿಲ್ಲದೆ ಸರಿಯಾಗಿ ಆತನ ಪೂರ್ವಾಪರ ತಿಳಿದುಕೊಳ್ಳದೆ ಪ್ರಚಾರ ಮಾಡಬಾರದು.
ಎಂದು ಎಚ್ಚೆತ್ತು ಕೊಂಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ ಅವರು ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಾಪ್ ಬಗ್ಗೆ ಸರಣಿ ಪೋಸ್ಟ್ (Social media post) ಮಾಡಿದ್ದಾರೆ. ಈ ಮನುಷ್ಯ ಎಲ್ಲರನ್ನೂ ಡೋಂಗಿ ಮಾಡಿ ಬದುಕಲು ಯತ್ನಿಸುತ್ತಾನೆ, ಭಯಂಕರ ಡೋಂಗಿ ಇವನು, ಇವನ ಪ್ಲಾನ್ ಬೇರೆ ಇರುತ್ತದೆ, ಇವನನ್ನು ಚೆಕ್ ಮಾಡಿ ದೀರ್ಘವಾಗಿ ಒಬ್ಬ ಫ್ರಾಡ್ ಸಿಗುತ್ತಾನೆ, ನನ್ನ ಬದುಕಲ್ಲಿ ನಾನು ಕಂಡ ಮೋಸ್ಟ್ ಎಜುಕೇಟೆಡ್ ಫ್ರಾಡ್ ಎಚ್ಚರ ಎಂದು ಬರೆದುಕೊಂಡಿದ್ದಾರೆ.