ಇತ್ತೀಚಿನ ದಿನಗಳಲ್ಲಿ ನಮ್ಮ ಮೊಬೈಲ್ ಫೋನ್ ಗಳು ಕರೆಗಳು ಹಾಗೂ SMS ಗಳನ್ನು ಮಾಡಲು ಬಳಸುವುದಕ್ಕಿಂತ ಇಂಟರ್ನೆಟ್ (Internet) ನಲ್ಲಿ ಬ್ರೌಸಿಂಗ್ ಮಾಡುವುದಕ್ಕೆ ಹೆಚ್ಚು ಬಳಕೆಯಾಗುತ್ತಿದೆ ಎಂದರೆ ತಪ್ಪಲ್ಲ. ಆದರೆ ಎಲ್ಲರೂ ಸಹ ಮನೋರಂಜನೆ ಉದ್ದೇಶಕ್ಕಾಗಿ ಇದನ್ನು ಬಳಸುತ್ತಿಲ್ಲ ಕೆಲವರು ಇದನ್ನು ವಿದ್ಯಾಭ್ಯಾಸದ ಉದ್ದೇಶದಿಂದ, ಉತ್ತಮ ವಿಷಯಗಳ ಬಗ್ಗೆ ರಿಸರ್ಚ್ ಅಥವಾ ಮಾಹಿತಿ ಪಡೆದುಕೊಳ್ಳಲು, ಇನ್ನು ಕೆಲವರು ತಮ್ಮ ಕೆಲಸ ಕಾರ್ಯದ ಚಟುವಟಿಕೆಗಳಿಗೆ ಇದನ್ನು ಬಳಸುತ್ತಿದ್ದಾರೆ.
ಇದರ ಜೊತೆಗೆ ನಮ್ಮ ಶಾಪಿಂಗ್, ಪೇಮೆಂಟ್ ಇತ್ಯಾದಿ ಇತ್ಯಾದಿಗಳೆಲ್ಲ ಇಂಟರ್ನೆಟ್ ಮೇಲೆ ಡಿಪೆಂಡ್ ಆಗಿರುವುದರಿಂದ ಪ್ರತಿಯೊಬ್ಬರಿಗೂ ಇಂಟರ್ನೆಟ್ ಕನೆಕ್ಷನ್ ಬೇಕೇ ಬೇಕು. ಆದರೆ ಪ್ರಪಂಚದ ಒಟ್ಟಾರೆ ಬಳಕೆಯಲ್ಲಿ ಹೆಚ್ಚು ಬಳಕೆ ಆಗುತ್ತಿರುವುದು ಖಂಡಿತವಾಗಿಯೂ ಮನೋರಂಜನೆಗೆ ಎನ್ನುವುದನ್ನು ಇದರ ಜೊತೆ ಒಪ್ಪಲೇ ಬೇಕು.
ನೀವು ಕೂಡ ಸ್ಮಾರ್ಟ್ ಫೋನ್ ಹೊಂದಿದ್ದರೆ ನೀವು ಅತಿ ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಾಗಿದ್ದರೆ ನಿಮ್ಮ ರಿಚಾರ್ಜ್ ಪ್ಯಾಕ್ ನ ಇಂಟರ್ನೆಟ್ ಮಿತಿ ಅರ್ಧ ದಿನದ ಒಳಗೆ ಖಾಲಿ ಆಗುತ್ತಿದ್ದರೆ ಇದರ ಸಂಬಂಧಪಟ್ಟ ನೀವು ಬೇಸರ ಪಟ್ಟಿರುತ್ತೀರಿ. ಆದರೆ ಇನ್ನು ಮುಂದೆ ಈ ಬಗ್ಗೆ ಟೆನ್ಶನ್ ಬೇಡ.
ಭಾರತದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ರಿಲಯನ್ಸ್ (Reliance) ಈಗ ತನ್ ಜಿಯೋ ಗ್ರಾಹಕರಿಗಾಗಿ (Give offer for Jio customers) ಹೊಸದೊಂದು ಯೋಜನೆಯನ್ನು ಪರಿಚಯಿಸಿದೆ. ಇದರ ಮೂಲಕ ನೀವು ನಿಮ್ಮ ದಿನದ ಮಿತಿ ಮುಗಿದಿದ್ದರೂ ಕೂಡ ಇಂಟರ್ನೆಟ್ ಬಳಸಬಹುದು. ಪ್ರತಿದಿನವೂ ಕೂಡ 2GB ವರೆಗೆ ಹೆಚ್ಚಿನ ಡಾಟ ನೀಡುವಂತಹ ಹೊಸ ಪ್ಯಾಕೇಜ್ ಒಂದನ್ನು ಇಂಡಿಯನ್ ತನ್ನ ಜಿಯೋಗ್ರಾಹಕರಿಗೆ ಘೋಷಿಸಿದೆ. ಇದರ ಬಗ್ಗೆ ವಿವರ ಇಲ್ಲಿದೆ ನೋಡಿ.
ಜಿಯೋ ತನ್ನ ಗ್ರಾಹಕರಿಗಾಗಿ ಡೇಟಾ ಆಡ್ ಆನ್ ಪ್ಲಾನ್ (Data and On Plan) ಪರಿಚಯಿಸಿದೆ. ಜಿಯೋ ನೀಡುತ್ತಿರುವ ಈ ಒಂದು ವರ್ಷದ ಡೇಟಾ ಆಡ್ ಆನ್ ಪ್ಲಾನ್ನ ಬೆಲೆ 2,878 ರೂಪಾಯಿಯಾಗಿದೆ. ನೀವು ನಿಮ್ಮ ರೆಗುಲರ್ ರೀಚಾರ್ಜ್ ಜೊತೆ ಜಿಯೋ ಪ್ಲಾನ್ ನಲ್ಲಿರುವ 365 ದಿನಗಳವರೆಗೆ ಪ್ರತಿದಿನ 2GB ಡೇಟಾವನ್ನು ಹೆಚ್ಚುವರಿಯಾಗಿ ಪಡೆಯಬಹುದಾದ.
ಈ ರೀಚಾರ್ಜ್ ಕೂಡ ಮಾಡಿಸಿದರೆ ವರ್ಷಕ್ಕೆ 730GB ಡೇಟಾವನ್ನು ಪಡೆಯುತ್ತೀರಿ. ಆದರೆ ಈ ಹೊಸ ಡೇಟಾ ಆಡ್ ಆನ್ ಪ್ಯಾಕ್ ನಲ್ಲಿ ಯಾವುದೇ ಕರೆ ಅಥವಾ SMS ಸೌಲಭ್ಯವು ಇರುವುದಿಲ್ಲ. ನೀವು ರೆಗುಲರ್ ಪ್ಯಾಕ್ ರಿಚಾರ್ಜ್ ಮಾಡಿರುವುದರಿಂದ ಅದರ ಮೂಲಕ ದಿನಕ್ಕೆ 100 SMS ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು. ಅದಕ್ಕಿರುವ ಇಂಟರ್ನೆಟ್ ಮಿತಿ ಮುಗಿಯುತ್ತಿದ್ದಂತೆ ಈ ಡಾಟಾ ಆಡ್ ಆನ್ ಪ್ಯಾಕ್ ಆಕ್ಟಿವ್ ಆಗುತ್ತದೆ. ಇದರಿಂದ 64kbps ವೇಗವನ್ನು ಪಡೆಯಬಹುದು.
ಒಂದು ವೇಳೆ ನಿಮಗೆ ಈ ಡಾಟಾ ಆಡ್ ಓನ್ ಸೇವೆ ಬೇಡ ಎಂದರೆ ಜಿಯೋದ 30 ದಿನಗಳ ರೀಚಾರ್ಜ್ ಪ್ಲಾನ್ ಗೆ ರೀಚಾರ್ಜ್ ಮಾಡಿಸಿದರೆ ಒಳ್ಳೆಯದು. ಈ ಪ್ಲಾನ್ ಗಾಗಿ ರೂ.181, ರೂ.241 ಮತ್ತು ರೂ.301 ರೀಚಾರ್ಜ್ ಯೋಜನೆಗಳಿವೆ ನಿಮ್ಮ ಅವಶ್ಯಕತೆ ಅನುಸಾರ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲಾನ್ ನಲ್ಲಿ ಕೂಡ 30GB, 40GB ಮತ್ತು 50GB ಹೆಚ್ಚುವರಿ ಇಂಟರ್ನೆಟ್ ಡೇಟಾ ಸೇವೆಯು ಲಭ್ಯವಿದೆ. ಅದಲ್ಲದೇ, 331 ರೂ ರೀಚಾರ್ಜ್ ಮಾಡಿದರೆ, 40GB ಹೆಚ್ಚುವರಿ ಡೇಟಾ ಮತ್ತು Disney + Hotstar ನ ಉಚಿತ ಚಂದಾದಾರಿಕೆಯು ಪಡೆಯಲಿದ್ದಾರೆ.