Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಹಸಿವು ಸೂಚ್ಯಂಕದಲ್ಲಿ ಪಾಕ್, ಬಾಂಗ್ಲಾ, ಶ್ರೀಲಂಕಕ್ಕಿಂತ ಭಾರತದ ಸ್ಥಿತಿ ಆತಂಕಕಾರಿ.!

Posted on October 18, 2023 By Admin No Comments on ಹಸಿವು ಸೂಚ್ಯಂಕದಲ್ಲಿ ಪಾಕ್, ಬಾಂಗ್ಲಾ, ಶ್ರೀಲಂಕಕ್ಕಿಂತ ಭಾರತದ ಸ್ಥಿತಿ ಆತಂಕಕಾರಿ.!

 

ಸರ್ಕಾರೇತರ ಸಂಘಟನೆಗಳಾದ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಸೆ ಅ. 12ರಂದು ಜಾಗತಿಕ ಹಸಿವು ಸೂಚ್ಯಂಕ (Global Hunger Index) ಪಟ್ಟಿಯ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಇರುವ 125 ದೇಶಗಳಲ್ಲಿ ಭಾರತವನ್ನು 111ನೇ ಸ್ಥಾನದಲ್ಲಿ (India 111th place) ನೋಡುವುದು ನಮ್ಮವರಿಗೆ ಕಷ್ಟವಾಗಿದೆ. ಇದರ ಜೊತೆಗೆ ಮತ್ತೊಂದು ಶಾ’ಕಿಂ’ಗ್ ವಿಚಾರವೇನೆಂದರೆ.

ಈ ಬಾರಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಭಾರತ ದೇಶವು ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಉಳಿದ ಎಲ್ಲಾ ನೆರೆಹೊರೆಯ ದೇಶಗಳಿಗಿಂತ ಹಿಂದೆ ಉಳಿದಿದೆ. ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀಲಂಕಾ 60ನೇ ಸ್ಥಾನಗಳಲ್ಲಿವೆ. 0 ಇಂದ 100 ಅಂಕಗಳ ಮಾಪಕದಲ್ಲಿ ನೋಡುವುದಾದರೆ ಭಾರತವು 28.07 ಅಂಕಗಳನ್ನು ಪಡೆದಿದೆ. ಇದರಲ್ಲಿ 0 ಹಸಿವು ಇಲ್ಲ ಎನ್ನುವುದನ್ನು ತೋರ್ಪಡಿಸಿದರೆ 100 ಅತ್ಯಂತ ಕೆಟ್ಟ ಪರಿಸ್ಥಿತಿ ಎನಿಸಿದೆ.

ಈಗ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaih) ಅವರು ಸಹ ಬೆಂಗಳೂರಿನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಗಂಭೀರ ವಿಷಯಗಳ ಬಗ್ಗೆ ವರದಿಯಾಗುವಾಗ ಉತ್ತರಿಸಬೇಕಾದ ಪ್ರಧಾನಿಗಳ (blame to Prime Minister) ಮೌನಿಯಾಗಿರುತ್ತಾರೆ ಎಂದು ಅವರನ್ನು ಸಹ ಈ ಸಂಬಂಧ ದೂರಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ, ಈ ವಿಚಾರದಲ್ಲಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳು ಮಾತ್ರವಲ್ಲ ಸುಡಾನ್, ನೈಜೀರಿಯಾ, ಕಾಂಗೋದಂತಹ ದೇಶಗಳಿಗಿಂತಲೂ ಭಾರತದ ಸ್ಥಿತಿ ಕೆಟ್ಟದಾಗಿ ಎಂದು ತಿಳಿದುಬಂದಿದೆ ಇದು ವಿ’ಷಾ’ದ’ನೀ’ಯ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತ ದೇಶ 111ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು 2018-22ರ ಅವಧಿಯಲ್ಲಿ ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆಯು ಜಗತ್ತಿನಲ್ಲಿಯೇ ಹೆಚ್ಚಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಆದರೆ ದುರಂತವೆಂದರೆ ತಮ್ಮನ್ನು ವಿಶ್ವಗುರು ಎಂದು ಬಿಂಬಿಸಿಕೊಳ್ಳುವಲ್ಲಿಯೇ ಯಾವಾಗಲೂ ಬ್ಯುಸಿಯಾಗಿರುವ ಪ್ರಧಾನಿ ಮೋದಿಯವರು ತಮ್ಮ ಆಡಳಿತದ ವೈಫಲ್ಯವನ್ನು ಎತ್ತಿ ತೋರುವ ಇಂತಹ ವಿಷಯಗಳು ಪ್ರಸ್ತಾಪವಾದಾಗ ಮಹಾ ಮೌನಿಯಾಗಿ ಬಿಡುತ್ತಾರೆ.

ಇವುಗಳಿಗೆ ಉತ್ತರ ಕೊಡಲಾಗದೆ ತಮ್ಮ ಜಾಣ ಕಿವುಡು ಹಾಗೂ ಜಾಣ ಕುರುಡನ್ನು ಪ್ರದರ್ಶಿಸುತ್ತಾರೆ ಎಂದು ಟೀಕಿಸಿದ್ದಾರೆ. ಆದರೆ ಭಾರತ ಸರ್ಕಾರವು ಮಾತ್ರ ಹಸಿವು ಸೂಚ್ಯಂಕವನ್ನು ಅಳೆಯಲು ಬಳಸುತ್ತಿರುವ ಮಾನದಂಡಗಳೇ ಸರಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ ಇದರಿಂದಲೇ ಭಾರತವನ್ನು ಕಳಪೆ ಸ್ಥಾನದಲ್ಲಿ ತೋರಿಸಲಾಗುತ್ತಿದೆ ಎಂದು ಉತ್ತರ ಕೊಟ್ಟಿದೆ.

ಮೂರು ಬಾರಿಯಿಂದಲೂ ಹಸಿವನ್ನು ಅಳೆಯುವ ತಪ್ಪು ವಿಧಾನಗಳನ್ನು ಬಳಸಿ ಜಾಗತಿಕ ಹಸಿವು ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತಿದೆ ಅದರ ವಿಧಾನಗಳಲ್ಲಿ ಗಂಭೀರ ಲೋಪದೋಷಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳುತ್ತಾ ಬರುತ್ತಿದೆ ಜಾಗತಿಕ ಹಸಿವು ಸೂಚ್ಯಂಕವನ್ನು ನಾಲ್ಕು ಅಂಶಗಳನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ.

ಅವುಗಳೆಂದರೆ ಅಪೌಷ್ಟಿಕತೆ, 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಎತ್ತರಕ್ಕೆ ತಕ್ಕಷ್ಟು ತೂಕ ಇಲ್ಲದೆ ಇರುವುದು, 5 ವರ್ಷಗಳ ಒಳಗಿನ ಮಕ್ಕಳಲ್ಲಿ ಪ್ರಾಯಕ್ಕೆ ತಕ್ಕ ಹಾಗೆ ತೂಕ ಇಲ್ಲದೆ ಇರುವುದು ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ದರವನ್ನು ಪರಿಗಣನೆಗೆ ತೆಗೆದುಕೊಡಲಾಗುತ್ತಿದೆ.

ಈ ಬಾರಿಯ ವರದಿಯನ್ನು 2000, 2008 ಮತ್ತು 2015ರ ವರ್ಷಗಳ ವರದಿಯೊಂದಿಗೆ ಮಾತ್ರ ಹೋಲಿಕೆ ಮಾಡಬಹುದು ಎಂದು ಸಮೀಕ್ಷೆ ಮಾಡಿರುವ ಸಂಸ್ಥೆಗಳು ತಿಳಿಸಿವೆ. ಯಾಕೆಂದರೆ 2008ರಲ್ಲಿ 35.5 ಅಂಕ, 2000ರಲ್ಲಿ 38.4 ಅಂಕ ಮತ್ತು 2005ರಲ್ಲಿ 29.2 ಅಂಕಗಳನ್ನು ಭಾರತ ಹೊಂದಿತ್ತು. ಅಫ್ಘಾನಿಸ್ತಾನ, ಕೆರಿಬಿಯನ್ ದೇಶಗಳು, ಸಬ್ ಸಹಾರ ಆಫ್ರಿಕಾದ 12 ದೇಶಗಳು ಭಾರತಕ್ಕಿಂತಲೂ ಕಳಪೆ ಸ್ಥಾನದಲ್ಲಿವೆ.

Viral News

Post navigation

Previous Post: ಕೃಷಿ ಪಂಪ್ ಸೆಟ್ ಗೆ ಪ್ರತಿನಿತ್ಯ 5 ಗಂಟೆ ನಿರಂತರ ಕರೆಂಟ್ ನೀಡುವುದು ಕಡ್ಡಾಯ ಅಧಿಕಾರಿಗಳಿಗೆ ಖಡಕ್ ಸೂಚನೆ ಹೊರಡಿಸಿದ – ಸಿದ್ದರಾಮಯ್ಯ
Next Post: ಪಿತೃಪಕ್ಷಕ್ಕೆ ಅಣ್ಣಾವ್ರು, ಅಪ್ಪು, ಚಿರು ಫೋಟೋ ಇಟ್ಟು ಪೂಜಿಸಿದ ಗಿರಿಜಾ ಲೋಕೇಶ್, ವಿಷ್ಣುದಾದ ಶಂಕ್ರಣ್ಣನ ಫೋಟೋ ಯಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಗಿರಿಜಮ್ಮ ಕೊಟ್ಟ ಉತ್ತರವೇನು ಗೊತ್ತ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme