Thursday, September 28, 2023
Home Useful Information ಫ್ರಿಡ್ಜ್ ಬಾಳಿಕೆ ಬರಲು, ಸದಾಕಾಲ ಹೊಸದರಂತೆ ಇರಲಿ, ಫ್ರಿಡ್ಜ್ ರಿಪೇರಿಗೆ ಬರಬಾರದು ಅಂದ್ರೆ ಈ ಟಿಪ್ಸ್...

ಫ್ರಿಡ್ಜ್ ಬಾಳಿಕೆ ಬರಲು, ಸದಾಕಾಲ ಹೊಸದರಂತೆ ಇರಲಿ, ಫ್ರಿಡ್ಜ್ ರಿಪೇರಿಗೆ ಬರಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.!

 

ಸ್ನೇಹಿತರೆ ಫ್ರಿಜ್ ಯಾರ ಮನೆಯಲ್ಲಿ ಇರುವುದಿಲ್ಲ. ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ ಆದರೆ ಕಾಲ ಕಳೆದಂತೆ ಫ್ರಿಜ್ ಬೇಗ ಹಾಳಾಗುತ್ತದೆ ಸ್ನೇಹಿತರೆ ಆಗ ನಾವೆಲ್ಲರೂ ಏನು ಮಾಡುತ್ತೇವೆ ಸಾಮಾನ್ಯವಾಗಿ ಫ್ರಿಡ್ಜನ್ನು ರಿಪೇರಿ ಮಾಡಲು ಕೊಟ್ಟುಬಿಡುತ್ತೇವೆ. ಇಂದು ನಾವು ಹೇಳುವ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸಿದರೆ, ಇನ್ನು ಸ್ವಲ್ಪ ದಿನಗಳ ಕಾಲ ಚೆನ್ನಾಗಿ ಬಾಳಿಕೆ ಬರುವುದಲ್ಲದೆ ಫ್ರಿಡ್ಜ್ ನಲ್ಲಿ ಇಟ್ಟಿರುವಂತಹ ಆಹಾರಗಳು ಕೂಡ ಬೇಗನೆ ಕೆಡುವುದಿಲ್ಲ.

ಇದು ಕೆಲವು ಜನರಿಗೆ ತಿಳಿದಿರುವುದಿಲ್ಲ ಅಂತಹವರಿಗೆ ಇಂತಹ ಕೆಲವೊಂದು ಟಿಪ್ಸ್ ಗಳನ್ನು ಹೇಳಿಕೊಂಡು ನಮ್ಮ ಮನೆಯ ಫ್ರಿಜ್‌ನನ್ನು ಚೆನ್ನಾಗಿ ಇಟ್ಟುಕೊಂಡು ಜೊತೆಗೆ ಕರೆಂಟ್ ಬಳಕೆಯನ್ನು ನಾವು ಕಡಿಮೆ ಮಾಡಬಹುದು. ಅಲ್ಲದೇ ನಮ್ಮ ದುಡ್ಡು ಕೂಡ ಉಳಿತಾಯವಾಗುತ್ತದೆ ಇನ್ನು ಇದರೊಂದಿಗೆ ಅಥವಾ ಡೋರ್ನ ರಬ್ಬರ್ ಕೂಡ ಆಗಾಗ ನಾವು ನೋಡ್ತಾ ಇರಬೇಕು ಇನ್ನೂ ರಬ್ಬರ್ ಹಾಳಾಗಿದ್ದರೆ ಅದನ್ನು ಬದಲಿಸಿದರೆ ಒಳ್ಳೆಯದು, ರಬ್ಬರ್ ಹಾಳಾದರೆ ಆಹಾರಗಳು ಫ್ರೀಜ್ ಆಗುವುದಿಲ್ಲ ಇದರಿಂದ ಆಹಾರವು ಕೂಡ ಹಾಳಾಗುವ ಸ್ಥಿತಿಯು ಹೆಚ್ಚಾಗಿರುತ್ತದೆ.

15 ದಿನಕ್ಕೊಮ್ಮೆ ಫ್ರಿಡ್ಜ್ ನ ಗ್ಯಾಸ್ಗೆಟ್ ಸ್ವಚ್ಛ ಮಾಡುತ್ತಾ ಇರಬೇಕು ಇಲ್ಲವಾದರೆ ಕೊಳೆಗಳು ಕೂತಿ ಫ್ರಿಡ್ಜ್ ಬೇಗನೆ ಹಾಳು ಆಗಲು ಸಹಾಯ ಮಾಡುತ್ತದೆ ಅದಕ್ಕಾಗಿ 15 ದಿನಕೊಮ್ಮೆ ಇದನ್ನು ಸ್ವಚ್ಛಗೊಳಿಸಿ ನೋಡುತ್ತಾ ಇರಬೇಕು. ಇನ್ನು ಫ್ರಿಡ್ಜ್ ನ ಗ್ಯಾಸ್ಗೆಟ್ ಹಾಳಾಗಿದೆ ಎಂದು ನೋಡುವುದಾದರೂ ಹೇಗೆ? ಸ್ನೇಹಿತರೆ ಹಾಳಾಗಿದೆಯೇ ಎಂದು ನೋಡುವುದಾದರೆ ಸರಿಯಾಗಿ ಮುಚ್ಚಬೇಕು. ಇನ್ನು ಇ ಪೇಪರ್ ನನ್ನು ಅರ್ಥಕ್ಕೆ ಮಡಚಿ ಅರ್ಧ ಒಳಗೆ ಇಟ್ಟು ಫ್ರಿಡ್ಜ್ ಡೋರ್ ನನ್ನು ಮುಚ್ಚಬೇಕು. ಮುಚ್ಚಿದ ನಂತರ ಪೇಪರ್ ನನ್ನು ಜೋರಾಗಿ ಇಳಿಯದೇ ಮೆಲ್ಲಗೆ ಇಳಿಯಬೇಕು ಏನಾದರೂ ಸುಲಭವಾಗಿ ಆ ಪೇಪರ್ ಆಚೆ ಬಂದರೆ ನಿಮ್ಮ ಫ್ರಿಡ್ಜ್ ನ ಗ್ಯಾಸ್ಗೆಟ್ ಹಾಳಾಗಿದೆ ಎಂದು ಅರ್ಥ.

ಇದರಿಂದ ಫ್ರಿಡ್ಜ್ನಲ್ ಸ್ಕೂಲಿಂಗ್ ಹಾಳಾಗಿ ಆಹಾರ ಸರಿಯಾಗಿ ಫ್ರೀಜ್ ಆಗುವುದಿಲ್ಲ. ಇದರ ಜೊತೆಗೆ ಕರೆಂಟ್ ಬಿಲ್ ಕೂಡ ಜೋರಾಗಿ ಬರುತ್ತದೆ. ಇನ್ನು ಫ್ರಿಡ್ಜ್ ನ ಕೂಲಿಂಗ್ ಟೆಂಪರೇಚರ್ ಅನ್ನು ಸರಿಯಾಗಿ ಸೆಟ್ ಮಾಡಬೇಕು. ಏಕೆಂದರೆ ಸರಿಯಾದ ವಾತಾವರಣಕ್ಕೆ ಸರಿಯಾಗಿ ಫ್ರಿಡ್ಜ್ ನ ಟೆಂಪರೇಚರ್ ಮಾಡುವುದು ಅವಶ್ಯಕ, ಈಗಿನ ಫ್ರಿಡ್ಜ್ಗಳಲ್ಲಿ ಆಟೋಮೆಟಿಕ್ ಆಗಿ ಟೆಂಪರೇಚರ್ ಗಳು ಸೆಟ್ ಆಗುತ್ತದೆ.

ಇನ್ನು ಫ್ರಿಡ್ಜ್ ನಲ್ಲಿ ಕೂಲಿಂಗ್ ಗಾಗಿ ಒಳಗೆ ವೆಂಟಿಲೇಟರ್ ಇರುತ್ತದೆ ಅದನ್ನು ಮುಚ್ಚಿದರೆ ಸಾಮಾನ್ಯವಾಗಿ ಮಾಡಲು ಆಗುವುದಿಲ್ಲ ಇದರ ಜೊತೆಗೆ ಮಾಡಿಕೊಳ್ಳಲು ಇನ್ನು ಹೆಚ್ಚು ಪ್ರಯತ್ನವನ್ನು ಮಾಡಿ, ಹೆಚ್ಚು ಕರೆಂಟ್ ನನ್ನು ಬಳಸಿಕೊಳ್ಳುತ್ತದೆ. condenserq ಕಾಯಿಲ್ಗಳನ್ನು ಆರು ತಿಂಗಳಿಗೊಮ್ಮೆ ಕ್ಲೀನ್ ಮಾಡಿ, ಹೌದು ಫ್ರಿಡ್ಜ್ ನಾ ಹಿಂಭಾಗದಲ್ಲಿರುವ ಕಂಡೆನ್ಸರ್ ಕಾಯಿಲ್ ಸ್ವಚ್ಛ ಮಾಡುವುದರಿಂದ ಫ್ರಿಡ್ಜ್ ನ ಬಾಳಿಕೆಯು ಚೆನ್ನಾಗಿ ಬರುತ್ತದೆ.

ಇನ್ನು ಫ್ರಿಜ್ ನನ್ನು ಗೋಡೆಗೆ ತಾಗಿಸಿ ಇಡಬೇಡಿ ಇದರಿಂದ ಸರಿಯಾಗಿ ಕೂಲಿಂಗ್ ಆಗುವುದಿಲ್ಲ, ಇದರ ಜೊತೆಗೆ ತಿಂಗಳಿಗೊಮ್ಮೆ ಡೀಪ್ ಪ್ರೋಸ್ಟಿಂಗ್ ಮಾಡಿ. ಇನ್ನು ತರಕಾರಿಗಳನ್ನು ಫ್ರೆಶ್ ಆಗಿ ಇಡಲು ಹೀಗೆ ಮಾಡಿ ಒಂದು ಬೌಲಿಗೆ ಒಂದು ಚಮಚ ಕಲ್ಲು ಉಪ್ಪನ್ನು ಇಟ್ಟು ಫ್ರಿಡ್ಜ್ ಇಡುವಂತಹ ಬಾಕ್ಸ್ ನಲ್ಲಿ ಇಡಿ ಇದು ಹೆಚ್ಚಾಗಿ ಇರುವ ಮಾಯಿಚರನ್ನು ಅಬ್ಸರ್ವ್ ಮಾಡುತ್ತದೆ ಇದರ ಜೊತೆಗೆ ಫ್ರಿಡ್ಜ್ನಿಂದಾ ಕೆಟ್ಟ ವಾಸನೆ ಬರುತ್ತಿದ್ದಾರೆ,ಒಂದು ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಇಡಬೇಕು ಇದರಿಂದ ಕೆಟ್ಟ ವಾಸನೆ ಬರುವುದನ್ನು ತಪ್ಪಿಸುತ್ತದೆ.

- Advertisment -