ನಮ್ಮ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇವಾಲಯಗಳು ಕಂಡುಬರುತ್ತದೆ ಈ ದೇವಾಲಯಗಳಲ್ಲಿ 200 ಕ್ಕು ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳು ಇವೆ. ನಾವು ಇಲ್ಲಿ ತಿಳಿಸಲು ಹೊರಟಿರುವಂತಹ ಆಂಜನೇಯ ಸ್ವಾಮಿಯ ದೇವಸ್ಥಾನವು ತುಂಬಾ ವಿಶೇಷವಾಗಿದೆ ಭಾರತ ದೇಶದಲ್ಲಿ ಈ ರೀತಿಯ ದೇವಸ್ಥಾನ ನಾವು ಮತ್ತೆ ನೋಡಲು ಸಾಧ್ಯವಿಲ್ಲ.
ಈ ಆಂಜನೇಯ ಸ್ವಾಮಿಯು ಬೆಂಗಳೂರಿನಲ್ಲಿ ನೆಲೆಸಿರುವುದಕ್ಕೆ ಬೆಂಗಳೂರಿನ ನಗರ ಮತ್ತು ಜನರು ತುಂಬಾ ಪುಣ್ಯ ಮಾಡಿದ್ದಾರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ವ್ಯಾಸರಾಯರು ತಮ್ಮ ಕೈಯಿಂದ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ದೇವಾಲಯವು ಬೆಂಗಳೂರಿನ ದೊಡ್ಡ ಬಾಣಸವಾಡಿ ನಗರ BBMP ಕಚೇರಿಯ ಪಕ್ಕದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆಗಿದೆ
ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆಂಗಿನಕಾಯಿ ಆಂಜನೇಯ ಸ್ವಾಮಿ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭಕ್ತರು ಆಂಜನೇಯ ಸ್ವಾಮಿಯನ್ನು ನೋಡಲು ಬರುತ್ತಾರೆ ಆಂಜನೇಯ ಸ್ವಾಮಿ ಪವಾಡ ನೋಡಿದರೆ ನಿಮ್ಮಿಂದ ನಂಬಲು ಸಾಧ್ಯವಾಗುವುದಿಲ್ಲ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಬೆಂಗಳೂರಿನ ಜನರಿಗೂ ಕೂಡ ತಿಳಿದಿಲ್ಲ.
ಅಮೇರಿಕಾದ ಸಿಟಿ ಸೆಂಟ್ರಲ್ ಎಂಬ ಪತ್ರಿಕೆಯಲ್ಲು ಕೂಡ ದೇವಸ್ಥಾನದ ಬಗ್ಗೆ ಲೇಖನಗಳು ಬಂದಿತ್ತು. ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಸುಮಾರು 600 ವರ್ಷಗಳ ಹಳೆಯದು ಎಂದು ಹೇಳಲಾಗಿದೆ ಇತ್ತೀಚಿನ ದಿನಗಳಲ್ಲಿ ಈ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಬರುತ್ತಾರೆ ಕರ್ನಾಟಕದವರು ಮಾತ್ರವಲ್ಲದೆ ಮಾತ್ರವಲ್ಲದೆ ವಿದೇಶಿಯರು ಸಹ ಈ ದೇವಸ್ಥಾನಕ್ಕೆ ಬರುತ್ತಾರೆ.
ಇದನ್ನು ಓದಿ:- ಆನ್ಲೈಲ್ ಮೂಲಕ ಮನೆಯಲ್ಲಿಯೇ ಕುಳಿತು ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ.
ಆಂಜನೇಯ ಸ್ವಾಮಿಯ ಶಿಲೆ ಸಂಪೂರ್ಣ ಸಾಲಿಗ್ರಾಮ ಶಿಲೆಯಾಗಿದೆ ಈ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಕಷ್ಟಗಳನ್ನು ಆಂಜನೇಯ ಸ್ವಾಮಿಗೆ ಹೇಳಿ ಮೂರು ಪ್ರದಕ್ಷಿಣೆ ಹಾಕಿ ದೇವರಿಗೆ ಮತ್ತೆ ನಮಸ್ಕಾರ ಮಾಡಿ ದೇವಸ್ಥಾನದ ಒಳಾಂಗಣದಲ್ಲಿ ಧ್ಯಾನ ಮಾಡಬೇಕು ಈ ಸಮಯದಲ್ಲಿ ಒಂದು ಅದ್ಭುತ ಪವಾಡ ಜರುಗುತ್ತದೆ ಅದೇನೆಂದರೆ ಕಷ್ಟಗಳನ್ನು ಹೇಳಿಕೊಂಡು ಧ್ಯಾನ ಮಾಡುವಾಗ ತೆಂಗಿನಕಾಯಿ ಹೊಡೆಯುವ ಶಬ್ದ ಕಿವಿಗೆ ಬೀಳುತ್ತದೆ
ಕೇಳಲು ಇದು ವಿ.ಚಿ.ತ್ರವಾಗಿದ್ದರು ಕೂಡ ಇದು ನೂರಕ್ಕೆ ನೂರು ಸತ್ಯ ಸುಮಾರು 500 ವರ್ಷಗಳಿಂದ ನಡೆಯುತ್ತಾ ಬಂದಿದೆ ಇಲ್ಲಿಗೆ ಬರುವ ಶೇಕಡ 95 ರಷ್ಟು ಜನರಿಗೆ ಈ ಪವಾಡ ಅರ್ಥವಾಗಿದೆ ನೀವು ಧ್ಯಾನ ಮಾಡುವಾಗ ತೆಂಗಿನಕಾಯಿ ಒಡೆಯುವ ಶಬ್ದ ನಿಮಗೆ ಕೇಳಿದರೆ ನೀವು ಬೇಡಿಕೊಂಡದ್ದು ಕೆಲವೇ ದಿನಗಳಲ್ಲಿ ಈಡೇರುತ್ತದೆ ಎಂದು ಅರ್ಥ.
ತೆಂಗಿನಕಾಯಿ ಒಡೆಯುವ ಶಬ್ದ ಕೇಳಿಸಲಿಲ್ಲ ಎಂದರೆ ನೀವು ಬೇಡಿಕೊಂಡಿದ್ದು ನೆರವೇರಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ಅರ್ಥ. ಎರಡನೇ ಪವಾಡ ಎಂದರೆ ಪ್ರತಿ ವರ್ಷ ಮಾರ್ಗಶಿರದಂದು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವ ಹನುಮಾನ್ ಜಯಂತಿ ದಿನ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ಕಣ್ಣಲ್ಲಿ ನೀರು ಬರಲು ಪ್ರಾರಂಭಿಸುತ್ತದೆ.
ಹೌದು, ಈ ಪವಾಡವನ್ನು ಲಕ್ಷಾಂತರ ಭಕ್ತರು ತಮ್ಮ ಕಣ್ಣಾರೆ ನೋಡಬಹುದು. ಡಿಸೆಂಬರ್ ತಿಂಗಳು ಹನುಮಾನ್ ಜಯಂತಿ ದಿನದಂದು ಮಧ್ಯರಾತ್ರಿ 12 ಗಂಟೆಯಿಂದ ರಾತ್ರಿ 11:30 ತನಕ ಆಂಜನೇಯ ಸ್ವಾಮಿಯ ಕಣ್ಣುಗಳಲ್ಲಿ ನೀರು ಬರುತ್ತದೆ ಕಣ್ಣಿನಲ್ಲಿ ಬರುವಂತಹ ನೀರು ಆಂಜನೇಯ ಸ್ವಾಮಿಯ ಆನಂದಭಾಷ್ಪ ಎಂದು ಹೇಳಲಾಗುತ್ತದೆ.