ಸದ್ಯಕ್ಕೆ ಕರ್ನಾಟಕದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ವಿಷಯ ಎಂದರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಪ್ರತಿ ವರ್ಷ ಕೂಡ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗುವ ಈ ಕಾರ್ಯಕ್ರಮವು ಈಗ ಯಶಸ್ವಿಯಾಗಿ 10 ನೇ ಆವೃತ್ತಿಯಲ್ಲಿದೆ. ಕಳೆದ 10 ಆವೃತ್ತಿಗಳು ಮತ್ತು ಒಂದು OTT ಕಾರ್ಯಕ್ರವು ಸುದೀಪ್ ಅವರ ಸಾರಥ್ಯದಲ್ಲಿ ನಡೆದಿದೆ.
ಕಾರ್ಯಕ್ರಮದ ನಿರೂಪಣೆಗಾಗಿ ಒಂದು ಸೀಸನ್ ಗೆ ಕಿಚ್ಚ ಸುದೀಪ್ ಅವರು 8 ರಿಂದ 10 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ. ಹಾಗಾದರೆ ರಿಯಾಲಿಟಿ ಶೋಗಳ ಸರದಾರ ಎಂದು ಕರೆಸಿ ಕೊಂಡಿರುವ 100 ದಿನಗಳವರೆಗೆ 24×7 ನಡೆಯವ ಆಟಕ್ಕೆ ಒಟ್ಟು ಎಷ್ಟು ಖರ್ಚಾಗಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.
ಬಲವಾದ ಮೂಲಗಳ ಮಾಹಿತಿ ಪ್ರಕಾರ ಬಿಗ್ ಬಾಸ್ ಒಂದು ಸೀಸನ್ ಗೆ ಹೆಚ್ಚು ಕಡಿಮೆ 80 ಕೋಟಿಯಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಇಷ್ಟು ಇನ್ವೆಸ್ಟ್ ಮಾಡಿದರು ಕೂಡ ಇದಕ್ಕಿಂತ ದುಪ್ಪಟ್ಟು ಹಣವನ್ನು ಅದು ಬಾಚಿಕೊಂಡು ಬಿಡುತ್ತದೆ. ಯಾಕೆಂದರೆ ಇಡೀ ರಾಜ್ಯಕ್ಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಏನಾಯ್ತು ಎನ್ನುವ ತಿಳಿದುಕೊಳ್ಳುವ ಕುತೂಹಲ ಇರುತ್ತದೆ.
ಅನೇಕ ಕಾರಣಗಳು ಸಾಕಷ್ಟಿವೆ. ಕಾಂಟ್ರವರ್ಸಿ ಜನರನ್ನು ಮನೆ ಒಳಗೆ ಇರಿಸುವುದು ಅಥವಾ ಜನರ ನೆಚ್ಚಿನ ಸೆಲಿಬ್ರೆಟಿಗಳನ್ನು ಮನೆ ಒಳಗೆ ಕಳುಹಿಸುವುದರಿಂದ ಇವರ ದಿನನಿತ್ಯದ ಜೀವನ ಹೇಗಿರುತ್ತದೆ ಎಂದು ಹೊರಗಿನವರು ನೋಡಲು ಕಾತುರರಾಗಿರುತ್ತಾರೆ.
ಇದರೊಂದಿಗೆ ಟಾಸ್ಕ್ ಗಳ ಮಧ್ಯೆ ಆಗುವ ಜಗಳಗಳು ಈ ಸಮಯದಲ್ಲಿ ನಾವಿದ್ದರೆ ಏನು ಮಾಡುತ್ತಿದ್ದೆವು ಮತ್ತು ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಸ್ಪರ್ಧಿಗಳು ತಮ್ಮ ಬದುಕಿನ ನೋವನ್ನು ಹಂಚಿಕೊಂಡಾಗ ಹೊರಗಿನವರಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿರುವ ಸಾವಿರಾರು ಜನ ಕಾರ್ಯಕ್ರಮಕ್ಕೆ ಕನೆಕ್ಟ್ ಆಗುವಂತೆ ಮಾಡಿ ಬಿಡುತ್ತದೆ.
ಇದರ ಜೊತೆಗೆ ವಾರಾಂತ್ಯದ ಪಂಚಾಯಿತಿ ಕಟ್ಟೆಯಂತೂ ಅತಿ ಹೆಚ್ಚು ಮನೋರಂಜನೆ ನೀಡುವ ಎಪಿಸೋಡ್ ಗಳಾಗಿದ್ದು ಉಳಿದ ಎಪಿಸೋಡ್ ಗಳಿಗಿಂತಲೂ ಅತಿ ಹೆಚ್ಚು TRP ಕೊಡುವ ಎಪಿಸೋಡ್ ಗಳಾಗಿವೆ ಎನ್ನುವುದು ಸುಳ್ಳಲ್ಲ. ಲಕ್ಷೂರಿ ಟಾಸ್ಕ್ ಗಳನ್ನು ಕೊಡುವ ಮತ್ತು ಅಷ್ಟು ಅದ್ದೂರಿ ಸೆಟ್ಟಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಇಷ್ಟು ಹೂಡಿಕೆ ಎಲ್ಲಿ ಬರುತ್ತದೆ ಎಂದು ನೋಡುವುದಾದರೆ ಅದಕ್ಕೆ ಉತ್ತರ ಹೀಗಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆ ಪ್ರಸಾರವಾಗುವ ಎಪಿಸೋಡ್ ನಲ್ಲಿ 25 ನಿಮಿಷಗಳಾದರು ಜಾಹೀರಾತುಗಳು ಬರುತ್ತವೆ. ಈ ಜಾಹೀರಾತಿನಲ್ಲಿ ಒಂದು ನಿಮಿಷಕ್ಕೆ 25,000 ದಿಂದ 50,000 ದ ವರೆಗೂ ಕೂಡ ಚಾರ್ಜ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇರೊಂದಿಗೆ ಇನ್ನಿತರ ಕಂಪನಿಗಳು ಸ್ಪಾನ್ಸರ್ ಗಳಾಗಿ ಹಣ ಸುರಿಯುತ್ತಾರೆ.
ಸಿನಿಮಾಗೆ ಸಂಬಂಧದಿಸಿದವರು ತಮ್ಮ ಸಿನಿಮಾಗಳ ಪ್ರಮೋಷನ್ ಗಾಗಿ ಬಿಗ್ ಬಾಸ್ ವೇದಿಕೆಗೆ ಅಥವಾ ಮನೆ ಒಳಗೆ ಹೋಗುತ್ತಾರೆ. ಈ ಸಮಯದಲ್ಲೂ ಕೂಡ ಅವರು ಹಣ ಕೊಟ್ಟು ಸಿನಿಮಾ ಪ್ರಚಾರ ಮಾಡುತ್ತಾರೆ ಅದರಿಂದಲೂ ಕೂಡ ಹಣ ಬರುತ್ತದೆ. ಕೋಟ್ಯಾಂತರ ಜನರು ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದರಿಂದ ಅದರ TRP ರೇಟಿಂಗ್ ಕೂಡ ಹೈ ಇದೆ, ಇದು ಕೂಡ ಹಣದ ಮೂಲವಾಗಿದೆ.