ಕರ್ನಾಟಕ ಬಂದ್ ಗೆ (Karnataka bandh) ಸ್ಯಾಂಡಲ್ ವುಡ್ ಕೂಡ ಸಪೋರ್ಟ್ (Sandalwood support) ಮಾಡಿದೆ, ಇಂದು ಸಿನಿಮಾ ಕೆಲಸಗಳನ್ನು ಬಂದ್ ಮಾಡಲಾಗಿದೆ ಥಿಯೇಟರ್ಗಳನ್ನು ಕೂಡ ಮುಚ್ಚಲಾಗಿದೆ, ಸಿನಿಮಾ ಶೂಟಿಂಗ್ ಕೂಡ ನಡೆಸಿಲ್ಲ, ಶುಕ್ರವಾರವಾಗಿದ್ದ ಕಾರಣ ರಿಲೀಸ್ ಗೆ ರೆಡಿಯಾಗಿದ್ದ ಸಿನಿಮಾಗಳು ಕೂಡ ಮುಂದೂಡಲ್ಪಟ್ಟಿದೆ.
ಕನ್ನಡ ಚಲನಚಿತ್ರದ ಕಲಾವಿದರೆಲ್ಲಾ ಒಟ್ಟುಗೂಡಿ ಕನ್ನಡ ಫಿಲಂ ಚೇಂಬರ್ ಬಳಿ ಇರುವ ಗುರುರಾಜ್ ಕಲ್ಯಾಣ ಮಂಟಪದಲ್ಲಿ (Gururaj kalyana matap) ಚಿತ್ರರಂಗದ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಚಲನಚಿತ್ರರಂಗದ ಗಣ್ಯರುಗಳಾದ ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಧ್ರುವ, ವಸಿಷ್ಟ ಸಿಂಹ, ಅನುಪ್ರಭಾಕರ್ ಉಮಾಶ್ರೀ, ಪ್ರಮೀಳ ಜೋಶಾಯ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ಶ್ರೀನಾಥ್ ಮುಂತಾದವರು ಭಾಗಿಯಾಗಿದ್ದಾರೆ.
ಮುಂದಿನ ತಿಂಗಳಿನಿಂದ 10kg ಅನ್ನಭಾಗ್ಯ ಅಕ್ಕಿ ಗ್ಯಾರೆಂಟಿ – ಸಚಿವ H.K ಮುನಿಯಪ್ಪ
ವಾರದ ಹಿಂದೆಯಿಂದಲೂ ಕೂಡ ಕಾವೇರಿ ಕಾವು (Cauvery contreversy) ಜೋರಾಗಿದ್ದು ಚಿತ್ರರಂಗದವರು ಸಪೋರ್ಟ್ ಮಾಡುತ್ತಿಲ್ಲ, ಕರ್ನಾಟಕದ ರೈತರ ಮಾತನಾಡುತ್ತಿಲ್ಲ, ಗೋಕಾಕ್ ಚಳುವಳಿಯ ಸಮಯದಲ್ಲಿ ಡಾ. ರಾಜಕುಮಾರ್ ಅವರು ಚಿತ್ರರಂಗವನ್ನು ಒಗ್ಗೂಡಿಸಿ ಪ್ರತಿಭಟನೆಗೆ ಇಳಿದಂತೆ ಕನ್ನಡ ನಾಡಿನ ಸ್ಟಾರ್ ನಟರೆಲ್ಲ ಕಾವೇರಿ ಗಲಾಟೆಗೆ ಜೊತೆಗೂಡಿ ರಾಜ್ಯಕ್ಕೆ ನ್ಯಾಯ ದೊರಕುವಂತೆ ಮಾಡಬೇಕು ಎನ್ನುವ ಕೂಗು ಜೋರಾಗಿತ್ತು.
ಆ ಸಮಯದಲ್ಲಿಯೇ ಪ್ರತಿಭಟನ ಸ್ಥಳಕ್ಕೆ ಭೇಟಿ ಕೊಟ್ಟು ವೋಟ್ ಮಾಡುವ ವೇಳೆ ಯೋಚಿಸಿ ವೋಟ್ ಮಾಡಿ ಎನ್ನುವ ಖಾರವಾದ ಉತ್ತರ ಕೊಟ್ಟು, ಒಬ್ಬರು ಬಂದರೆ ಅವರು ಬಂದಿಲ್ಲ ಇವರು ಬಂದಿಲ್ಲ ಎಂದು ದೂರುತ್ತೀರಿ, ಯಾವ ಒಬ್ಬ ನಟ ಬಂದರೂ ಕೂಡ ಚಿತ್ರರಂಗ ಬಂದಂತೆ ಎಂದು ಹೇಳಿದ್ದ ನಟ ಶಿವರಾಜ್ ಕುಮಾರ್ (Actor Shivaraj Kumar) ಈಗ ಮುಂದುವರೆದು ಇಂದು ಸಹ ಪ್ರತಿಭಟನಾ ಭಾಷಣದ ವೇಳೆ ಸ್ಟಾರ್ ಗಳಿಂದ ಏನು ನಡೆಯುವುದಿಲ್ಲ, ನೀವು ಕೊಟ್ಟ ಸ್ಟಾರ್ ಗಿರಿ ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ.
ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು, ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಭಾರತ.!
ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ, ಹೋರಾಟ ಮಾಡುತ್ತಲೇ ಬಂದಿದ್ದೇವೆ, ಕಾವೇರಿ ತಾಯಿ ಎಷ್ಟು ನೋವು ಅನುಭವಿಸಿರಬಹುದು, ಆ ತಾಯಿ ಪವರ್ ಅಂಥದ್ದು ಎಲ್ಲಾ ನೋ’ವನ್ನು ತಡೆದುಕೊಳ್ಳುತ್ತಾಳೆ. ಕಲಾವಿದರು ಬರಲ್ಲ ಎನ್ನುವ ಆರೋಪ ಮಾಡುತ್ತೀರಿ, ಕಲಾವಿದರು ಬಂದು ಏನು ಮಾಡಬೇಕು ಹೇಳಿ, ನಾವು ಬಂದು ನಿಂತರೆ ಸಮಸ್ಯೆ ಪರಿಹಾರ ಆಗುತ್ತದಾ? ನಿಮ್ಮ ತರಹವೇ ನಾವು ಕೂಡ ಮನುಷ್ಯರೇ ಅಲ್ಲವೇ. ಸ್ಟಾರ್ ಗಿರಿ ಕೊಟ್ಟಿದ್ದು ನೀವೆ, ಅದನ್ನು ಕಿತ್ಕೋಳಿ, ನಮಗೆ ಬೇಡ, ನಾವು ಬಂದು ಮಾತನಾಡುವುದರಿಂದ ಸಮಸ್ಯೆ ಪರಿಹಾರ ಆಗಲ್ಲ ಎಂದಿದ್ದಾರೆ.
ಸರ್ಕಾರಗಳು ಕುಳಿತು ಮಾತನಾಡಿ ಒಂದು ತೀರ್ಮಾನಕ್ಕೆ ಬರಬೇಕು. ರೈತರು ಎಲ್ಲ ಕಡೆಗಳಲ್ಲೂ ಒಂದೇ, ಕುಳಿತು ಮಾತನಾಡಿದರೆ ಪರಿಹಾರ ಸಿಗುತ್ತದೆ, ದಾರಿ ಮೇಲೆ ಹೋಗುವ ಬಸ್ಗೆ ಕಲ್ಲು ಹೊಡೆದರೆ ಅದು ಪ್ರತಿಭಟನೆ ಆಗುತ್ತದೆಯೇ? ಪರಭಾಷೆಯ ಹೀರೋನ ಸುದ್ದಿಗೋಷ್ಠಿ ನಿಲ್ಲಿಸಲಾಯಿತು. ಅದು ತಪ್ಪಲ್ವಾ? ಸುಮ್ಮನೆ ಹೋರಾಟ ಮಾಡಿದ್ರೆ ಪರಿಹಾರ ಸಿಗಲ್ಲ, ಪರಿಸ್ಥಿತಿ ನೋಡಿ ಅಡ್ವಾಂಟೇಜ್ ತೆಗೆದುಕೊಳ್ಳಬಾರದು.
ರೈತರು ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ಮೊದಲು ನಿಲ್ಲಿಸಿ – ಮುಖ್ಯಮಂತ್ರಿ ಸಿದ್ದರಾಮಯ್ಯ
ಇದು ಹೋರಾಟಕ್ಕೆ ಮರ್ಯಾದೆ ಅಲ್ಲ, ಬೇರೆಯವರಿಗೆ ನೋ’ವು ಕೊಡುವ ಕೆಲಸ ಮಾಡಬಹುದು’ ಎಂದು ಕೋರಿದ್ದಾರೆ ಶಿವರಾಜ್ಕುಮಾರ್. ಇಂದು ಕರ್ನಾಟಕದಲ್ಲಿ ತೆಲುಗು ನಟ ಸಿದ್ದಾರ್ಥ್ (apologize to Actor Siddarth) ಅವರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದರು ಅದರ ಬಗ್ಗೆ ಮಾತನಾಡಿದ ಶಿವಣ್ಣ ಎಲ್ಲರ ಪರವಾಗಿ ನಾನು ನಿಮಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಶಿವಣ್ಣ ಅವರ ಈ ಮಾತುಗಳಿಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿತ್ತು ಮುಂದೆ ಶಿವಣ್ಣನ ಗೋಸ್ಟ್ ಪಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಬೇಕಾದ ಕಾರಣ ಮತ್ತು ಜೈಲರ್ ಸಿನಿಮಾದ ಪ್ರಭಾವವಾಗಿ ಶಿವಣ್ಣ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದರೆ, ಕೆಲವರು ಅವರು ಹೇಳುವುದರಲ್ಲಿ ಅರ್ಥವಿದೆ ಎನ್ನುತ್ತಿದ್ದಾರೆ.