ಕೆಲವರು ಟಿವಿ ಪರದೆ ಮೇಲೆ ಎಷ್ಟೇ ವಿಜೃಂಭಣೆಯಿಂದ ಕಾಣಿಸಿಕೊಂಡು ಮನೆಮನೆ ಮಾತಾಗಿದ್ದರೂ ಕೂಡ ಅದ್ಯಾಕೋ ಅವರಿಗೆ ಬೆಳ್ಳಿತೆರೆಯ ಮೇಲೆ ಮೆರೆಯುವ ಅದೃಷ್ಟ ಒಲಿಯುವುದೇ ಇಲ್ಲ. ಇದಕ್ಕೆ ಕನ್ನಡದಲ್ಲಿ ಉದಾಹರಣೆಯಾಗಿ ಜನಪ್ರಿಯ ನಿರೂಪಕಿ ಅನುಶ್ರೀ ಅವರನ್ನು ಉದಾಹರಿಸಬಹುದು.
ಯಾಕೆಂದರೆ ಅನುಶ್ರೀ ಅವರ ಪರಿಚಯ ಇಡೀ ಕರ್ನಾಟಕಕ್ಕೆ ಇದೆ ಮತ್ತು ಯಾವುದೇ ಕಡೆ ಹೀರೋಯಿನ್ ಗೂಶಕಡಿಮೆ ಇಲ್ಲದಂತೆ ಗ್ಲಾಮರ್ ಕೂಡ ಹೊಂದಿದ್ದಾರೆ ಹಾಗೂ ನಟನೆಯಲ್ಲೂ ಕೂಡ ಆ ಬಗ್ಗೆ ಎರಡು ಮಾತಿಲ್ಲ. ಆದರೆ ನಾಯಕನಟಿಯಾಗಿ ಅಭಿನಯಿಸಿರುವುದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ, ಅದು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೌಂಡೇ ಮಾಡಿಲ್ಲ.
ಇದೇ ಸಾಲಿಗೆ ಸೇರುತ್ತಾರೆ ಪಕ್ಕದ ನಾಡಿನ ಜನಪ್ರಿಯ ನಿರೂಪಕಿ ಅನುಸೂಯ ಭಾರದ್ವಾಜ್ (Anusuya Bharadwaj). ತೆಲುಗು ಟಿವಿ ಮಾಧ್ಯಮಗಳಲ್ಲಿ ಜನಪ್ರಿಯ ಆಂಕರ್ (Thelugu Anchor ) ಆಗಿ ಗುರುತಿಸಿಕೊಂಡಿರುವ ಇವರು ನಡೆಸಿಕೊಡುತ್ತಿದ್ದ ಜಬರ್ದಸ್ತ್ (Jabardasth) ಕಾರ್ಯಕ್ರಮದಿಂದಾಗಿ ಜನತೆಗೆ ಇನ್ನಷ್ಟು ಹತ್ತಿರವಾದರು.
ಇವರನ್ನು ಟಿವಿ ಸ್ಕ್ರೀನ್ ಮೇಲೆ ನೋಡಿದಾಗಲೆಲ್ಲ ಅಷ್ಟು ಚೆನ್ನಾಗಿದ್ದಾರಲ್ಲ ಸಿನಿಮಾದಲ್ಲಿ ಹೀರೋಯಿನ್ ಆಗಬಹುದಲ್ಲ ಎನ್ನುವ ಒಂದು ಯೋಚನೆ ಖಂಡಿತವಾಗಿ ಎಲ್ಲ ಪ್ರೇಕ್ಷಕರ ಮನಸ್ಸಿನಲ್ಲಿ ಬರುತ್ತದೆ. ಅದೇ ನಟಿಗೆ ಈ ಬಗ್ಗೆ ಪ್ರಶ್ನೆ ಕೇಳಿದರೆ ನಾನು ಆ ಟೈಪ್ ಅಲ್ಲ ಅದಕ್ಕೆ ನಾಯಕಿಯಾಗಿ ಅವಕಾಶ ಸಿಕ್ಕಿಲ್ಲ ಎನ್ನುವ ಡೇರ್ ಡೆವಿಲ್ ಉತ್ತರಗಳನ್ನು ಕೊಡುತ್ತಾರೆ.
ಈಕೆ ಈ ರೀತಿ ಸ್ಟೇಟ್ಮೆಂಟ್ ಕೊಡುವುದು ಇದೇ ಹೊಸದೇನಲ್ಲ ತಮ್ಮ ಕಾಂಟ್ರವರ್ಸಿ ಹೇಳಿಕೆಗಳಿಂದ ಸದಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ ಈ ಅನಸೂಯ ಭಾರದ್ವಾಜ್. ಈಗ ಅದೇ ರೀತಿ ನಾನು ಆ ಪಾರ್ಟಿಗಳಿಗೆ ಹೋಗಿದ್ದರೆ ನಾನು ಕೂಡ ಟಾಲಿವುಡ್ ನಲ್ಲಿ ಹೀರೋಯನ್ ಆಗಿ ಮಿಂಚುರುತ್ತಿದ್ದೆ ಆದರೆ ನನಗೆ ಅದು ಇಷ್ಟ ಇರಲಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂತೋಷನ ಒಂದರಲ್ಲಿ ಈ ಬಗ್ಗೆ ಮಾತನಾಡಿದ ನಟಿ ನಟನೆ ವಿಚಾರದಲ್ಲಿ ನಾನಾಯ್ತು, ನನ್ನ ಕೆಲಸವಾಯ್ತು ಅಷ್ಟೇ, ಶೂಟಿಂಗ್ ಮುಗಿದ ಬಳಿಕ ಅಲ್ಲಿನ ಯಾವ ಪಾರ್ಟಿಗಳಿಗೂ ನಾನು ಹೋಗುವುದಿಲ್ಲ, ಹಾಗೇ ಕರೆದ ಪಾರ್ಟಿಗಳಿಗೆ ಒಂದು ವೇಳೆ ನಾನು ಹೋಗಿದ್ದರೆ ಇಂದು ನಾನು ನಾಯಕಿಯಾಗಿರುತ್ತಿದ್ದೆ.
ಆದರೆ ಒಂದು ವೇಳೆ ಪಾರ್ಟಿಗೆ ಹೋಗಿ ಅಲ್ಲಿ ನನಗೆ ಅವಕಾಶಗಳು ಸಿಕ್ಕಿದ್ದರೆ ನಾನು ಅದನ್ನು ಸ್ವೀಕರಿಸುತ್ತಿರಲಿಲ್ಲ, ಆದು ನನಗೆ ಬೇಕಿಲ್ಲ. ಹಾಗೇ ಪಾರ್ಟಿಗಳಿಗೆ ಹೋಗಿ ಅಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕರೆ ನಂತರ ಅವರನ್ನು ಪ್ರೋತ್ಸಾಹಿಸುವುದಿಲ್ಲ. ಬಳಿಕ ಅವರನ್ನು ನೋಡುವ ರೀತಿಯೇ ಬೇರೆ ಇರುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಈ ಕಾರಣಗಳಿಂದಾಗಿ ನಾಯಕಿಯಾಗುವ ಸಾಕಷ್ಟು ಅವಕಾಶಗಳನ್ನು ಸ್ವತಃ ಅನಸೂಯಾ ಭಾರದ್ವಾಜ್ ಅವರೇ ಕೈ ಬಿಟ್ಟಿದ್ದಾಗಿ ಹೇಳಿದ್ದಾರೆ. ಹಿಂದೆ ಪವನ್ ಕಲ್ಯಾಣ್ (refuse to act Pavan Kalyana Song) ಅವರ ಅತ್ತಾರೆಂಟಿಕಿ ದಾರೇದಿ ಸಿನಿಮಾದ ಹಾಡಿನಲ್ಲಿ ಭಾಗವಹಿಸುವ ಚಾನ್ಸ್ ಸಿಕ್ಕದ್ದಾಗ ಅದನ್ನು ತಿರಸ್ಕರಿಸಿ ಈಗಾಗಲೇ ಇಬ್ಬರು ಹೀರೋಯಿನ್‌ಗಳಿದ್ದಾರೆ ಎಂದು ಕಾರಣ ಕೊಟ್ಟು ಕಾಂಟ್ರವರ್ಸಿ ಆಗಿದ್ದರು.
ಈಗ ಅದರ ಕುರಿತೂ ಮಾತನಾಡಿ ಚಿತ್ರದ ಅವಕಾಶ ನಿರಾಕರಿಸಿದಾಗ ನನ್ನ ಮೇಲೆ ಸಾಕಷ್ಟು ಟೀಕೆಗಳು ಬಂದವು. ನಾನು ನಿರಾಕರಿಸಿದ್ದು ತಪ್ಪಲ್ಲ ಆದರೆ ಅದನ್ನು ಹೇಳಿದ ರೀತಿ ತಪ್ಪಾಗಿತ್ತತು ಹಾಗಾಗಿ ಆ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ .
ಸದ್ಯಕ್ಕೆ ಈಗ ಅವರು ಟಾಲಿವುಡ್ ವಲಯದಲ್ಲಿ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ ಕಳೆದ ವರ್ಷ ತೆರೆಕಂಡು ಧೂಳೆಬ್ಬಿಸಿದ್ದ ಪುಷ್ಪ (Pushpa) ಸಿನಿಮಾದಲ್ಲೂ ಕೂಡ ಪೋಷಕನಟಿಯಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.