ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 28 ರಂದು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ವಿವಿಧ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮತ್ತು ಗ್ರಂಥ ಲೋಕಾರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು. ಇದರ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈಗಿನ ಕಾಲದಲ್ಲಿ ಮಕ್ಕಳಲ್ಲಿ ಸ್ವಾ’ರ್ಥ ಭಾವನೆ ಹೆಚ್ಚಾಗುತ್ತಿದ್ದೆ, ಮಾನವೀಯ ಮೌಲ್ಯ ಕುಸಿಯುತ್ತಿದೆ ಅದಕ್ಕೆ ಪರೋಕ್ಷವಾಗಿ ಪೋಷಕರು ಕೂಡ ಕಾರಣವಾಗುತ್ತಿದ್ದಾರೆ ಎಂದರು.
ಯಾಕೆಂದರೆ, ಇತ್ತೀಚಿನ ಕಾಲದಲ್ಲಿ ಪೋಷಕರು ತಮ್ಮ ಮಕ್ಕಳನ್ನು ತಮ್ಮ ಜೊತೆ ಇಟ್ಟುಕೊಳ್ಳುವುದು ಕಡಿಮೆ ಆಗುತ್ತಿದೆ. ಅವರಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಅಥವಾ ಇನ್ಯಾವುದೇ ಒಳ್ಳ ಉದ್ದೇಶಕ್ಕಾಗಿಯೇ ಹಾಸ್ಟೆಲ್ ಗಳಿಗೆ ಕಳುಹಿಸಬಹುದು ಆದರೆ ಅವರು ತಂದೆ ತಾಯಿಯ ಜೊತೆ ಕನೆಕ್ಷನ್ ಕಳೆದುಕೊಳ್ಳುತ್ತಾರೆ. ತಮ್ಮನ್ನು ಬೆಳೆಸಲು ತಂದೆ ತಾಯಿ ಎಷ್ಟು ಕ’ಷ್ಟ ಪಟ್ಟಿದ್ದಾರೆ ಎನ್ನುವುದು ಮಕ್ಕಳಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಬೆಳೆದ ಮೇಲೆ ಮಕ್ಕಳು ಕೂಡ ಹೆತ್ತವರನ್ನು ಯಾವುದೇ ಗಿಲ್ಟ್ ಇಲ್ಲದೆ ವೃದ್ದಾಶ್ರಮಕ್ಕೆ ಸೇರಿಸುತ್ತಾರೆ.
ಸೇವಂತಿ ಹೂವಿನ ದರ ಕುಸಿತ, ಬೆಳೆದ ಹೂವನ್ನು ಸ್ವತಃ ತಾನೇ ನಾ-ಶ ಮಾಡಿದ ರೈತ.!
ಇದರ ಜೊತೆ ಜನರು ಸಾಮಾಜಿಕ ಕಳಕಳಿ ಹೆಚ್ಚಿಸಿಕೊಳ್ಳಬೇಕು, ಉತ್ತಮ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕೆಂಬ ಮನಸ್ಸುಗಳು ಹೆಚ್ಚಾಗಬೇಕು ಎಂದರು. ತಾನು ಜನ್ಮ ಕಳೆದುಕೊಂಡರೂ ಮಗುವಿಗೆ ಜನ್ಮ ನೀಡುವ ತ್ಯಾಗಮಯಿ ಈ ಭೂಮಿ ಮೇಲೆ ತಾಯಿ ಮಾತ್ರ. ನಿವು ಜೀವನ ಪರ್ಯಂತ ಏನೇ ಮಾಡಿದರೂ ಆ ತಾಯಿ ಋಣ ತೀರಿಸುವುದು ಸಾಧ್ಯವಾಗುವುಲ್ಲ. ತಾಯಿ ಮಡಿಲು ಜಗತ್ತಿನ ದೊಡ್ಡ ನ್ಯಾಯಾಲಯ ಇದ್ದಂತೆ ಎಂದು ನುಡಿದರು.
ಮಕ್ಕಳನ್ನು ಬಾಲ್ಯದಿಂದಲೇ ತಿದ್ದಿ ತೀಡಿ ಉತ್ತಮ ಸಂಸ್ಕಾರ ನೀಡದಿದ್ದರೆ ಮುಂದೆ ಅವರು ನಿಮ್ಮ ತಪ್ಪುಗಳಿಂದಲೇ ಭ್ರಷ್ಟಾಚಾರಿಗಳಾಗುತ್ತಾರೆ ಕೆಟ್ಟವರಾಗುತ್ತಾರೆ ದಾರಿ ತಪ್ಪುತ್ತಾರೆ ಎಂಬುದನ್ನು ಮರೆಯುವುದು ಬೇಡ. ನನ್ನ ತಾಯಿ ಹಾಲು, ಮೊಸರು ಮಾರಾಟ ಮಾಡಿ ನನಗೆ ವಿದ್ಯಾಭ್ಯಾಸ ಮಾಡಲು ಹಣ ನೀಡುತ್ತಿದ್ದರು, ಅದನ್ನು ಕಣ್ಣಾರೆ ನೋಡಿ ಅರಿತುಕೊಂಡ ನಾನು, ನಾನು ಇರುವವರೆಗೂ ಅದನ್ನು ನೆನೆಸಿಕೊಳ್ಳುತ್ತೇನೆ ಎಂದು ತಮ್ಮ ತಾಯಿ ಮಮತೆಯನ್ನು ಸ್ಮರಿಸಿಕೊಂಡರು.
ತಂದೆ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಎಸ್.ಆರ್ ಬೊಮ್ಮಾಯಿ ಅವರೊಂದಿಗೆ ಕಾರ್ಯನಿರ್ವಹಿಸುತ್ತೇನೆ ಕೋರ್ಟ್ ತೀರ್ಪೊಂದರಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳಿ ತಾಯಿ ಮಹತ್ವ ಸಾರುವ ಸಾಹಿತ್ಯವನ್ನು ಪ್ರಕಟಿಸುತ್ತಿರುವ ಟ್ರಸ್ಟ್ ಕೆಲಸ ಶ್ಲಾಘನೀಯ ಎಂದು ಹೊಗಳಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಮಾತನಾಡಿ, ಇದೊಂದು ಭಾವನಾತ್ಮಕ ಸಮಾರಂಭವಾಗಿದೆ. ವ್ಯಕ್ತಿಯೊಬ್ಬ ತನ್ನ ಜನ್ಮಪೂರ್ವದ ಸಂಬಂಧವನ್ನು ತಾಯಿಯೊಂದಿಗೆ ಮಾತ್ರ ಹೊಂದಲು ಸಾಧ್ಯ.
ತಾಯಿ ಸಂಬಂಧ ದೇವರಿಗಿಂತಲೂ ಮಿಗಿಲಾಗಿದೆ ತಾಯಿ ಅಂತಃ ಕರಣಕ್ಕೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ನನ್ನ ತಾಯಿ ಗಂಗಮ್ಮ ಅವರು ಆಧ್ಯಾತ್ಮಿಕವಾಗಿ ಬಹಳ ಆಳವಾದ ಚಿಂತನೆ ಹೊಂದಿದವರಾಗಿದ್ದರು, ಆಕೆ ಓಬ್ಬ ಮಹಾನ್ ದೇಶಭಕ್ತೆಯಾಗಿದ್ದರು ಎಂದು ತಾಯಿ ಬಗ್ಗೆ ಹೇಳಿಕೊಂಡರು. ಸದ್ಯಕ್ಕೆ ಟ್ರಸ್ಟ್ ಹೆಸರಿನಲ್ಲಿ ಸಾಹಿತ್ಯಿಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಇದೆ. ಮುಖ್ಯವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಚಟುವಟಿಕೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಭರತ ಬೊಮ್ಮಾಯಿ ಅವರೂ ಸಹಾ ಮಾತನಾಡಿ, ನನ್ನ ಅಜ್ಜಿ ಗೆಲುವಿನ ಕಡೆ ಹೋಗುವ ಬದಲು ಜ್ಞಾನದ ಕಡೆ ಹೋಗು ಎಂದು ಹೇಳುತ್ತಿದ್ದರು. ಅವರ ಸರಳತೆ, ಚಿಂತನೆಗಳು ನಮ್ಮ ಇಡೀ ಕುಟುಂಬದ ಮೇಲೆ ಪರಿಣಾಮ ಬೀರಿದ್ದು, ಅವುಗಳ ಪಾಲನೆ ಮಾಡುತ್ತಿದ್ದೇವೆ, ಸದ್ಯಕ್ಕೆ ವಿದ್ಯಾರ್ಥಿ ವೇತನ, ಪುಸ್ತಕಗಳ ನೀಡಿಕೆ ಕಾರ್ಯ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ, ಟ್ರಸ್ಟ್ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನದಾಗಿದೆ ಎಂದರು.