ಕೆಲವು ವರ್ಷಗಳಿಂದ ದೇಶದಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗುತ್ತಲೇ ಇದೆ ಎಂದೇ ಹೇಳಬಹುದು. ಇದರ ಬಗ್ಗೆ ಆಲೋಚನೆಯನ್ನು ಮಾಡಿದ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿಯೊಬ್ಬರ ಕೈಯಲ್ಲಿಯೂ ಅಂದರೆ ದಿನದ 24 ಗಂಟೆಯೂ ಸಹ ಮೊಬೈಲ್ ಫೋನ್ ನಮ್ಮ ಬಳಿಯಲ್ಲಿಯೇ ಇರುತ್ತದೆ.
ಅದೇನಾದರೂ ಕಳೆದು ಹೋದರೆ ನಮಗೆ ಆಗುವ ಟೆನ್ಶನ್ ಅಷ್ಟಿಷ್ಟಲ್ಲ ಇತ್ತೀಚಿನ ದಿನದಲ್ಲಿ ಜನ ಬೆಲೆ ಬಾಳುವಂತಹ ಒಡವೆ ಹಾಳಾದರೂ ಅಷ್ಟು ಯೋಚನೆ ಮಾಡುವುದಿಲ್ಲ. ಬದಲಿಗೆ ಮೊಬೈಲ್ ಫೋನ್ ಕಳೆದು ಹೋದರೆ ಹೆಚ್ಚಿನ ಚಿಂತೆಯನ್ನು ಮಾಡುತ್ತಾರೆ. ಏಕೆ ಎಂದರೆ ಅದು ಹೆಚ್ಚಿನ ಬೆಲೆ ಬಾಳುತ್ತದೆ ಎನ್ನುವಂತಹ ವಿಷಯ ಅಲ್ಲ ಬದಲಿಗೆ ಅದರಲ್ಲಿರುವಂತಹ ನಮ್ಮ ಸಂಬಂಧಿಕರ ಹಾಗೂ ಮುಖ್ಯವಾದಂತವರ ಸಂಖ್ಯೆಗಳು.
ನಮ್ಮ ಪ್ರೀತಿ ಪಾತ್ರರ ಜೊತೆ ತೆಗೆಸಿಕೊಂಡಿರುವಂತಹ ಫೋಟೋಗಳು, ಮತ್ತು ನಮ್ಮ ಕೆಲವೊಂದಷ್ಟು ಬ್ಯಾಂಕ್ ವಿಚಾರಕ್ಕೆ ಸಂಬಂಧಿಸಿದಂತಹ ಮಾಹಿತಿಗಳಾಗಿರಬಹುದು ಅಥವಾ ಎಲ್ಲಾ ರೀತಿಯಾದಂತಹ ವಿಚಾರಗಳನ್ನು ಸಹ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ನಲ್ಲಿ ಇಟ್ಟುಕೊಂಡಿರುತ್ತಾರೆ ಆ ಮಾಹಿತಿಗಳು ಸೋರಿಕೆಯಾಗುತ್ತದೆ ಎನ್ನುವ ಭಯದಿಂದ ಪ್ರತಿಯೊಬ್ಬರು ಹೆಚ್ಚು ಆತಂಕವನ್ನು ಪಡುತ್ತಾರೆ.
ಆದರೆ ಇನ್ನು ಮುಂದೆ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಭಯಪಡುವ ಅಗತ್ಯವಿಲ್ಲ. ಏಕೆ ಎಂದರೆ ಕೇಂದ್ರ ಸರ್ಕಾರವು ಕಳೆದು ಹೋದಂತಹ ಅಥವಾ ಕದ್ದಂತಹ ಫೋನ್ ಅನ್ನು ಪತ್ತೆ ಮಾಡಿ ಆ ವ್ಯಕ್ತಿಗೆ ಕೊಡಿಸುತ್ತದೆ. ಈ ಮೊಬೈಲ್ ಫೋನ್ ಅನ್ನು ಹಲವಾರು ವಿಧಾನಗಳನ್ನು ಅನುಸರಿಸು ವುದರ ಮೂಲಕ ಕಳ್ಳರು ಫೋನ್ ಅನ್ನು ಕದಿಯಬಹುದು. ಅದರಲ್ಲೂ ಬಸ್ ನಲ್ಲಿ ಪ್ರಯಾಣ ಮಾಡುವಂತಹ ಸಮಯದಲ್ಲಿ ನಮಗೆ ತಿಳಿಯದ ಹಾಗೆ ಕಳ್ಳರು ನಮ್ಮ ಮೊಬೈಲ್ ಫೋನ್ ಕದಿಯುತ್ತಾರೆ.
ಅದೇ ರೀತಿ ಯಾಗಿ ನೀವೇನಾದರೂ ಜಾತ್ರೆ ಅಥವಾ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಹೋದಂತಹ ಸಮಯದಲ್ಲಿ ನಿಮ್ಮ ಜೇಬಿನ ಒಳಗಡೆ ಕೈ ಹಾಕಿ ನಿಮಗೆ ತಿಳಿಯದ ಹಾಗೆಯೇ ಕಳ್ಳರು ನಿಮ್ಮ ಮೊಬೈಲ್ ಫೋನ್ ಹಾಗೂ ಹಣಕಾಸು ಕದಿಯುತ್ತಾರೆ. ಹೀಗೆ ಯಾವುದೇ ರೀತಿಯಾಗಿ ನಿಮ್ಮ ಮೊಬೈಲ್ ಫೋನ್ ಕಳ್ಳತನವಾಗಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಹೌದು ಅದು ಹೇಗೆ ಪತ್ತೆ ಹಚ್ಚಬಹುದು ಎನ್ನುವಂತಹ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಅದಕ್ಕೆ ಉತ್ತರವನ್ನು ಈ ಕೆಳಗಿನಂತೆ ತಿಳಿಯೋಣ. ಈಗ ಮೊದಲೇ ಹೇಳಿದಂತೆ ಇತ್ತೀಚಿನ ದಿನದಲ್ಲಿ ನಾವು ಎಲ್ಲಾ ಮಾಹಿತಿ ಯನ್ನು ಸಹ ಮೊಬೈಲ್ ಫೋನ್ ನಲ್ಲಿಯೇ ಇಡುತ್ತೇವೆ. ಹಾಗಾಗಿ ಅದೇನಾದರೂ ಹಾಳಾದರೆ ಅಥವಾ ಬೇರೆಯವರು ಕದ್ದಿದ್ದರೆ ಅದು ನಮಗೆ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.
ಹಾಗಾಗಿ ಈ ಒಂದು ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿ ಸಿದೆ. ಹೌದು ಇದು ನಿಮಗೆ ಅನುಕೂಲವಾಗುತ್ತದೆ ಎಂದೇ ಹೇಳಬಹು ದು. ಹೇಗೆ ಎಂದರೆ ನಿಮ್ಮ ಕಳೆದು ಹೋದಂತಹ ಫೋನ್ ಅನ್ನು ಈ ಪೋರ್ಟಲ್ ಸಹಾಯದಿಂದ ಸುಲಭವಾಗಿ ಮರಳಿ ಪಡೆಯಬಹುದು. ಕಳ್ಳತನ ಹೆಚ್ಚಾಗುತ್ತಿದೆ ಎನ್ನುವ ಉದ್ದೇಶದಿಂದ ಹೊಸದಾಗಿ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಲಾಗಿದೆ. ಜನರ ಕದ್ದ ವಸ್ತು ಗಳನ್ನು ಹುಡುಕುವುದೇ ಇದರ ಮುಖ್ಯ ಉದ್ದೇಶ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.