ನಮಸ್ಕಾರ ಸ್ನೇಹಿತರೆ ಇಂದಿನ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಲ್ಲದಕ್ಕೂ ಮುಖ್ಯವಾಗಿ ಬೇಕಾದಂತಹ ದಾಖಲಾತಿಯಾಗಿದೆ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ನಿಮ್ಮ ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡನ್ನು ನೀವು ಮನೆಯಲ್ಲಿಯೇ ಕುಳಿತುಕೊಂಡು ಮಾಡಿಸಿಕೊಳ್ಳಬಹುದು ಹಾಗೆಯೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯಾದಂತಹ ಬದಲಾವಣೆ ಮಾಡಿಸಬೇಕಾದರೆ ನೀವು ಮೊಬೈಲ್ ನಲ್ಲಿಯೇ ಮಾಡಬಹುದು.
ಇಂಡಿಯನ್ ಪೋಸ್ಟ್ ವೆಬ್ಸೈಟ್ ಮೂಲಕ ನೀವು ಈ ಒಂದು ಕೆಲಸವನ್ನು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು. https://CCC.gov.in/ServiceReques ಈ ಒಂದು ವೆಬ್ಸೈಟ್ನನ್ನು ನೀವು ಓಪನ್ ಮಾಡಿದರೆ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿಸಿಕೊಳ್ಳಬಹುದು. ನಿಮ್ಮ ಹೆಸರು ನಿಮ್ಮ ಅಡ್ರೆಸ್ ಪಿನ್ ಕೋಡ್ ಇಮೇಲ್ ಅಡ್ರೆಸ್ ಮೊಬೈಲ್ ನಂಬರ್ ಅಪ್ಲಿಕೇಶನ್ ನಲ್ಲಿ ಈ ಎಲ್ಲಾವನ್ನು ನೀವು ತುಂಬಿಸಬೇಕು ನಂತರ ಇಲ್ಲಿ IPPB ಆಧಾರ್ ಸರ್ವಿಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಕೆಳಗೆ ನಿಮಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಬೇಕಾ ಅಥವಾ ಇನ್ನಿತರ ಯಾವುದೇ ಬದಲಾವಣೆಯನ್ನು ಮಾಡಿಸಬೇಕಾ ಇಲ್ಲವಾದರೆ ನಿಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕೆ ಎಂಬ ಮಾತಿ ಮಾಹಿತಿಯನ್ನು ಕೆಳಗಿನ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು. ಆಧಾರ್ ಸೆಂಟರ್ ಗೆ ಹೋಗುವಂತಹ ಅವಶ್ಯಕತೆ ಇಲ್ಲ ಈ ಒಂದು ಫಾರ್ಮೆಟ್ ಅನ್ನು ತುಂಬಿದರೆ ಸಾಕು ನಿಮ್ಮ ಮನೆಯ ಬಾಗಿಲಿಗೆ ಬಂದು ನಿಮ್ಮ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಕೊಡುತ್ತಾರೆ ಹಾಗೆ ಮಕ್ಕಳ ಆಧಾರ್ ಕಾರ್ಡನ್ನು ಬಯೋಮೆಟ್ರಿಕ್ ಮೂಲಕ ಮಾಡಿಕೊಡಲಾಗುತ್ತದೆ.
ನೀವು ಫಾರ್ಮೆಟ್ ತುಂಬಿಸುವಾಗ ನೀಡಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬಂದಿರುತ್ತದೆ. ಆ ಒಟಿಪಿಯನ್ನು ನೀವು ಎಂಟರ್ ಮಾಡಿಕೊಂಡು ಕನ್ಫರ್ಮ್ ಸರ್ವಿಸ್ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ. ನೀವು ಕಳಿಸಿರುವಂತಹ ರಿಕ್ವೆಸ್ಟ್ ಸಕ್ಸಸ್ ಫುಲ್ ಆಗಿದ್ದರೆ ರೆಫರೆನ್ಸ್ ನಂಬರ್ ಬರುತ್ತದೆ ಈ ನಂಬರನ್ನು ನೀವು ಕಾಪಿ ಮಾಡಿ ಇಟ್ಟುಕೊಳ್ಳಬೇಕು ಅಥವಾ ಒಂದು ಬುಕ್ನಲ್ಲಿ ಬರೆದು ಇಟ್ಟುಕೊಳ್ಳಬೇಕು. ಅರ್ಜಿ ಹಾಕಿರುವಂತಹ ಸ್ಟೇಟಸ್ ಚೆಕ್ ಮಾಡಬೇಕು ಎಂದರೆ ನೀವು ಟ್ರ್ಯಾಕ್ ಯುವರ್ ಆಧಾರ್ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ನೀಡಿರುವಂತಹ ಮೊಬೈಲ್ ನಂಬರ್ ಅಥವಾ ರೆಫರೆನ್ಸ್ ನಂಬರನ್ನು ಹಾಕಿ ಪ್ಯಾಚ್ ಮೇಲೆ ಕ್ಲಿಕ್ ಮಾಡಿದರೆ ನೀವು ಸಲ್ಲಿಸಿರುವಂತಹ ಅರ್ಜಿಯ ಸ್ಟೇಟಸ್ ನಿಮಗೆ ಸಂಪೂರ್ಣವಾಗಿ ನೋಡಬಹುದು.
ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ನೀವು ಕೊಟ್ಟಿರುವಂತಹ ನಿಮ್ಮ ಮನೆಯ ಅಡ್ರೆಸ್ ಗೆ ಒಬ್ಬ ವ್ಯಕ್ತಿಯನ್ನು ಕಳುಹಿಸಿ ಕೊಡುತ್ತಾರೆ. ಅವರು ಬಂದು ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ನಿಮ್ಮ ಮನೆಯಲ್ಲಿರುವ ಐದು ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮೂಲಕ ಮಾಡುವುದು ನಿಮ್ಮ ಸಂಪೂರ್ಣವಾದ ಕೆಲಸವನ್ನು ಅವರು ಮಾಡಿ ಕೊಟ್ಟು ಹೋಗುತ್ತಾರೆ.
ನೀವು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಬೇಕಾದರೆ ಯಾವುದೇ ರೀತಿಯ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂದರೆ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಅದರ ಜೊತೆಯಲ್ಲಿ ಮಗುವಿನ ಜನನ ಪ್ರಮಾಣದ ಪತ್ರವನ್ನು ನೀವು ನೀಡಬೇಕಾಗುತ್ತದೆ ಈ ಮುಖಾಂತರ ನೀವು ಆಧಾರ್ ಕಾರ್ಡನ್ನು ಮನೆಯಲ್ಲಿಯೇ ಕುಳಿತು ತಿದ್ದುಪಡಿ ಮಾಡಿಕೊಳ್ಳಬಹುದು. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.