ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಚಿನ್ನಕ್ಕೆ ಒಂದು ವಿಶೇಷ ಸ್ಥಾನವನ್ನೇ ನೀಡಿದ್ದಾರೆ. ದೇಶದಲ್ಲಿ ಶುಭ ಸಮಾರಂಭಗಳು ಹೆಚ್ಚುತ್ತಿರುವಂತೆ ಆಭರಣ ಪ್ರಿಯರ ಸಂಖ್ಯೆಯೂ ಸಹ ಹೆಚ್ಚುತ್ತಲೆ ಇದೆ ಮಹಿಳೆಯರು ಆಭರಣ ಪ್ರಿಯರಾಗಿದ್ದು ಈ ಕಾರಣಕ್ಕಾಗಿ ಅವರು ಹಲವಾರು ಒಡವೆ, ಚಿನ್ನಗಳನ್ನು ಕೊಂಡುಕೊಳ್ಳುತ್ತಾ ಇರುತ್ತಾರೆ ಆದರೆ ಇದೀಗ ಸರ್ಕಾರದ ಹೊಸ ನಿಯಮ ಕೇಳಿದರೆ ಆಭರಣ ಪ್ರಿಯರಿಗೆ ಸ್ವಲ್ಪ ಬೇಸರ ಉಂಟಾಗುತ್ತದೆ.
ಕೆಲವರು ಮನೆಯಲ್ಲಿ ಹಣ ಇಡುವುದು ಸೇಫ್ ಅಲ್ಲ ಎನ್ನುವ ಕಾರಣಕ್ಕಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿರುತ್ತಾರೆ. ಇನ್ನೂ ಕೆಲವರು ಚಿನ್ನದ ಬೆಲೆ ಏರುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕಾಗಿ ಚಿನ್ನದ ಮೇಲೆ ಹಣವನ್ನು ಖರ್ಚು ಮಾಡಿ ಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಪುರುಷರಿಗಿಂತ ಮಹಿಳೆಯರಿಗೆ ಚಿನ್ನಾಭರಣಗಳ ಮೇಲೆ ಹೆಚ್ಚು ಒಲವು ಇದ್ದು ಎಷ್ಟೇ ಚಿನ್ನಾಭರಣ ಇದ್ದರೂ ಸಹ ಮಹಿಳೆಯರಿಗೆ ಸಾಲುವುದಿಲ್ಲ.
ಹಬ್ಬಗಳಲ್ಲಿ ಚಿನ್ನಾಭರಣ ಕೊಂಡುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿ ಚಿನ್ನವನ್ನು ಭಾರತೀಯರು ಖರೀದಿಸುತ್ತಾರೆ ಆದರೆ ಚಿನ್ನವನ್ನು ಇನ್ನೂ ಯಥೇಚ್ಛವಾಗಿ ಖರೀದಿಸುವಂತಿಲ್ಲ ಕಾರಣ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸರ್ಕಾರದಿಂದ ಇಂತಿಷ್ಟು ಲಿಮಿಟೆಡ್ ಎಂಬ ಅಧಿಸೂಚನೆ ಬಂದಿದೆ ಅಷ್ಟು ಮಾತ್ರ ಇಟ್ಟುಕೊಳ್ಳಬಹುದು ಅದಕ್ಕಿಂತ ಜಾಸ್ತಿ ಇಟ್ಟುಕೊಂಡರೆ ಸರ್ಕಾರಕ್ಕೆ ನಾವು ದಾಖಲೆ ನೀಡಬೇಕು ಇಲ್ಲವಾದರೆ ಅಧಿಕ ಚಿನ್ನವನ್ನು ಇಟ್ಟುಕೊಂಡರೆ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಹಾಗಾದರೆ ಮನೆಯಲ್ಲಿ ನಾವು ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ.
ಭವಿಷ್ಯದಲ್ಲಿ ಬರುವಂತಹ ಕೆಲವೊಂದು ಸಮಸ್ಯೆಗಳಿಗೆ ಉಪಯೋಗ ಆಗುತ್ತದೆ ಎನ್ನುವಂತಹ ಕಾರಣದಿಂದ ಹಲವಾರು ಕುಟುಂಬದವರು ಚಿನ್ನಾಭರಣಗಳನ್ನು ಖರೀದಿಸಿ ಮನೆಯಲ್ಲಿ ಇಡುತ್ತಾರೆ ಕಷ್ಟ ಎಂದು ಬಂದಾಗ ಅದನ್ನು ಅಡವಿಟ್ಟು ಹಣ ಪಡೆದುಕೊಳ್ಳುತ್ತಾರೆ ಚಿನ್ನವನ್ನು ನಾಣ್ಯಗಳು, ಆಭರಣಗಳು ಅಥವಾ ಕಾಗದದ ರೂಪದಲ್ಲಿ ನೀಡಬಹುದು ಅಥವಾ ಚಿನ್ನದ ವಿನಿಮಯ ವಹಿವಾಟು ನಿಧಿಗಳ ರೂಪದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಚಿನ್ನದ ಸಾರ್ವಭೌಮ ಚಿನ್ನದ ಬಾಂಡುಗಳು ನೀಡಬಹುದು ಮ್ಯೂಚುವಲ್ ಫಂಡ್ ಗಳು ಇತ್ಯಾದಿ ಮೂಲಕ ಖರೀದಿ ಮಾಡಬಹುದು. ಭಾರತೀಯ ಕುಟುಂಬಗಳು ಚಿನ್ನವನ್ನು ಖರೀದಿಸಿದರು ಸಹ ಅವರು ಎಷ್ಟು ಚಿನ್ನವನ್ನು ಹೊಂದಬಹುದು ಎಂಬ ಕಾನೂನನ ಮಿತಿಗಳ ಬಗ್ಗೆ ಎಲ್ಲರೂ ಗಮನವಿಟ್ಟು ತಿಳಿದುಕೊಳ್ಳಬೇಕು ನಮ್ಮ ದೇಶದಲ್ಲಿ 1968ರಲ್ಲಿ ಚಿನ್ನದ ನಿಯಂತ್ರಣ ಕಾಯ್ದೆಯನ್ನು ಸ್ಥಾಪಿಸಲಾಯಿತು.
ಈ ಕಾನೂನಿನ ಅಡಿಯಲ್ಲಿ ನಾಗರಿಕರು ನಿರ್ದಿಷ್ಟ ಪ್ರಮಾಣಕ್ಕಿಂತ ಚಿನ್ನವನ್ನು ಹೊಂದುವುದನ್ನು ನಿಷೇಧಿಸಲಾಯಿತು. ಆದರೂ ಕೂಡ ಈ ಕಾಯ್ದೆಯನ್ನು 1990ರಲ್ಲಿ ರದ್ದುಗೊಳಿಸಲಾಯಿತು. ಪ್ರಸ್ತುತವಾಗಿ ಭಾರತದಲ್ಲಿ ಚಿನ್ನದ ಪ್ರಮಾಣಕ್ಕಿಂತ ಯಾವುದೇ ನಿರ್ಬಂಧವಿಲ್ಲ ಆದರೆ ಹೊಂದಿರುವವರು ಮಾನ್ಯವಾದ ಮೂಲ ಮತ್ತು ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಆಸ್ತಿಯನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಟ್ರೇಡ್ ಸ್ಮಾರ್ಟ್ ಅಧ್ಯಕ್ಷ ವಿಜಯ್ ಸಿಂಗಾನಿಯ ಮಾಧ್ಯಮ ವರದಿ ತಿಳಿಸಿದ್ದಾರೆ. ಈ ಸೂಚನೆಯ ಪ್ರಕಾರ ವ್ಯಕ್ತಿಯ ಲಿಂಗ ಮತ್ತು ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಒಂದು ನಿರ್ದಿಷ್ಟ ಮಟ್ಟಿಗೆ ಆಭರಣಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುವುದಿಲ್ಲ.
ವಿವಾಹಿತ ಮಹಿಳೆಯರ ಬಳಿ 500 ಗ್ರಾಂ ಮತ್ತು ಅವಿವಾಹಿತ ಮಹಿಳೆಯರು 250 ಗ್ರಾಂ ವರೆಗೆ ಚಿನ್ನವನ್ನು ಕಾಗದಗಳಿಲ್ಲದೆ ಇಡಬಹುದು. ಕುಟುಂಬದ ಪ್ರತಿಯೊಬ್ಬ ಪುರುಷ ಸದಸ್ಯರಿಗೆ ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ 100 ಗ್ರಾಂ ಮಿತಿಯನ್ನು ನಿಗದಿಪಡಿಸಿದೆ ಈ ಮಟ್ಟಿಗೆ ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭದಲ್ಲಿಯೂ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ. ಮದುವೆಯಾದ ಮಹಿಳೆಯರಿಗೆ 500 ಗ್ರಾಂ, ಅವಿಭಾಹಿತ ಮಹಿಳೆಯರಿಗೆ 250 ಗ್ರಾಂ, ಮತ್ತು ಪ್ರತಿಪುರುಷರಿಗೆ 100 ಗ್ರಾಂ ನಂತೆ ಸರ್ಕಾರ ನಿಗದಿಪಡಿಸಿದ್ದು. ಇದಕ್ಕಿಂತ ಅಧಿಕ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಯಾವುದೇ ಕಾಗದ ಪತ್ರಗಳ ಆಧಾರ ಇಲ್ಲದಿದ್ದರೆ ಅಂತಹ ಚಿನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಚಿನ್ನಾಭರಣಗಳನ್ನು ಖರೀದಿ ಮಾಡಬೇಕು. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.