ಮ್ಯಾರೇಜ್ ಸರ್ಟಿಫಿಕೇಟ್ ಗಾಗಿ ನಾವು ಕಚೇರಿಗಳಿಗೆ ಅಲೆಯ ಬೇಕಿಲ್ಲ ಆನ್ ಲೈನ್ ಯುಗ ಆಗಿರುವುದರಿಂದ ಎಲ್ಲವೂ ಸಹ ನಾವು ಆನ್ಲೈನ್ ಮುಖಾಂತರವೇ ಪಡೆದುಕೊಳ್ಳಬಹುದಾಗಿದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಈಗ ಡಿಜಿಟಲಿಕರಣ ಆಗಿರುವುದರಿಂದ ಆನ್ಲೈನ್ ನ ಮೂಲಕ ನಾವು ಪ್ರತಿಯೊಂದು ಕೆಲಸವನ್ನು ಸಹ ನಿರ್ವಹಿಸಬಹುದು ಉದ್ಯೋಗಗಳಿಗೆ ಅರ್ಜಿ ಹಾಕುವುದು ಬ್ಯಾಂಕಿಂಗ್ ಕೆಲಸಗಳು ಹಾಗೆ ಶಾಪಿಂಗ್, ಫುಡ್ ಗೆ ಸಂಬಂಧಪಟ್ಟ ಹಾಗೆ ಯಾವುದೇ ಕೆಲಸಗಳನ್ನು ಸಹ ಇದೀಗ ನಾವು ಆನ್ಲೈನ್ ಮುಖಾಂತರ ನಡೆಸಬಹುದಾಗಿದೆ.
ದಿನದಂದ ದಿನಕ್ಕೆ ಆನ್ಲೈನ್ ಮುಖಾಂತರವೇ ತಂತ್ರಾಂಶಗಳ ಬಳಕೆ ಮಾಡಿಕೊಂಡು ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುತ್ತಿದ್ದಾರೆ ಸರ್ಕಾರ ಇದೀಗ ಹೊಸ ಯೋಜನೆ ಯನ್ನು ಆನ್ಲೈನ್ ಮುಖಾಂತರ ಅರ್ಜಿ ಹಾಕಲು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ ಹೌದು ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಮೊದಲು ರಿಜಿಸ್ಟರ್ ಆಫೀಸ್ ನಲ್ಲಿ ಪಡೆ ಹೋಗಿ ಪಡೆದುಕೊಳ್ಳಬೇಕಾಗಿತ್ತು. ರಿಜಿಸ್ಟರ್ ಆಫೀಸ್ ನಲ್ಲಿ ಮೊದಲು ಅರ್ಜಿಯನ್ನು ಸಲ್ಲಿಸಿ ನಂತರ ಕೆಲ ದಿನಗಳ ನಂತರ ಮ್ಯಾರಿಯಸ್ ಸರ್ಟಿಫಿಕೇಟ್ ನಮ್ಮ ಕೈ ಸೇರುತ್ತಿತ್ತು
ಆದರೆ ಇದೀಗ ಆನ್ಲೈನ್ ಮುಖಾಂತರ ರಿಜಿಸ್ಟರ್ ಮಾಡಿಕೊಂಡು ಈ ಪ್ರಮಾಣ ಪತ್ರ ಪಡೆಯಬಹುದು ಕಾವೇರಿ ಆನ್ಲೈನ್ ಸೇವೆಗಳು ಎನ್ನುವ ಆನ್ಲೈನ್ ಪೋರ್ಟಲ್ ಅನ್ನು ಇದೀಗ ಸರ್ಕಾರ ಪ್ರಾರಂಭ ಮಾಡಿದೆ. ಕಾವೇರಿ ಆನ್ಲೈನ್ ಸೇವೆಯು ವೆಬ್ ಆಧಾರಿತ ಅಪ್ಲಿಕೇಶನ್ ಆಗಿದ್ದು ಇದನ್ನು ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆ ಮತ್ತು ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸಿದೆ.
ನಾನ ಕ್ಷೇತ್ರಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಗಳನ್ನು ಕೇಳಲಾಗುತ್ತದೆ ಮ್ಯಾರೇಜ್ ಸರ್ಟಿಫಿಕೇಟ್ ತುಂಬಾ ಅವಶ್ಯಕವಾಗಿ ಬೇಕಾಗಿರುವಂತಹ ದಾಖಲೆಗಳಲ್ಲಿ ಒಂದಾಗಿದೆ ನಿಮಗೆ ತಕ್ಷಣವೇ ಮ್ಯಾರೀಡ್ ಸರ್ಟಿಫಿಕೇಟ್ ನ ಅವಶ್ಯಕತೆ ಇದೆ ಎಂದರೆ ಆನ್ಲೈನ್ ಮೂಲಕ ಇದನ್ನು ನೀವು ಪಡೆಯಬಹುದು ಜೋಡಿಗಳಿಗೆ ಅನುಕೂಲ ವಾಗುವಂತಹ ಸೇವೆಯನ್ನು ಇದೀಗ ಸರ್ಕಾರ ಜಾರಿಗೆ ತಂದಿದೆ. ಆನ್ಲೈನ್ ನಲ್ಲಿ ಹೇಗೆ ರಿಜಿಸ್ಟರ್ ಮಾಡಿಕೊಳ್ಳಬೇಕು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಹಾಗೆಯೆ ಬೇಕಾಗಿರುವಂತಹ ಮುಖ್ಯ ದಾಖಲಾತಿಗಳ ಕುರಿತಾಗಿ ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ.
ವಿವಾಹ ನೊಂದಣಿಗೆ ಇರುವ ಅರ್ಹತ ಮಾನದಂಡಗಳು ಈ ಕೆಳಕಂಡಂತಿವೆ
*ವಧುವಿನ ವಯಸ್ಸು 18 ವರ್ಷ ಪೂರ್ಣವಾಗಿರಬೇಕು
*ವರನ ವಯಸ್ಸು 21 ವರ್ಷಕ್ಕಿಂತ ಹೆಚ್ಚು ಆಗಿರಬೇಕು
*ದಂಪತಿಗಳು ಭಾರತದ ಪ್ರಜೆಯಾಗಿದ್ದು ಕರ್ನಾಟಕದ ನಿವಾಸಿಗಳಾಗಿರಬೇಕು
ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು
*ಭರ್ತಿ ಮಾಡಲಾದ ಹಾಗೂ ವಧು ವರರಿಂದ ಸಹಿ ಮಾಡಿದ ಅರ್ಜಿ ನಮೂನೆ
*ಮದುವೆಯ ಆಮಂತ್ರಣ ಪತ್ರಿಕೆ.
*ನಿವಾಸ ಪುರಾವೆಗೆ ವಧು ಮತ್ತು ವರನ ವೋಟರ್ ಐಡಿ ಪಾಸ್ಪೋರ್ಟ್ ಡ್ರೈವಿಂಗ್ ಲೈಸೆನ್ಸ್ ಟೆಲಿಫೋನ್ ಬಿಲ್ ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿಗಳಲ್ಲಿ ಒಂದು
*ವರ ಮತ್ತು ವಧುವಿನ ವಯಸ್ಸಿನ ಪುರಾವೆಗೆ 10ನೇ ತರಗತಿಯ ಅಂಕಪಟ್ಟಿ ಅಥವಾ ವಧು ಮತ್ತು ವರನ ಪಾಸ್ಪೋರ್ಟ್ ಅಳತೆಯ ಫೋಟೋಗಳು
*ವಧು ಮತ್ತು ವರನ ವೈಯಕ್ತಿಕ ವಿವಾಹದ ಅಫಿಡೆವಿಟ್ ಗಳನ್ನು ನಿದರ್ಶಿಸಿದ ಸ್ವರೂಪದಲ್ಲಿ ಸಲ್ಲಿಸಬೇಕು
*ಮದುವೆ ಸಮಾರಂಭದ ಎರಡು ಫೋಟೋಗಳು ಮದುವೆಯ ನಂತರ ವಧು ತನ್ನ ಹೆಸರನ್ನು ಬದಲಾಯಿಸಿದರೆ ಅದರ ಅಫಿಡವಿಟ್ ವದುವಿನ ಹೆಸರು ಬದಲಾವಣೆಯ ಸುದ್ದಿಯನ್ನು ಘೋಷಿಸಿದ ಪ್ರಕಟಣೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
*ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಪೋರ್ಟಲ್ ಅಂದರೆ https://kaverionline.karnataka.gov.in/ ಗೆ ಭೇಟಿ ನೀಡಬೇಕು .
*ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿ.
*ನೀವು ಹೊಸ ಬಳಕೆದಾರರಾಗಿದ್ದಾರೆ ಮೊದಲು ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಿ,
*ಹೊಸ ಬಳಕೆದಾರರಿಗೆ ನೊಂದಾಯಿಸಿ ಎಂಬ ಲಿಂಕನ್ನು ಕ್ಲಿಕ್ ಮಾಡಿ ನೋಂದಣಿ ಫಾರ್ಮ್ ನಿಮ್ಮ ಸ್ಕ್ರೀನ್ ಮೇಲೆ ಪ್ರದರ್ಶಿಸುತ್ತದೆ ಅಲ್ಲಿ ಕೇಳುವಂತಹ ಎಲ್ಲ ಮಾಹಿತಿಯನ್ನು ಫಿಲ್ ಮಾಡಿ ನಂತರ ಲಾಗಿನ್ ಮಾಡಿ.
ಮದುವೆ ನೋಂದಣಿ ಪ್ರಮಾಣ ಪತ್ರದಲ್ಲಿ ವಧು ಮತ್ತು ವರನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ ನಿಗದಿತ ದಿನಾಂಕದಂದು ನೀವು ಅಗತ್ಯವಿರುವ ಸಾಕ್ಷಿ ಮತ್ತು ಮೂಲ ದಾಖಲೆಗಳೊಂದಿಗೆ ರಿಜಿಸ್ಟರ್ ಗೆ ಭೇಟಿ ನೀಡಬೇಕು ದಂಪತಿಗಳು ಮತ್ತು ಸಾಕ್ಷಿ ತಮ್ಮ ಮದುವೆಯ ನೋಂದಣಿಗೆ ಸಹಿ ಹಾಕಬೇಕು ಕೆಲವೇ ದಿನಗಳಲ್ಲಿ ಆ ದಂಪತಿಗಳಿಗೆ ಕರ್ನಾಟಕ ವಿವಾಹ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.