ಸ್ನೇಹಿತರೆ ಇತ್ತೀಚಿನ ಆಹಾರ ಪದ್ಧತಿಯಿಂದ ಅಥವಾ ಕೆಲಸದ ಒತ್ತಡದಿಂದ ಇರಬಹುದು ನಾವು ಬಳಸುತ್ತಿರುವ ರಾಸಾಯನಿಕ ಆಹಾರ ಪದಾರ್ಥಗಳಿಂದ ಇರಬಹುದು ಎಲ್ಲಾ ತರಹದ ಕಾಯಿಲೆಗಳು ಮನುಷ್ಯರನ್ನು ಆವರಿಸುತ್ತಿದೆ ಉದಾಹರಣೆಗೆ ಆಸಿಡಿಟಿ, ಕಿಡ್ನಿಗಳಲ್ಲಿ ಕಲ್ಲುಗಳು, ಡಯಾಬಿಟೀಸ್, ರಕ್ತದೊತ್ತಡ ಮನುಷ್ಯರನ್ನು ಕಾಡುತ್ತಿದೆ.
ಇಂದು ನಾವು ಸ್ನೇಹಿತರೆ ಗ್ಯಾಸ್ಟಿಕ್ ಸಮಸ್ಯೆ ಮಲಬದ್ಧತೆ ಸಮಸ್ಯೆಗೆ ಪರಿಹಾರ ಒಂದನ್ನು ತಿಳಿಸಿಕೊಡದಿದ್ದೇವೆ.
ನಾವು ಹೇಳುವ ಮನೆಮದ್ದನ್ನು ಮಾಡಿದರೆ ಸಾಕು ನಮ್ಮ ದೇಹದಲ್ಲಿ ಇರುವ ಎಷ್ಟೋ ಕಾಯಿದೆಗಳು ನಮ್ಮಿಂದ ದೂರ ಉಳಿಯುತ್ತವೆ ಹಾಗಾದರೆ ತಡ ಏಕೆ ಸ್ನೇಹಿತರೆ ವಿಶೇಷವಾದ ಕಾಯಿ ಒಂದರ ಕುರಿತು ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ. ಇನ್ನು ನಾವು ಇಂದು ತಿಳಿಸಿಕೊಡುತ್ತಿರುವ ಈ ಕಾಯಿ ಸರ್ವ ರೋಗಕ್ಕೂ ಮದ್ದು ಇದನ್ನು ಬಳಸುವುದರಿಂದ ಎಲ್ಲಾ ರೋಗಕ್ಕೂ ನಮ್ಮಿಂದ ದೂರ ಆಗುತ್ತವೆ. ನಮ್ಮ ದೇಹದಲ್ಲಿ ಬಲಹೀನತೆ ಇರಲಿ ರಕ್ತ ಹೀನತೆ ಇರಲಿ, ಇನ್ಯಾವುದೇ ಸಮಸ್ಯೆ ಇದ್ದರೂ ಇದು ಈ ಕಾಯಿಯು ಅದಕ್ಕೆ ರಾಮ ಬಾಣವಾಗುತ್ತದೆ.
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. ಅದೇ ಈ ನಮ್ಮ ಅಳಲೆಕಾಯಿ ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, ಅಸ್ತಮಾ, ಮೂಲವ್ಯಾಧಿ, ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು.
ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮ ತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ. ಮಲಭದ್ದತೆಯಲ್ಲಿ ಇದರ ಚೂರ್ಣವನ್ನು ಬೆಲ್ಲದೊಂದಿಗೆ ಅಥವಾ ಶುಂಠಿ ಚೂರ್ಣದೊಂದಿಗೆ ನೀಡುತ್ತಾರೆ. ವಾಂತಿಯಲ್ಲಿ ಇದರ ಚೂರ್ಣವನ್ನು ಸೇವಿಸಬಹುದು. ಇನ್ನು ಈ ಮಲಬದ್ಧತೆಯನ್ನು ದೂರಮಾಡುವ ಔಷಧಿಯನ್ನು ಹೇಗೆ ತಯಾರಿಸುವುದು ಎಂದು ನೋಡೋಣ.
ಸ್ನೇಹಿತರೆ ಮೊದಲನೆಯದಾಗಿ ಒಂದು ಬಾಂಡಲಿಗೆ ಮೂರು ಅಳಲೇಕಾಯಿಯನ್ನು ಹಾಕಬೇಕು ಅದಕ್ಕೆ ಒಂದು ಟೇಬಲ್ ಚಮಚದಷ್ಟು ಜೀರಿಗೆ ಹಾಗೆ ಒಂದು ಟೇಬಲ್ ಚಮಚದಷ್ಟು ಸೋಮ ಕಾಳು ಹಾಗೂ ಒಂದು ಟೇಬಲ್ ಚಮಚದಷ್ಟು ಓಂ ಕಾಳನ್ನು ಹಾಕಿ ಎರಡು ನಿಮಿಷದಲ್ಲಿ ಇಟ್ಟುಕೊಂಡು ಬೆಚ್ಚಗೆ ಉರಿಯಬೇಕು ಉರಿಯುವುದು ಎಂದರೆ ಬಿಸಿ ಮಾಡಿದರೆ ಸಾಕು ಇನ್ನು ಅದಕ್ಕೆ ರಾಕ್ ಸಾಲ್ಟ್ ಅಥವಾ ಸೈಲೆಂದರ ಲವಣ ಎಂದು ಕರೆಯುತ್ತಾರೆ ಇದು ಸಾಮಾನ್ಯವಾಗಿ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ ಅಥವಾ ಕೆಲವು ಗಿರಣಿ ಅಂಗಡಿಗಳಲ್ಲು ದೊರೆಯುತ್ತದೆ. ಇವುಗಳೆಲ್ಲವನ್ನು ಒಂದು ಮಿಕ್ಸಿ ಜಾರಿಗೆ ಹಾಕಬೇಕು.
ಇದನ್ನು ಚೆನ್ನಾಗಿ ಪುಡಿ ಮಾಡಬೇಕು ಇದನ್ನು ನೀವು ಒಮ್ಮೆ ಪುಡಿ ಮಾಡಿದರೆ ಕೇವಲ ಒಂದು ವಾರದವರೆಗೆ ಮಾತ್ರ ಉಪಯೋಗಿಸಬೇಕು ಏಕೆಂದರೆ ಇದರ ಗುಣಮಟ್ಟವು ಕಡಿಮೆಯಾಗುತ್ತದೆ. ಇಂದು ಇದನ್ನು ಸೇವಿಸುವ ವಿಧಾನ ಹೇಗೆ ಎಂದರೆ ಒಂದು ಲೋಟಕ್ಕೆ ಬೆಚ್ಚಗಿನ ಹಾಗೂ ಶುದ್ಧವಾದ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಒಂದು ಚಮಚ ನಾವು ಮಾಡಿರುವಂತಹ ಪುಡಿಯನ್ನು ಬೆರೆಸಿ ಕುಡಿಯಬೇಕು. ಇದನ್ನು ರಾತ್ರಿ ಊಟ ಆಗಿ ಅರ್ಧ ಗಂಟೆ ನಂತರ ಕುಡಿಯಬೇಕು ಇದನ್ನು ಹೀಗೆ ಕುಡಿಯುವುದರಿಂದ ಹೊಟ್ಟೆಯ ಎಲ್ಲಾ ಸಮಸ್ಯೆಗಳು ದೂರವಾಗಿ ಜೀರ್ಣವು ಸಂಪೂರ್ಣವಾಗುತ್ತದೆ.