ಅಕ್ಟೋಬರ್ 4ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶಕ್ತಿ ಯೋಜನೆ ಬಗ್ಗೆ ಮನಃಪೂರ್ವಕವಾಗಿ ಬರೆದುಕೊಂಡು ಇದರ ಕುರಿತಾದ ಎರಡು ವಿಶೇಷವಾದ ಸರಣಿ ವಿಡಿಯೋಗಳನ್ನು (videos) ಸಹ ಹಂಚಿಕೊಂಡಿದ್ದಾರೆ.
ಶಕ್ತಿ ಯೋಜನೆಯಡಿ (Shakthi Yojane) ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ನಾಡಿನ ಪುಣ್ಯಕ್ಷೇತ್ರಗಳಲ್ಲಿ ಮಹಿಳಾ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಭಕ್ತಾದಿಗಳಿಗೆ ದೇವರ ದರ್ಶನದ ಭಾಗ್ಯ ದೊರೆತರೆ ಕೊರೋನಾದಿಂದ ಕಂಗೆಟ್ಟಿದ್ದ ಸ್ಥಳೀಯ ವ್ಯಾಪಾರಿಗಳ ಬದುಕಿಗೆ ಭಾಗ್ಯದ ಬಾಗಿಲು ತೆರೆದಿದೆ.
ದೇವಸ್ಥಾನಕ್ಕೆ ಆಫ್ರಿಕಾ ಕ್ರಿಕೆಟ್ ಆಟಗಾರ ಭೇಟಿ, ಹೆಮ್ಮೆಯ ಸನಾತನಿ ಎಂದ ಭಾರತೀಯರು.!
ಶಕ್ತಿ ಯೋಜನೆಯಿಂದ ತಮಗಾಗುತ್ತಿರುವ ಅನುಕೂಲದ ಬಗ್ಗೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ (Dharmasthala) ಸುತ್ತಮುತ್ತಲಿನ ವ್ಯಾಪಾರಿಗಳು ಮಾತನಾಡಿದ್ದರೆ ಕೇಳಿ ಎಂದು ಮೊದಲಿಗೆ ವ್ಯಾಪಾರಿಗಳು ಮಾಡಿರುವ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಧರ್ಮಸ್ಥಳ ಮಂಜುನಾಥನ ಸನ್ನಿಧಾನದ ಸುತ್ತಮುತ್ತ ಅಂಗಡಿಗಳಲ್ಲಿನ ಕೆಲ ವ್ಯಾಪಾರಿಗಳು ಮಾತನಾಡಿದ್ದಾರೆ. ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ, ಮಹಿಳಾ ಭಕ್ತಾದಿಗಳು ಹೆಚ್ಚಾಗಿ ಬರುವುದರಿಂದ ಅವರಿಗೆ ಹಾಗೂ ಮಕ್ಕಳಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ ಹಾಗಾಗಿ ಎಲ್ಲಾ ವ್ಯಾಪಾರಿಗಳಿಗೂ ಕೂಡ ವ್ಯಾಪಾರ ಚೆನ್ನಾಗಿ ಆಗುತ್ತಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ್ದರಿಂದ ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಮಹಿಳಾ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಭಕ್ತಾದಿಗಳಿಗೆ ದೇವರ ದರ್ಶನದ ಭಾಗ್ಯ ದೊರೆತರೆ, ಕೊರೊನಾದಿಂದ ಕಂಗೆಟ್ಟಿದ್ದ ಸ್ಥಳೀಯ ವ್ಯಾಪಾರಿಗಳ ಬದುಕಿನ ಭಾಗ್ಯದ ಬಾಗಿಲು ತೆರೆದಿದೆ.
ಶಕ್ತಿ ಯೋಜನೆಯಿಂದ… pic.twitter.com/RWsl1elAN0
— Siddaramaiah (@siddaramaiah) October 6, 2023
ಗ್ಯಾರಂಟಿ ಯೋಜನೆ ಅದರಲ್ಲೂ ಶಕ್ತಿ ಯೋಜನೆಯಿಂದಾಗಿ ನಮ್ಮ ವ್ಯಾಪಾರ ಸುಧಾರಿಸುತ್ತಿದೆ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ, ಅದೇ ರೀತಿ ವ್ಯಾಪಾರವು ಚೆನ್ನಾಗಿ ನಡೆಯುತ್ತಿದ್ದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸವದತ್ತಿ, ಮುರುಡೇಶ್ವರ ಶೃಂಗೇರಿ ಎಲ್ಲಾ ಭಾಗದಲ್ಲೂ ಕೂಡ ಮಹಿಳಾ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂತೋಷದಿಂದ ಮಾತನಾಡಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ತಂದು ಇದಕ್ಕೆ ಕಾರಣರಾದ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದು ಕೂಡ ತಿಳಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಡಿಯೋ ಕೂಡ ಹಂಚಿಕೊಂಡಿರುವ ಸಿದ್ದರಾಮಯ್ಯರವರು ಶಕ್ತಿ ಯೋಜನೆ ಜಾರಿ ನಂತರದಿಂದ ನಾಡಿನ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿವೆ. ದೇವರ ದರ್ಶನವನ್ನು ಪಡೆದ ಧನ್ಯತೆಯ ಭಾವ ಭಕ್ತಾದಿಗಳಲ್ಲಿದ್ದರೆ ಭಕ್ತಾದಿಗಳನ್ನೇ ನಂಬಿದ್ದ ಸ್ಥಳೀಯರ ಬದುಕು ಕೂಡ ಇದರ ಮೂಲಕ ಹಸನಾಗಿದೆ.
ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್
ಧರ್ಮಸ್ಥಳಕ್ಕೆ ಉಚಿತ ಪ್ರಯಾಣ ಕೈಗೊಂಡ ನನ್ನ ಅಕ್ಕ ತಂಗಿಯರ ಶುಭ ಹಾರೈಕೆಯಷ್ಟೇ ಸಾಕು ನನಗೆ ಎಂದು ಬರೆದುಕೊಂಡು ಧರ್ಮಸ್ಥಳಕ್ಕೆ ಉಚಿತವಾಗಿ ಪ್ರಯಾಣ ಮಾಡಿರುವ ಭಕ್ತಾದಿಗಳ ಮಾತನಾಡಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಇದರಲ್ಲಿ ಧರ್ಮಸ್ಥಳ ದೇವಾಲಯದಿಂದ ಅನೇಕ ಭಕ್ತಾದಿಗಳು ಮಾತನಾಡಿದ್ದು, ಒಬ್ಬ ಮಹಿಳೆ ಬಹಳ ದಿನದಿಂದ ಧರ್ಮಸ್ಥಳಕ್ಕೆ ಬರಬೇಕು ಎಂದು ಹಣ ಕೂಡಿತ್ತಿದ್ದೆವು, ಸಾಧ್ಯವಾಗಿರಲಿಲ್ಲ.
ಶಕ್ತಿ ಯೋಜನೆ ಜಾರಿ ನಂತರದಿಂದ ನಾಡಿನ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿವೆ. ದೇವರ ದರ್ಶನ ಪಡೆದ ಧನ್ಯತಾಭಾವ ಭಕ್ತಾದಿಗಳದ್ದಾದರೆ, ಭಕ್ತಾದಿಗಳನ್ನೇ ನಂಬಿದ್ದ ಸ್ಥಳೀಯ ವ್ಯಾಪಾರಿಗಳ ಬದುಕು ಹಸನಾಗಿದೆ.
ಧರ್ಮಸ್ಥಳಕ್ಕೆ ಉಚಿತ ಬಸ್ ಪ್ರಯಾಣ ಕೈಗೊಂಡ ನನ್ನ ಅಕ್ಕತಂಗಿಯರ ಶುಭ ಹಾರೈಕೆಯಷ್ಟೇ ಸಾಕು ನನಗೆ. #ಶಕ್ತಿ… pic.twitter.com/ZjSaxG0s7W
— Siddaramaiah (@siddaramaiah) October 3, 2023
ಸಿದ್ದರಾಮಯ್ಯ ಅವರ ಶಕ್ತಿ ಯೋಜನೆಯಿಂದ ನಮಗೆ ಧರ್ಮಸ್ಥಳ ನೋಡುವ ಅವಕಾಶ ಸಿಕ್ಕಿತ್ತು ಅವರಿಗೆ ಧನ್ಯವಾದಗಳು ಎಂದು ಹೇಳುತ್ತಾರೆ. ಇನ್ನು ಕೆಲವರು ಕುಟುಂಬ ಸಮೇತವಾಗಿ ಮತ್ತು ಸ್ನೇಹಿತೆಯರ ಜೊತೆಗೆ ಧರ್ಮಸ್ಥಳಕ್ಕೆ ಬರುತ್ತಿದ್ದೇವೆ ಈ ಯೋಜನೆ ಮೂಲಕ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಉಚಿತವಾಗಿ ನೋಡುವ ಅವಕಾಶ ದೊರಕಿತು ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ವೇಳೆ ಅನೇಕರು ಇದಕ್ಕೆ ನೆಗೆಟಿವ್ ಆಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಸಾರಿಗೆ ನಿಗಮ ದಿವಾಳಿಯಾಗುತ್ತದೆ, ಅನಾನುಕೂಲತೆ ಹೆಚ್ಚಾಗುತ್ತಿದೆ ಅಂತೆಲ್ಲಾ ಚರ್ಚೆಯಾಗಿತ್ತು. ಆರಂಭದ ಕೆಲ ದಿನಗಳಲ್ಲಿ ಕೆಲವು ಕೆಲ ಅಹಿತಕರ ಘಟನೆಗಳು ನಡೆದರೂ ಸರ್ಕಾರ ಎಚ್ಚೆತ್ತುಕೊಂಡಿತ್ತು ಹಾಗೆಯೇ ಮಹಿಳೆಯರಿಗೂ ಕೂಡ ತಿಳಿ ಹೇಳಲಾಯಿತು. ಈಗ ಪರಿಸ್ಥಿತಿ ಬಹಳ ಸುಧಾರಿಸಿದ್ದು, ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಶಕ್ತಿ ಯೋಜನೆಯಿಂದ ಬಹಳಷ್ಟು ಅನುಕೂಲತೆ ಆಗುತ್ತಿದೆ ಎನ್ನುವುದು ಸುಳ್ಳಲ್ಲ.