ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಪರೀಷ್ಕೃತ ದರಗಳು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಜಾರಿಯಾಗಲಿದೆ ಎನ್ನುವ ಆದೇಶವನ್ನು ಕಂದಾಯ ಇಲಾಖೆಯು ಹೊರಡಿಸಿ ಆಗಿದೆ. ಇದರ ಪ್ರಕಾರ ಅಕ್ಟೋಬರ್ 1ರಿಂದ ಕಂದಾಯ ಇಲಾಖೆಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಹೆಚ್ಚಾಗಲಿದೆ. ಇದರ ಬಿಸಿ ಜಲಸಾಮಾನ್ಯರಿಗೆ ಮಾತ್ರವಲ್ಲದೇ ಕಚೇರಿ ಸಿಬ್ಬಂದಿಗಳಿಗೂ ಕೂಡ ತಟ್ಟಿದ್ದು ಸೆಪ್ಟೆಂಬರ್ 23ರಂದು ನಾಲ್ಕನೇ ಶನಿವಾರ ಸರ್ಕಾರಿ ರಜೆ ಇದ್ದರೂ ಕಚೇರಿಗಳು ಕಾರ್ಯನಿರ್ವಹಿಸುವಂಥಾಗಿದೆ.
ಅದಲ್ಲದೆ ಕಚೇರಿ ಸಮಯಕ್ಕಿಂತ ಹೆಚ್ಚಿನ ಸಮಯ ಅಂದರೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೂ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳು (Sub registe office time extended) ಕೆಲಸ ನಿರ್ವಹಿಸುತ್ತಿವೆ ಇದರ ಕುರಿತು ವಿವರ ವಿವರ ಇಲ್ಲಿದೆ ನೋಡಿ. ಈ ಮೇಲೆ ತಿಳಿಸಿದಂತೆ ಸ್ಥಿರಾಸ್ತಿ ಮಾರ್ಗಸೂಚಿ ಪರೀಷ್ಕೃತ ದರಗಳು ಅಕ್ಟೋಬರ್ 1ರಿಂದ ಜಾರಿಯಾಗುತ್ತಿರುವುದರಿಂದ ಹಳೆಯ ಮಾರ್ಗಸೂಚಿ ದರದಲ್ಲಿಯೇ ನೋಂದಣಿ ಮಾಡಿಸಿ ಖರ್ಚು ಕಡಿಮೆ ಮಾಡಿಕೊಳ್ಳುವ ಉದ್ದೇಶ ಹಲವರಿಗೆ ಇದೆ.
ಇದರಿಂದ ಉಪ ನೋಂದಣಾಧಿಕಾರಿ ಕಛೇರಿಗೆ ಹಾಜರು ಪಡಿಸುವ ದಸ್ತಾವೇಜುಗಳ ಸಂಖ್ಯೆಯು ಕೂಡ ಹೆಚ್ಚಾಗಬಹುದು ಎಂದು ಊಹಿಸಿ, ಈ ವಿಚಾರದಲ್ಲಿ ನಾಗರಿಕರಿಗೂ ಕೂಡ ಅನುಕೂಲತೆಯಾಗಲಿ ಎಂದು ಈ ರೀತಿ ಸೆಪ್ಟೆಂಬರ್ 23ರಿಂದ ಸೆಪ್ಟೆಂಬರ್ 30ರವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುವಂತೆ ಎಲ್ಲಾ ಉಪನೋಂದಣಾಧಿಕಾರಿ ಕಚೇರಿಗಳ ಕಚೇರಿ ಸಮಯವನ್ನು ವಾರದವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
ಅಕ್ಟೋಬರ್ 1ರಿಂದ ಹೊಸ ಮಾರ್ಗ ಸೂಚಿ ಇದರ ನಿಗದಿ ಆಗುವುದರಿಂದ ಅಷ್ಟರೊಳಗೆ ಹಲವರಿಗೆ ಅನುಕೂಲ ಆಗಲಿ ಎಂದು ಈ ರೀತಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೋಂದಣಿ ಮಹಾಪರಿಕ್ಷಕಿ ಮತ್ತು ಮುದ್ರಾಂಕಗಳ ಆಯುಕ್ತೆ ಬಿ ಆರ್ ಮಮತ ಅವರು ತಿಳಿಸಿದ್ದಾರೆ. ಸಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡ ಅವರು ಪ್ರತಿ ವರ್ಷವೂ ಕೂಡ ಈ ರೀತಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಆಗಬೇಕು ಆದರೆ ಕಾರಣಾಂತರಗಳಿಂದ ಐದು ವರ್ಷಗಳಿಂದ ಈ ಕಾರ್ಯ ನಡೆದಿರಲಿಲ್ಲ.
ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ಪಶು ಸಖಿಯರ ನೇಮಕ.!
ಸರ್ಕಾರ ಈಗ ಅದಕ್ಕೆ ಮುಂದಾಗಿದೆ ಎರಡು ಹಂತಗಳಲ್ಲಿ ನಾವು ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮತ್ತು ಎರಡನೇ ಹಂತದಲ್ಲಿ ಉಳಿದ 28 ಜಿಲ್ಲೆಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ. ಐದು ವರ್ಷಗಳಿಂದ ಹಲವು ಪ್ರದೇಶಗಳು ಬೆಳವಣಿಗೆ ಆಗಿದ್ದು ಅವುಗಳಲ್ಲಿ ಇನ್ನು ಹಳೆ ಮಾರ್ಗಸೂಚಿ ದರವನ್ನೇ ಅನುಸರಿಸುತ್ತಿರುವುದರಿಂದ ಅವುಗಳನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇದೆ.
ಆದರೆ ಕೆಲವೆಡೆ ಈಗಾಗಲೇ ಮಾರುಕಟ್ಟೆಗಿಂತ ಹೆಚ್ಚಿನ ಮಾರ್ಗಸೂಚಿ ದರ ಅನ್ವಯವಾಗಿದೆ ಹಾಗಾಗಿ ಅವುಗಳನ್ನು ಹೆಚ್ಚಿಸಲು ಹೋಗಿಲ್ಲ. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ಸಾಕಷ್ಟು ವ್ಯತ್ಯಾಸಗಳು ಇರುವುದರಿಂದ ಸರಾಸರಿಯಾಗಿ ಏರಿಕೆ ಮಾಡುವುದರ ಬದಲು ಈಗಾಗಲೇ ಆ ಪ್ರದೇಶದಲ್ಲಿ ಎಷ್ಟು ಸ್ಥಿರಾಸ್ತಿ ಮಾರ್ಗಸೂಚಿ ದರ ನಿಗದಿಯಾಗಿದೆ ಮತ್ತು ಆ ಜಾಗದ ವ್ಯಾಲ್ಯೂ ನೋಡಿ ಮನದಂಡಗಳ ಆಧಾರದ ಮೇಲೆ 5% ಇಂದ 70% ವರೆಗೂ ಕೂಡ ಏರಿಕೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿ ಹಂಚಿಕೊಂಡಿದ್ದಾರೆ.
ಪರಿಷ್ಕೃತವಾಗಿರುವ ದರಗಳ ಪಟ್ಟಿ ಹೇಗಿರಲಿದೆ ಎನ್ನುವುದರ ಕರಡು ಪ್ರತಿ ಕೂಡ ಪ್ರಕಟವಾಗಿದ್ದು ಆಸಕ್ತರು ತಮ್ಮ ಜಿಲ್ಲೆಯಲ್ಲಾಗಿರುವ ವ್ಯತ್ಯಾಸವನ್ನು ಇದನ್ನು ಪರಿಶೀಲಿಸುವ ಮೂಲಕ ತಿಳಿದುಕೊಳ್ಳಬಹುದಾಗಿದೆ.