Saturday, September 30, 2023
Home News ರೈತರಿಗೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಘೋಷಣೆ. ಕೂಡಲೆ ಅರ್ಜಿ ಸಲ್ಲಿಸಿ.

ರೈತರಿಗೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಘೋಷಣೆ. ಕೂಡಲೆ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದಿನ ವಿಷಯದಲ್ಲಿ ನಾವು ರಾಜ್ಯ ಸರ್ಕಾರದ ಒಂದು ಪ್ರಮುಖವಾದಂತಹ ಯೋಜನೆಯನ್ನು ನಿಮ್ಮೊಂದಿಗೆ ತಿಳಿಸುತ್ತಿದ್ದೇವೆ. ರೈತರಿಗೆ ಸಹಯವಾಗಬೇಕು ಎನ್ನುವಂತಹ ದೃಷ್ಟಿಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರವು ಸಹಾಯಧನವನ್ನು ನೀಡುತ್ತಿದ್ದು ಇದರ ಅಡಿಯಲ್ಲಿ ಯಾರಿಗೆಲ್ಲ ಅನುಕೂಲ ಆಗುತ್ತದೆಯೋ ಅಂತಹವರು ಅರ್ಜಿಯನ್ನು ಸಲ್ಲಿಸಿ, 4 ಲಕ್ಷ ರೂಪಾಯಿ ಸಹಾಯಧನವನ್ನು ಪಡೆದುಕೊಳ್ಳಬಹುದು.

ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸರ್ಕಾರದಿಂದ ಎಲ್ಲಾ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ 4 ಲಕ್ಷ ಸಹಾಯಧನಕ್ಕಾಗಿ ಹೊಸ ಅರ್ಜಿಗಳನ್ನು ಕರೆಯಲಾಗಿದೆ ಇಡೀ ಕರ್ನಾಟಕ ರಾಜ್ಯದ್ಯಂತ ಇರುವ ರಾಜ್ಯದ ಎಲ್ಲಾ ರೈತರು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ಸಹಾಯಧನ ಪಡೆದುಕೊಳ್ಳಲು ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ಅಥವಾ ನೀರು ಜಮಾಾವಣೆಗಾಗಿ ಮಣ್ಣಿನ ಬೋಧಗಳ ನಿರ್ಮಾಣದಿಂದ ನೀರನ್ನು ಕ್ರೂಢೀಕರಿಸಿ ಅದನ್ನು ಬೆಳೆಗಳಿಗೆ ಉಪಯೋಗಿಸಲು ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ರೈತರಿಗೆ ನಿರ್ಮಾಣಕ್ಕಾಗಿ ಅಥವಾ ಕೃಷಿ ಹೊಂಡ ನಿರ್ಮಾಣಕ್ಕಾಗಿ ಸಹಾಯಧನವನ್ನು ನೀಡಲಾಗುತ್ತಿದೆ.

ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಅಡಿಯಲ್ಲಿ 4 ಲಕ್ಷ ಹಣ ಸಹಾಯಧನ ಪಡೆದುಕೊಳ್ಳಬಹುದಾಗಿದೆ ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಕೃಷಿ ಹೊಂಡ ನಿರ್ಮಾಣ ಅಥವಾ ನೀರು ಹೋಂಡಾ ನಿರ್ಮಾಣಕ್ಕಾಗಿ ಟಾರ್ಪಲಿನ್ ಅಥವಾ ತಾಡಪತ್ರ ಅಥವಾ ನೀರು ನಿಲ್ಲಿಸಲು ಬೇಕಾಗುವ ಪ್ಲಾಸ್ಟಿಕ್ ಖರೀದಿಸಲು ಜೊತೆಗೆ ಕೂಲಿ ಕಾರ್ಮಿಕರಿಂದ ಅಥವಾ ಯಂತ್ರಗಳ ಸಹಾಯದಿಂದ ಬುದು ನಿರ್ಮಾಣ ಮಾಡಿ ನೀರನ್ನು ಕ್ರೂಢೀಕರಿಸಿ ಕೃಷಿಗೆ ಬಳಸಿಕೊಳ್ಳಲು ರಾಜ್ಯದ ನೂತನ ಸರ್ಕಾರದಿಂದ ಭಾರಿ ದೊಡ್ಡ ಗುಡ್ ನ್ಯೂಸ್ ನೀಡುವ ಮೂಲಕ ಪ್ರತಿಯೊಬ್ಬ ರೈತರಿಗೂ ಕೂಡ 4 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲು ಕೃಷಿ ಭಾಗ್ಯ ಯೋಜನೆಯ ಮೂಲಕ ರೈತರಿಗೆ ಸುವರ್ಣ ಅವಕಾಶ ಕಲ್ಪಿಸಿಕೊಡಲಾಗಿದೆ.

ರೈತರಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಇನ್ನೇನು ಕೆಲವು ದಿನಗಳಲ್ಲಿ ಈ ಯೋಜನೆಯನ್ನು ಸರ್ಕಾರ ಮರು ಜಾರಿಗೆ ತರಲಿದೆ ಕರ್ನಾಟಕ ರಾಜ್ಯದಲ್ಲಿ ಮಳೆಯ ಆಶ್ರಿತ ಕೃಷಿಕರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು ಈ ಯೋಜನೆ ಅಡಿ ಹೊಲದಲ್ಲಿ ಕೆರೆಯನ್ನು ನಿರ್ಮಿಸುವ ಮೂಲಕ ನೀರನ್ನು ಸಂಗ್ರಹಿಸಿ ಮಳೆ ಇಲ್ಲದ ಸಮಯದಲ್ಲಿ ಅವುಗಳನ್ನು ಬೆಳೆಗಳಿಗೆ ಬಳಸಲು ಉಪಯೋಗವಾಗುತ್ತದೆ.

ಬಿಜೆಪಿ ಸರ್ಕಾರ ಬಂದ ನಂತರ ಈ ಯೋಜನೆಯನ್ನು ಬಂದ್ ಮಾಡಲಾಗಿತ್ತು ಆದರೆ ವರದಿಗಳ ಪ್ರಕಾರ ಈ ಯೋಜನೆಯು ಶೇಕಡ 80ಕ್ಕೂ ಹೆಚ್ಚು ಯಶಸ್ಸು ವರದಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೆ ತಂದು ಮುಂದುವರೆಸಲು ವಿಶೇಷವಾದಂತಹ ಆಸಕ್ತಿಯನ್ನು ತೋರಿಸಿದ್ದಾರೆ ಅಂಕಿ ಅಂಶಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಶೇಕಡಾ 68 ಮಳೆಯ ಆಶ್ರಿತ ಕೃಷಿ ಭೂಮಿ ಇದೆ ಅದರಲ್ಲಿ ಆಹಾರ ಧಾನ್ಯಗಳು 55ರಷ್ಟು ಹಾಗೂ ಎಣ್ಣೆಕಾಳು ಬೆಳೆಗಳು 75 ರಷ್ಟು ಮಳೆ ಆಶ್ರಿತ ಭೂಮಿಯಲ್ಲಿ ಬೆಳೆಯಲಾಗುತ್ತದೆ.

ಹಾಗಾಗಿ ನಾವು ನಮ್ಮ ಹೊಲದಲ್ಲಿ ಸರ್ಕಾರದ ಕೃಷಿ ಭಾಗ್ಯವನ್ನು ಉಪಯೋಗಿಸಿಕೊಂಡು ಕೆರೆಯನ್ನು ನಿರ್ಮಿಸಿದರೆ ಆ ಮೂಲಕ ನಾವು ನಮ್ಮ ಹೊಲದಲ್ಲಿ ನೀರನ್ನು ಸಂಗ್ರಹಿಸಿಕೊಂಡು ಮುಂದೆ ಮಳೆ ಇಲ್ಲದ ಸಮಯದಲ್ಲಿ ನಮಗೆ ಬೆಳೆಗಳಿಗೆ ಬಳಸಬಹುದಾಗಿದೆ ಕೆಲವೇ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಾರೆ ಅದಕ್ಕಾಗಿ ರಾಜ್ಯದ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ರೈತರು ತಮ್ಮ ಜಮೀನಿನಲ್ಲಿ ಹೊಸ ಕೃಷಿ ಹೊಂಡಾವನ್ನು ನಿರ್ಮಾಣ ಮಾಡಿಕೊಳ್ಳಬೇಕಾದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮತ್ತು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ಅಂದರೆ ಪಿಡಿಓ ಹಾಗೂ ಅಧ್ಯಕ್ಷರು ಅವರಿಬ್ಬರ ಒಪ್ಪಿಗೆ ಮೇರಿಗೆ ಉದ್ಯೋಗ ಖಾತ್ರಿ ಅಂದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು.

ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಸಹಾಯಧನವನ್ನು ಪಡೆದುಕೊಳ್ಳಲು ಅಗತ್ಯವಾದ ದಾಖಲೆಗಳನ್ನು ಎಂದರೆ ರೈತರ ಜಮೀನಿನ ಪಹಣಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದಿರುವ ಫೋಲ್ಡಿಂಗ್ ಹಾಗು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಈ ಎಲ್ಲಾ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಸಲ್ಲಿಸಿ ಸರ್ಕಾರದ ಸಹಾಯಧನದ ಹಣ ನೇರವಾಗಿ ನಿಮ್ಮ ಖಾತೆಗೆ ಬಂದು ಬೀಳುತ್ತದೆ.

- Advertisment -