Gouthami Jadav
ಜನಪ್ರಿಯ ಕಿರುತೆರೆ ನಟಿ ಗೌತಮಿ ಜಾಧವ್ (Gouthami Jadhav) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸತ್ಯ ಧಾರಾವಾಹಿ (Sathya Serial) ಮೂಲಕ ಮನೆ ಮನೆ ಮಾತಾಗಿದ್ದರು. ಇದಕ್ಕೂ ಮುನ್ನ ನಾಗ ಪಂಚಮಿ ಸೇರಿದಂತೆ ಇನ್ನು ಅನೇಕ ಧಾರಾವಾಹಿಗಳ ಪಾತ್ರದಾರಿಯಾಗಿ ಕಿರುಚಿತ್ರಗಳ ನಾಯಕಿಯಾಗಿ ಬಣ್ಣದ ಜಗತ್ತಿನಲ್ಲಿ ಸಕ್ರಿಯವಾಗಿದ್ದ ಗೌತಮಿ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿದ್ದು ಬಿಗ್ ಬಾಸ್ ಸೀಸನ್ 11ರ (Bigboss S11) ಕಾರ್ಯಕ್ರಮ ಎಂದರೆ ತಪ್ಪಾಗಲಾರದು.
ಯಾಕೆಂದರೆ ಬಿಗ್ ಬಾಸ್ ಮನೆಗೆ ಹೋದ ಮೇಲೆ ಗೌತಮಿ ತಮ್ಮ ಪಾಸಿಟಿವಿಟಿ ನೇಚರ್ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇವರ ನಡೆ ನುಡಿ ವಿಚಾರಗಳು ಅನೇಕರ ಮೆಚ್ಚುಗೆಗೆ ಪಾತ್ರವಾಗಿವೆ.ಆದರೆ ಇಡೀ ಕರ್ನಾಟಕವೇ ಹಾಡಿ ಹೊಗಳುತ್ತಿರುವ ಗೌತಮಿಗೆ ತನ್ನ ಪತಿಯ ತಂದೆ ಅಂದರೆ ಸ್ವಂತ ಮಾವನೇ ತಿರುಗಿ ಬಿದ್ದಿದ್ದಾರೆ.
ಇದ್ದಕ್ಕಿದ್ದಂತೆ ಗೌತಮಿ ಮಾವ ಗಣೇಶ್ ಕಾಸರಗೋಡು ರವರು ಸೋಶಿಯಲ್ ಮೀಡಿಯಾದಲ್ಲಿ ಸೊಸೆ ಕುರಿತಂತೆ ಹಾಕಿರುವ ಪೋಸ್ಟ್ ಗಳು ಸಂಸಾರದ ಗುಟ್ಟನು ಜಗಜ್ಜಾಹಿರು ಮಾಡಿದೆ. ಗಣೇಶ್ ಕಾಸರಗೋಡು ಅವರು ಕೂಡ ಖ್ಯಾತ ಹಿರಿಯ ಪತ್ರಕರ್ತರು ಅದರಲ್ಲೂ ಸಿನಿಮಾ ಜಗತ್ತಿಗೆ ತೀರ ಪರಿಚಿತರು ಹೀಗಾಗಿಯೇ ಇವರ ಮಕ್ಕಳು ಕೂಡ ಸಿನಿಮಾ ಬದುಕಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ತೆರೆ ಹಿಂದೆ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಇವರ ಹಿರಿಯ ಮಗನ ಪತಿಯೇ ಗೌತಮಿ ಜಾದವ್ ಮೂಲತಃ ಮರಾಠಿ ಕುಟುಂಬದವರಾದ ಗೌತಮಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಪ್ರೇಮ ವಿವಾಹವಾಗಿದ್ದರು. ಈ ಹಿಂದಿನ ಗಣೇಶ್ ಕಾಸರಗೋಡು ಅವರ ಸಂದರ್ಶನಗಳನ್ನು ನೋಡಿದರೆ, ಮೊದಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು ಅನಿಸುತ್ತದೆ.
ಹೀಗಿದ್ದು ಗೌತಮಿ ಬಿಗ್ ಬಾಸ್ ಮನೆಯಿಂದ ಹೊರ ಬೀಳುತ್ತಿದ್ದಂತೆ ತಾಯಿ ವನದುರ್ಗೆಗೆ ಧನ್ಯವಾದ ತಿಳಿಸಿ ತಾಯಿ ವನದುರ್ಗೆ ಅ’ನ್ಯಾ’ಯ ಹಾಗೂ ಅಧರ್ಮದಿಂದ ಬರುವವರನ್ನು ಕೈ ಹಿಡಿಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಸೊಸೆ ಸೋಲುತ್ತಿದ್ದಂತೆ ಇತ್ತ ಇವರು ಹಂಚಿಕೊಂಡಿದ್ದ ಪೋಸ್ಟ್ ಇದು ಸೊಸೆ ಬಗ್ಗೆಯೇ ಇರಬೇಕು ಎಂಬ ಅ’ನು’ಮಾ’ನವನ್ನು ಹುಟ್ಟು ಹಾಕಿತ್ತು.
ಇದರ ಹಿಂದೆಯೇ ಬ್ಯಾಕ್ ಟು ಬ್ಯಾಕ್ ಎರಡೆರಡು ಪೋಸ್ಟ್ ಹಾಕಿ ಒಂದರಲ್ಲಿ ತಾವು ಹಾಗೂ ತಮ್ಮ ಹೆಂಡತಿ ಮತ್ತು ಎರಡನೇ ಮಗ ಸೊಸೆ ಇರುವ ಫೋಟೋ ಹಂಚಿಕೊಂಡು ಇವರಷ್ಟೇ ನನ್ನ ಕುಟುಂಬ ಇದು ನನ್ನ ಚಿಕ್ಕ ಪ್ರೀತಿಯ ಕುಟುಂಬ ಎಂದು ಬರೆದು ಹಿರಿಯ ಮಗ ಹಾಗೂ ಸೊಸೆ ಮತ್ತು ಮೊಮ್ಮಗಳನ್ನು ಬಿಟ್ಟೇ ಬಿಟ್ಟಿದ್ದಾರೆ.
ಮತ್ತೊಂದರಲ್ಲಿ ಶ್ರಮ ಅರ್ಥ ಆದರೆ ಅಪ್ಪ ಅರ್ಥವಾಗುತ್ತಾನೆ, ಕರುಣೆ ಅರ್ಥವಾದರೆ ತಾಯಿ ಅರ್ಥವಾಗುತ್ತಾಳೆ ಇದು ತಂದೆ ತಾಯಿಯನ್ನು ಬಿಟ್ಟು ಹೆಂಡತಿಯ ಹಿಂದೆ ಹೋಗುವ ಎಲ್ಲಾ ಗಂಡು ಮಕ್ಕಳಿಗೂ ಅರ್ಪಣೆ ಎಂದು ನೇರವಾಗಿ ಮಗ ಮತ್ತು ಸೊಸೆಯನ್ನು ಉದ್ದೇಶಿಸಿಯೇ ಟಾಂಗ್ ನೀಡಿದ್ದಾರೆ.
ಇಷ್ಟೆಲ್ಲಾ ಆಗಿದ್ದರೂ ಕೂಡ ಇದೇ ವಿಚಾರ ಕೆಣಕಿ ಮೀಡಿಯಾ ಗೌತಮಿ ಅವರ ಮುಂದೆ ಮೈಕ್ ಹಿಡಿದಿದ್ದರೂ ಗೌತಮಿಯವರು ಮಾತ್ರ ಇದು ನನ್ನ ಕುಟುಂಬದ ವಿಚಾರ ನನ್ನ ವೈಯಕ್ತಿಕ ವಿಚಾರ ಎಲ್ಲರ ಮನೆಯಲ್ಲೂ ಕೂಡ ಒಂದಲ್ಲ ಒಂದು ರೀತಿ ಸಮಸ್ಯೆ ಇರುತ್ತದೆ. ಇದನ್ನು ನಾನು ಹ್ಯಾಂಡಲ್ ಮಾಡುತ್ತೇನೆ ಎಂದು ಮತ್ತೊಮ್ಮೆ ತಮ್ಮ ದೊಡ್ಡತನ ಮೆರೆದಿದ್ದಾರೆ. ಹೀಗಾಗಿ ಗೌತಮಿ ಅಭಿಮಾನಿಗಳಿಗೆ ಅವರ ಮೇಲಿದ್ದ ಅಭಿಮಾನ ದುಪ್ಪಟ್ಟು ಆಗಿದೆ.