ನಮಸ್ಕಾರ ಸ್ನೇಹಿತರೇ, ಇಂದು ನಾವು ಕಬ್ಬಿನ ಬೆಳೆದಾರರಿಗೆ ಸಿಹಿ ಸುದ್ದಿ ಒಂದನ್ನು ತಂದಿದ್ದೇವೆ ಹೌದು ಕಬ್ಬು ಬೆಳೆದಿರುವಂತಹ ರೈತರಿಗೆ ಇದು ಸಂತಸದ ಸುದ್ದಿ ಪ್ರತಿ ಕ್ವಿಂಟಲ್ ಗೆ ಹತ್ತು ರೂಪಾಯಿಯಂತೆ ಏರಿಕೆ ಮಾಡಿರುವಂತಹ ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಕಬ್ಬಿನ ಬೆಳೆಗಾರರಿಗೆ ಕಬ್ಬಿನಷ್ಟೇ ಸಿಹಿ ಸಿದ್ದಿ ನೀಡಿರುವಂತಹ ಕೇಂದ್ರ ಸರ್ಕಾರ ದೇಶದಾದ್ಯಂತ ಇರುವ ಎಲ್ಲಾ ರೈತರಿಗೂ ಅದರಲ್ಲಿಯೂ ಕಬ್ಬು ಬೆಳೆದ ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆದ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದು ನಿಮ್ಮ ಜಮೀನಿನಲ್ಲಿ ಕೂಡ ನೀವು ಕಬ್ಬು ಬೆಳೆ ಬೆಳೆದಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಇತ್ತೀಚಿಗೆ ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ ಕಬ್ಬು ಬೆಳೆಗೆ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಗಿಫ್ಟ್ ನೀಡಿದೆ.
ಪ್ರತಿ ಕ್ವಿಂಟಾಲ್ ಕಬ್ಬಿಗೆ 10 ರೂಪಾಯಿ ಹೆಚ್ಚಳ ಮಾಡುವ ಮೂಲಕ 2023-24ನೇ ಸಾಲಿನಲ್ಲಿ ಕ್ವಿಂಟಲ್ ಕಬ್ಬಿಗೆ 315 ಬೆಲೆ ನಿಗದಿ ಮಾಡಿದೆ ಕೇಂದ್ರ ಸಂಪುಟ ಸಭೆಯಲ್ಲಿ ನಡೆದ ಮಹತ್ವದ ನಿರ್ಧಾರ ಇದಾಗಿದ್ದು ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳದಿಂದ ಕಬ್ಬು ಬೆಳೆಗಾರರು ಸಂತಸ ಕಂಡಿದ್ದಾರೆ 2014 15ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಗೆ 210 ಇದ್ದ ಕಬ್ಬಿಣ ಬೆಲೆ ಕಳೆದ ವರ್ಷ 305 ಇತ್ತು ಈಗ 2023 24ನೇ ಸಾಲಿನಲ್ಲಿ ಕ್ವಿಂಟಲ್ ಗೆ 315 ಗೆ ಏರಿಕೆಯಾಗಿದೆ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಬ್ಬು ಬೆಂಬಲ ಬೆಲೆ ರೂ.10 ಹೆಚ್ಚಳದಿಂದಾಗಿ ದೇಶದಲ್ಲಿ ಇರುವ ಐದು ಕೋಟಿಗೂ ಅಧಿಕ ಕಬ್ಬು ಬೆಳೆಗಾರರು ಕೂಲಿ ಕಾರ್ಮಿಕರು ಹಾಗೂ ಸಕ್ಕರೆ ಕಾರ್ಖಾನೆಗಳ ಐದು ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು 2016 14ನೇ ಸಾಲಿನಲ್ಲಿ ದೇಶದಲ್ಲಿ 57,104 ಕೋಟಿ ರೂಪಾಯಿ ಮೌಲ್ಯದ ಕಬ್ಬು ಖರೀದಿ ಮಾಡಿದ ಸಕ್ಕರೆ ಕಾರ್ಖಾನೆಗಳು 202-23 ನೇ ಸಾಲಿನಲ್ಲಿ 1,11,366 ಕೋಟಿ ರೂಪಾಯಿ ಮೌಲ್ಯದ 3353 ಲಕ್ಷ ಟನ್ ಕಬ್ಬನ್ನು ಖರೀದಿ ಮಾಡಿದೆ ಎಂದು ಇದೆ ವೇಳೆ ತಿಳಿಸಿದರು.
ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಹಣವನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡಲಾಗುತ್ತಿದೆ ಕಾರ್ಖಾನೆಗಳು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ ಕೇಂದ್ರ ಸಚಿವರು ಈ ಯೋಜನೆಗೆ ಕೇಂದ್ರ ಸರ್ಕಾರ 20,500 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಹೇಳಲಾಗಿದೆ.
ಕಬ್ಬನ್ನು ಬೆಳೆದಿರುವಂತಹ ರೈತರಿಗೆ ಪೂರ್ತಿ ಪಸಲು ಒಮ್ಮೊಮ್ಮೆ ತಮ್ಮ ಕೈ ಸೇರುವುದಿಲ್ಲ ಬೆಳೆ ನಷ್ಟವು ಸಹ ಉಂಟಾಗುತ್ತದೆ ಬೆಳೆದಿರುವಂತಹ ಬೆಳೆಗೆ ಪೂರ್ಣ ಪ್ರಮಾಣದ ಬೆಲೆ ಸಿಗುವುದಿಲ್ಲ ಅಷ್ಟೇ ಅಲ್ಲದೆ ಮಧ್ಯವರ್ತಿಗಳಿಂದಾಗಿಯೂ ಅವರಿಗೆ ನಷ್ಟ ಉಂಟಾಗುವ ಸಂಭವ ಇರುತ್ತದೆ ಆದ್ದರಿಂದ ಕೇಂದ್ರ ಸರ್ಕಾರ ಕೈಗೊಂಡಿರುವಂತಹ ಈ ನಿರ್ಧಾರದಿಂದ ಅಲ್ಪ ಮಟ್ಟದಲ್ಲಿ ರೈತರಿಗೆ ಸಹಾಯ ಆಗಲಿದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.