ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪಿತೃಪಕ್ಷವು ನಮ್ಮನ್ನು ಅಗಲಿ ಹೋದ ಹಿರಿಯರಿಗಾಗಿ ಮೀಸಲಾರುವ ಸಮಯವಾಗದೆ. ಈ ಪಿತೃಪಕ್ಷ ಮಾಸದಲ್ಲಿ ಇಹಲೋಕ ತ್ಯಜಿಸಿರುವ ನಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಬಂಧು ಬಳಗದವರಿಗೆ ವಿಶೇಷ ಪೂಜೆ ನೆರವೇರಿಸಿ ಅವರ ಹೆಸರಿನಲ್ಲಿ ಅನ್ನದಾನ ಏರ್ಪಡಿಸಿ ತರ್ಪಣ ಕೊಡಲಾಗುತ್ತದೆ.
ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಕೂಡ ಈ ಆಚರಣೆ ಇದೆ, ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರು ಈ ಆಚರಣೆಯನ್ನು ತಮ್ಮ ಶಕ್ತಿಯನುಸಾರ ಮಾಡುತ್ತಾರೆ. ಅದೇ ರೀತಿ ಮಹಾಲಯ ಅಮಾವಾಸ್ಯೆ ದಿನದಂದು ಕನ್ನಡದ ಕಿರುತೆರೆ ಸ್ಟಾರ್ ಸೃಜನ್ ಲೋಕೇಶ್ ಅವರ ಕುಟುಂಬದಲ್ಲೂ ಇದನ್ನು ಆಚರಿಸಲಾಗಿದೆ.
ಅವರ ಕುಟುಂಬದ ಹಿರಿಯರು ಮಾತ್ರವಲ್ಲದೆ ಚಿತ್ರರಂಗದ ಗಣ್ಯರಾದ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್, C.R ಸಿಂಹ, ಜಯಂತಿ, ಸಂಚಾರಿ ವಿಜಯ್ ಮುಂತಾದವರ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಅಂದು ಅವರ ಮನೆಯಲ್ಲಿ 130 ಜನರ ಹೆಸರಿನಲ್ಲಿ ಪೂಜೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಒಂದು ವಿಶೇಷ ವಿಡಿಯೋವನ್ನು ಸೃಜನ್ ಲೋಕೇಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು ಆದರೆ ಇದಕ್ಕೆ ಈಗ ನೆಟ್ಟಿಗರು ಪರ ಹಾಗೂ ವಿರೋಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್ ಅವರ ಫೋಟೋಗಳನ್ನು ಏಕೆ ಇಟ್ಟಿಲ್ಲ ಅವರು ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಅಲ್ಲವೇ ಇನ್ನಿತ್ಯಾದಿಯಾಗಿ ನೇರವಾಗಿ ಪ್ರಶ್ನೆ ಮಾಡುತ್ತಿದ್ದಾರೆ.
ಅಂತಿಮವಾಗಿ ಇದಕ್ಕೆಲ್ಲ ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರೇ ಸ್ಪಷ್ಟತೆ ಕೊಟ್ಟಿದ್ದು ಈ ವಿಷಯವಾಗಿ ಹೀಗೆಂದಿದ್ದಾರೆ. ಲೋಕೇಶ್ ಅವರು ಇಹಲೋಕ ತ್ಯಜಿಸಿದ್ದು 2004ರ ಆಕ್ಟೊಬರ್ 14ರಂದು, ಈ ವರ್ಷ ಅದೇ ದಿನ ಮಹಾಲಯ ಅಮಾವಾಸ್ಯೆ ಕೂಡ ಬಂದಿದೆ, ನಮ್ಮ ಮನೆಗೆ ಆಪ್ತವಾಗಿರುವವರ ಫೋಟೋವನ್ನು ಇಟ್ಟು ಪೂಜೆ ಮಾಡಿದ್ದೇವೆ.
ಇದೇ ಮೊದಲ ವರ್ಷವಲ್ಲ ಬಹಳ ಹಿಂದಿನಿಂದ ನಾವು ಪೂಜೆ ಮಾಡುತ್ತಿರುವುದು ಇದೇ ರೀತಿ. ನಮ್ಮ ಯಜಮಾನರ ತಂದೆ ಸುಬ್ಬಯ್ಯ ನಾಯ್ಡು ಅವರ ನಾಟಕದ ಕಂಪನಿಯಲ್ಲಿ ಡಾ.ರಾಜ್ ಕುಮಾರ್ ಅವರು ಕೆಲಸ ಮಾಡುತ್ತಿದ್ದರು ಆ ಕಾರಣಕ್ಕೆ ಅವರ ಕುಟುಂಬ ನಮಗೆ ತುಂಬಾ ಆಪ್ತ ಅಪ್ಪು ಮತ್ತು ಚಿರು ನನ್ನ ಮಕ್ಕಳಿಗೆ ತುಂಬಾ ಕ್ಲೋಸ್ ಆಗಿದ್ದರು, ಜಯಂತಿ ಅವರು ನನಗೆ ತುಂಬಾ ಕ್ಲೋಸ್.
ಈ ರೀತಿ ನಮ್ಮ ಮನೆಯವರಿಗೆ ಆಪ್ತವಾಗಿದ್ದವರ ಫೋಟೋಗಳನ್ನು ಇಟ್ಟಿದ್ದೇವೆ. ತೂಗುದೀಪ ಶ್ರೀನಿವಾಸ್ ಅವರು ನನಗೆ ಸಂಬಂಧಿ ಆಗಬೇಕು, ಅವರ ಜೊತೆಗೆ ನಮ್ಮ ಮಾವನವರು, ಚಿಕ್ಕಪ್ಪ ಮತ್ತು ಇನ್ನಿತರ ಫೋಟೋಗಳಿವೆ.
ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಅವರ ಸಿನಿಮಾಗಳಲ್ಲಿ ಅವರ ಜೊತೆಯಾಗಿ ನಟಿಸಿದ್ದೇವೆ, ಅವರು ನಮ್ಮ ಕೋ ಸ್ಟಾರ್ ಗಳು. ಆದರೆ ಈ ದಿನ ನಾವು 130 ಜನರಿಗೆ ತರ್ಪಣ ನೀಡುತ್ತೇವೆ. ಈ ರೀತಿ ಪ್ರಶ್ನೆ ಮಾಡುವುದಾದರೆ, ಪಾರ್ವತಮ್ಮನವರ ಫೋಟೋ ಕೂಡ ಇಡಬೇಕಿತ್ತು ಅಲ್ವಾ? ಇಲ್ಲಿ ನಾವು ಇಹಲೋಕ ತ್ಯಜಿಸಿರುವ ಕನ್ನಡದ ಎಲ್ಲಾ ಕಲಾವಿದರ ಫೋಟೋ ಇಟ್ಟು ಪೂಜೆ ಮಾಡುತ್ತಿಲ್ಲ.
ನಮ್ಮ ಮನೆಗೆ ಆಪ್ತವಾಗಿರುವವರ ಫೋಟೋ ಮಾತ್ರ ಇಟ್ಟು ಪೂಜೆ ಮಾಡುತ್ತಿದ್ದೇವೆ. ಪೂಜೆ ಮಾಡೋಕೆ ಬರುವ ಪುರೋಹಿತರು 130 ಹೆಸರು ಹೇಳಿ, ತರ್ಪಣ ಬಿಡಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಎಲ್ಲರ ಫೋಟೋ ಇಡೋದಕ್ಕೆ ಜಾಗ ಕೂಡ ಇಲ್ಲ. ರಾಜರಾಮ್ ಅವರು ನಮ್ಮ ಮನೆಗೆ ತುಂಬಾ ಆಪ್ತರು ಅವರ ಫೋಟೋ ಕೂಡ ಇಟ್ಟಿಲ್ಲ ಅಂದ್ರೆ ಅವರನ್ನ ಮರೆತಿದ್ದೀವಿ ಅಂತ ಅರ್ಥ ಅಲ್ಲ ಎಂದು ಸ್ಪಷ್ಟಣೆ ಕೊಟ್ಟಿದ್ದಾರೆ ಗಿರಿಜಾ ಲೋಕೇಶ್.