ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ರವರು (Geetha Shivaraj kumar) ಇತ್ತೀಚಿಗೆ ಹೆಚ್ಚಾಗಿ ಸುದ್ದಿಯಲ್ಲಿ ಇರುತ್ತಾರೆ. ಅಣ್ಣಾವ್ರ ಸೊಸೆ ಹಾಗೂ ಶಿವರಾಜ್ ಕುಮಾರ್ ಅವರ ಪತ್ನಿ ಆಗಿರುವುದರಿಂದ ಸಿನಿಮಾ ವಿಚಾರವಾಗಿ ಸಾರ್ವಜನಿಕ ಬಗ್ಗೆ ಕಾಣಿಸಿಕೊಳ್ಳುತ್ತಿದ್ದ ಇವರು ಸಿನಿಮಾ ಹೊರತುಪಡಿಸಿ ರಾಜಕೀಯ (Politics) ವಿಷಯದಿಂದ ಕೂಡ ಸುದ್ದಿಯಲ್ಲಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ (join to Congress) ಸೇರ್ಪಡೆಯಾಗಿರುವ ದೊಡ್ಮನೆಯ ಈ ಸೊಸೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ (Ex. CM Bangarappa daughter) ಮಗಳು ಕೂಡ ಹೌದು. ಹೀಗಾಗಿ ರಕ್ತಗತವಾಗಿ ರಾಜಕೀಯ ಬಂದಿದೆ ಎಂದು ಹೇಳಬಹುದು. ಇದೀಗ ಅವರು ಮುಂದಿನ ಲೋಕಸಭಾ ಚುನಾವಣೆ (Lokasabha election ) ತಯಾರಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ತಿಂಗಳಿಗೆ ಗೃಹಲಕ್ಷ್ಮಿ ಮುಕ್ತಾಯ ಮಾಜಿ CM – ಬಸವರಾಜ ಬೊಮ್ಮಾಯಿ
ಇದನ್ನು ಪುಷ್ಟೀಕರಿಸುವಂತೆ ಇತ್ತೀಚಿನ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳಲ್ಲಿ ಇವರು ಭಾಗವಾಗುತ್ತಿದ್ದಾರೆ. ಅದರ ಪ್ರಯುಕ್ತವಾಗಿ ಇದ್ದಕ್ಕಿದ್ದಂತೆ ಅಕ್ಟೋಬರ್ 11ರಂದು ಗೀತಾ ಶಿವರಾಜಕುಮಾರ ರವರು ಸರ್ಕಾರಿ ಬಸ್ ನಲ್ಲಿ (Govt bus) ಕಾಣಿಸಿಕೊಂಡಿದ್ದಾರೆ. ತಾವು ಸಹ ಸಾಮಾನ್ಯ ಮಹಿಳೆಯಂತೆ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಿದ್ದಾರೆ.
ಬಳ್ಳಾರಿಯ ಕೆಆರ್‌ಎಸ್ ಫಂಕ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಾರಿ ಶಕ್ತಿ ಮಹಿಳಾ ಸಮಾವೇಶವನ್ನು (Narishathi Program at Ballary) ಆಯೋಜಿಸಲಾಗಿತ್ತು ಇದಕ್ಕೆ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಗೀತಾ ಶಿವರಾಜಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ರಾಜ್ಯದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಬಳಿಕ ಸಾಂಕೇತಿಕವಾಗಿ ಕೆಆರ್‌ಎಸ್ ಫಂಕ್ಷನ್ ಹಾಲ್ ನಿಂದ ರಾಯಲ್ ಸರ್ಕಲ್ ವರೆಗೆ ತಾವು ಸಹ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. ಈ ವೇಳೆ ರಾಜ್ಯದ ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸೇವೆ ಹಾಗೂ ಕ್ರೀಡಾ ಖಾತೆ ಸಚಿವ ಬಿ. ನಾಗೇಂದ್ರ ಮತ್ತು ಶಾಸಕ ಭರತ್ (Minister B.Nagendra and MLA Bharath) ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಗೀತಾ ಶಿವರಾಜಕುಮಾರ್ ಅವರೊಂದಿಗೆ ಬಸ್ ನಲ್ಲಿ ಪ್ರಯಾಣಿಸಿದರು.
ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು (Gyarantee Scheme) ಕೊಟ್ಟು ರಾಜ್ಯದ ಮತದಾರರನ್ನು ಸೆಳೆದಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಪಾಲು. ಹಾಗಾಗಿ ನಾರಿ ಶಕ್ತಿ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಮಾವೇಶಗಳನ್ನು ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿ.
ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮತ್ತು ಅವರಿಗೆ ಸರ್ಕಾರದಿಂದ ಇರುವ ಅನುಕೂಲತೆ ಬಗ್ಗೆ ಅರಿವು ಮೂಡಿಸುವ ಮತ್ತು ಈ ಮೂಲಕ ಮುಂದಿನ ಚುನಾವಣೆಗೆ ಮಹಿಳೆಯರ ಮತ ಸೆಳೆಯುವ ಪ್ಲಾನ್ ಕಾಂಗ್ರೆಸ್ ದ್ದು. ಇದಕ್ಕೆ ಬಳ್ಳಾರಿಯಿಂದಲೇ ಚಾಲನೆ ಕೊಟ್ಟು ನಾರಿಶಕ್ತಿ ಯೋಜನೆಗೆ ಗೀತಾ ಶಿವರಾಜ್ ಕುಮಾರ್ ಅವರನ್ನೇ ರಾಯಭಾರಿಯಾಗಿ (Ambassador Narishathi) ಮಾಡಿದೆ.
ಬಳ್ಳಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವರಾದ ನಾಗೆಂದ್ರ ಹಾಗೂ ಶಾಸಕರಾದ ಭರತ್ ಅವರು ಮಹಿಳೆಯರಿಗೆ ಯೋಜನೆಗಳನ್ನು ವಿವರಣೆ ನೀಡಿದರು. ಭಾಷಣದ ಮಧ್ಯೆ ಗೀತಾ ಶಿವರಾಜ್ ಕುಮಾರ್ ಅವರು ಮುಂದಿನ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವುದು ಖಚಿತ ಎನ್ನುವಂತೆ ಸುಳಿವು ಸಹ ನೀಡಿದ್ದಾರೆ. ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲು ಇಟ್ಟು ನಾರಿ ಶಕ್ತಿ ವಂದನ್ ಇದು ಕರೆಯಲಾಗಿದ್ದ ಅದೇ ನಾರಿಶಕ್ತಿ ಹೆಸರು ಇಟ್ಟುಕೊಂಡು ರಾಜ್ಯದ ಮಹಿಳೆಯರ ಗಮನ ಸೆಳೆಯುತ್ತಿದೆ ಕಾಂಗ್ರೆಸ್