ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಸೀಸನ್ 10 ಕ್ಕೆ (Bigboss S10) ಎರಡು ವಾರ ತುಂಬಿದೆ. ಕಳೆದ ಒಂದು ದಶಕದಿಂದಲೂ ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದು ಪ್ರತಿವರ್ಷದ ಸೀಸನ್ ಗಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ವರ್ಷ ಕೂಡ ಅಂತೆಯೇ ನಿರೀಕ್ಷೆಗೆ ತಕ್ಕಂತೆ ಹಲವು ಜೋನ್ ಗಳ ಖ್ಯಾತರುಗಳು ಮನೆ ಸೇರಿದ್ದು ಅವರ ಆಟೋಟಗಳು ಮನೋರಂಜನೆ ನೀಡುತ್ತಿವೆ.
ಬಿಗ್ ಬಾಸ್ ನಲ್ಲಿ ವಿಭಿನ್ನವಾದ 17 ವ್ಯಕ್ತಿತ್ವಗಳು ಮನೆ ಸೇರಿ ವಾರಕ್ಕೆ ಒಬ್ಬರಂತೆ ಅವರು ಆಚೆ ಬರಲೇಬೇಕು. ಮನೆ ಮಂದಿ ಇಷ್ಟವಾಗದವರನ್ನು ನಾಮಿನೇಟ್ ಮಾಡಿದರೆ ಹೊರಗೆ ನೋಡುವ ಪ್ರೇಕ್ಷಕರು ತಮ್ಮಿಷ್ಟದವರನ್ನು ಉಳಿಸಿಕೊಳ್ಳಲು ವೋಟ್ ಮಾಡುವ ಚಾನ್ಸ್ ಇರುತ್ತದೆ ಎರಡು ಕಡೆಯಿಂದ ಸೋತವರು ಮನೆಯಿಂದ ಹೊರಬರಲೇಬೇಕು.
ಕೆಲವೊಮ್ಮೆ ಅವರ ವೀಕ್ ಪರ್ಫಾರ್ಮೆನ್ಸ್ ಗಳು ಅಥವಾ ಸೈಲೆಂಟ್ ಗೇಮ್ ಅಥವಾ ವಿಪರೀತದ ಪರಮಾವದಿಯು ಅವರಿಗೆ ಮನೆಯಿಂದ ಗೇಟ್ ಪಾಸ್ ಕೊಡುತ್ತದೆ. ಆದರೆ ಕೆಲವೊಮ್ಮೆ ಎಲ್ಲಾ ಸರಿ ಇದ್ದು ಆಶ್ಚರ್ಯ ಎನಿಸುವಂತಹ ಎಲಿಮಿನೇಷನ್ ಗಳು (Elimination) ನಡೆದು ಹೋಗಿ ಅದನ್ನು ಚರ್ಚೆ ವಿಷಯವನ್ನಾಗಿಸುತ್ತದೆ.
ಅದೇ ರೀತಿಯಾಗಿ ಬಿಗ್ ಬಾಸ್ ತನ್ನ ಎರಡು ವಾರದ ಎಲಿಮಿನೇಷನ್ಗಳು ಕೂಡ ಇಂಥದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಕಳೆದ ವಾರ ಸ್ನೇಕ್ ಶಾಮ್ ಅವರು ಔಟ್ ಆಗಿದ್ದರು ಅಲ್ಲಿದ್ದವರಿಗೆಲ್ಲ ಹಿರಿಯರಾಗಿದ್ದವರು ಫಿಸಿಕಲ್ ಟಾಸ್ಕ್ ಬಂದಾಗ ಸಹಜವಾಗಿ ವೀಕ್ ಎನಿಸಿಕೊಳ್ಳುತ್ತಿದ್ದರು ಇದೇ ಅವರಿಗೆ ಮುಳುವಾಯಿತು ಆದರೆ ಈ ಕಾರಣಕ್ಕಿಂತ ಅವರು ಹೊರಗೆ ಬೀಳಬಾರದು ಎನ್ನುವುದು ನೋಡುಗರ ಅಭಿಪ್ರಾಯ.
ಮುಂದುವರಿದು ಗೌರೀಶ್ ಅಕ್ಕಿ ಅವರು ಈ ವಾರ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿರುವುದು ಇದ್ದಂತೆ ಇದ್ದವರಿಗೆ ದೊಡ್ಮನೆಯಲ್ಲಿ ಉಳಿಗಾಲವಿಲ್ಲ ಎನ್ನುವ ಚರ್ಚೆ ಹುಟ್ಟು ಹಾಕಿದೆ. ಗೌರೀಶ್ ಅಕ್ಕಿಯವರು (Gowrish alki eliminate 2nd week) ಮನೆ ಮಂದಿಗೆಲ್ಲಾ ಇಷ್ಟವಾಗಿದ್ದರು. ಯಾರೊಂದಿಗೂ ಒಂದು ಮಾತು ಹೆಚ್ಚಿಗೆ ಆಡಿದವರಲ್ಲ, ಯಾರೊಂದಿಗೂ ಜಗಳ ಕಾದವರಲ್ಲ.
ಕಳೆದ ವಾರ ಕೂಡ ಸುದೀಪ್ ಅವರು ಇದನ್ನು ಹೇಳಿ ಎಚ್ಚರಿಸಿದ್ದರು. ಎಲ್ಲಿ ಅವಶ್ಯಕತೆ ಇದೆ ಅಲ್ಲಿ ನಿಮ್ಮ ಧ್ವನಿ ಎತ್ತಿ ಎಂದು ಕಿವಿಮಾತು ಹೇಳಿದ್ದರು. ಆದರೆ ಗೌರೀಶ್ ಅಕ್ಕಿಯವರ ಸೈಲೆನ್ಸ್ ಅವರ ಸೋಲಿಗೆ ಕಾರಣವಾಗಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಉಪನ್ಯಾಸಕರಾಗಿದ್ದ ಗೌರೀಶ ಅಕ್ಕಿ ಅವರು ಟಿವಿ9 ಇಂದ ಫೇಮಸ್ ಆದರು.
ಬಹಳ ಪ್ರಬುದ್ಧತೆಯ ವ್ಯಕ್ತಿತ್ವ ಹೊಂದಿರುವವರು ಜೀವನದಲ್ಲಿ ಬಹಳ ಅನುಭವ ಕಂಡವರು ಹಾಗಾಗಿ ಯಾವುದಕ್ಕೂ ಅತಿ ಹೆಚ್ಚು ರಿಯಾಕ್ಟ್ ಮಾಡದೆ ತಮ್ಮಂತೆ ತಾವು ನ್ಯಾಚುರಲ್ ಆಗಿ ಇದ್ದಂತೆ ಇದ್ದರು. ಇವರು ಮನೆಯಿಂದ ಹೊರ ಬಿದ್ದಿರುವುದು ವೀಕ್ಷಕರಿಗೆ ಸಹಿಸದಂತಾಗಿದೆ.
ಎರಡನೇ ವಾರದಲ್ಲಿ ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್, ಗೌರೀಶ್ ಅಕ್ಕಿ, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ ಹಾಗೂ ಭಾಗ್ಯಶ್ರೀರವರು ನಾಮಿನೇಟ್ ಆಗಿದ್ದರು. ಶನಿವಾರ ಕಾರ್ತಿಕ್ ಮಹೇಶ್ ಹಾಗೂ ತುಕಾಲಿ ಸಂತೋಷ್ ಸೇಫ್ ಆಗಿದ್ದರೆ ಭಾನುವಾರ ತನಿಶಾ ಸಂಗೀತ ಹಾಗೂ ಭಾಗ್ಯಶ್ರೀ ಅವರು ಸೇಫ್ ಆಗಿ ಗೌರೀಶ್ ಅಕ್ಕಿಯವರಿಗೆ ಗೇಟ್ ತೆರೆದಿದೆ.
ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀರ ವಿರೋಧ ವ್ಯಕ್ತವಾಗುತ್ತಿತ್ತು ಅವರಿಗೆ ಇನ್ನೊಂದು ಚಾನ್ಸ್ ಕೊಡಬೇಕಿತ್ತು ಅವರಿನ್ನು ಓಪನ್ ಆಗಿ ಇರಲಿಲ್ಲ ಹಾಗಿದ್ದರೆ ಲವ್ ,ರೊಮ್ಯಾನ್ಸ್, ವಿನಾಕಾರಣ ನಾನ್ ಸೆನ್ಸ್ ಕ್ರಿಯೇಟ್ ಮಾಡಿ ಅಬ್ಬರಿಸುವವರಿಗೆ ಮಾತ್ರವೇ ಬಿಗ್ ಬಾಸ್ ಎಂದು ತಮ್ಮ ಕೋ’ಪ ತೋರುತ್ತಿದ್ದಾರೆ.