ಅ.12 ಗುರುವಾರದಂದು ಗದಗ (Gadag) ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ (Ramappa Lamani) ರವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ (Congress) ಸೇರ್ಪಡೆಯಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಮುಖ್ಯಸ್ಥಿಕೆಯಲ್ಲಿ ಈ ಸಲುವಾಗಿ ಕಾರ್ಯಕ್ರಮ ಕೂಡ ಏರ್ಪಟ್ಟಿತ್ತು.
ಈ ಕಾರ್ಯಕ್ರಮದಲ್ಲಿ ಈಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಗೆ ಪಕ್ಷಾಂತರವಾದ (defection) ಮುಖಂಡರುಗಳಾದ ಮಾಜಿ ಉಪ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಸೇರಿದಂತೆ KPCC ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾನೂನು ಸಚಿವ ಮತ್ತು ಸಂಸದೀಯ ಸಚಿವ ಎಂ.ಬಿ ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ರಾಮಪ್ಪ ಲಮಾಣಿವರು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೇಡಿಕೆ ಇಡದೆ, ಮುಂದಿನ ಚುನಾವಣೆಯ ಟಿಕೆಟ್ ಕೂಡ ಅಪೇಕ್ಷಿಸದೆ ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನಾನು ಏನು ಎಂದು ನನ್ನ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ.
ಹಾಗಾಗಿ ಅವರು ನಾನು ಇದ್ದರೆ ಒಳ್ಳೆಯದು ಎನ್ನುವ ಭರವಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಸ್ವಾಗತಿಸಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿತ ಕಾಯುವುದಕ್ಕಾಗಿ ನಾನು ಶ್ರಮಿಸಲಿದ್ದೇನೆ ಮುಂದಿನ 10 ವರ್ಷಗಳವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರಲಿದೆ. ಈ ಬಾರಿ ಚುನಾವಣೆಯಲ್ಲಿ ಹಲವು BJP ಅಭ್ಯರ್ಥಿಗಳು ಕೇವಲ 1200 ಮತಗಳ ಹತ್ತಿರದಲ್ಲಿ ಗೆದ್ದಿದ್ದಾರೆ.
ಇಲ್ಲದಿದ್ದರೆ ರಾಜ್ಯದಲ್ಲಿ BJP 40 ಸಂಖ್ಯೆಗೆ ಇಳಿಯುತ್ತಿತ್ತು, ಇದು ಸಂಪೂರ್ಣವಾಗಿ ಧೂಳಿಪಟ ಆಗುವ ದಿನಗಳು ಬಹಳ ಹತ್ತಿರದಲ್ಲಿದೆ ಎಂದು BJP ಪಕ್ಷದ ಭವಿಷ್ಯ ಸಹ ನುಡಿದಿದ್ದಾರೆ. BJP ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿತ್ತಿದ್ದೆ ಆದರೆ ನನಗೆ ಬಹಳಷ್ಟು ನೋವನ್ನುಂಟು ಮಾಡುವ ಸಂಗತಿಗಳು ನಡೆದಿದೆ, ಹಾಗಾಗಿ ಬೇಸರದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.
ಮುಂದುವರೆದು ಆಪರೇಷನ್ ಹಸ್ತ ನಡೆಯುತ್ತಿರುವ ಸೂಚನೆಯ ಬಗ್ಗೆ ಸುಳಿವು ಕೊಟ್ಟ ಅವರು ಮುಂದಿನ ದಿನಗಳಲ್ಲಿ ಇನ್ನು ಅನೇಕ BJP ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಸೇರಲಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ. ಚುನಾವಣೆಗೂ ಮುನ್ನ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು BJP ಬಿಟ್ಟು ಕಾಂಗ್ರೆಸ್ ಸೇರಿದ್ದರು ಅವರ ಬಳಿ ಅನೇಕರು ಮಾತುಕತೆ ನಡೆಸಿದ್ದಾರೆ ಎನ್ನುವ ಮೂಲಕ ಇನ್ನು ಅನೇಕರು ತಮ್ಮನ ಹಿಂಬಾಲಿಸಲಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ
.ಇದೇ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ಆನೇಕರು ನಮ್ಮ ಶಾಸಕರನ್ನು ಭೇಟಿಯಾಗಿ ಹೋಗುತ್ತಿದ್ದಾರೆ ನನ್ನ ಬಳಿಗೆ 40 ಅರ್ಜಿಗಳು ಬಂದಿವೆ BJP-JDS ಮೈತ್ರಿ ಆಗಿರುವುದರಿಂದ ಅನೇಕರು ಪಕ್ಷ ಬಿಡುತ್ತಿದ್ದಾರೆ, ಇದಲ್ಲದೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಕೂಡ ಕಾಂಗ್ರೆಸ್ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್ ನಿಂದ ಚಾಮರಾಜನಗರಕ್ಕೆ ಅನೇಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ. ಆದರೆ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಸದ್ಯಕ್ಕೆ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ ಎನ್ನುವುದರ ಸುಳಿವು ನೀಡಿದ್ದಾರೆ.