ಕನ್ನಡ ಚಲನಚಿತ್ರರಂಗದಲ್ಲಿ ಈಗಷ್ಟೇ ಮಿಂಚಿನ ವೇಗದಲ್ಲಿ ಬೆಳೆಯುತ್ತಿದ್ದ ಅಪ್ಪಟ ಕನ್ನಡದ ಪ್ರತಿಭೆ ಹನಿಮೂನ್ ವೆಬ್ ಸೀರೀಸ್ ಖ್ಯಾತಿಯ ನಾಗಭೂಷಣ್ (Honeymoon web series famous actor Nagabhushan arrest). ಆರಂಭದಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಂಡ ಇವರು ಈಗಷ್ಟೇ ನಾಯಕ ನಟರಾಗಿ ಬಡ್ತಿ ಪಡೆಯುತ್ತಿದ್ದರು.
ತನ್ನ ಆತ್ಮೀಯ ಗೆಳೆಯ ಡಾಲಿ ಧನಂಜಯ್ (Dolly Dhananjay) ನಿರ್ಮಾಣದ ಟಗರು ಪಲ್ಯ (Tagaru palya Movie) ಸಿನಿಮಾದಲ್ಲಿ ನಾಯಕ ನಟನಾಗಿ ಲಾಂಚ್ ಆಗಬೇಕಿದ್ದ ನಟ ನಾಗಭೂಷಣ್ ನಮ್ಮ ಬೇಜವಾಬ್ದಾರಿತನದ ಕಾರ್ ಡ್ರೈವಿಂಗ್ (Rash driving) ಪರಿಣಾಮ ಮಹಿಳೆಯೊಬ್ಬರ ಸಾ’ವಿ’ಗೆ ಕಾರಣರಾಗಿ ಅ’ರೆ’ಸ್ಟ್ ಆಗಿದ್ದಾರೆ. ಸೆಪ್ಟೆಂಬರ್ 29ರ ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ಈಗಷ್ಟೇ ಬೆಳಕಿಗೆ ಬಂದಿದೆ ಇದರ ಕುರಿತು ವಿವರ ಇಲ್ಲಿದೆ ನೋಡಿ.
ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ತಮ್ಮ ಅತಿವೇಗದ SUV ಕಾರ್ ನ್ನು ದಂಪತಿಗಳ ಮೇಲೆ ಹೇರಿದ ಆರೋಪದ ಮೇಲೆ ಕನ್ನಡ ನಟ ನಾಗಭೂಷಣ ಅವರನ್ನು ಬಂಧಿಸಲಾಗಿದೆ. ಕೋಣನಕುಂಟೆ ಮಾರ್ಗವಾಗಿ ಚಲಿಸುತ್ತಿದ್ದ ನಾಗಭೂಷಣ್ ಅವರು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ವಸಂತಪುರದ ಮುಖ್ಯರಸ್ತೆಯ ಬಳಿ ಕಾಲು ದಾರಿಯಲ್ಲಿ ಸಾಗುತ್ತಿದ್ದ ದಂಪತಿಗಳಿಗೆ ಮೇಲೆ ಹರಿಸಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ.
ಉತ್ತರಹಳ್ಳಿಯಿಂದ ಕನಕಪುರ ಮಾರ್ಗವಾಗಿ ಅತಿ ವೇಗವಾಗಿ ಕಾರ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಮ್ಮಿಂದ ಆ’ಕ್ಸಿ’ಡೆಂ’ಟ್ ಆದ ಕೂಡಲೇ ಕೆಳಗಿಳಿದು ತಕ್ಷಣವೇ ದಂಪತಿಗಳನ್ನು ಆಸ್ಪತ್ರೆ ಸಾಗಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.
ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!
ಆದರೆ ದುರಾದೃಷ್ಟವಶಾತ್ 48 ವರ್ಷದ ಪ್ರೇಮಾ ಎನ್ನುವ ಮಹಿಳೆಯು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ, ಆಕೆಯ ಪತಿ ಕೃಷ್ಣ ಬಿ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಕೃಷ್ಣ ಅವರಿಗೂ ಕೂಡ ಸಾಕಷ್ಟು ಪೆಟ್ಟಾಗಿದ್ದು ದೇಹದ ಹಲವು ಭಾಗಗಳು ಫ್ರಾಕ್ಚರ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ದಂಪತಿಗಳ ಮಕ್ಕಳು ಹೇಳುತ್ತಿದ್ದಾರೆ.
ಘಟನೆಯಲ್ಲಿ ಅಪಘಾತಕ್ಕೊಳಗಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರ ರೋ’ಧ’ನೆ ಮುಗಿಲು ಮುಟ್ಟುವಂತಿದೆ. ಸೋಶಿಯಲ್ ಮೀಡಿಯಾದಲ್ಲಿ ನಟನನ್ನು ಶಪಿಸುತ್ತಾ ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಕುಮಾರಸ್ವಾಮಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನಟನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಗಾಗಿ ಪೊಲೀಸರು ಅವರ ವಿರುದ್ಧ ಸೆಕ್ಷನ್ 304 ನಡಿ FIR ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೇರವಾಗಿ ರಿಲೀಸ್ ಆದ ಕನ್ನಡ ಹಾಸ್ಯ ಚಲನಚಿತ್ರ ಇಕ್ಕಟ್ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿತ್ತು.
ಅದರಿಂದ ಈಚೆಗೆ ಸಿನಿಮಾ ರಂಗದಲ್ಲಿ ಬಹಳ ಬ್ಯುಸಿಯಾಗಿದ್ದರು. 2022ರಲ್ಲಿ ಲಕ್ಕಿ ಮ್ಯಾನ್ , ಮೇಡ್ ಇನ್ ಚೈನಾ, ನೋಡಿ ಸ್ವಾಮಿ ಇವನು ಇರೋದೇ ಹೀಗೆ ಮತ್ತು ಡೇರ್ಡೆವಿಲ್ ಮುಸ್ತಫಾ ಮುಂತಾದ ಬಹು ಚಲನಚಿತ್ರಗಳಲ್ಲಿ ಹಾಸ್ಯ ನಟನಾಗಿ ಮಿಂಚಿದ್ದರು. ಅವರು ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ವೆಬ್ ಸರಣಿ ಹನಿಮೂನ್ ಕೂಡ ಇವರಿಗೆ ಹೆಚ್ಚಿನ ಹೆಸರು ನೀಡಿದ್ದು.
ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?
ಈಗಷ್ಟೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಂಡಿದ್ದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಕೂಡ ಬಹು ಮುಖ್ಯಪಾತ್ರ ನಿರ್ವಹಿಸಿದ್ದರು. ಟಗರು ಪಲ್ಯ ಸಿನಿಮಾದ ಕುರಿತಾಗಿ ಹೆಚ್ಚು ಸುದ್ದಿಯಲ್ಲಿದ್ದರು.