ಡಿಸ್ಕೋ ಶಾಂತಿ (Disko Shanthi) ಕನ್ನಡ ಭಾಷೆ ಮಾತ್ರವಲ್ಲದೆ ಇತರೆ ಭಾಷೆಗಳನ್ನು ಕೂಡ ಹೆಸರಾಂತ ನಟಿ. ಆದರೆ ಇವರು ಸಿನಿಮಾದಲ್ಲಿನ ನಟನೆಗಿಂತ ಡ್ಯಾನ್ಸ್ (Dancer) ಮೂಲಕವೇ ಗುರುತಿಸಿಕೊಂಡವರು. ಸಿನಿಮಾದಲ್ಲಿ ಕ್ಯಾಬರೆ ಡ್ಯಾನ್ಸರ್ ಪಾತ್ರ ಮಾಡುವುದಕ್ಕೆ ಬಹಳ ಫೇಮಸ್ ಆಗಿದ್ದ ಈ ನಟಿ ವೈಯುಕ್ತಿಕ ಜೀವನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ.
ಆಗಿನ ಕಾಲದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಈ ನಟಿ ನಂತರ ಯಾರನ್ನು ಮದುವೆ ಆದರೂ ಸಿನಿಮಾ ಇಂಡಸ್ಟ್ರಿಯರನ್ನು ಮಾತ್ರ ಮದುವೆ ಆಗಬಾರದು ಎಂದುಕೊಂಡಿದ್ದವರು ನಂತರ ಸೇರಿದ್ದು ಕೂಡ ಕಲಾವಿದನ ಮನಸನ್ನೇ. ಎಲ್ಲರೂ ಐ ಲವ್ ಯು ಹೇಳುತ್ತಿದ್ದ ಈ ನಟಿಗೆ ಮದುವೆಯಾಗುತ್ತೀಯಾ ಎಂದು ಕೇಳಿ ಮನೆ ತುಂಬಿಸಿಕೊಂಡಿದ್ದ ನಟನ ಹೃದಯವಂತಿಕೆ ಬಗ್ಗೆ ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ನಟಿ ಮಾತನಾಡಿದ್ದಾರೆ.
ಅಷ್ಟಕ್ಕೂ ಡಿಸ್ಕೋ ಶಾಂತಿಯವರು ಮದುವೆಯಾಗಿದ್ದು ಯಾರನ್ನು ಗೊತ್ತಾ? ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿರಂಗದಲ್ಲೂಯ ವಿಶೇಷವಾದ ಪಾತ್ರಗಳನ್ನು ನಟಿಸುವ ಮೂಲಕ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿರುವ ನಟ ಶ್ರೀಹರಿ (Actor Sri Hari) ಅವರನ್ನು ವಿವಾಹವಾಗಿದ್ದರು.
ಇದರಲ್ಲಿ ಮತ್ತೊಂದು ವಿಶೇಷತೆ ಏನೆಂದರೆ ಇವರಿಬ್ಬರದು ಲವ್ ಮ್ಯಾರೇಜ್ ಆಗಿತ್ತು, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಇವರು ಏಳು ವರ್ಷಗಳವರೆಗೆ ರಹಸ್ಯ ಕಾಯ್ದುಕೊಂಡಿದ್ದರು. ನಂತರ ಎರಡೂ ಕುಟುಂಬದವರ ಒಪ್ಪಿಗೆ ಪಡೆದು ವಿವಾಹವಾದರು ವಿವಾಹವಾದ ಬಳಿಕವೂ ಕೂಡ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದ ನಟಿಗೆ ಜೀವನದ ಪ್ರತಿ ಹೆಜ್ಜೆಯಲ್ಲೂ ಕೂಡ ಜೊತೆ ಜೊತೆಯಾಗಿ ನಿಂತವರು ಶ್ರೀಹರಿ.
ಮಗಳು ಅಕ್ಷರ ಸೇರಿ ದಂಪತಿಗೆ ಮೂರು ಜನ ಮಕ್ಕಳು ಆದರೆ ಅಕ್ಷರ ನಾಲ್ಕು ತಿಂಗಳ ಮಗುವಿದ್ದಾಗಲೇ ಅನಾರೋಗ್ಯದಿಂದ ಮೃ’ತಪಟ್ಟರು. ಈಗಲೂ ಸಹ ಅವರ ನೆನಪಿಗಾಗಿ ಅಕ್ಷರ ಫೌಂಡೇಶನ್ (Akshara foundation) ಎನ್ನುವ ಸಂಸ್ಥೆ ಕಟ್ಟಿ ಸಮಾಜಸೇವೆ ಮಾಡಿಕೊಂಡು ಬರುತ್ತಿದ್ದಾರೆ ಡಿಸ್ಕೋ ಶಾಂತಿ ಕುಟುಂಬ.
ಮೇಘಾಂಕ್ ಶ್ರೀಹರಿ, ಶಶಾಂಕ್ ಶ್ರೀ ಹರಿ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ, ಮೇಘಾಮ್ ಶ್ರೀಹರಿಯವರು ಟಾಲಿವುಡ್ ಹೀರೋ ಆಗಿದ್ದು ಅವರ ರಾಜದೂತ್ ಸಿನಿಮಾ ಈಗ ರಿಲೀಸ್ ಗೆ ರೆಡಿಯಾಗಿದೆ. ನಂದಗೋಕುಲದಂತೆ ಇದ್ದ ಕುಟುಂಬಕ್ಕೆ 2013ರಲ್ಲಿ ಬರಸಿಡಿಲಿನಂತೆ ಅಪ್ಪಳಿಸಿತು. ಅನಾರೋಗ್ಯ ಕಾರಣದಿಂದಾಗಿ 2013ರಲ್ಲಿ ಶ್ರೀಹರಿಯವರು ಇಹ ಲೋಕ ತ್ಯಜಿಸಿದರು.
ಆ ಶಾ’ಕ್ ನಿಂದ ಅನೇಕ ದಿನಗಳವರೆಗೆ ಡಿಸ್ಕೋ ಶಾಂತಿ ಕೂಡ ಹಾಸಿಗೆ ಹಿಡಿದಿದ್ದರು. ಬಳಿಕ ಇದೀಗ ಸುಧಾರಿಸಿಕೊಂಡು ಮಕ್ಕಳೊಂದಿಗೆ ಹೈದರಬಾದ್ ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ವಿಷಯ ಹಂಚಿಕೊಂಡಿದ್ದಾರೆ.
ತೆಲುಗಿನ ದಾದರ್ ಎಕ್ಸ್ಪ್ರೆಸ್ ಸಿನಿಮಾ (Dhadar express movie) ಸಮಯದಲ್ಲಿ ಶ್ರೀಹರಿ ಪರಿಚಯವಾಯಿತು, ಆ ಸಿನಿಮಾದ ಐದು ವಿಲನ್ ಗಳಲ್ಲಿ ಅವರು ಕೂಡ ಒಬ್ಬರಾಗಿದ್ದರು. ಸಹಕಲಾವಿದರು ಫೋನ್ ನಂಬರ್ ಎಲ್ಲರ ಬಳಿ ಇರುತ್ತಿತ್ತು ಆಗ ಫ್ರೆಂಡ್ಶಿಪ್ ಶುರು ಆಗಿತ್ತು. ಎಲ್ಲರೂ ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದರು ಆದರೆ ಅವರು ಮದುವೆಯಾಗಿತ್ತೀರಾ ಎಂದಿದ್ದು ವಿಶೇಷ ಎನಿಸಿತು ಹಾಗಾಗಿ ಒಪ್ಪಿಕೊಂಡೆ. ಅದೇ ರೀತಿಯಾದ ಇರುವಷ್ಟು ದಿನ ಪ್ರೀತಿಯಿಂದ ನೋಡಿಕೊಂಡರು ಎಂದು ಶ್ರೀಹರಿ ನೆನೆದು ಕಣ್ಣೀರಿಡುತ್ತಾರೆ ಡಿಸ್ಕೋ ಶಾಂತಿ.