ನಟ ದುನಿಯಾ ವಿಜಯ್ ಸಿನಿಮಾ ದುನಿಯಾದಲ್ಲಿ ಬಹಳ ಸದ್ದು ಮಾಡಿರುವ ನಟ. ಸಾಹಸ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಬಹಳ ಲೇಟ್ ಆಗಿ ಬಣ್ಣ ಹಚ್ಚಿದರೂ ಕೂಡ ಬಣ್ಣದ ಪ್ರಪಂಚದಲ್ಲಿ ತಮ್ಮದೇ ಆದ ಒಂದು ಛಾಪನ್ನು ಮೂಡಿಸಿದ್ದಾರೆ. ದುನಿಯಾ ವಿಜಯ್ ಅವರು ಆರಂಭದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಣ್ಣ ಹಚ್ಚುತ್ತಾ ನಂತರ ವಿಲ್ಲನ್ ರೋಲ್ಗಳಲ್ಲಿ ಕಾಣಿಸಿಕೊಂಡು ಈಗ ತೆರೆ ಮೇಲೆ ರಕ್ಕಸನಂತೆ ಆರ್ಭಟಿಸುತ್ತಿದ್ದಾರೆ.
ದುನಿಯಾ ಎನ್ನುವ ಸಿನಿಮಾ ಮೂಲಕ ನಾಯಕನಟನಾಗಿ ಕಾಣಿಸಿಕೊಂಡ ಇವರು ಸಾಕಷ್ಟು ಸಿನಿಮಾಗಳನ್ನು ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ನಿರ್ದೇಶನಕ್ಕೂ ಇಳಿದಿರುವ ದುನಿಯಾ ವಿಜಯ್ ಅವರು ಸಲಗ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿ ಗೆದ್ದರು. ಆ ಸಕ್ಸಸ್ ಗೆ ಈಗ ಅವರು ಪತ್ನಿಗಾಗಿ ದೊಡ್ಡ ಬಂಗಲೆ ಕಟ್ಟಿಸಿರುವುದು ಸಾಕ್ಷಿಯಾಗಿದೆ.
ದುನಿಯಾ ವಿಜಯ್ ಅವರು ಮೊದಲು ನಾಗರತ್ನ ಎನ್ನುವವರನ್ನು ವಿವಾಹವಾಗಿದ್ದರು. ಅವರಿಗೆ ವಿಚ್ಛೇದನ ಕೊಟ್ಟು ನಟಿ ಕೀರ್ತಿ ಅವರನ್ನು ಮದುವೆ ಆದಾಗಲಿಂದ ಸದಾ ಒಂದಲ್ಲ ಒಂದು ವಿವಾದಗಳನ್ನು ಎದುರಿಸುತ್ತಲೇ ಬಂದರು. ಸದ್ಯಕ್ಕೆ ಈಗ ಎಲ್ಲವೂ ತಣ್ಣಗಾಗಿದ್ದು ಇತ್ತೀಚಿಗೆ ಸಲಗಾ ಸಿನಿಮಾದಲ್ಲಿ ಕೀರ್ತಿ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಅದು ದುನಿಯಾ ವಿಜಯ್ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿತ್ತು.
ಈ ದಂಪತಿಗಳಿಗೆ ಒಂದು ಮಗು ಕೂಡ ಇದ್ದು ಕೀರ್ತಿಯನ್ನು ದುನಿಯಾ ವಿಜಯ್ ಅವರು ಬಹಳ ಪ್ರೀತಿಸುತ್ತಾರೆ ಎನ್ನುವುದನ್ನು ಆಕೆಗಾಗಿ ದೊಡ್ಡ ಭವ್ಯ ಬಂಗಲೆ ಕಟ್ಟಿಸುವ ಮೂಲಕ ನಿರೂಪಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 4 ಕೋಟಿ ಬೆಲೆ ಬಾಳುವ ಆಧುನಿಕ ಸೌಲಭ್ಯಗಳನ್ನೆಲ್ಲಾ ಹೊಂದಿರುವ ಒಂದು ಅರಮನೆಯಂತಹ ಮನೆಯನ್ನು ಕೀರ್ತಿಗಾಗಿ ಕಟ್ಟಿಸಿದ್ದಾರೆ.
ಸಲಗ ಸಿನಿಮಾದ ಗೆಲುವಿಗೆ ಕೀರ್ತಿ ಕೂಡ ಕಾರಣ ಎಂದು ಹೇಳಿಕೊಳ್ಳುವ ದುನಿಯಾ ವಿಜಯ್ ಅವರು ಪ್ರೀತಿಯ ಮಡದಿ ಹಾಗೂ ಮಗುವಿಗಾಗಿ ಈ ಗಿಫ್ಟ್ ಕೊಟ್ಟಿದ್ದಾರೆ. ದುನಿಯಾ ವಿಜಯ್ ಅವರು ಒಂದು ಸಮಯದಲ್ಲಿ ಬಹಳ ಮಿಂಚುತ್ತಿದ್ದ ನಟ ದುನಿಯಾ, ಚಂಡ, ತಾಕತ್, ಜರಾಸಂಧ, ಜಾನಿ ಮೇರಾ ನಾಮ್ ಇನ್ನೂ ಮುಂತಾದ ಅನೇಕ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಅವರು ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಸರಾಗಿದ್ದು ಜಾಸ್ತಿ.
ಇತ್ತೀಚೆಗೆ ಅವರ ಯಾವ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಹೆಸರು ಮಾಡಿರಲಿಲ್ಲ, ಆದರೆ ಇದಕ್ಕೆಲ್ಲ ದೊಡ್ಡ ಬ್ರೇಕ್ ಕೊಟ್ಟಿದ್ದು ಸಲಗ ಚಿತ್ರ. ಸಲಗ ಚಿತ್ರದ ಗೆಲುವಲ್ಲಿ ಕೀರ್ತಿಯವರ ಪಾಲು ಕೂಡ ಅಷ್ಟೇ ಇದೆ. ತೆರೆ ಮೇಲೆ ಮತ್ತು ತೆರೆ ಹಿಂದೆ ಕೂಡ ಅವರ ಪರಿಶ್ರಮವು ಇದೆ. ಇತ್ತೀಚೆಗೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ನಟರಿಗೆಲ್ಲಾ ಪರಭಾಷೆಯಲ್ಲಿ ಬಹಳ ಬೇಡಿಕೆ ಇದೆ.
ಯಾವಾಗ ಸುದೀಪ್ ಅವರು ಈಗ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲು ತೆಲುಗು ಇಂಡಸ್ಟ್ರಿ ಗೆ ಹೋಗಿದ್ದರು, ಆ ಮೂಲಕ ಮತ್ತಷ್ಟು ನಟರು ಅದೇ ದಾರಿ ಹಿಡಿದರು ಎನ್ನಬಹುದು. ಕಳೆದ ವರ್ಷ ತೆರೆಕಂಡ ಸೂಪರ್ ಹಿಟ್ ತೆಲುಗು ಪಾನ್ ಇಂಡಿಯಾ ಸಿನಿಮಾ ಪುಷ್ಪ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಕೂಡ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈಗ ತೆಲುಗಿನ ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ ಅವರ ನಟನೆಯ ವೀರನರಸಿಂಹ ರೆಡ್ಡಿ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಕಾಣಿಸಿಕೊಂಡಿದ್ದಾರೆ.
ಖಡಕ್ ವಿಲ್ಲನ್ ರೋಲ್ ಅಲ್ಲಿ ಎಂಟ್ರಿ ಕೊಡುವ ಮೂಲಕ ತೆಲುಗು ಇಂಡಸ್ಟ್ರಿಯನ್ನು ಶೇಕ್ ಮಾಡಿದ್ದಾರೆ ಎಂದು ಹೇಳಬಹುದು. ನಮ್ಮ ಕಲಾವಿದರು ಬೇರೆ ಇಂಡಸ್ಟ್ರಿಯಲ್ಲೂ ಬೆಳಗುತ್ತಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.