ವಿನೋದ್ ರಾಜ್ ಅವರ ಬಗ್ಗೆ ಅಣ್ಣಾವ್ರ ಎದುರು ಪ್ರಶ್ನೆ ಇಟ್ಟಿದ್ದ ನಿರ್ದೇಶಕ ಪ್ರಕಾಶ್ ಮೇಹು, ಇದಕ್ಕೆ ಅಣ್ಣಾವ್ರು ಕೊಟ್ಟಿದ್ದ ಉತ್ತರ ಬೆಚ್ಚಿ ಬೀಳುವಂತಿತ್ತು. ನಿರ್ದೇಶಕ ಪ್ರಕಾಶ್ ಮೆಹು (Director Prakash Mehu ) ಅವರು ಡಾ.ರಾಜ್ ಕುಮಾರ್ (Dr.Raj Kumar) ಕುಟುಂಬಕ್ಕೆ ಬಹಳ ಆತ್ಮೀಯರು. ಬಹಳ ವರ್ಷಗಳ ಕಾಲ ಅವರ ಜೊತೆ ಇದ್ದ ಕಾರಣ ಅಣ್ಣವರಿಗೆ ಸಹೋದರನಂತಿದ್ದರು. ಅಣ್ಣಾವ್ರಿಗಾಗಿ “ಅಂತರಂಗದಲ್ಲಿ ಅಣ್ಣ” (Antharangadalli Anna) ಎನ್ನುವ ಪುಸ್ತಕವನ್ನು ಕೂಡ ಪ್ರಕಾಶ್ ಮೇಹು ಅವರು ಬರೆದಿದ್ದಾರೆ.
ಈಗ ಅವರು ಅಣ್ಣಾವ್ರು ವಿನೋದ್ ರಾಜ್ ( Vinod raj) ಬಗ್ಗೆ ಹೇಳಿದ್ದ ಮಾತು ಹೇಳಿ ಎಲ್ಲರಿಗೂ ಆ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅದೇನೆಂದರೆ ಟೋಟಲ್ ಯೂಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರ ಬಗ್ಗೆ ಪ್ರಕಾಶ್ ಮೆಹು ಮಾತನಾಡುತ್ತಿದ್ದರು. ಆಗ ಅವರು ಅಣ್ಣಾವರ ಬಳಿ ವಿನೋದ್ ರಾಜಕುಮಾರ್ ಅವರ ಬಗ್ಗೆ ಕೇಳಿದ್ದ ಘಟನೆಯನ್ನು ನೆನೆಸಿಕೊಂಡು ಆ ಸಂದರ್ಭದ ಬಗ್ಗೆ ಮತ್ತು ಅದಕ್ಕೆ ಅಣ್ಣಾವ್ರು ಕೊಟ್ಟ ಸ್ಪಷ್ಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ನಾನು ಅಣ್ಣಾವ್ರು ಮತ್ತು ವರದಪ್ಪ ಕುಳಿತುಕೊಂಡು ಟಿವಿ ನೋಡುತ್ತಿದ್ದೆವು. ತಮಿಳಿನ ವೈಟ್ ಅಂಡ್ ಬ್ಲಾಕ್ ಸಿನಿಮಾ ಬರುತ್ತಿತ್ತು. ಆ ಸಿನಿಮಾದ ಹೀರೋ ತಮಿಳಿನ ಖ್ಯಾತ ನಟರ ಅನಧಿಕೃತ ಮಗ. ಆಗ ಅಣ್ಣಾವ್ರು ವರದಪ್ಪನಿಗೆ ತೋರಿಸಿ ನೋಡು ಆ ಹೀರೋ ಅವನ ರೀತಿಯ ಇದ್ದಾರೆ, ಅವನ ಇಬ್ಬರ ಮಕ್ಕಳಿಗೂ ಕೂಡ ಇಷ್ಟು ಹೋಲಿಕೆ ಇಲ್ಲ ಇವನೇ ಹೆಚ್ಚು ಹೋಲುತ್ತಾನೆ ಎಂದು ಹೇಳಿದಾಗ ವರದಪ್ಪನವರು ಅದು ಓಪನ್ ಸೀಕ್ರೆಟ್, ಅಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ಹೇಳಿ ಹೋಗಿ ಬಿಡುತ್ತಾರೆ.
ನಂತರ ಪ್ರಕಾಶ್ ಮೇಹು ಹಾಗೂ ಅಣ್ಣಾವ್ರು ಇಬ್ಬರೇ ಕುಳಿತು ಟಿವಿ ನೋಡುತ್ತಿದ್ದಾಗ ವಿನೋದ್ ರಾಜ್ ಬಗ್ಗೆ ಕೇಳಿ ಬಿಡೋಣ ಎಂದು ನಿರ್ಧರಿಸಿ ಪ್ರಕಾಶ್ ಮೆಹು ಧೈರ್ಯ ಮಾಡಿ ಅಣ್ಣಾವ್ರ ಬಳಿ ಲೀಲಾವತಿ (Leelavathi) ಅವರು ಎಲ್ಲಾ ಕಡೆ ವಿನೋದ್ ರಾಜ್ ನಿಮ್ಮ ಮಗ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇದು ನಿಜನಾ ಅಪ್ಪಾಜಿ ಎಂದು ಕೇಳಿ ಬಿಟ್ಟೆ , ಆ ಪ್ರಶ್ನೆ ಕೇಳಿ ರಾಜಕುಮಾರ ಅವರನ್ನು ನೋಡಿ ಪ್ರಕಾಶ್ ಬೇಜಾರಾಗಿ, ತಪ್ಪು ಮಾತಾಡಿ ಬಿಟ್ಟೆನಾ ಅಂದುಕೊಳ್ಳುತ್ತಿದ್ದೆ ಅಷ್ಟರಲ್ಲಿ ಅಣ್ಣಾವ್ರೇ ಮೌನ ಮುರಿದು ಮಾತನಾಡಿದರು.
ವಯಸ್ಸು ಎಲ್ಲರಿಂದಲೂ ತಪ್ಪು ಮಾಡಿಸುತ್ತದೆ ಆದರೆ ಆ ಮಗು ಹುಟ್ಟುವ ಮೂರು ವರ್ಷದ ಮೊದಲೇ ನಮ್ಮ ಸಂಬಂಧ ಕಡಿದು ಹೋಗಿತ್ತು. ಅವರು ಯಾಕೆ ಆ ರೀತಿ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಆದರೆ ನನ್ನ ಹೆಸರು ಹೇಳುವುದರಿಂದ ಅವರಿಗೂ ಅವರ ಮಗನಿಗೂ ಒಳ್ಳೆಯದಾಗುವುದಾದರೆ ನಾನೇಕೆ ತಡೆಯಲಿ ಹೇಳಿಕೊಳ್ಳಲಿ ಬಿಡು ಎಂದು ಹೇಳಿದರಂತೆ. ಜೊತೆಗೆ ನನಗೆ ಇರುವ ಮಾಹಿತಿ ಪ್ರಕಾರ ರಂಗಭೂಮಿ ಕಲಾವಿದರಾದ ಮಹಾಲಿಂಗ ಭಾಗವತ (Mahalinga Bhagavathar) ಅವರನ್ನು ಅವರು ಮದುವೆ ಆಗಿದ್ದರು.
ವಿನೋದ್ ರಾಜ್ ಮಹಾಲಿಂಗ ಭಾಗವತ ಅವರ ಮಗ ಎಂದೆ ನಮ್ಮ ಅಭಿಪ್ರಾಯ ಎಂದು ಅಣ್ಣಾವ್ರು ಸಹ ಹೇಳಿದರಂತೆ. ಆದರೆ ಇತ್ತೀಚೆಗೆ ರವಿ ಬೆಳಗೆರೆ (Ravi Belagere) ಅವರು “ರಾಜ್ ಲೀಲಾ ವಿನೋದ” (Raj Leela Vinoda) ಎನ್ನುವ ಪುಸ್ತಕ ಬರೆದು ಪ್ರಕಟ ಮಾಡಿದ್ದರು. ಪುಸ್ತಕದಲ್ಲಿ ರಾಜಕುಮಾರ್ ಮತ್ತು ಲೀಲಾವತಿ ಸಂಬಂಧದ ಬಗ್ಗೆ ಇದೆ ಎನ್ನಲಾಗಿತ್ತು.
ಇದೆಲ್ಲವೂ ಅವರ ಮಾರ್ಕೆಟಿಂಗ್ ಸ್ಟಾಟರ್ಜಿ. ಅದಕ್ಕಾಗಿ ನಾನು ಅಂತರಂಗದಲ್ಲಿ ಅಣ್ಣ ಪುಸ್ತಕ ಬರೆದಿದ್ದು. ರವಿ ಬೆಳಗೆರೆ ಪುಸ್ತಕದಲ್ಲಿ ಲೀಲಾವತಿ ಅವರು ಹೇಳಿದ್ದಷ್ಟೇ ಬರೆಯಲಾಗಿದೆ ಅದು ಪೂರ್ತಿ ಸತ್ಯ ಹೇಗಾಗುತ್ತದೆ ಎಂದು ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆ ಮತ್ತು ತಾವು ಬರೆದಿರುವ ಅಂತರಂಗದಲ್ಲಿ ಅಣ್ಣ ಪುಸ್ತಕದ ಬಗ್ಗೆ ಹಾಗೂ ಇಷ್ಟು ವರ್ಷದ ಒಡನಾಟದಲ್ಲಿ ತಾವು ರಾಜಕುಮಾರ ಅವರ ಬಗ್ಗೆ ನೋಡಿ ಅರಿತುಕೊಂಡ ಅನೇಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಆ ಸಂದರ್ಶನದಲ್ಲಿ ಪ್ರಕಾಶ್ ಮೇವು ಅವರು ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.