Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!

Posted on February 23, 2023 By Admin No Comments on ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರವಿಲ್ಲ. ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅಣ್ಣಾವ್ರು ಇದೊಂದು ಸಿನಿಮಾವನ್ನು ಮಾತ್ರ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ.!

 

ಡಾಕ್ಟರ್ ರಾಜಕುಮಾರ್ ಈ ಹೆಸರಿಗೆ ಅವರೇ ಸಾಟಿ. ಕನ್ನಡ ಚಲನಚಿತ್ರ ರಂಗದಲ್ಲಿ ಎಂದಿಗೂ ರಾರಾಜಿಸುವ ಹೆಸರು, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ರಾಜನ ಸ್ಥಾನದಲ್ಲಿ ನಿಂತಿರುವ ಹೆಸರು ಡಾಕ್ಟರ್ ರಾಜಕುಮಾರ್ ಅವರದ್ದು. ಅಣ್ಣಾವ್ರು ಎಂದು ಸರಳವಾಗಿ ಕರೆಸಿಕೊಳ್ಳುತ್ತಿದ್ದ ರಾಜಕುಮಾರ್ ಅವರಿಗೆ ಸಿಕ್ಕಿರುವ ಟೈಟಲ್ ಗಳು ಅಂತಿಂತದಲ್ಲ. ಕನ್ನಡ ಕುಲ ಕಂಠೀರವ, ನಟಸಾರ್ವಭೌಮ, ಮೇರುನಟ ಇನ್ನು ಮುಂತಾದ ಹೆಸರುಗಳನ್ನು ನಟನೆಯ ಮೂಲಕ ಸಂಪಾದಿಸಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಒಂದು ವರ ಎಂದೂ ಹೇಳಬಹುದು.

ವರನಟ ಎಂದು ಕೂಡ ಕರೆಸಿಕೊಳ್ಳುತ್ತಿದ್ದ ಇವರು ಮಾಡುತ್ತಿದ್ದ ಪಾತ್ರಗಳು ಜನರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತಿತ್ತು. ಜೊತೆಗೆ ಯಾವುದೇ ಪಾತ್ರ ಕೊಟ್ಟರೂ ಕೂಡ ಅಷ್ಟೇ ಸಲೀಸಾಗಿ ಅದನ್ನು ಪರಕಾಯ ಪ್ರವೇಶ ಮಾಡಿಕೊಂಡು ಸಹಜವಾಗಿ ಅಭಿನಯಿಸಿ ಬಿಡುತ್ತಿದ್ದರು ಅಣ್ಣಾವ್ರು. ಅದಕ್ಕಾಗಿಯೇ ಇಂದು ಅವರ ಹೆಸರು ಅಮರ ಆಗಿರುವುದು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶದ ಎಲ್ಲಾ ಚಿತ್ರರಂಗದ ಗಣ್ಯರು ಕೂಡ ಅಣ್ಣಾವ್ರ ಅಭಿನಯಕ್ಕೆ ಮಾರು ಹೋಗಿದ್ದರು.

ಎಲ್ಲಾ ಭಾಷೆಯಲ್ಲೂ ಕೂಡ ಅಣ್ಣಾವರಿಗೆ ಅಭಿನಯ ಮಾಡಲು ಆಫರ್ ಇದ್ದರೂ ಕೂಡ ಕನ್ನಡಕ್ಕೆ ಅವರು ಪ್ರಾಮುಖ್ಯತೆ ಕೊಟ್ಟು ನಯವಾಗಿ ಎಲ್ಲವನ್ನು ತಿರಸ್ಕರಿಸಿದ್ದರು. ಅಮೆರಿಕ ಮೂಲದ ಸಂಸ್ಥೆಯೊಂದು ಮಾಡಿದ ಸಂಶೋಧನೆ ಪ್ರಕಾರ ಇಡೀ ಪ್ರಪಂಚದಲ್ಲಿಯೇ ಒಬ್ಬ ನಟ ಎಲ್ಲಾ ಪಾತ್ರವನ್ನು ಕೂಡ ಮಾಡಿ ಗೆದ್ದಿದ್ದಾನೆ ಎಂದರೆ, ಒಂದಾರ್ಥದಲ್ಲಿ ಎಲ್ಲಾ ಪಾತ್ರಗಳಿಗೂ ಕೂಡ ಹೊಂದುತ್ತಾರೆ ಎಂದರೆ ಅದು ಡಾಕ್ಟರ್ ರಾಜಕುಮಾರ್ ಮಾತ್ರ ಎಂದು ವರದಿ ನೀಡಿದೆ. ಅಷ್ಟರಮಟ್ಟಿಗೆ ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ನಟಿಸಿದ ಪಾತ್ರವೇ ಇರಲಿಲ್ಲ.

ಆದರೂ ಕೂಡ ಅಣ್ಣಾವ್ರಿಗೆ ಕನ್ನಡದ ಈ ಒಂದು ಚಿತ್ರದ ಪಾತ್ರದಲ್ಲಿ ನಟಿಸಲು ಇಷ್ಟ ಇರಲಿಲ್ಲವಂತೆ ಅದಕ್ಕಾಗಿ ಅದನ್ನು ಕೈಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಅಣ್ಣಾವ್ರೆ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ ಅವರು ಬಣ್ಣ ಹಚ್ಚಿದ್ದು ಹೊಟ್ಟೆಪಾಡಿಗಾಗಿ, ಆ ರೀತಿ ಶುರುವಾದ ಅವರ ಜರ್ನಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಮುಂದುವರೆಯಿತು. ದಿನ ಕಳೆಯುತ್ತಿದ್ದಂತೆ ಅಣ್ಣಾವ್ರಲ್ಲಿ ಇದ್ದ ಕಲಾವಿದ ಹೊರ ಬಂದು ಜನ ಥಿಯೇಟರ್ ಅಲ್ಲಿ ಹುಚ್ಚೆದ್ದು ಕುಣಿಯುವಂತೆ ಅಣ್ಣಾವ್ರು ಮನೆಮೋಹಕ ಅಭಿನಯ ಗಮನ ಸೆಳೆಯಿತು.

ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹಾಗೂ ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಂಡ ಅಣ್ಣಾವ್ರು ಮಹಾರಾಜ, ರೈತ, ಪೊಲೀಸ್, ಕಳ್ಳ, ಲಾಯರ್, ಸಮಾಜ ಸುಧಾರಕ, ಕೂಲಿ ಇನ್ನು ಮುಂತಾದ ಎಲ್ಲಾ ಪಾತ್ರಗಳಲ್ಲೂ ಬಣ್ಣ ಹಚ್ಚಿಬಿಟ್ಟಿದ್ದಾರೆ. ಜೊತೆಗೆ ಈ ಎಲ್ಲಾ ಪಾತ್ರಗಳಿಗೂ ಅಷ್ಟೇ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಪಾತ್ರಗಳ ಆಯ್ಕೆ ವಿಷಯ ಬಂದಾಗ ಅದನ್ನು ತಮ್ಮ ವರದರಾಜ ಅವರ ಹೆಗಲಿಗೆ ಕೊಟ್ಟಿದ್ದ ಇವರು ವರದರಾಜ ಅವರು ಈ ಪಾತ್ರ ನಿಮಗೆ ಸೂಟ್ ಆಗುತ್ತದೆ ಅಥವಾ ಈ ಪಾತ್ರದಲ್ಲಿ ನಿಮ್ಮನ್ನು ನೋಡಿದರೆ ಜನ ಇಷ್ಟಪಡುತ್ತಾರೆ ಎಂದು ಹೇಳಿದರೆ ಆ ಸಲಹೆ ಮೇಲೆ ಬಣ್ಣ ಹಚ್ಚುತ್ತಿದ್ದರಂತೆ.

ಆದರೆ ಕೆಲವೊಮ್ಮೆ ಒಪ್ಪಿಕೊಂಡ ನಂತರವೂ ಕೂಡ ಯಾಕೋ ಮನಸ್ಸಿಗೆ ಒಪ್ಪಿಗೆ ಆಗದೆ ಅದನ್ನು ಅರ್ಧಕ್ಕೆ ಕೈ ಬಿಟ್ಟಿರುವ ಉದಾಹರಣೆಗಳು ಕೂಡ ಇವೆ. ಅಂತಹ ಸಾಲಿಗೆ ಈ ಸಿನಿಮಾ ಸೇರುತ್ತದೆ. ಮೊದಲಿಗೆ ಗಂಡುಗಲಿ ಕುಮಾರರಾಮ ಎನ್ನುವ ಚಿತ್ರ ಒಂದು ಐತಿಹಾಸಿಕ ಚಿತ್ರ ಎನ್ನುವ ಕಾರಣಕ್ಕಾಗಿ ಡಾಕ್ಟರ್ ರಾಜ್ಕುಮಾರ್ ಅವರು ಅದರಲ್ಲಿ ಕುಮಾರರಾಮನ ಪಾತ್ರ ಮಾಡಲು ಒಪ್ಪಿಕೊಂಡಿದ್ದರಂತೆ. ನಂತರ ಆ ಸಿನಿಮಾದಲ್ಲಿರುವ ವಿಷಯಗಳ ಬಗ್ಗೆ ಅಸಮಧಾನ ಇಟ್ಟುಕೊಂಡ ಇವರು ಸಿನಿಮಾದಿಂದ ಹೊರ ಬಂದರಂತೆ ಇದಕ್ಕೆ ಅವರು ಕೊಟ್ಟ ಕಾರಣವೂ ಕೂಡ ಅರ್ಥಪೂರ್ಣವಾಗಿತ್ತು.

ಈ ಚಿತ್ರದಲ್ಲಿ ಕುಮಾರರಾಮ ಪ್ರೀತಿಸಿದ ಹುಡುಗಿಯನ್ನು ಆತನ ತಂದೆಯೇ ಮದುವೆ ಆಗುತ್ತಾನೆ ಆದರೆ ಆಕೆ ಇನ್ನೂ ಸಹ ಕುಮಾರ ರಾಮನ ಮೇಲೆಯೇ ಮೋಹ ಇಟ್ಟುಕೊಂಡಿರುತ್ತಾಳೆ. ಅದು ಅಣ್ಣವರಿಗೆ ಇಷ್ಟ ಆಗಿರಲಿಲ್ಲ. ಸಿನಿಮಾದಲ್ಲಿ ದೊರೆ ಆಗಿದ್ದ ಕಾರಣ ಉತ್ತರದ ಮುಸ್ಲಿಂ ಸುಲ್ತಾನರ ಮೇಲೆ ಯುದ್ಧಕ್ಕೆ ಹೋಗುವ ಸೀನ್ಗಳು ಇರುತ್ತವೆ. ಆ ಸೀನ್ ಅಲ್ಲಿ ಕಾಣಿಸಿಕೊಂಡರೆ ಹಿಂದೂ ಮುಸ್ಲಿಂ ವೈಷಮ್ಯ ಹೆಚ್ಚಿಸಿದ ರೀತಿ ಆಗುತ್ತದೆ ಹಾಗಾಗಿ ಇಂತಹ ಸಿನಿಮಾ ಬೇಡ ಎನ್ನುವ ಕಾರಣಕ್ಕೆ ಅದನ್ನು ರಿಜೆಕ್ಟ್ ಮಾಡಿ ಬಿಟ್ಟರಂತೆ.

ನಂತರ ಈ ಚಿತ್ರವನ್ನು 2006ರಲ್ಲಿ ಅವರ ಹಿರಿಯ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸಿದರು. ಚಿತ್ರದ ಜೊತೆಗೆ ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆದವು. ಇಂದಿಗೂ ಕೂಡ ಈ ಸಿನಿಮಾದ ಲೇಲೆಪಾಡಿಗ ಹಾಗೂ ಗಿಣಿ ರಾಮ ಗಿಣಿ ರಾಮ ಹಾಡಿನ ಕ್ರೇಝ್ ಕಡಿಮೆ ಆಗಿಲ್ಲ. ಈ ಚಿತ್ರದಲ್ಲಿ ನಿಮ್ಮ ಪ್ರಕಾರ ಯಾರು ನಟಿಸಬೇಕಿತ್ತು ಎನ್ನುವ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

cinema news Tags:Annavru, Dr Raj, Dr Rajkumar

Post navigation

Previous Post: ಹುಡುಗಿ ಗೆಟಪ್ ನಲ್ಲಿ ಮಿಂಚುವ ಮಜಾ ಭಾರತದ ರಾಘವೇಂದ್ರ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
Next Post: ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme